Crime News: ದರೋಡೆ ವೇಳೆ ಕಂತೆ ಕಂತೆ ಹಣ ನೋಡಿ ಖುಷಿ ತಾಳಲಾರದೆ ಕಳ್ಳನಿಗೆ ಹೃದಯಾಘಾತ!

Heart Attack: ಉತ್ತರಪ್ರದೇಶದ ಬಿಜೋರ್‌ನಲ್ಲಿ ಕಳ್ಳತನ ಮಾಡಲು ಹೋಗಿದ್ದ ಕಳ್ಳನಿಗೆ ಆತನ ನಿರೀಕ್ಷೆಗೂ ಮೀರಿ ಹಣ ದೊರೆತಿದೆ. ಈ ಖುಷಿಗೆ ಕಳ್ಳತನದ ಸಮಯದಲ್ಲೇ ಹೃದಯಾಘಾತಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಸಾಕಷ್ಟು ಹಣ ಭರಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಹಣ ಕದಿಯಲು ಹೋದ ವೇಳೆ ಕಳ್ಳತನ ಮಾಡುವ ಸ್ಥಳದಲ್ಲೇ ಕಳ್ಳನೊಬ್ಬ ಹೃದಯಘಾತಕ್ಕೆ ಒಳಗಾಗಿರುವ ಅಪರೂಪದ ಘಟನೆ ಉತ್ತರಪ್ರದೇಶದ ಬಿಜೋರ್‌ನ ಕೊತ್ವಾಲಿ ದೇಹತ್ ಎಂಬಲ್ಲಿ ನಡೆದಿದೆ. ಕಳ್ಳತನ ಮಾಡಲು ಹೋಗಿದ್ದ ಕಳ್ಳನಿಗೆ ಆತನ ನಿರೀಕ್ಷೆಗೂ ಮೀರಿ ಹಣ ದೊರೆತಿದೆ. ಈ ಖುಷಿಗೆ ಕಳ್ಳತನದ ಸಮಯದಲ್ಲೇ ಹೃದಯಾಘಾತಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಸಾಕಷ್ಟು ಹಣ ಭರಿಸಿದ್ದಾನೆ. ಕಳೆದ ತಿಂಗಳು ಕೊತ್ವಾಲ್ ದೇಹತ್ ಏರಿಯಾದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಪೊಲೀಸರು ಬುಧವಾರ ಇಬ್ಬರು ಕಳ್ಳರನ್ನು ಬಂಧಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಬಂಧಿತರು ನವಾಜ್ (30) ಹಾಗೂ ಇಯಾಜ್ (30) ಆಲಿಪುರ್ ಮತ್ತು ನಗೀನಾ ನಿವಾಸಿಗಳು ಎಂದು ತಿಳಿದು ಬಂದಿದೆ.

ಏನಿದು ಘಟನೆ?:
ಕಳೆದ ತಿಂಗಳು ಸಾರ್ವಜನಿಕ ಸೇವಾ ಕೇಂದ್ರದ ಮಾಲೀಕರಾದ ನವಾಬ್ ಹೈದರ್ ಫೆ. 16, 17ರಂದು ಏಳು ಲಕ್ಷ ಕಳುವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕಳ್ಳತನದ ಜಾಡು ಹಿಡಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಪ್ರಾರಂಭಿಸಿದರು. ಆಗ ಅನುಮಾನ ಉಂಟಾದ ಹಿನ್ನೆಲೆ ನವಾಜ್ ಹಾಗೂ ಇಯಾಜ್ ಎಂಬ ಇಬ್ಬರು ಕಳ್ಳರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ಈ ಘಟನೆ ಬಗ್ಗೆ ತಿಳಿದು ಬಂದಿದೆ ಎಂದು ಬಿಜೋರ್ ಪೊಲೀಸ್ ಇನ್ಸ್‍ಪೆಕ್ಟರ್ ಧರ್ಮವೀರ್ ಸಿಂಗ್ ತಿಳಿಸಿದರು.

ಇದೇ ರೀತಿಯ ಮತ್ತೊಂದು ಅಪರಾಧ ಪ್ರಕರಣ ಥೈಲ್ಯಾಂಡ್‍ನಲ್ಲಿ ನಡೆದಿದೆ. ಸುಮಾರು 22 ವರ್ಷದ ಯುವಕನೊಬ್ಬ ಥೈಲ್ಯಾಂಡ್‍ನ ವಿಚಿಯಾನ್ ಬ್ಯೂರಿ ಜಿಲ್ಲೆಯ ಒಂದು ಮನೆಯ ಕಿಟಕಿ ತೆಗೆದು ಕಳ್ಳತನ ಮಾಡಲು ಮನೆಯೊಳಗೆ ನುಸುಳಿದ. ನಂತರ ಅಲ್ಲೇ ಇದ್ದ ಎಸಿ ಆನ್ ಮಾಡಿ ಆ ತಂಪು ಗಾಳಿಗೆ ಕಳ್ಳತನ ಮಾಡುವುದನ್ನೇ ಬಿಟ್ಟು ಅರಿವಿಲ್ಲದೇ ನಿದ್ರೆಗೆ ಜಾರಿದ್ದಾನೆ. ಆತ ಹೋಗಿದ್ದ ರೂಂ ಮನೆಯ ಮಾಲೀಕನ ಮಗಳ ರೂಮ್ ಆಗಿತ್ತು. ಯಾರೋ ಇರುವ ಅನುಮಾನದ ಹಿನ್ನೆಲೆ ಮಗಳ ರೂಮ್ ನೋಡಲು ಬಂದ ಅಪ್ಪನಿಗೆ ಈತ ಮಲಗಿದ್ದ ದೃಶ್ಯ ಕಂಡು ಶಾಕ್ ಆಗಿದ್ದಾನೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: Love Story: ದೆವ್ವದ ಗ್ರಾಮದ ಕಾವಲುಗಾರನಿಗೆ 50 ವರ್ಷದ ಬಳಿಕ ಮೊದಲ ಪ್ರೇಯಸಿ ಸಿಕ್ಕಳು!; ಇದೊಂದು ವಿಚಿತ್ರ ಪ್ರೇಮಕತೆ

ಈ ರೀತಿ ಎಡವಟ್ಟು ಮಾಡಿಕೊಂಡ ಯುವಕನೇ ಅತಿನ್ ಕ್ರೀತ್. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅತಿನ್ ಕ್ರೀತ್ ಎಂಬ ಯುವಕ ಸುಮಾರು 2 ಗಂಟೆ ಸುಮಾರಿಗೆ ಕಿಟಕಿ ಮೂಲಕ ಮನೆಯೊಳಗೆ ಬಂದು ಎಸಿ ಆನ್ ಮಾಡಿ ಕಳ್ಳತನ ಮಾಡುವುದನ್ನು ಬಿಟ್ಟು ಮಲಗಿದ್ದಾನೆ. ಮನೆಯ ಮಾಲೀಕ ಎಬ್ಬಿಸಿದರೂ ಸಹ ಎದ್ದಿಲ್ಲ. ನಂತರ ಅವರು ಪೊಲೀಸರಿಗೆ ತಿಳಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಬಗ್ಗೆ ವಿವರ ನೀಡಿದ ತಂದೆ, ನನ್ನ ಮಗಳು ಅಂದು ಮನೆಯಲ್ಲಿ ಇರಲಿಲ್ಲ. ಈ ಹಿನ್ನೆಲೆ ಯಾರೋ ಇದ್ದಾರೆ ಎಂಬ ಅನುಮಾನದ ಹಿನ್ನಲೆ ರೂಂಗೆ ಹೊಗಿ ನೋಡಿದೆ. ಆದರೆ ಅಲ್ಲಿ ಮಗಳು ಇರಲಿಲ್ಲ. ಆದರೆ ಈತ ಎಸಿ ಆನ್ ಮಾಡಿ ಹೊದಿಕೆ ಹೊದ್ದು ಮಲಗಿದ್ದಾನೆ. ಯಾರೋ ಅಪರಿಚಿತ ವ್ಯಕ್ತಿ ಇರುವುದನ್ನು ಕಂಡು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದೆ ಎಂದು ಹೇಳಿದರು.
Published by:Sushma Chakre
First published: