Crocodile: 6 ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಕ್ಕಿಸಿಕೊಂಡು ಓಡಾಡುತ್ತಿದೆ ಈ ಮೊಸಳೆ! ಇದನ್ನು ನೋಡಿದ ಪ್ರಾಣಿ ಪ್ರೇಮಿ ಏನು ಮಾಡಿದ ಗೊತ್ತಾ?

Crocodile: ಉಪ್ಪು ನೀರಿನಲ್ಲಿರುವ ಮೊಸಳೆಯೊಂದು ಆರು ವರ್ಷಗಳ ಹಿಂದೆ ತನ್ನ ಕುತ್ತಿಗೆಗೆ ಟೈರ್ ಸಿಕ್ಕಿ ಹಾಕಿಕೊಂಡಿತ್ತು, ಅಂತಿಮವಾಗಿ ಸುಲವೇಸಿ ದ್ವೀಪದಲ್ಲಿ ಒಬ್ಬ ಪ್ರಾಣಿ ಪ್ರೇಮಿಯಿಂದ ಈ ಮೊಸಳೆಗೆ ಈ ಟೈರ್‌ನಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

Photo: Google

Photo: Google

 • Share this:
  ಕೆಲವು ಪ್ರಾಣಿಗಳು (Animals) ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟುಗಳನ್ನು ಮಾಡಿಕೊಂಡಿರುವುದನ್ನು ನಾವೆಲ್ಲರೂ ಪ್ರತಿದಿನ ನೋಡುತ್ತಲೇ ಇರುತ್ತೇವೆ. ಕೆಲವು ಪ್ರಾಣಿಗಳು ತುಂಬಾನೇ ಶಾಂತ ಸ್ವಭಾವದ್ದಾಗಿದ್ದರೆ, ಕೆಲವು ಪ್ರಾಣಿಗಳು ಮಾತ್ರ ತುಂಬಾನೇ ಚೇಷ್ಟೆ (Mischievous) ಮಾಡುತ್ತವೆ. ಹೀಗೆ ಸದಾ ಚೇಷ್ಟೆ ಮಾಡುವ ಪ್ರಾಣಿಗಳು ಎಡವಟ್ಟುಗಳನ್ನು ಮಾಡಿಕೊಳ್ಳುವುದು ಹೊಸತೇನಲ್ಲ. ಪ್ರಾಣಿಗಳು ಸಾಮಾನ್ಯವಾಗಿ ಏನೋ ಮಾಡಲು ಹೋಗಿ ಯಾವುದೋ ಒಂದು ಹಗ್ಗ (Rope) ಅಥವಾ ಏನೋ ಒಂದನ್ನು ತಮ್ಮ ಕುತ್ತಿಗೆಯಲ್ಲಿ ಹಾಕಿಕೊಳ್ಳಲು ಪ್ರಯತ್ನಿಸಿ ಅವುಗಳನ್ನು ಹಾಕಿಕೊಂಡು ಜನರಿಗೆ ಸಂತೋಷ ನೀಡುತ್ತವೆ, ಆದರೆ ನಂತರ ಅದನ್ನು ಕುತ್ತಿಗೆಯಿಂದ (Neck) ಹೊರ ತೆಗೆಯಲು ಬಾರದೇ ತುಂಬಾನೇ ಒದ್ದಾಡುತ್ತಿರುವುದನ್ನು ನಾವು ಅನೇಕ ಘಟನೆಗಳಲ್ಲಿ ನೋಡಿರುತ್ತೇವೆ.

  ಈ ಘಟನೆ ನಡೆದಿದ್ದು ಭಾರತದಲ್ಲಿ ಅಲ್ಲ, ಇಂಡೋನೇಷ್ಯಾದಲ್ಲಿ ಎಂದು ಹೇಳಲಾಗುತ್ತಿದೆ. ಇಲ್ಲಿ ಒಂದು ಮೊಸಳೆಯು ತನ್ನ ಕುತ್ತಿಗೆಗೆ ಒಂದು ಟೈರ್ ಅನ್ನು ಸಿಕ್ಕಿಸಿಕೊಂಡಿದೆ ಮತ್ತು ಅದನ್ನು ಹೇಗೆ ಹೊರ ತೆಗೆಯುವುದು ಅಂತ ಗೊತ್ತಾಗದೇ ಒದ್ದಾಡಿ ಒದ್ದಾಡಿ ಒಂದಲ್ಲ, ಎರಡಲ್ಲ ಸುಮಾರು ಆರು ವರ್ಷಗಳ ಕಾಲ ಹಾಗೆ ಕುತ್ತಿಗೆಯಲ್ಲಿಯೇ ಸಿಕ್ಕಿಸಿಕೊಂಡು ಓಡಾಡಿದೆ ಎಂದು ಹೇಳಬಹುದು. ಕೊನೆಗೂ ಈ ಟೈರ್‌ನಿಂದ ಈ ಮೊಸಳೆಗೆ ಮುಕ್ತಿ ಸಿಕ್ಕಿದೆ ಎನ್ನುವುದೇ ಈ ಘಟನೆಯಲ್ಲಿ ಸಮಾಧಾನಕರವಾದ ವಿಷಯವಾಗಿದೆ.

  ಉಪ್ಪು ನೀರಿನಲ್ಲಿರುವ ಮೊಸಳೆಯೊಂದು ಆರು ವರ್ಷಗಳ ಹಿಂದೆ ತನ್ನ ಕುತ್ತಿಗೆಗೆ ಟೈರ್ ಸಿಕ್ಕಿ ಹಾಕಿಕೊಂಡಿತ್ತು, ಅಂತಿಮವಾಗಿ ಸುಲವೇಸಿ ದ್ವೀಪದಲ್ಲಿ ಒಬ್ಬ ಪ್ರಾಣಿ ಪ್ರೇಮಿಯಿಂದ ಈ ಮೊಸಳೆಗೆ ಈ ಟೈರ್‌ನಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಟೈರ್ ಗಾತ್ರವು ನೀರಿನಲ್ಲಿ ದಿನ ಕಳೆದಂತೆ ಹೆಚ್ಚಾಗಿ ಅಂತಿಮವಾಗಿ 13.12 ಅಡಿ ಉದ್ದದ ಮೊಸಳೆ ಎಲ್ಲಿ ಉಸಿರುಗಟ್ಟಿ ಸಾವನ್ನಪ್ಪುವುದು ಎಂದು ಪಾಲು ನಗರದ ನಿವಾಸಿಗಳು ತುಂಬಾನೇ ಚಿಂತಿತರಾಗಿದ್ದರು ಎಂದು ಹೇಳಲಾಗುತ್ತಿದೆ.

  ಈ ಮೊಸಳೆಯ ಕುತ್ತಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಟೈರ್ ಅನ್ನು ತೆಗೆಯುವ ರಕ್ಷಣಾ ಪ್ರಯತ್ನಗಳು ಈ ಹಿಂದೆಯೂ ಅನೇಕ ಬಾರಿ ನಡೆದಿವೆ. ರ‍್ಯಾಂಗ್ಲರ್ ಮತ್ತು ನ್ಯಾಷನಲ್ ಜಿಯಾಗ್ರಫಿಕ್ ಟಿವಿ ನಿರೂಪಕ ಮ್ಯಾಟ್ ರೈಟ್ ಈ ಪ್ರಾಣಿಯನ್ನು ಟೈರ್‌ನಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ 2020ರಲ್ಲಿ ಇಂಡೋನೇಷ್ಯಾಕ್ಕೆ ಬಂದಿದ್ದರು, ಆದರೆ ಇವರ ಪ್ರಯತ್ನವು ಯಶಸ್ವಿಯಾಗಲಿಲ್ಲ.

  ಈಗ, ಟಿಲಿ ಎಂಬ ಸ್ಥಳೀಯ ನಿವಾಸಿಯೊಬ್ಬರು ಈ ಮೊಸಳೆಯ ಕುತ್ತಿಗೆಯಿಂದ ಟೈರ್ ಅನ್ನು ತೆಗೆದು ಹಾಕಿದ್ದಾನೆ. "ಮೊಸಳೆಯನ್ನು ನಾನೇ ಹಿಡಿದುಕೊಂಡು ಇದನ್ನು ತೆಗೆದೆ ಮತ್ತು ನಾನು ಇಲ್ಲಿನ ಜನರ ಸಹಾಯವನ್ನು ಕೇಳುತ್ತಿದ್ದೆ, ಆದರೆ ಅವರು ಭಯಭೀತರಾಗಿದ್ದರು" ಎಂದು 35 ವರ್ಷದ ಟಿಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

  ಟಿಲಿ ಮರದ ದಿಮ್ಮಿಗೆ ಒಂದು ಹಗ್ಗವನ್ನು ಕಟ್ಟಿ ಒಂದು ಮೂಲ ಬಲೆಯನ್ನು ತಯಾರಿಸಿ ಮತ್ತು ಜೀವಂತ ಕೋಳಿಗಳು ಮತ್ತು ಬಾತುಕೋಳಿಗಳನ್ನು ಅದರಲ್ಲಿ ಬಳಸಿಕೊಂಡನು. ಅವನು ಮೂರು ವಾರಗಳ ಕಾಲ ಆ ಮೊಸಳೆಯನ್ನು ಟ್ರ್ಯಾಕ್ ಮಾಡಿದನು, ಆದರೆ ಆ ಸರೀಸೃಪವು ಸೆರೆ ಹಿಡಿಯುವ ಮೊದಲು ಎರಡು ಸಂದರ್ಭಗಳಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಎಂದು ಹೇಳಲಾಗುತ್ತಿದೆ.

  ಇದನ್ನು ಓದಿ: ಸ್ಮಾರ್ಟ್​ಫೋನ್​ನಲ್ಲಿ IPL 2022 Auction ಉಚಿತವಾಗಿ ನೋಡಬೇಕಾ? ಹಾಗಿದ್ರೆ ಈ ಆ್ಯಪ್​ ಡೌನ್​ಲೋಡ್​ ಮಾಡಿ

  ಜನರು ನಾನು ಅದನ್ನು ಹಿಡಿಯುತ್ತೇನೆ ಎಂಬುದರ ಬಗ್ಗೆ ತುಂಬಾನೇ ಸಂದೇಹ ಹೊಂದಿದ್ದರು ಮತ್ತು ಸರೀಸೃಪವನ್ನು ಸೆರೆ ಹಿಡಿಯುವ ಬಗ್ಗೆ ನಾನು ಅಷ್ಟೊಂದು ಗಂಭೀರವಾಗಿರಲಿಲ್ಲ ಎಂದು ಅವರು ಭಾವಿಸಿದ್ದರು ಎಂದು ಟಿಲಿ ಹೇಳಿದರು. ಟೈರ್ ತೆಗೆಯಲು ಅವನು ಒಂದು ಗರಗಸವನ್ನು ಬಳಸಿದ್ದಾನೆ ಎಂದು ಹೇಳಲಾಗುತ್ತಿದೆ.

  2020 ರಲ್ಲಿ, ಇಂಡೋನೇಷ್ಯಾದ ಅಧಿಕಾರಿಗಳು ಈ ಟೈರ್ ತೆಗೆದು ಮೊಸಳೆಯನ್ನು ಬದುಕುಳಿಸುವ ಸಲುವಾಗಿ ಬಹುಮಾನವನ್ನು ನೀಡಿದರು. "ಪ್ರಾಣಿಗಳು ಈ ರೀತಿಯಾಗಿ ನೋವನ್ನು ಅನುಭವಿಸುವುದನ್ನು ನನ್ನಿಂದ ನೋಡಲು ಆಗಲಿಲ್ಲ ಮತ್ತು ನಾನು ಹಾವುಗಳಿಗೂ ತೊಂದರೆ ಆದರೆ ಸಹಾಯ ಮಾಡುತ್ತೇನೆ" ಎಂದು ಟಿಲಿ ಹೇಳಿದರು.

  ಇದನ್ನು ಓದಿ: Whatsapp Status ಹಾಕೋ ಮುನ್ನ ನೂರು ಬಾರಿ ಯೋಚಿಸಿ; ಇಲ್ಲಾಂದ್ರೆ ಬೀಳುತ್ತೆ ರೌಡಿಶೀಟರ್ ಕೇಸ್

  2016ರಲ್ಲಿ ಪಾಲು ನದಿಯಲ್ಲಿ ಮೊದಲ ಬಾರಿಗೆ ತಿರುಗಾಡುತ್ತಿರುವುದನ್ನು ಗಮನಿಸಿದಾಗ ಈ ಮೊಸಳೆಯ ಕುತ್ತಿಗೆಯಲ್ಲಿ ಟೈರ್ ಅನ್ನು ಹೊಂದಿತ್ತು. ಇದು 2018ರಲ್ಲಿ ಪಾಲುವನ್ನು ಅಪ್ಪಳಿಸಿದ ಸುನಾಮಿ ಮತ್ತು ಭೂಕಂಪದಿಂದ ಬದುಕುಳಿದಿದೆ. ಆದರೆ ಟೈರ್ ಮಾತ್ರ ಇದರ ಕುತ್ತಿಗೆಗೆ ಸುತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

  ಸ್ಥಳೀಯ ಜನರು ಇದನ್ನು ಟೈರ್ ನೆಕ್ಲೇಸ್ ಹೊಂದಿರುವ ಮೊಸಳೆ ಎಂದು ಕರೆಯುತ್ತಿದ್ದರು ಮತ್ತು ಟೈರ್‌ನಿಂದ ಮುಕ್ತಗೊಳಿಸಿ ಸರೀಸೃಪವನ್ನು ಸೋಮವಾರ ಸಂಜೆ ಮತ್ತೆ ನದಿಗೆ ಬಿಡಲಾಯಿತು.
  Published by:Harshith AS
  First published: