World War 2: 77 ವರ್ಷಗಳ ನಂತರ 2ನೇ ವಿಶ್ವಯುದ್ಧದ ವಿಮಾನದ ಅವಶೇಷ ಹಿಮಾಲಯದಲ್ಲಿ ಪತ್ತೆ!

ವಿಶ್ವ ಸಮರ II ರ ಸಮಯದಲ್ಲಿ ಭಾರತ, ಚೀನಾ ಮತ್ತು ಮ್ಯಾನ್ಮಾರ್‌ ಕಾರ್ಯಾಚರಣೆಯಲ್ಲಿ ನೂರಾರು US ಮಿಲಿಟರಿ ವಿಮಾನಗಳು ನಾಪತ್ತೆಯಾಗಿದ್ದವು

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಎರಡನೇ ಮಾಹಾಯುದ್ಧದಲ್ಲಿ (World War) ನಾಪತ್ತೆಯಾದ ವಿಮಾನಗಳು (Planes) 77 ವರ್ಷದ ಬಳಿಕ ಹಿಮಾಲಯದಲ್ಲಿ (Himalayas) ಪತ್ತೆ ಹಚ್ಚಲಾಗಿದೆ.ಇಡೀ ಮನುಕುಲವನ್ನೇ ನಡುಗಿಸಿದ, ಕೋಟಿ ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು 77 ವರ್ಷಗಳೇ ಕಳೆದು ಬಿಟ್ಟಿವೆ. ವಿಶ್ವಯುದ್ಧ 1 ಮತ್ತು ವಿಶ್ವಯುದ್ಧ 2 ಇತಿಹಾಸ (History) ಕಂಡ ಅತ್ಯಂತ ಬೀಭತ್ಸ ಜಾಗತಿಕ ಯುದ್ಧಗಳು.1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮತ್ತು 1939ರಿಂದ 1945ವರೆಗೆ ನಡೆದ ಎರಡನೇ ವಿಶ್ವಯುದ್ಧಗಳು ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ.

ಬಿರುಗಾಳಿಯ ವಾತಾವರಣ
2ನೇ ವಿಶ್ವಯುದ್ಧಕ್ಕೆ ಸಂಬಂಧಿಸಿದ ವಿಮಾನವೊಂದು ಹಿಮಾಲಯದಲ್ಲಿ ಪತನಗೊಂಡಿತ್ತು, ಪ್ರಸ್ತುತ ಈ ವಿಮಾನದ ಅವಶೇಷಗಳು 77 ವರ್ಷಗಳ ನಂತರ ಪತ್ತೆಯಾಗಿವೆ. C-46 ಸಾರಿಗೆ ವಿಮಾನವು 1945ರ ವಿಶ್ವ ಯುದ್ಧದ ಮೊದಲ ವಾರದಲ್ಲಿ ದಕ್ಷಿಣ ಚೀನಾದ ಕುನ್ಮಿಂಗ್‌ನಿಂದ 13 ಜನರನ್ನು ಹೊತ್ತೊಯ್ಯುತ್ತಿತ್ತು.

ಬಳಿಕ ಈ ವಿಮಾನ ಅರುಣಾಚಲ ಪ್ರದೇಶದಲ್ಲಿ ಪರ್ವತ ಪ್ರದೇಶದಲ್ಲಿ ಹೋಗುತ್ತಿರುವಾಗ ಉಂಟಾದ ಬಿರುಗಾಳಿಯ ವಾತಾವರಣದಲ್ಲಿ ಕಣ್ಮರೆಯಾಗಿತ್ತು. ಆದರೆ ಕ್ಲೇಟನ್ ಕುಹ್ಲೆಸ್ ಸಾಹಸಿಗರೊಬ್ಬರ ತಂಡವೊಂದು ಈ ವಿಮಾನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಈ ವಿಮಾನ ಕಣ್ಮರೆಯಾದಾಗ ಮತ್ತೆಂದೂ ಇದು ಸಿಗುತ್ತದೆ ಎಂದು ಭಾವಿಸರಲಿಲ್ಲ ಎಂದು US ಸಾಹಸಿ ಕ್ಲೇಟನ್ ಕುಹ್ಲೆಸ್ ಹೇಳಿದ್ದಾರೆ. 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಡೂಮ್ಡ್ ಫ್ಲೈಟ್‌ನಲ್ಲಿದ್ದವರ ಒಬ್ಬರ ಮಗನ ವಿನಂತಿಯ ಮೇರೆಗೆ ಕ್ಲೇಟನ್ ಕುಹ್ಲೆಸ್ ಈ ವಿಮಾನ ಅನ್ವೇಷಣೆ ಸಾಹಸಕ್ಕೆ ಕೈ ಹಾಕಿದ್ದರಂತೆ.

ಇದನ್ನೂ ಓದಿ: Pilot: ಮಾರ್ಗಮಧ್ಯೆ ಶಿಫ್ಟ್​​ ಮುಗೀತೆಂದು ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್, ಮುಂದೇನಾಯ್ತು?

ಪ್ರಸ್ತುತ ಇದು ಸಾಧ್ಯವಾಗಿದ್ದು 77 ವರ್ಷಗಳ ಬಳಿಕ ವಿಮಾನವನ್ನು ಪತ್ತೆ ಮಾಡಿದ್ದಾರೆ. ವಿಮಾನ ಪತ್ತೆಯ ದಂಡಯಾತ್ರೆಯಲ್ಲಿ ಕುಹ್ಲೆಸ್ ಮತ್ತು ಸ್ಥಳೀಯ ಲಿಸು ಜನಾಂಗೀಯ ಗುಂಪಿನ ಕಾರ್ಯ ಮಹತ್ವದ್ದಾಗಿದೆ. ಆಳದ ನದಿಗಳಲ್ಲಿ ಮತ್ತು ಘನೀಕರಿಸುವ ತಾಪಮಾನದಲ್ಲಿ ಕ್ಯಾಂಪ್ ಹೂಡಿ ಈ ಮಹತ್ತರ ಸಾಧನೆ ಮಾಡಿದ್ದಾರೆ.

ಪತ್ತೆ ಮಾಡುವಲ್ಲಿ ಯಶಸ್ವಿ
ಇದು ನಿಜಕ್ಕೂ ಮಾರಣಾಂತಿಕ ಕಾರ್ಯಾಚರಣೆಯಾಗಿತ್ತು ಎಂದು ಕುಹ್ಲೆಸ್ ಹೇಳಿದ್ದಾರೆ. 2018ರಲ್ಲಿ ಮೂರು ಲಿಸು ಬೇಟೆಗಾರರು ಅಕಾಲಿಕ ಸೆಪ್ಟೆಂಬರ್ ಹಿಮಪಾತದಲ್ಲಿ ಸಿಕ್ಕಿಬಿದ್ದು, ಅದೇ ಪ್ರದೇಶದಲ್ಲಿ ಸಾವನ್ನಪ್ಪಿದರು. ಜೊತೆಗೆ ಇನ್ನಿಬ್ಬರು ಪ್ರಾಣಾಪಾಯದಿಂದ ತಪ್ಪಿಸಿಕೊಂಡರು ಎಂದು ಈ ಕೆಲಸದ ಅಪಾಯಗಳ ಬಗ್ಗೆ ಕುಹ್ಲೆಸ್ ಹೇಳಿದರು.

ಈ ಎಲ್ಲಾ ಅಡಡತಡೆಗಳನ್ನು ದಾಟಿ ನಮ್ಮ ತಂಡವು ಅಂತಿಮವಾಗಿ ಕಳೆದ ತಿಂಗಳು ಹಿಮದಿಂದ ಆವೃತವಾದ ಪರ್ವತದ ತುದಿಯಲ್ಲಿ 2ನೇ ವಿಶ್ವಯುದ್ಧದಲ್ಲಿ ಕಾಣೆಯಾಗಿದ್ದ ವಿಮಾನವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ವಿಮಾನದ ಕೆಲವು ಅವಶೇಷಗಳನ್ನು ಗುರುತಿಸಲು ಸಾಧ್ಯವಾಯಿತು ಎಂದಿದ್ದಾರೆ. ಏರ್ ಕ್ರಾಫ್ಟ್‌ನಲ್ಲಿ ಉಳಿದಿರುವ ಯಾವುದೇ ಮಾನವ ಅವಶೇಷಗಳು ಇರಲಿಲ್ಲ ಎಂದಿದ್ದಾರೆ.

ವಿಮಾನ ಹುಡುಕಾಟ
ಹ್ಲೆಸ್‌ಗೆ ಬಿಲ್ ಸ್ಕೆರೆರ್‌ ಎಂಬುವವರಿಂದ ಈ ವಿಮಾನ ಹುಡುಕಾಟ ನಡೆಸುವ ಜವಾಬ್ದಾರಿಯನ್ನು ಕುಹ್ಲೆಸ್ ವಹಿಸಿಕೊಂಡರು. ಹ್ಲೆಸ್‌ಗೆ ಬಿಲ್ ಸ್ಕೆರೆರ್‌ ಈ ವಿಮಾನದಲ್ಲಿದ್ದ ಒಬ್ಬರ ಮಗನಾಗಿದ್ದಾರೆ. ನನ್ನ ತಂದೆ ಎಲ್ಲಿ ಕಣ್ಮರೆಯಾಗಿ ಬಿಟ್ಟರು ಎಂಬ ದು:ಖವಿತ್ತು ಈಗ ಅವರು ಎಲ್ಲಿದ್ದಾರೆ ಎಂದು ತಿಳಿದುಕೊಂಡು ನಾನು ಸಂತೋಷಗೊಂಡಿದ್ದೇನೆ, ಇದು ದುಃಖಕರ ವಿಷಯವಾದ್ರೂ ಸಂತೋಷದಾಯಕವಾಗಿದೆ ಎಂದು ಸ್ಕೆರೆರ್ ನ್ಯೂಯಾರ್ಕ್‌ನಿಂದ ಇಮೇಲ್ ಮೂಲಕ AFPಗೆ ತಿಳಿಸಿದರು. "ನಾನು ತಂದೆಯಿಲ್ಲದೆ ಬೆಳೆದಿದ್ದೇನೆ, ನನ್ನ ತಾಯಿಗೆ ಅವಳ ಪತಿ ಕಾಣೆಯಾಗಿರುವ ಬಗ್ಗೆ ಟೆಲಿಗ್ರಾಮ್ ಬಂದಿತ್ತು. ನಾನು ಆಗ 13 ತಿಂಗಳ ಮಗು ಅಷ್ಟೇ. ಕಷ್ಟದಲ್ಲಿ ನನ್ನ ತಾಯಿ ನನ್ನ ಬೆಳೆಸಿದ್ದಾಳೆ ಎಂದು ಸ್ಕೆರೆರ್ ಹೇಳಿದ್ದಾರೆ.

ಇದನ್ನೂ ಓದಿ: US Airports: ಅಮೆರಿಕದಲ್ಲಿ 5G Technology ಸಮಸ್ಯೆಯಿಂದಾಗಿ ಕೆಲ ವಿಮಾನ ಹಾರಾಟ ರದ್ದುಗೊಳಿಸಿದ Air India

ವಿಶ್ವ ಸಮರ II ರ ಸಮಯದಲ್ಲಿ ಭಾರತ, ಚೀನಾ ಮತ್ತು ಮ್ಯಾನ್ಮಾರ್‌ ಕಾರ್ಯಾಚರಣೆಯಲ್ಲಿ ನೂರಾರು US ಮಿಲಿಟರಿ ವಿಮಾನಗಳು ನಾಪತ್ತೆಯಾಗಿದ್ದವು. ಇದರ ಜೊತೆಗೆ ಜಪಾನಿನ ಪಡೆಗಳಿಂದ ಪ್ರತಿಕೂಲವಾದ ಬೆಂಕಿಯು ಕೆಲವು ವಿಮಾನ ನಷ್ಟಗಳಿಗೆ ಕಾರಣವಾಗಿವೆ. ಮತ್ತು ಹೆಚ್ಚಿನವು ಐಸ್ ಹಾನಿ, ಚಂಡಮಾರುತ-ಬಿರುಗಾಳಿ ಮತ್ತು ಇತರ ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಪತನಗೊಂಡಿವೆ ಎಂದು ನಂಬಲಾಗಿದೆ ಎಂದು ಕುಹ್ಲೆಸ್ ಹೇಳಿದರು.
Published by:vanithasanjevani vanithasanjevani
First published: