ಆಹಾರಕ್ಕಾಗಿ ತರಿಸಲಾಗಿದ್ದ ಮೊಸಳೆ ಎಸ್ಕೇಪ್: ಪೊಲೀಸರಿಂದ ತನಿಖೆ!

news18
Updated:August 28, 2018, 8:24 PM IST
ಆಹಾರಕ್ಕಾಗಿ ತರಿಸಲಾಗಿದ್ದ ಮೊಸಳೆ ಎಸ್ಕೇಪ್: ಪೊಲೀಸರಿಂದ ತನಿಖೆ!
newsflare
news18
Updated: August 28, 2018, 8:24 PM IST
-ನ್ಯೂಸ್ 18 ಕನ್ನಡ

newsflare


newsflare


ಚೀನಿಯರು ಹಾವು, ನಾಯಿ ಸೇರಿದಂತೆ ಹಲವು ಜೀವಿಗಳನ್ನು ತಿನ್ನುವುದರ ಬಗ್ಗೆ ಕೇಳಿರುತ್ತೀರಿ. ಸಾಧಾರಣವಾಗಿ ಚೀನಾ ನಗರಗಳ ರೆಸ್ಟೋರೆಂಟ್​ಗಳಲ್ಲಿ ಪ್ರಾಣಿಗಳ  ಭಕ್ಷ್ಯಗಳು ಸಿಗುವುದು ಕೂಡ ಸಾಮಾನ್ಯ. ಇಂತಹ ರೆಸ್ಟೋರೆಂಟ್​ನಲ್ಲಿ ಇತ್ತೀಚೆಗೆ ಮೊಸಳೆಯೊಂದನ್ನು ತರಿಸಲಾಗಿತ್ತು. ಆದರೆ ಈ ಮೊಸಳೆಯು ರೆಸ್ಟೋರೆಂಟ್​ನಿಂದ ಎಸ್ಕೇಪ್ ಆಗಿದೆ. ರಾತ್ರಿಯಲ್ಲಿ ರೆಸ್ಟೋರೆಂಟ್​ ಹೊರ ಭಾಗದಲ್ಲಿ ಓಡಾಡುತ್ತಿರುವುದು ಮೊಸಳೆಯು ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಚೀನಾ ಪೊಲೀಸರೀಗ ಮೊಸಳೆಯನ್ನು ಹುಡುಕುತ್ತಿದ್ದಾರೆ.ಝೆಜಿಯಾಂಗ್ ಪ್ರಾಂತ್ಯದ ರೆಸ್ಟೋರೆಂಟ್​ ಮುಂಭಾಗದಲ್ಲಿ ಓಡಾಡುತ್ತಿರುವ ಮೊಸಳೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯು ರಾತ್ರಿ 2 ಗಂಟೆಗೆ ನಡೆದಿದ್ದು, ನಂತರ ಮೊಸಳೆ ಯಾವ ಭಾಗಕ್ಕೆ ಹೋಗಿದೆ ಎಂಬುದರ ಬಗ್ಗೆ ಚೀನಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಆದರೆ ಈ ಮೊಸಳೆಯನ್ನು ರೆಸ್ಟೋರೆಂಟ್​ನಲ್ಲಿ ಆಹಾರ ತಯಾರಿಸಲು ಖರೀದಿಸಲಾಗಿತ್ತು. ಆದರೆ ಇದು ಹೇಗೆ ತಪ್ಪಿಸಿಕೊಂಡಿದೆ ಎಂಬುದರ ಬಗ್ಗೆ ರೆಸ್ಟೋರೆಂಟ್​ನವರಿಗೆ ಸ್ಪಷ್ಟ ಚಿತ್ರಣವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

https://www.newsflare.com/video/233985/animals/police-investigate-after-crocodile-escapes-from-restaurant-in-eastern-chinese-province

ಸುಮಾರು ಮೂರು ಅಡಿ ಉದ್ದದ ಮೊಸಳೆಯು ಎಲ್ಲಿ ಹೋಗಿದೆ ಎಂಬ ಮಾಹಿತಿ ಇಲ್ಲದೆ ಇರುವುದರಿಂದ ಸಾರ್ವಜನಿಕರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಝೆಜಿಯಾಂಗ್ ಪ್ರಾಂತ್ಯ ನಿವಾಸಿಗಳು ಜಾಗರೂಕರಾಗಿರಲು ಪೊಲೀಸರು ಎಚ್ಚರಿಸಿದ್ದು, ಕಳೆದೆರಡು ದಿನಗಳಿಂದ ಮೊಸಳೆ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಅಲ್ಲಿನ ಪೊಲೀಸ್ ಸಿಬ್ಬಂದಿಗಳು. ಒಟ್ಟಾರೆ ಮೊಸಳೆಯನ್ನು ತಿನ್ನುವ ಚೀನಿಯರು ಫ್ರೀಯಾಗಿ ಸಿಕ್ಕಿರುವ ಮೊಸಳೆಯನ್ನು ಬಿಟ್ಟಿರುತ್ತಾರಾ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿ ಉಳಿದಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ