• Home
  • »
  • News
  • »
  • trend
  • »
  • Viral Video: ಅಬ್ಬಬ್ಬಾ ಜೀವ ಬಾಯಿಗೆ ಬಂದ ಹಾಗೆ ಆಗಿತ್ತು, ವಿಡಿಯೋ ನೋಡಿದ್ರೆ ನಿಮ್ಗೇ ಗೊತ್ತಾಗುತ್ತೆ

Viral Video: ಅಬ್ಬಬ್ಬಾ ಜೀವ ಬಾಯಿಗೆ ಬಂದ ಹಾಗೆ ಆಗಿತ್ತು, ವಿಡಿಯೋ ನೋಡಿದ್ರೆ ನಿಮ್ಗೇ ಗೊತ್ತಾಗುತ್ತೆ

ಕೋಳಿ ಮೊಸಳೆಯಿಂದ ಬಚಾವ್​ ಆಗುವ ದೃಶ್ಯ

ಕೋಳಿ ಮೊಸಳೆಯಿಂದ ಬಚಾವ್​ ಆಗುವ ದೃಶ್ಯ

Animal Video: ಜೀವ ಒಂದೇ ಸಲಿಗೆ ಬಾಯಿಗೆ ಬಂದ ಹಾಗೆ ಆಯ್ತು ಅನ್ನುವ ಸಿಚುವೇಶನ್​ ಸಾಮಾನ್ಯವಾಗಿ ಎಲ್ರೂ ಎದುರಿಸುತ್ತೀವಿ. ಇಲ್ಲಿ ಪ್ರಾಣಿಗಳ ನಡುವೆ ಈ ವಿಷ್ಯ ನಡೆದಿದೆ.

  • Share this:

ನಾವು ಈ ಸಾಮಾಜಿಕ ಮಾಧ್ಯಮಗಳು (Social Media) ಹುಟ್ಟಿಕೊಂಡ ಮೇಲೆ ದಿನ ಬೆಳಗಾದರೆ ಸಾಕು ಅನೇಕ ರೀತಿಯ ವಿಸ್ಮಯ ಅಂತ ಅನ್ನಿಸುವ ವೀಡಿಯೋಗಳನ್ನು ನೋಡುತ್ತಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಹರಿದಾಡುವ ವೀಡಿಯೋಗಳು (Video) ಪ್ರಾಣಿಗಳಿಗೆ ಸಂಬಂಧಿಸಿದ್ದು ಆಗಿರುವುದು ನಿಜಕ್ಕೂ ನೋಡುಗರ ಮನಸ್ಸಿಗೆ ಇನ್ನಷ್ಟು ಮುದವನ್ನು ನೀಡುತ್ತವೆ ಅಂತ ಹೇಳಬಹುದು. ಕಾಡು ಪ್ರಾಣಿಗಳು ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುವ, ಪ್ರಾಣಿಗಳು ಮುದ್ದಾಗಿ ಆಟವಾಡಿಕೊಂಡು ಇರುವ ಮತ್ತು ಸಾಕುಪ್ರಾಣಿಗಳು ಮನೆಯಲ್ಲಿರುವ ಮಕ್ಕಳೊಂದಿಗೆ ಆಟವಾಡುವುದನ್ನು ಸಹ ಈ ವೀಡಿಯೋಗಳಲ್ಲಿ ನಾವು ನೋಡಬಹುದು. ಇದಷ್ಟೇ ಅಲ್ಲದೆ ಕೆಲವು ಪ್ರಾಣಿ ಜಗತ್ತಿನ ಭಯಾನಕ ಹೆಬ್ಬಾವುಗಳು ಮನೆಗೆ ನುಗ್ಗಿರುವ, ಹುಲಿ ಜಿಂಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಬೇಟೆಯಾಡುವ, ಚಿರತೆ ಬೇಟೆಯನ್ನು ಅಟ್ಟಾಡಿಸಿಕೊಂಡು ಮರ ಹತ್ತಿ ಬೇಟೆಯಾಡುವ, ಎರಡು ತಲೆಯ ಅಪರೂಪದ ಹಾವುಗಳು ಕಾಣಿಸಿಕೊಳ್ಳುವುದು, ಮೊಸಳೆ ನೀರಿನೊಳಗೆ ಗಂಟೆಗಟ್ಟಲೆ ಸುಮ್ಮನೆ ಕಾದು ಕುಳಿತು ಹಠಾತ್ತನೆ ತನ್ನ ಹತ್ತಿರವಿರುವ ಚಿಕ್ಕ ಪುಟ್ಟ ಪ್ರಾಣಿಗಳ (Animal) ಮೇಲೆ ಹಾರಿ ಅವುಗಳನ್ನು ಬಾಯಿಗೆ ಹಾಕಿಕೊಂಡು ಮತ್ತೆ ನೀರಿಗೆ ಹೋಗುವ ಎಷ್ಟೋ ವೀಡಿಯೋಗಳನ್ನು ನಾವು ನೋಡಿರುತ್ತೇವೆ.


ಒಟ್ಟಿನಲ್ಲಿ ಹೇಳುವುದಾದರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ಮುದ್ದಾದ ವೀಡಿಯೋ ಎಷ್ಟು ಬೇಗ ಜನರಿಗೆ ಇಷ್ಟವಾಗಿ ವೈರಲ್ ಆಗುತ್ತವೆಯೋ, ಅಷ್ಟೇ ಬೇಗ ಈ ಪ್ರಾಣಿ ಪ್ರಾಣಿಗಳ ಮಧ್ಯದ ಸಂಘರ್ಷವನ್ನು ತೋರಿಸುವ ವೀಡಿಯೋಗಳು ಸಹ ವೈರಲ್ ಆಗುತ್ತವೆ ಅಂತ ಹೇಳಿದರೆ ಸುಳ್ಳಲ್ಲ. ಪ್ರಾಣಿಗಳ ನಡುವಿನ ಸಂಘರ್ಷದ ವೀಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ ನೋಡಿ.


ಮೊಸಳೆ ಬಾಯಿಂದ ಕೋಳಿ ಹೇಗೆ ತಪ್ಪಿಸಿಕೊಂಡಿದೆ ನೋಡಿ..


ಮೊಸಳೆಯ ದವಡೆಯಿಂದ ಪವಾಡ ಸದೃಶವಾಗಿ ತಪ್ಪಿಸಿಕೊಂಡ ಕೋಳಿಯನ್ನು ನೀವು ಈ ವೀಡಿಯೋದಲ್ಲಿ ನೋಡಬಹುದು. ವೈಲ್ಡ್ ಅನಿಮಲ್ ಪಿಕ್ಸ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಕ್ಲಿಪ್ ನ ಆರಂಭದಲ್ಲಿ ನೀರಿನಲ್ಲಿ ಒಂದು ಮೊಸಳೆ ಇರುವುದನ್ನು ನಾವು ನೋಡಬಹುದು.


ಇದನ್ನೂ ಓದಿ: ಬದುಕು ಕಲಿಸಿದ ಗುರುವಿಗೆ ಕಣ್ಣೀರ ವಿದಾಯ! 30 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಗೆ ಭಾವನಾತ್ಮಕ ಬೀಳ್ಕೊಡುಗೆ


ಅಲ್ಲೇ ನದಿಯ ದಡದಲ್ಲಿ ಕೋಳಿ ಮತ್ತು ಇನ್ನೊಂದು ಪಕ್ಷಿ ಅಲ್ಲೇ ಸುತ್ತಾಡುತ್ತಿರುವುದನ್ನು ಸಹ ನಾವು ನೋಡಬಹುದು. ಸ್ವಲ್ಪವೂ ಸದ್ದು ಮಾಡದೆ ಆ ಸರೀಸೃಪವು ಪಕ್ಷಿಯನ್ನು ಸಮೀಪಿಸಿ ಅದರ ಕಡೆಗೆ ಛಂಗನೆ ಹಾರುತ್ತದೆ. ಆ ಹಾರಿದ ರಭಸ ನೋಡಿದರೆ ಆ ಮೊಸಳೆ ಪಕ್ಷಿ ಮತ್ತು ಕೋಳಿ ಎರಡನ್ನು ಒಮ್ಮೆಗೆ ಬಾಯಿಗೆ ಹಾಕಿಕೊಂಡು ತಿನ್ನಬೇಕು ಅನ್ನೋ ಉದ್ದೇಶವಿತ್ತು ಅಂತ ನಾವು ನಿರೀಕ್ಷಿಸಿರಬಹುದು.


ಆದಾಗ್ಯೂ, ಪವಾಡ ಸದೃಶವಾಗಿ, ಕೋಳಿ ಮೊಸಳೆಯ ಬಾಯಿಂದ ತಪ್ಪಿಸಿಕೊಳ್ಳುತ್ತದೆ. ಇಡೀ ಘಟನೆಯಲ್ಲಿ ಕೋಳಿ ಎಷ್ಟೊಂದು ಮೆಲ್ಲಗೆ ಅಡ್ಡಾಡುತ್ತಾ ಇದ್ದು, ಆ ಭಯಾನಕ ಕ್ಷಣದಲ್ಲಿ ಹೇಗೆ ತನ್ನ ಜೀವ ಉಳಿಸಿಕೊಂಡಿದೆ ಅಂತ ನೋಡುವುದು ನಿಜಕ್ಕೂ ಈ ವೀಡಿಯೋವನ್ನು ಒಂದು ವೈರಲ್ ವೀಡಿಯೋನನ್ನಾಗಿ ಮಾಡಿದೆ ಅಂತ ಹೇಳಬಹುದು.


ಇದನ್ನೂ ಓದಿ: ಕರ್ನಾಟಕದ ಸೇಂಟ್ ಮೇರಿಸ್ ದ್ವೀಪದಲ್ಲಿವೆ ವಿಶಿಷ್ಟ ಶಿಲಾ ರಚನೆಗಳು, ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಇದು


ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಈ ವೀಡಿಯೋ


ಈ ವೀಡಿಯೋವನ್ನು ಅಕ್ಟೋಬರ್ 6 ರಂದು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋವನ್ನು ಹಂಚಿಕೊಂಡಾಗಿನಿಂದ, ಈ ಕ್ಲಿಪ್ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ವೀಡಿಯೋ ನೋಡಿ ಜನರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ ಅಂತ ಹೇಳಬಹುದು.



"ಅಬ್ಬಾ ಈ ಕೋಳಿ ಸ್ವಲ್ಪವೂ ಬೆಚ್ಚಿ ಬೀಳಲಿಲ್ಲ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. "ಮೊಸಳೆ ಹಾರಿದ್ದನ್ನು ಸಹ ಈ ಕೋಳಿ ನೋಡಿರಲಿಲ್ಲ" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ಹುಂಜದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ" ಎಂದು ಮೂರನೆಯವರು ಬರೆದಿದ್ದಾರೆ.

First published: