Viral News: 18 ರಿಂದ 25 ವರ್ಷದೊಳಗಿನ ಮಹಿಳಾ ರೂಮ್ ಮೇಟ್ ಬೇಕಾಗಿದ್ದಾರೆ: 44ರ ಅಂಕಲ್ ಕೊಟ್ರು ಜಾಹೀರಾತು

ಈ ಜಾಹೀರಾತಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ರೂಮ್‌ಮೇಟ್ ಬಯಸುವ ವ್ಯಕ್ತಿಯು ಕೇವಲ ಒಂದು ಕೋಣೆಯನ್ನು ಹೊಂದಿದ್ದಾನೆ. ಸ್ವತಃ ಪುರುಷ ಆಗಿರುವುದರಿಂದ ಅವನು ಮಹಿಳಾ ಕೊಠಡಿ ಸಹವಾಸಿಗಾಗಿ ಹುಡುಕುತ್ತಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದೇ ಮನೆಯಲ್ಲಿ (House) ಒಬ್ಬರೇ ಇದ್ರೆ ಬೇಜಾರು ಆಗುತ್ತೆ. ಹಾಗಂತ ಜೊತೆಯಲ್ಲಿ ಒಬ್ಬ ಫ್ರೆಂಡ್ (Friend) ಇರಲಿ ಎಂದು ಒಳ್ಳೆಯ ಗೆಳೆಯನನ್ನು ಹುಡುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದೇ ಕಡೆ ಕೆಲಸ ಮಾಡುವವರು (Colleague) ಒಂದು ಮನೆಯಲ್ಲಿ ವಾಸವಾಗಿರುತ್ತಾರೆ ಅಥವಾ ಒಂದೇ ಊರಿನವರು ಆಗಿರಬಹುದು (Native Friends) ಅಥವಾ ಒಂದೇ ಕಾಲೇಜಿನಲ್ಲಿ (College Friends) ಅಭ್ಯಾಸ ಮಾಡಿದ ಫ್ರೆಂಡ್ ಸರ್ಕಲ್ ರೂಮ್ ಗಳಲ್ಲಿ (Room) ಜೊತೆಯಾಗಿ ವಾಸ ಮಾಡುತ್ತಾರೆ. ಕೆಲವೊಮ್ಮೆ ಜೊತೆಗಾರ ಯಾರು ಸಿಕ್ಕಿಲ್ಲ ಅಂದ್ರೆ ಪಿಜಿಗಳಲ್ಲಿ (Paying Guest) ಜನ ಉಳಿದುಕೊಳ್ಳುತ್ತಾರೆ. ಆದರೆ ಇಲ್ಲೋರ್ವ ಅಂಕಲ್ (Uncle) ತನಗೆ ರೂಮ್ ಮೇಟ್ (Roommate) ಬೇಕಾಗಿದ್ದಾರೆ ಅಂತ ಜಾಹೀರಾತು (Advertisement) ನೀಡಿದ್ದಾನೆ.

ಕೆಲವರು ದುಬಾರಿ ಬೆಲೆ ಮನೆಯನ್ನು ಬಾಡಿಗೆ ಪಡೆದು ಒಳ್ಳೆಯ ರೂಮ್ ಮೇಟ್ ಹುಡುಕಾಟದಲ್ಲಿರುತ್ತಾರೆ. ಈ ಸಂಬಂಧ ಪರಿಚಯದವರ ಬಳಿ ಹೇಳಿಕೊಂಡಿರುತ್ತಾರೆ. ರೂಮ್ ಮೇಟ್ ಆಯ್ಕೆ ಮಾಡಿಕೊಳ್ಳುವಾಗ ಆತನ ಕೆಲಸ, ಹವ್ಯಾಸ, ವಯಸ್ಸು ಮತ್ತು ಇತ್ಯಾದಿ ಅಂಶಗಳನ್ನು ಒಂದು ಸಾರಿ ಲೆಕ್ಕ ಸಹ ಹಾಕುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

ವಿದೇಶಗಳಲ್ಲಿ ತಮ್ಮ ರೂಮ್ ಗಳನ್ನು ಶೇರ್ ಮಾಡಿಕೊಳ್ಳುವ ಜಾಹೀರಾತುಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ ಹುಡುಗರು ತಮ್ಮ ವಯಸ್ಸಿನ ಆಸುಪಾಸಿನ ಯುವಕರೇ ತಮ್ಮ ರೂಮ್ ಮೇಟ್ ಮಾಡಿಕೊಳ್ಳಲು ಇಷ್ಟಪಡ್ತಾರೆ. ಅದೇ ರೀತಿ ಮಹಿಳೆಯರು ಸಹ ನೋಡುತ್ತಿರುತ್ತಾರೆ.

ನಲವತ್ತರ ಆಸುಪಾಸಿನಲ್ಲಿ ಆಂಕಲ್ ತಮಗೆ ಮಹಿಳಾ ರೂಮ್ ಮೇಟ್ (Man Wants Female Roommate) ಬೇಕು ಅಂತ ಜಾಹೀರಾತು ಮಾಡಿದ್ದಾರೆ. ಈ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Viral Video: ಕಾರ್ ವೇಗವಾಗಿ ಹೋಗ್ತಿತ್ತು, ಆದ್ರೆ ಚಾಲಕ ನಿದ್ದೆಗೆ ಜಾರಿದ್ದ: ಅಪಘಾತ ಮಾತ್ರ ನಡೆಯಲಿಲ್ಲ; ವಿಡಿಯೋ ವೈರಲ್

44 ವರ್ಷದ ಮಧ್ಯ ವಯಸ್ಕ ವ್ಯಕ್ತಿ ಟ್ವಿಟರ್  ನಲ್ಲಿ ಈ ಕುರಿತು ಜಾಹೀರಾತು ಹಾಕುವ ಮೂಲಕ ತನ್ನ ಅಗತ್ಯಗಳನ್ನು (Advertisement for Roommate) ವ್ಯಕ್ತಪಡಿಸಿದ್ದಾರೆ.

ಡೈಲಿ ಸ್ಟಾರ್ ವರದಿ ಪ್ರಕಾರ, ಈ ವಿಚಿತ್ರ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಓವನ್ ಎಂಬ ಹೆಸರಿನ ಈ ಜಾಹೀರಾತು ನೀಡಿದ್ದಾರೆ. ಈ ವ್ಯಕ್ತಿ ಒಂದು ಕೋಣೆಯ ಮನೆಯನ್ನು ಹೊಂದಿದ್ದು, ಅದನ್ನು ಮಹಿಳೆಯೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದಾನೆ. ಇದರ ಜೊತೆಗೆ ರೂಮ್ ಮೇಟ್ ಹೇಗಿರಬೇಕು ಎಂದು ಸಹ ಆ ವ್ಯಕ್ತಿ ಹೇಳಿದ್ದಾನೆ.

ರೂಮ್‌ ಮೇಟ್‌ ಗೆ ಷರತ್ತುಗಳು ಹೀಗಿವೆ?

ಈ ಜಾಹೀರಾತಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ರೂಮ್‌ಮೇಟ್ ಬಯಸುವ ವ್ಯಕ್ತಿಯು ಕೇವಲ ಒಂದು ಕೋಣೆಯನ್ನು ಹೊಂದಿದ್ದಾನೆ. ಸ್ವತಃ ಪುರುಷ ಆಗಿರುವುದರಿಂದ ಅವನು ಮಹಿಳಾ ಕೊಠಡಿ ಸಹವಾಸಿಗಾಗಿ ಹುಡುಕುತ್ತಿದ್ದಾನೆ.

*ಮಹಿಳೆಯ ವಯಸ್ಸು 18 ರಿಂದ 25 ವರ್ಷಗಳ ನಡುವೆ ಇರಬೇಕು.

*ಅಡುಗೆ ಮತ್ತು ಶುಚಿಗೊಳಿಸುವಿಕೆಯಲ್ಲಿ ಅವನಿಗೆ ಸಹಾಯ ಮಾಡಬೇಕು.

*ಮಲಗುವ ಕೋಣೆಯಲ್ಲಿ ಮಂಚವನ್ನು ಹಂಚಿಕೊಳ್ಳಲು ಸಿದ್ಧವಾಗಿರಬೇಕು.

*ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವಂತಿಲ್ಲ

*ಮನೆಯಲ್ಲಿ ಮದ್ಯಪಾನ ಮಾಡುವಂತಿಲ್ಲ.

*ಯಾವುದೇ ಪುರುಷ ಸ್ನೇಹಿತ ಮನೆಗೆ ಬರುವಂತಿಲ್ಲ.

*ಡ್ರಗ್ಸ್ ನಿಷೇಧ

*ಮನೆಯಲ್ಲಿ ವಾಸಿಸುವ ಮಹಿಳೆ ಆ ವ್ಯಕ್ತಿ ಖಾಸಗಿತನ ಧಕ್ಕೆ ತರಬಾರದು.

ಇದನ್ನೂ ಓದಿ:  Smart Bed: ನಿದ್ರೆ ಮೇಲೆ ಕಣ್ಣಿಡಲು ಬರ್ತಿದೆ ಸ್ಮಾರ್ಟ್ ಬೆಡ್, ನೆಮ್ಮದಿಯಾಗಿ ಮಲಗಲು ಸೆನ್ಸಾರ್ ಹಾಸಿಗೆ ಬೆಸ್ಟ್​

30 ಸಾವಿರಕ್ಕೂ ಅಧಿಕ ಬಾಡಿಗೆ

ಈ ಮನೆಯ ಬಾಡಿಗೆ 30 ಸಾವಿರ ರೂ. ಎಂದು ಹೇಳಲಾಗಿದೆ. ಮನೆಯ ಬಾಡಿಗೆಯನ್ನು ಜಾಹೀರಾತಿನ ಕೊನೆಯ ಭಾಗದಲ್ಲಿ ಮುದ್ರಿಸಲಾಗಿದೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿಯವರೆಗೆ ಇದು 3.5 ಲಕ್ಷಕ್ಕೂ ಹೆಚ್ಚು ಲೈಕ್‌ ಗಳನ್ನು ಪಡೆದುಕೊಂಡಿದೆ.
Published by:Mahmadrafik K
First published: