• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Cow In Back Seat Of Car: ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಮೆಕ್‌ಡೊನಾಲ್ಟ್ಸ್​​ಗೆ ಬಂದ ಕರು- ವಿಡಿಯೋ ವೈರಲ್

Cow In Back Seat Of Car: ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಮೆಕ್‌ಡೊನಾಲ್ಟ್ಸ್​​ಗೆ ಬಂದ ಕರು- ವಿಡಿಯೋ ವೈರಲ್

ಕಾರಿನ ಹಿಂಬದಿ ಸೀಟಿನಲ್ಲಿ ಕರು

ಕಾರಿನ ಹಿಂಬದಿ ಸೀಟಿನಲ್ಲಿ ಕರು

Viral Video: ಹಸುಗಳನ್ನು ಹರಾಜಿನಲ್ಲಿ ಖರೀದಿಸಲಾಗಿದೆ ಎಂಬುದು ಕೊನೆಗೆ ಆಕೆಗೆ ಅರ್ಥವಾಗಿದ್ದು, ಅದನ್ನು ಕಾರಿನ ಹಿಂದಿನ ಸೀಟಿನಲ್ಲಿ ಯಾಕೆ ಕೂರಿಸಿಕೊಂಡು ಓಡಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.

 • Share this:

ಸಾಮಾನ್ಯವಾಗಿ ನಾವು ಕಾರಿನಲ್ಲಿ ನಾಯಿಗಳನ್ನು ಕರೆದುಕೊಂಡು ಹೋಗುವುದನ್ನ ನೋಡಿರುತ್ತೇವೆ. ಕೆಲ ವೈರಲ್ ವಿಡಿಯೋಗಳಲ್ಲಿ ಸ್ಕೂಟರ್ ಹಿಂಬದಿ ನಾಯಿ ಸ್ಥಿರವಾಗಿ ಕುಳಿತು ಪ್ರಯಾಣ ಮಾಡುವುದನ್ನ ನೋಡಿ, ನಾವು ಆನಂದಿಸಿದ್ದೇವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಂಗಗಳು ವ್ಯಕ್ತಿಯೊಬ್ಬನ ಜೊತೆ ಗಾಡಿಯಲ್ಲಿ ಆರಾಮವಾಗಿ ಪ್ರಯಾಣ ಮಾಡುವುದನ್ನ ನೋಡಿದ್ದೇವೆ, ಆದರೆ ಈ ವೈರಲ್ ವಿಡಿಯೋದಲ್ಲಿ ಇರುವುದನ್ನ ನೋಡಿದ್ರೆ ನಿಮಗೆ ನಗು ಬರುವುದರ ಜೊತೆಗೆ ಆಶ್ವರ್ಯವೂ ಆಗುತ್ತದೆ.  


ನಿಮಗೆ ಕಾರಿನ ಕಿಟಕಿಯಿಂದ ನಾಯಿ ತನ್ನ ಮುಖ ಹೊರಗೆ ಹಾಕಿ ನೊಡುವುದು ನಗು ತರಿಸುವುದಿಲ್ಲ, ಅದನ್ನು ನೋಡಿ, ಕ್ಯೂಟ್ ಎಂದು ಖುಷಿಪಡುತ್ತೀರ.  ಸರಿ, ಆದರೆ ಒಮ್ಮೆ ನಾಯಿಯ ಬದಲು ಆ ಜಾಗದಲ್ಲಿ  ಹಸುವನ್ನು ಕಲ್ಪಸಿಕೊಳ್ಳಿ. ಸ್ವಲ್ಪ ವಿಚಿತ್ರ, ಆದರೂ ಸತ್ಯ. ಅಮೆರಿಕದ ವಿಸ್ಕಾನ್ಸಿನ್‌ನಲ್ಲಿರುವ ಮಹಿಳೆಯೊಬ್ಬರು ಫಾಸ್ಟ್ ಫುಡ್ ರೆಸ್ಟೋರೆಂಟ್‌ನ ಡ್ರೈವ್-ಥ್ರೂನಲ್ಲಿ ಕಾಯುತ್ತಿದ್ದಾಗ  ಈ ವಿಚಿತ್ರ ಘಟನೆಯನ್ನು ನೋಡಿದ್ದಾರೆ.


ಜೆಸ್ಸಿಕಾ ನೆಲ್ಸನ್ ಮಾರ್ಷ್‌ಫೀಲ್ಡ್‌ನಲ್ಲಿನ ಮೆಕ್‌ಡೊನಾಲ್ಡ್ಸ್ ಡ್ರೈವ್-ಥ್ರೂನಲ್ಲಿ ತನ್ನ ಸರದಿಗಾಗಿ ಕಾಯುತ್ತಿದ್ದಾಗ ಸೆಡಾನ್ ಕಾರಿನಲ್ಲಿ ಏನೋ ವಿಚಿತ್ರವಿದೆ ಎಂದು ಗಮನಿಸಿದ್ದಾರೆ, ನಂತರ ಅದನ್ನು ಸರಿಯಾಗಿ ಗಮನಿಸಿದಾಗ ವಾಹನದ ಹಿಂಬದಿ ಸೀಟಿನಲ್ಲಿ ನಿರಾತಂಕವಾಗಿ ಕುಳಿತಿರುವ ಹಸುವನ್ನು ಕಂಡ ಆಕೆ ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ.  ಈ ವಿಚಿತ್ರವನ್ನು ನೋಡಿದ ತಕ್ಷಣ  ನೆಲ್ಸನ್ ಅದನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  ಫೇಸ್​ಬುಕ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಕೆ, ನೀವು ವಿಸ್ಕಾನ್ಸಿನ್‌ನಲ್ಲಿ ವಾಸಿಸುತ್ತಿದ್ದೀರಿ ಎಂದು ನೇರವಾಗಿ  ಹೇಳದೆ ವಿಸ್ಕಾನ್ಸಿನ್‌ನಲ್ಲಿ ವಾಸಿಸುತ್ತೀರಿ ಎಂಬುದನ್ನ ತಿಳಿಸಿ ಎಂದು ಫೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಶೀಘ್ರದಲ್ಲೇ ಫೇಸ್‌ಬುಕ್‌ನಲ್ಲಿ ವೈರಲ್ ಆಗಿ  ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಆಗುತ್ತಿದೆ.ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ,  ನೆಲ್ಸನ್ ಮೊದಲಿಗೆ  ನಾನು ಇದು ನಿಜವಾದ ಹಸುವಲ್ಲ ನಕಲಿ ಎಂದು ಭಾವಿಸಿದ್ದೆ.  ಯಾರು ತಾನೆ ಹಸುವನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಹೋಗುತ್ತಾರೆ?  ಎಂದಿದ್ದಾರೆ. ನಂತರ  ಹಸು ತಲೆಯನ್ನು ಅಲ್ಲಾಡಿಸಲು ಆರಂಭಿಸಿತ್ತು, ಕಾರಿನ ಹಿಂಭಾಗದಲ್ಲಿ ಹಸುವನ್ನು ಕಂಡು ಸಂತೋಷ ಮತ್ತು ಆಶ್ಚರ್ಯದಿಂದ ವಿಡಿಯೋ ಮಾಡಿದೆ ಎಂದಿದ್ದಾರೆ.


ಆದರೆ ಅಷ್ಟೆ ಅಲ್ಲ. ನಂತರ  ನೆಲ್ಸನ್ ಕಾರಿನಲ್ಲಿ ಕೇವಲ ಒಂದು ಹಸು ಮಾತ್ರ ಇರುವುದಲ್ಲ ಎಂಬುದನ್ನ ಗಮನಿಸಿದರು, ಆ ಕಾರಿನ ಹಿಂದಿನ ಸೀಟಿನಲ್ಲಿ ಮೂರು ಕರುಗಳು ಇರುವುದನ್ನು ನಾನು ವಿಡಿಯೋ ತೆಗೆದ ನಂತರ ಗಮನಿಸಿ ತಿಳಿದುಕೊಂಡೆ ಎಂದಿದ್ದಾರೆ. ಅದರಲ್ಲಿ ಎರಡು ಕರುಗಳು ಮಲಗಿದ್ದವು, ಇನ್ನೊಂದು ಕುಳಿತುಕೊಂಡಿತ್ತು ಎಂದಿದ್ದಾರೆ. ವಿಡಿಯೋದಲ್ಲಿ ಕುಳಿತಿರುವ ಹಸು ಕಾಣಿಸುತ್ತಿದೆ.


ಹಸುಗಳನ್ನು ಹರಾಜಿನಲ್ಲಿ ಖರೀದಿಸಲಾಗಿದೆ ಎಂಬುದು ಕೊನೆಗೆ ಆಕೆಗೆ ಅರ್ಥವಾಗಿದ್ದು, ಅದನ್ನು ಕಾರಿನ ಹಿಂದಿನ ಸೀಟಿನಲ್ಲಿ ಯಾಕೆ ಕೂರಿಸಿಕೊಂಡು ಓಡಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ. ಅಲ್ಲದೇ, ಇನ್ನು ಮುಂದೆ ಕಾರಿನ ಹಿಂಬದಿ ಸೀಟಿನ ಬಗ್ಗೆ ಹೆಚ್ಚು ಗಮನ ನಿಡುತ್ತೇನೆ, ಇನ್ನು ವಿಶೇಷವಾಗಿ ಏನಾದರೂ ಸಿಗಬಹುದು ಎಂದು ನೆಲ್ಸನ್  ಹೇಳಿಕೊಂಡಿದ್ದಾರೆ.


ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಜೇಮ್ಸ್ ಗುರಾಲ್ಸ್ಕಿ ಎಂಬ ವ್ಯಕ್ತಿ ನಾವು ಮೊದಲು ನಮ್ಮ ಕರುಗಳನ್ನು ಟ್ರಕ್‌ನಲ್ಲಿ ಸಾಗಿಸಬೇಕಾಗಿತ್ತು. ಆದರೆ ಈಗ ಕಾರಿನ ಹಿಂದಿನ ಸೀಟನ್ನು ತೆಗೆದುಕೊಂಡು ಖಾಲಿ ಫೀಡ್ ಬ್ಯಾಗ್‌ಗಳಲ್ಲಿ ಕರುಗಳನ್ನು ಹಾಕುತ್ತೇವೆ ಎಂದಿದ್ದಾರೆ.

top videos


  ಕ್ಯಾಥಿ ಹೆನ್ಸೆಲರ್ ಎಂಬ ಇನ್ನೊಬ್ಬ ಬಳಕೆದಾರರು, ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಹೌದು,  ಮಾರ್ಷ್‌ಫೀಲ್ಡ್‌ನಲ್ಲಿರುವ ಕಾರಿನ ಹಿಂದಿನ ಸೀಟಿನಲ್ಲಿ ಮೂರು ಕರುಗಳಿವೆ, ಅವುಗಳಿಗೆ ಫ್ರೆಂಚ್ ಫ್ರೈ ಬೇಕು ಎಂದಿದ್ದಾರೆ.


  ಇನ್ನು ಹಸುವು ಊಟಕ್ಕೆ ಏನನ್ನು ಆರ್ಡರ್ ಮಾಡಿತು? ಎಂದು ಲಿಂಡಾ ಪೆಂಪೆಕ್  ಎನ್ನುವವರು ಕಾಮೆಂಟ್ ಮಾಡಿದ್ದಾರೆ.

  First published: