ವಲ್ಡ್ಕಪ್ ಒಂದು ರಣರಂಗ.. ಧೈರ್ಯ ಇರಲಿ ನಿಮ್ಮ ಸಂಗ.. ಹಿಡಿಯೋ ಬ್ಯಾಟ್ ಅನ್ನೊ ಅಸ್ತ್ರ.. ನಿಮ್ಮ ದಾರಿಯಲ್ಲಿ ಎಂದೂ ಸೋಲೆ ಇಲ್ಲ.. ಕ್ರಿಕೆಟ್ ಯುದ್ಧದಲ್ಲಿ ನಿಮ್ಮ ಗೆಲ್ಲೋರಿಲ್ಲಾ.. ಮುಂದೆ ನುಗ್ಗಿ ನುಗ್ಗಿ ಸಿಕ್ಸರ್ ಹೊಡಿ.. ಇದೇನಪ್ಪಾ ಸಾಂಗ್(Song) ಹೇಳುತ್ತಾ ಇದ್ದೀವಿ ಅಂದುಕೊಳ್ಳಬೇಡಿ. ಇದು ಇಂದಿನ ಭಾರತದ ಪ್ರತಿಯೊಬ್ಬರ ಎದೆಬಡಿತ. 2 ವರ್ಷಗಳ ಬಳಿಕ ನಮ್ಮ ಬದ್ಧ ಎದುರಾಳಿ ತಂಡದೊಂದಿಗೆ ನಮ್ಮ ಹುಲಿಗಳು(Tigers) ಸೆಣಸಾಡಲಿದ್ದಾರೆ. ಅದು ವಲ್ಡ್ಕಪ್(Worldcup) ಅನ್ನುವ ರಣರಂಗದಲ್ಲಿ ಭಾರತ(India) ಹಾಗೂ ಪಾಕಿಸ್ತಾನ(Pakisthan) ಮುಖಾಮುಖಿಯಾಗಲಿದೆ. ಹೀಗಾಗಿ ಭಾರತ ಹಾಗೂ ಪಾಕ್ನ ಕ್ರಿಕೆಟ್ ಅಭಿಮಾನಿಗಳ(Cricket Fans) ಎದೆ ಬಡಿತ ಹೆಚ್ಚಾಗಿದೆ. ಭಾರತ ತಂಡದ ಗೆಲುವಿಗಾಗಿ ದೇಶದಾದ್ಯಂತ ಹೋಮ-ಹವನಗಳನ್ನು ನಡೆಸಲಾಗುತ್ತಿದೆ. ರಾಜ್ಯದ ರಾಜಧಾನಿಯಲ್ಲೂ ಭಾರತ ಹಾಗೂ ಪಾಕ್ ನಡುವಿನ ಕ್ರಿಕೆಟ್ ಜ್ವರ(Cricket Fever) ಹೆಚ್ಚಾಗಿದೆ. ಬೆಂಗಳೂರಿನಲ್ಲೂ ಕ್ರಿಕೆಟ್ ಅಭಿಮಾನಿಗಳು ಹೋಮ-ಹವನಗಳನ್ನ ನಡೆಸುತ್ತಿದ್ದಾರೆ.
ಗೆದ್ದು ಬಾ ಭಾರತ
ಭಾರತ-ಪಾಕಿಸ್ತಾನ ಪಂದ್ಯ ನಡೆದರೇ ಅಭಿಮಾನಿಗಳ ದಂಡೇ ನೆರೆಯುತ್ತದೆ. ಇನ್ನೂ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದೇ ಕಾರಣಕ್ಕೆ ದೇಶದ ಕೋಟ್ಯಂತರ ಅಭಿಮಾನಿಗಳು ಭಾರತ ತಂಡದ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ವಿಶೇಷ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಸೂಪರ್ 12 ಹಂತದ ಆರಂಭಿಕ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದ್ದು, ಇಡೀ ವಿಶ್ವದ ಕಣ್ಣು ಈ ಪಂದ್ಯ ದ ಮೇಲೆ ನೆಟ್ಟಿದೆ.
ಇದನ್ನು ಓದಿ :
ಭಾರತ ವಿರುದ್ಧ ಗೆದ್ದರೆ ಪಾಕಿಸ್ತಾನ ಕ್ರಿಕೆಟಿಗರಿಗೆ ಸಿಗಲಿದೆ ಬಂಪರ್ ಕೊಡುಗೆ
ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
ಇಂದು ಸಂಜೆ 7.30ಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ ಆರಂಭವಾಗಲಿವೆ. ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ ಉಭಯ ತಂಡಗಳು 2 ಅಭ್ಯಾಸ ಪಂದ್ಯಗಳನ್ನಾಡಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಉಭಯ ತಂಡಗಳು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಿವೆ. ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿ ಕಂಡು ಬಂದಿದ್ದರೂ, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೊಂಚ ಸಮತೋಲಿತವಾಗಿ ಕಂಡು ಬರುತ್ತಿದೆ. ಸದ್ಯದ ವರದಿ ಪ್ರಕಾರ ಭಾರತ ಗೆಲ್ಲುವ ಸಾಧ್ಯತೆ ಶೇ.73ರಷ್ಟು ಇದ್ದರೆ, ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಶೇ.27ರಷ್ಟು ಇದೆ.
ಪಾಕ್ ವಿರುದ್ದ ಒಮ್ಮೆಯೂ ಸೋತಿಲ್ಲ ಭಾರತ
ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದರೆ, ಬಾಬರ್ ಅಜಂ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶೇಷ ಅಂದರೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಇದುವರೆಗೂ ಪಾಕಿಸ್ತಾನದ ವಿರುದ್ಧ ಸೋತಿಲ್ಲ. ಹೀಗಾಗಿ ಇಂದಿನ ಪಂದ್ಯ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇನ್ನೂ ಭಾರತ ವಿರುದ್ಧ ಹೈವೋಲ್ಟೇಜ್ ಕದನಕ್ಕೆ ಪಾಕಿಸ್ತಾನ ತಂಡ 12 ಆಟಗಾರರ ಹೆಸರನ್ನು ಪ್ರಕಟಗೊಳಿಸಿದೆ.
ಇದನ್ನು ಓದಿ :
ಕೆಎಲ್ ರಾಹುಲ್, ಧೋನಿ, ಪಂತ್ ಬಗ್ಗೆ ಪಾಕಿಸ್ತಾನ್ ಕೋಚ್ ಹೇಡನ್ ಹೇಳಿದ್ದಿದು
ಟೀಂ ಇಂಡಿಯಾ ವಿರುದ್ಧ ಪಂದ್ಯಕ್ಕೆ 12 ಸದಸ್ಯರ ಪಾಕ್ ತಂಡ
ಬಾಬರ್ ಆಝಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿ.ಕೀ), ಫಖಾರ್ ಝಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಹೈದರ್ ಅಲಿ, ಇಮಾದ್ ವಸೀಮ್, ಶದಾಬ್ ಖಾನ್, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರಾವೂಫ್
ಇನ್ನೂ ಕೆಲವೇ ಗಂಟೆಗಳಲ್ಲಿ ಟೀಂ ಇಂಡಿಯಾ ಕೂಡ ಪ್ಲೇಯಿಂಗ್ 11 ಲಿಸ್ಟ್ ಅನ್ನು ಪ್ರಕಟಗೊಳಿಸಲಿದ್ದಾರೆ. ಭಾರತ್ ಕ್ರಿಕೆಟ್ ಅಭಿಮಾನಿಗಳು ಮಾತ್ರ ಗೆಲುವೇ.. ಗೆಲುವೇ.. ಗೆಲುವೇ.. ನಮಗೆ ಎಂದೆಂದಿಗೂ ಗೆಲುವೇ ಅಂತ ಹಾಡುತ್ತಾ ಗಡಿಯಾರ ನೋಡುತ್ತಾ ಕೂತಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ