Sawfish: ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಿತ್ತು ಗರಗಸ ಮೀನು..! ಹೇಗಿದೆ ನೋಡಿ

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಗುರುವಾರ ಅತ್ಯಂತ ಅಪರೂಪದ ಮತ್ತು ಗಂಭೀರ ಅಳಿವಿನಂಚಿನಲ್ಲಿರುವ ಗರಗಸ ಮೀನೊಂದು ಮೀನುಗಾರರಿಂದ ಹಿಡಿಯಲ್ಪಟ್ಟಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮಲ್ಪೆಯಲ್ಲಿ ಸಿಕ್ಕ ಗರಗಸ ಮೀನು

ಮಲ್ಪೆಯಲ್ಲಿ ಸಿಕ್ಕ ಗರಗಸ ಮೀನು

  • Share this:
ಈ ಸಮುದ್ರಗಳಲ್ಲಿ (Sea) ಅನೇಕ ವಿಧವಾದ ಜಲಚರ ಪ್ರಾಣಿಗಳನ್ನು ನೋಡಬಹುದು. ಅದರಲ್ಲೂ ಎಷ್ಟೋ ಜನರಿಗೆ ಎಷ್ಟು ವಿಧ ವಿಧವಾದ ಮೀನುಗಳು (Fish) ಇವೆ ಮತ್ತು ಅವುಗಳನ್ನು ಯಾವ ಹೆಸರಿನಿಂದ ಕರೆಯುತ್ತೇವೆ ಎಂಬುದು ಸಹ ತಿಳಿದಿರುವುದಿಲ್ಲ. ಈ ಮೀನುಗಾರರು (Fishermen) ಪ್ರತಿದಿನದಂತೆ ಸಮುದ್ರದಲ್ಲಿ ಮೀನುಗಳನ್ನು ಹಿಡಿಯಲು ಬಲೆ ಬೀಸುತ್ತಾರೆ, ಆದರೆ ಕೆಲವೊಮ್ಮೆ ಅವರು ಬೀಸುವ ಬಲೆಯಲ್ಲಿ ಎಂತಹ ದೈತ್ಯವಾದ ಮೀನು ಸಿಕ್ಕಿ ಬೀಳುತ್ತದೆ ಎಂಬುದು ಅವರು ಎಂದಿಗೂ ಊಹಿಸಿರುವುದಿಲ್ಲ. ಅವರು ಬೀಸಿದ ಬಲೆಯನ್ನು (Fishing ner)  ಮೇಲಕ್ಕೆ ಎತ್ತಿದ ಮೇಲೆಯೇ ಗೊತ್ತಾಗುತ್ತೆ ಎಂತಹ ಮೀನು ಆ ಬಲೆಯಲ್ಲಿ ಸಿಕ್ಕಿಬಿದ್ದಿದೆ ಅಂತ. ಇಲ್ಲಿಯೂ ಸಹ ಅಂತಹದೇ ಒಂದು ತುಂಬಾನೇ ಅಪರೂಪದ ಮತ್ತು ಅಳಿವಿನ ಅಂಚಿನಲ್ಲಿರುವ ಗರಗಸ ಮೀನು (Sawfish) ಸಿಕ್ಕಿ ಹಾಕಿಕೊಂಡಿದೆ ನೋಡಿ.

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಗುರುವಾರ ಅತ್ಯಂತ ಅಪರೂಪದ ಮತ್ತು ಗಂಭೀರ ಅಳಿವಿನಂಚಿನಲ್ಲಿರುವ ಗರಗಸ ಮೀನೊಂದು ಮೀನುಗಾರರಿಂದ ಹಿಡಿಯಲ್ಪಟ್ಟಿದೆ. ಸುಮಾರು 250 ಕಿಲೋ ಗ್ರಾಂ ತೂಕವಿದ್ದ 10 ಅಡಿ ಉದ್ದದ ಈ ಮೀನು ಆಕಸ್ಮಿಕವಾಗಿ 'ಸೀ ಕ್ಯಾಪ್ಟನ್' ಎಂಬ ಹೆಸರಿನ ದೋಣಿಯ ಬಲೆಗಳಲ್ಲಿ ಸಿಕ್ಕಿಬಿದ್ದಿದೆ.

ಜೆಸಿಬಿ ಕ್ರೇನ್ ಮೂಲಕ ಗರಗಸ ಮೀನನ್ನು ಎತ್ತಿದ ಜನ 

ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಗರಗಸ ಮೀನಿನ ಫೋಟೋಗಳಲ್ಲಿ ನಾವು ನೆಲದ ಮೇಲೆ ಬಿದ್ದಿರುವ ಮತ್ತು ಹಗ್ಗದಿಂದ ಆ ಮೀನನ್ನು ಕಟ್ಟಿರುವುದನ್ನು ನೋಡಬಹುದಾಗಿದೆ. ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಗರಗಸ ಮೀನನ್ನು ಜೆಸಿಬಿ ಕ್ರೇನ್ ಮೂಲಕ ಎತ್ತುವುದನ್ನು ಕಾಣಬಹುದು.

ಹರಾಜು ಪ್ರದೇಶಕ್ಕೆ ಬಂದ ಮೀನು

ಸುದ್ದಿ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸತ್ತ ಗರಗಸ ಮೀನನ್ನು ಮಲ್ಪೆ ಮೀನುಗಾರಿಕೆ ಬಂದರಿನಿಂದ ಹೋಸ್ಟ್ ರೋಪ್ ಹೊಂದಿರುವ ಕ್ರೇನ್ ಅನ್ನು ತರಿಸಿ ಹರಾಜು ಪ್ರದೇಶಕ್ಕೆ ಅದನ್ನು ತೆಗೆದುಕೊಂಡು ಬರಲು ಕ್ರೇನ್‌ನ ಚಾಲಕನಿಗೆ ಒತ್ತಾಯಿಸಲಾಯಿತು ಎಂದು ಹೇಳಲಾಗುತ್ತಿದೆ.

ಇದು ಕಾನೂನು ಬಾಹಿರವೇ?

ನಂತರ ಅಲ್ಲಿ ಅದನ್ನು ಮಂಗಳೂರಿನ ವ್ಯಾಪಾರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹತ್ತಿರದ ಮೀನುಗಾರಿಕೆ ಇಲಾಖೆ ಕಚೇರಿ ಈ ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ತಿಳಿದಿಲ್ಲ ಎಂದು ವರದಿ ಸೂಚಿಸುತ್ತದೆ. ಅಲ್ಲಿನ ಜನರು ಮಾತ್ರ ಈ ಅಪರೂಪದ ಗರಗಸ ಮೀನನ್ನು ಕಣ್ಣು ಬಿಟ್ಟುಕೊಂಡು ನೋಡುತ್ತಲೇ ಇದ್ದರು ಎಂದು ಹೇಳಲಾಗುತ್ತಿದೆ.

ಅಳಿವಿನಂಚಿನಲ್ಲಿದೆ ಈ ಮೀನು

ಗರಗಸ ಮೀನುಗಳ ಐದು ಪ್ರಭೇದಗಳನ್ನು ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಅಳಿವಿನಂಚಿನಲ್ಲಿದೆ ಅಥವಾ ನಿರ್ಣಾಯಕವಾಗಿ ಅಳಿವಿನಂಚಿನಲ್ಲಿದೆ ಎಂದು ರೇಟ್ ಮಾಡಲಾಗಿದೆ. ಆಗಾಗ್ಗೆ ಅದರ ರೆಕ್ಕೆಗಳು, ಹಲ್ಲುಗಳು ಮತ್ತು ಅದರ ಮುಂದಿರುವ ಗರಗಸಕ್ಕಾಗಿ ಬೇಟೆಯಾಡಲಾಗುತ್ತದೆ. ಅವುಗಳನ್ನು ವ್ಯಾಪಾರ ಮಾಡುವುದಾಗಲಿ ಮತ್ತು ಅವುಗಳ ದೇಹದ ಭಾಗಗಳನ್ನು ಮಾರಾಟ ಮಾಡುವುದನ್ನು ಕನ್ವೆಂಷನ್ ಆನ್ ಇಂಟರ್ ನ್ಯಾಷನಲ್ ಟ್ರೇಡ್ ಇನ್ ಎಂಡೆಂಜರ್ಡ್‌ ಸ್ಪೀಸಿಸ್ (ಸಿಐಟಿಇಎಸ್) ನಿರ್ಬಂಧಿಸುತ್ತದೆ.

ಭಾರತದಲ್ಲಿ ಸಂರಕ್ಷಿತ ಪ್ರಭೇದ

ಈ ಗರಗಸ ಮೀನುಗಳು ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಅನುಸೂಚಿ 1 ರ ಅಡಿಯಲ್ಲಿ ಭಾರತದಲ್ಲಿ ಸಂರಕ್ಷಿತ ಪ್ರಭೇದಗಳಾಗಿವೆ, ಅಂದರೆ ಅವುಗಳಲ್ಲಿ ಬೇಟೆ ಮತ್ತು ವ್ಯಾಪಾರವು ಹುಲಿ ಅಥವಾ ಆನೆಯನ್ನು ಕೊಂದಿದ್ದಕ್ಕಾಗಿ ನೀಡಲಾಗುವ ಶಿಕ್ಷೆಯನ್ನು ಈ ಅಪರಾಧಕ್ಕೂ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: New Fish: ಗಾಢ ಪಿಂಕ್ ಬಣ್ಣದ ಮೀನು ಮಾಲ್ಡೀವ್ಸ್​ನಲ್ಲಿ ಪತ್ತೆ..! ಅಬ್ಬಾ ಇದರ ಸೌಂದರ್ಯವೇ

ಮೂಲಗಳ ಪ್ರಕಾರ, ಈ ಗರಗಸ ಮೀನನ್ನು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಹರಾಜು ಹಾಕಲಾಯಿತು. ಇದು ಮೀನುಗಾರಿಕೆ ಇಲಾಖೆ ಕಚೇರಿಗೆ ಅರಿವಿಲ್ಲದೆ ನಡೆದಿದೆ. ಈ ಮೀನಿನ ಬಗ್ಗೆ ವಿಚಾರಿಸಲು ಅಥವಾ ಸಮರ್ಪಕವಾಗಿ ವಿಲೇವಾರಿ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Knowledge: ಶಾರ್ಕ್ ಕಣ್ಣು ಮುಚ್ಚಿ ನಿದ್ರಿಸುತ್ತದೆಯೇ? ವಿಜ್ಞಾನಿಗಳು ಏನು ಹೇಳಿದ್ದಾರೆ ಕೇಳಿ..

ಕಾರವಾರದಲ್ಲಿರುವ ಕಾಲೇಜೊಂದರಲ್ಲಿ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಕುಮಾರ ಬಿ.ಎಚ್. ಅವರು ಇದರ ಬಗ್ಗೆ ಮಾತಾಡುತ್ತಾ “ಈ ಪ್ರಭೇದವು ವಿಷಕಾರಿಯಲ್ಲದಿದ್ದರೂ, ಅದನ್ನು ನಿರ್ಣಾಯಕವಾಗಿ ಅಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿದೆ" ಎಂದು ಅವರು ಹೇಳಿದರು.
Published by:Divya D
First published: