ಮೊಸಳೆ ಬಾಯಿಗೆ ಕೈಯಿಟ್ಟು ಒದ್ದಾಡಿದ ಭೂಪ!


Updated:July 31, 2018, 11:57 AM IST
ಮೊಸಳೆ ಬಾಯಿಗೆ ಕೈಯಿಟ್ಟು ಒದ್ದಾಡಿದ ಭೂಪ!

Updated: July 31, 2018, 11:57 AM IST
ಥಾಯ್ಲಂಡ್​ನಲ್ಲಿ ಮೊಸಳೆಯೊಂದಿಗೆ ಆಟವಾಡಿ ಜೀವಕ್ಕೆ ಅಪಾಯ ತಂದುಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ, ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಮೊಸಳೆ ಬಾಯಿಗೆ ತಲೆಯಿಟ್ಟ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಇದೀಗ ಮತ್ತೋರ್ವ ಮೃಗಾಲಯದ ನೌಕರ ಮೊಸಳೆ ಬಾಯಲ್ಲಿ ಕೈ ಇಡಲು ಹೋಗಿ ಗಾಯ ಮಾಡಿಕೊಂಡಿದ್ದಾನೆ.ಥಾಯ್ಲೆಂಡ್​ನ ಚ್ಯಾಂಗ್​ ರಾಯ್​ನಲ್ಲಿರುವ ಫೊಕ್ಕತಾರ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ಮೊಸಳೆ ತರಬೇತುದಾರ ಅಲ್ಲಿ ನೆರೆದಿರುವವರನ್ನು ನೋಡಿಕೊಂಡೇ ತನ್ನ ಕೈಯನ್ನು ಬಾಯಿಗೆ ಹಾಕಿದ್ದಾನೆ. ಕೆಲ ಕಾಲ ಸುಮ್ಮನಿದ್ದ ಮೊಸಳೆ ಒಮ್ಮೆಗೆ ಬಾಯಿ ಮುಚ್ಚಿದೆ. ವಿಲವಿಲನೆ ಒದ್ದಾಡಿದ ತರಬೇತುದಾರ ಹರಸಾಹಸ ಪಟ್ಟು ತನ್ನ ಕೈಯನ್ನು ತೆಗೆದಿದ್ದಾನೆ. ಅಲ್ಲಿ ನೆರೆದಿದ್ದ ಮಕ್ಕಳು ಮಹಿಳೆಯರೆಲ್ಲರ ಮುಂದೆಯೇ ಘಟನೆ ನಡೆದಿದ್ದು, ಆತನ ಭುಜದವರೆಗೂ ಗಾಯಗಳಾಗಿದೆ ಎಂದು ದಿ ಸನ್​ ವರದಿ ಮಾಡಿದೆ.ಈ ಶಾಕಿಂಗ್​ ಘಟನೆಯನ್ನು ಖುನ್​ ಫುಸವಿತ್​ ಚಿತ್ರೀಕರಿಸಿದ್ದು ಸಾಮಾಜಿ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇನ್ನು ಫೋಕ್ಕತಾರ ಮೊಸಳೆ ಸಂರಕ್ಷಿತ ಮೃಗಾಲಯದಲ್ಲಿ ತರಬೇತುದಾರ ಮೊಸಳೆ ಬಾಯೊಗೆ ಕೈ, ತಲೆ ಇಟ್ಟು ಜನರನ್ನು ರಂಜಿಸುವುದು ಮಾಮೂಲಿ, ಇನ್ನೂ ಹೇಳಬೇಕೆಂದರೆ ಈ ಮೃಗಾಲಯದ ವಿಶೇಷ ಕೂಡಾ ಇದೇ ಆಗಿದೆ.

ಇದೇ ಘಟನೆಗೆ ಪೂರಕವೆಂಬಂತೆ ಕೆಲ ತಿಂಗಳ ಹಿಂದೆ ಕೊಹ್ ಸಮುಯ್‍ನಲ್ಲಿ ಮೃಗಾಲಯದ ತರಬೇತುದಾರ ಮೊಸಳೆ ಬಾಯಿಗೆ ತಲೆಯಿಡುವ ಸಾಹಸಕ್ಕೆ ಮುಂದಾಗಿದ್ದ. ಈ ವೇಳೆ ಮೊಸಳೆ ಬಾಯಿ ಮುಚ್ಚಿಕೊಂಡಿದೆ. ಕೆಲ ಕಾಲ ಹೋರಾಟ ನಡೆಸಿದ ಆತ ಬಳಿಕ ಮೊಸಳೆಗೆ ಬಡಿದು ತನ್ನನ್ನು ರಕ್ಷಿಸಿಕೊಂಡಿದ್ದ. ಈ ವೀಡಿಯೋ ಕೂಡಾ ವೈರಲ್​ ಆಗಿತ್ತು.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ