• Home
  • »
  • News
  • »
  • trend
  • »
  • Viral Video: ವಿದ್ಯುತ್ ಬಳಸದೆ ತೋಟಕ್ಕೆ ನೀರು ಹಾಯಿಸಿದ ಕ್ರಿಯೇಟಿವ್ ರೈತ; ವೈರಲ್ ಆಯ್ತು ವಿಡಿಯೋ

Viral Video: ವಿದ್ಯುತ್ ಬಳಸದೆ ತೋಟಕ್ಕೆ ನೀರು ಹಾಯಿಸಿದ ಕ್ರಿಯೇಟಿವ್ ರೈತ; ವೈರಲ್ ಆಯ್ತು ವಿಡಿಯೋ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral Video: ರೈತನೊಬ್ಬ ತಮ್ಮ ತೋಟಕ್ಕೆ ನೀರು ಹಾಯಿಸಲು ಎತ್ತನ್ನು ಬಳಸಿದ ವಿಡಿಯೋ ಈಗ ವೈರಲ್ ಆಗಿದೆ. ಹಲವಾರು ಜನರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

  • Share this:

ನಮ್ಮಲ್ಲಿ ಜನರು (People) ತಾವು ಮಾಡುವ ಕೆಲಸವನ್ನು ತುಂಬಾನೇ ಸುಲಭ ಮಾಡಿಕೊಳ್ಳಲು ಅನೇಕ ರೀತಿಯ ಮಾರ್ಗಗಳನ್ನು ಹುಡುಕಲು (Search) ಪ್ರಯತ್ನಿಸುತ್ತಾರೆ. ಹೀಗೆ ಅನೇಕ ರೀತಿಯ ಮಾರ್ಗಗಳನ್ನು ಹುಡುಕುವಾಗ ಕೆಲವೊಮ್ಮೆ ತುಂಬಾನೇ ಕ್ರಿಯೆಟಿವ್ (Creative) ಎಂದರೆ ಸೃಜನಶೀಲ ತಂತ್ರಗಳು ತಲೆಗೆ ಹೊಳೆಯುತ್ತವೆ ಎಂದು ಹೇಳಬಹುದು. ಅದರಲ್ಲೂ ಈ ವ್ಯವಸಾಯದ ವಿಷಯಕ್ಕೆ (Subject) ಬಂದರೆ ಈಗೀಗ ಹೊಲದಲ್ಲಿ ಕಳೆ ತೆಗೆಯುವವರು ಸಿಗುತ್ತಿಲ್ಲ, ಸಿಕ್ಕರೂ ಸಹ ದಿನದ ಕೂಲಿ ತುಂಬಾನೇ ಕೇಳುತ್ತಿದ್ದಾರೆ ಅಂತೆಲ್ಲಾ ಅನೇಕ ಸಮಸ್ಯೆಗಳನ್ನು ರೈತರು ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ನೂರಾರು ಎಕರೆ ಕೃಷಿ (Agriculture) ಭೂಮಿ ಇರುವಂತಹ ಮಾಲೀಕರು ಹೆಚ್ಚಿನ ಕೆಲಸಕ್ಕಾಗಿ ಕೆಲಸಗಾರರ ಮೇಲೆ ಅವಲಂಬಿತರಾಗದೇ (Depend) ಅನೇಕ ರೀತಿಯ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಇದ್ದಾರೆ.


ಐಎಎಸ್ ಅಧಿಕಾರಿ ಹಂಚಿಕೊಂಡಿರುವ ವೀಡಿಯೋದಲ್ಲಿ ಏನಿದೆ?


ಇನ್ನೂ ಕೆಲವರು ಕೃಷಿಯ ವಿಷಯಕ್ಕೆ ಬಂದಾಗ ಸಾಧ್ಯವಾದಷ್ಟು ಮಿತವ್ಯಯದ ರೀತಿಯಲ್ಲಿ ಕೆಲಸಗಳನ್ನು ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ. ಏನೇ ಹೇಳಿ.. ನಾವು ಭಾರತೀಯರು ಇಂತಹ ಸೃಜನಶೀಲ ತಂತ್ರಗಳನ್ನು ಹುಡುಕುವುದರಲ್ಲಿ ಬೇರೆವರಿಗಿಂತಲೂ ಒಂದು ಹೆಜ್ಜೆ ಮುಂದೆ ಅಂತಾನೆ ಹೇಳಬಹುದು. ಐಎಎಸ್ ಅಧಿಕಾರಿ ಅವನಿಶ್ ಶರಣ್ ಹಂಚಿಕೊಂಡಿರುವ ವೀಡಿಯೋದಲ್ಲಿ ಟ್ರೆಡ್ ಮಿಲ್ ನಂತಹ ಯಂತ್ರದ ಮೇಲೆ ಎತ್ತು ಹಾಗೆಯೇ ನಡೆಯುತ್ತಿರುವುದನ್ನು ತೋರಿಸಲಾಗಿದೆ. ಆ ಯಂತ್ರವನ್ನು ಒಂದು ಪಂಪ್ ಗೆ ಜೋಡಿಸಲಾಗಿದೆ, ಇದು ನೀರಾವರಿಗಾಗಿ ಹೊಲಗಳಿಗೆ ನೀರನ್ನು ಸಿಂಪಡಿಸಲು ಸಹಾಯ ಮಾಡುತ್ತಿರುವುದನ್ನು ನಾವು ನೋಡಬಹುದು.


ಇತರ ಯಂತ್ರಗಳಿಂದ ಮತ್ತಷ್ಟು ಸಂಪರ್ಕಗೊಂಡಿರುವ ವಿದ್ಯುತ್ ಮೋಟರ್ ಗೆ ಸಂಪರ್ಕ ಹೊಂದಿದ ಅನೇಕ ಬೆಳಕಿನ ಬಲ್ಬ್ ಗಳನ್ನು ಒಬ್ಬ ವ್ಯಕ್ತಿಯು ಆನ್ ಮಾಡುವುದನ್ನು ಸಹ ಈ ವೀಡಿಯೋದಲ್ಲಿ ನಾವು ನೋಡಬಹುದು. ಮತ್ತೊಂದೆಡೆ ಅನೇಕ ಎತ್ತುಗಳು ಅಂತಹ ಟ್ರೇಡ್ ಮಿಲ್ ಗಳಂತೆ ಇರುವ ಯಂತ್ರಗಳ ಮೇಲೆ ನಡೆದಾಡುವುದರಿಂದ ಹೊಲಕ್ಕೆ ನೀರನ್ನು ಸಿಂಪಡಿಸುವುದನ್ನು ನಾವು ನೋಡಬಹುದು. ಶರಣ್ ಅವರು ಆ ವೀಡಿಯೋವನ್ನು ಹಂಚಿಕೊಂಡು ಅದಕ್ಕೆ "ಗ್ರಾಮೀಣ ಭಾರತ ನಾವಿನ್ಯತೆ. ಇದು ಅದ್ಭುತವಾಗಿದೆ" ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.


ಕೆಲವೇ ಗಂಟೆಗಳಲ್ಲಿ ವೈರಲ್ ಆಯ್ತು ಈ ವೀಡಿಯೋ..


ಈ ವೀಡಿಯೋ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲವೇ ಕೆಲವು ಗಂಟೆಗಳಲ್ಲಿ ಸುಮಾರು 92,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು 5,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ಆದರೆ ಈ ಸೃಜನಶೀಲವಾದ ನೀರಾವರಿ ತಂತ್ರದಲ್ಲಿ ಪ್ರಾಣಿಗಳನ್ನು ಅತಿಯಾಗಿ ದುಡಿಸಿಕೊಂಡಿದ್ದಾರೆ ಅಂತ ಈ ವಿಧಾನಗಳನ್ನು ಅಭಿವೃದ್ಧಿಪಡಿಸಿದ ವ್ಯಕ್ತಿಯನ್ನು ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ಟ್ವಿಟರ್ ಬಳಕೆದಾರರು ನಿರಂತರವಾಗಿ ಅಪಹಾಸ್ಯ ಮಾಡಿದ್ದಾರೆ, ಆದರೆ ಕೆಲವು ಬಳಕೆದಾರರು ಈ ಸೃಜನಶೀಲವಾದ ನೀರಾವರಿ ತಂತ್ರವನ್ನು ಶ್ಲಾಘಿಸಿರುವುದನ್ನು ಸಹ ನಾವು ಇಲ್ಲಿ ನೋಡಬಹುದು.ಅನೇಕ ರೀತಿಯ ಕಾಮೆಂಟ್ ಗಳು ಬಂದಿವೆ..


"ಮೂಕ ಪ್ರಾಣಿಗಳಿಗೆ ನೋವು ಮಾಡುವುದರ ಮೂಲಕ ತಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಮೆಚ್ಚುಗೆ ಇಲ್ಲ.. ಅಲ್ಲಿ ಎತ್ತುಗಳನ್ನು ನಿರಂತರವಾಗಿ ನಡೆಯುವಂತೆ ಒತ್ತಾಯಿಸಲಾಯಿತು" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: ತಮಿಳುನಾಡಿನ ಡುಗಾಂಗ್‌ ಅಂದ್ರೆ ಏನು? ಈ ನಾಡು ಸಂರಕ್ಷಣಾ ಪ್ರದೇಶವನ್ನಾಗಿ ಸ್ಥಾಪಿಸಲು ಕಾರಣವೇನು?


"ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ತಂತ್ರಗಳನ್ನು ಬಳಸಿಕೊಂಡು ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಇಂತಹ ದೇಶೀಯ ಆವಿಷ್ಕಾರಗಳು ಮತ್ತು ಆಲೋಚನೆಗಳನ್ನು ಪ್ರೋತ್ಸಾಹಿಸಬೇಕು, ಏಕೆಂದರೆ ನಮ್ಮ ಬೃಹತ್ ಜನಸಂಖ್ಯೆಯನ್ನು ಒಂದು ಚೌಕಟ್ಟಿನ ಕಲ್ಪನೆಗಳಿಂದ ಕೇಂದ್ರೀಕರಿಸಿದ ಅಂತಹ ಉದ್ಯೋಗಗಳ ಮೂಲಕ ಆರ್ಥಿಕವಾಗಿ ಮೇಲೆತ್ತಬಹುದು. ಇದು ನಿಧಾನವಾದರೂ ಸಹ ಮುಂದೆ ಸಾಗಲು ಒಳ್ಳೆಯ ಮಾರ್ಗ" ಎಂದು ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.


ಇದನ್ನೂ ಓದಿ: ಥೇಟ್​​ ಫಿಲ್ಮಿ ಸ್ಟೈಲ್​​ನಲ್ಲಿ ಎಂಗೇಜ್​ ಆದ ಆಮೀರ್​ ಮಗಳು ಇರಾ! ವೈರಲ್ ಆಯ್ತು ಪ್ರಪೋಸಿಂಗ್ ವಿಡಿಯೋ


"ಹೌದು, ಇದು ನಿಜವಾಗಿಯೂ ಪ್ರಾಣಿಗಳ ಶೋಷಣೆ ಎಂದು ಮೂರನೇ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಈ ಪೋಸ್ಟ್ ಗೆ ಎಲ್ಲಾ ರೀತಿಯ ಕಾಮೆಂಟ್ ಗಳು ಸಹ ಬಂದಿವೆ ಅಂತ ಹೇಳಬಹುದು.

First published: