ಚಿರತೆ ಬಲಶಾಲಿ ಪ್ರಾಣಿ. ಒಂದು ಬಾರಿ ಕಣ್ಣುಹಾಕಿದರೆ ಮುಗಿಯಿತು. ತನ್ನ ಬಲಿಷ್ಠ ಕಾಲುಗಳಿಂದ ಓಡಿ ಬೇಟೆಯಾಡಿ ತನ್ನ ನಿತ್ಯದ ಆಹಾರವನ್ನು ಸಂಗ್ರಹಿಸುತ್ತದೆ. ಇನ್ನು ಮೊಸಳೆ ಕೂಡ ಬಲಶಾಲಿಯಾಗಿದ್ದರು ಕಾದು ಕುಳಿತು ಆಹಾರವನ್ನು ಸಂಗ್ರಹಿಸುತ್ತದೆ. ಆದರೆ ಇಲ್ಲೊಂದು ವಿಡಿಯೋವಿದೆ. ನೀರು ಕುಡಿಯುತ್ತಿದ್ದ ಚಿರತೆ ಮೊಸಳೆ ಬಾಯಿಗೆ ಆಹಾರವಾಗಿರುವುವ ದೃಶ್ಯ ವೈರಲ್ ಆಗಿದೆ.
ಸಾಕೆಟ್ ಬಡೋಲಾ ಎಂಬ ಟ್ವಿಟ್ಟರ್ ಖಾತೆ ಚಿರತೆ ಮೊಸಳೆಯ ಬಾಯಿಗೆ ಆಹಾರವಾಗಿರುವ ದೃಶ್ಯವನ್ನು ಅಪ್ಲೋಡ್ ಮಾಡಿದ್ದಾರೆ.
ಬಾಯಾರಿದ ಚಿರತೆ ನೀರಿನ ಬಳಿ ಬಂದು ನಿಧಾನವಾಗಿ ನೀರು ಸೇವಿಸುತ್ತಾ ತನ್ನ ದಾಹ ತೀರಿಸುತ್ತಿದ್ದರೆ. ಅತ್ತ ನೀರಿನಲ್ಲಿದ್ದ ಮೊಸಳೆ ಆಹಾರಕ್ಕೆ ಯಾವ ಪ್ರಾಣಿಯನ್ನು ಹೊಂಚುಹಾಕೋದು ಎಂದು ಕಾದು ಕುಳಿತಿದ್ದು. ಈ ವೇಳೆ ನೀರು ಕುಡಿಯುತ್ತಿದ್ದ ಚಿರತೆಯನ್ನು ಕಂಡು ತನ್ನ ಬಾಯಿಯಿಂದ ಹಿಡಿದು ನೀರಿಗೆ ಎಳೆದೊಯ್ದಿದೆ. ಜೀವ ಉಳಿಸುವ ಸಲುವಾಗಿ ಚಿರತೆ ಹೋರಾಡಿದರು ಜಯಿಸಲಾಗದೆ ಚಿರತೆ ಮೊಸಳೆ ಬಾಯಿಗೆ ಆಹಾರವಾಗಿದೆ.
Gone in 60 seconds !!
Predator becomes prey. Ways of jungle. #Forward @susantananda3 pic.twitter.com/XkJSTuadsM
— SAKET (@Saket_Badola) December 4, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ