Viral Video: ತನ್ನ ಗೆಳೆಯನಿಗೆ ಹಿಂಸೆ ಕೊಡ್ತಿದ್ದವನ ತಿವಿದು ತಳ್ಳಿದ ಹಸು, Friendship ಅಂದ್ರೆ ಇದು!

Viral Video: ಮನುಷ್ಯರ ಜೊತೆ ಸ್ನೇಹ ಮಾಡುವ ಬದಲು ಪ್ರಾಣಿಗಳ ಜತೆ ಸ್ನೇಹ ಮಾಡುವುದು ಎಷ್ಟೋ ಒಳಿತು. ಮೂಕ ಪ್ರಾಣಿಗಳಿಗೆ ಮಾತು ಬರದಿದ್ದರೂ, ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತವೆ. ಪ್ರಾಣಿಗಳ ನಡುವೆ ಇರೋ ಪ್ರೀತಿ, ಸ್ನೇಹ ಮನುಷ್ಯರ ನಡುವೆ ನಿಜಕ್ಕೂ ಇಲ್ಲ.

ನಾಯಿಗೆ ಹಿಂಸೆ ಕೊಡುತ್ತಿದ್ದ ವ್ಯಕ್ತಿ ಮೇಲೆ ಹಸು ದಾಳಿ

ನಾಯಿಗೆ ಹಿಂಸೆ ಕೊಡುತ್ತಿದ್ದ ವ್ಯಕ್ತಿ ಮೇಲೆ ಹಸು ದಾಳಿ

  • Share this:
ಪ್ರಾಣಿಗಳೇ(Animals) ಗುಣದಲಿ  ಮೇಲೂ.. ಮಾನವ(Humans) ಅದಕ್ಕಿಂತ ಕೀಳು ಅಂತ ಡಾ.ರಾಜ್​ಕುಮಾರ್(Dr. Rajkumar) ಸಂಪತ್ತಿಗೆ ಸವಾಲ್​ ಸಿನಿಮಾದಲ್ಲಿ ಎಮ್ಮೆ(Buffalo) ಮೇಲೆ ಕೂತು ಹಾಡು(Song) ಹೇಳಿದ್ದಾರೆ. ಕೆಲವೊಂದು ಘಟನೆಗಳನ್ನ ನೋಡಿದರೆ, ನಿಜಕ್ಕೂ ಪ್ರಾಣಿಗಳೇ ಮೇಲೂ ಎಂದು ಅನಿಸುತ್ತದೆ. ಮನುಷ್ಯ ಒಬ್ಬರ ಮೇಲೆ ದ್ವೇಷ ಮಾಡಿ ಸಂಬಂಧಗಳಿಗೆ(Relationship) ಬೆಲೆ ಇಲ್ಲದಂತೆ ಮಾಡಿದ್ದಾನೆ. ಒಬ್ಬರ ಕಷ್ಟಕ್ಕೆ ಆಗದೇ, ಎಲ್ಲವೂ ನನಗೆ ಇರಲಿ ಎಂಬ ಕೆಟ್ಟ ಮನಸ್ಥಿತಿ ಮನುಷ್ಯನಿಗೆ. ಮನುಷ್ಯ ಬದುಕಿದ್ದಾಗ ಮಾತ್ರ ಎಲ್ಲರು ಹೆಸರಿಟ್ಟು ಕರೆಯುತ್ತಾರೆ. ಆದರೆ, ಒಮ್ಮೆ ಆತ ಸತ್ತರೆ ಎಲ್ಲರು  ಮೃತದೇಹ(Dead Body) ಬಂತ ಎಂದು ಕೇಳುತ್ತಾರೆ. ಮನುಷ್ಯರ ಜೊತೆ ಸ್ನೇಹ ಮಾಡುವ ಬದಲು ಪ್ರಾಣಿಗಳ ಜತೆ ಸ್ನೇಹ(Friendship) ಮಾಡುವುದು ಎಷ್ಟೋ ಒಳಿತು. ಮೂಕ ಪ್ರಾಣಿಗಳಿಗೆ ಮಾತು ಬರದಿದ್ದರೂ, ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತವೆ. ಪ್ರಾಣಿಗಳ ನಡುವೆ ಇರೋ ಪ್ರೀತಿ(Love), ಸ್ನೇಹ(Friendship) ಮನುಷ್ಯರ ನಡುವೆ ನಿಜಕ್ಕೂ ಇಲ್ಲ. ಮಾತು ಬರದಿದ್ದರೂ ಮತ್ತೊಂದು ಪ್ರಾಣಿಗೆ ಹಿಂಸೆ ಕೊಟ್ಟರೆ, ಅವುಗಳು ಸುಮ್ಮನೆ ಇರುವುದಿಲ್ಲ ಎಂಬುದಕ್ಕೆ ಈ ಘಟನೆಯೆ ಸಾಕ್ಷಿ. 

ನಾಯಿಗೆ ಚಿತ್ರಹಿಂಸೆ ಕೊಡುತ್ತಿದ್ದ ವ್ಯಕ್ತಿ

ವಿಶೇಷ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಒಬ್ಬ ವ್ಯಕ್ತಿ, ಬೀದಿನಾಯಿಗೆ ಚಿತ್ರ ಹಿಂಸೆ ಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಆತ ಬರೀ ಚಿತ್ರಹಿಂಸೆ ಕೊಟ್ಟಿದರೆ, ಈ ವಿಡಿಯೋ ಇಷ್ಟೊಂದು ವೈರಲ್ ಆಗುತ್ತಿರಲಿಲ್ಲ. ಮುಂದೆ ಏನಾಯ್ತು ಮುಂದೆ ಹೇಳುತ್ತೇವೆ. ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬ ಬೀದಿನಾಯಿಗೆ ಹೊಡೆದು ಕಾಟ ಕೊಡುತ್ತಿರುತ್ತಾನೆ. ನಾಯಿ ಕಿವಿಯನ್ನ ಹಿಡಿದು ಮೇಲಕ್ಕೆ ಎತ್ತಿ ನಂತರ ಕೆಳಗೆ ಕುಕ್ಕುತ್ತಾನೆ. ನಾಯಿ ನೋವಿನಲ್ಲಿ ಎಷ್ಟೇ ಬೊಗಳಿದರೂ, ಆ ವ್ಯಕ್ತಿ ಹಿಂಸೆ ಕೊಡುವುದನ್ನು ಮುಂದುವರಿಸುತ್ತಾನೆ. ತನ್ನ ಎದುರಗಿದ್ದ ವ್ಯಕ್ತಿಗೆ ಎಲ್ಲ ವಿಡಿಯೋ ಮಾಡಿ ಎಂದು ಹೇಳುತ್ತಾನೆ. ಆದರೆ ಅಲ್ಲಿ ಆಗಿದ್ದೇ ಬೇರೆ? ನಾಯಿಯನ್ನು ಕಾಪಾಡಲು ಬಂದವರು ಯಾರು? ನೀವೇ ನೊಡಿ.

ಇದನ್ನು ಓದಿ : ಮುದ್ದಿನ ಸಾಕು ನಾಯಿಗಳ ಮ್ಯಾಚಿಂಗ್ ದಿರಿಸುಗಳಿಗಾಗಿ 7 ಲಕ್ಷ ಖರ್ಚುಮಾಡಿದ ರೂಪದರ್ಶಿ

Karma 🙏🙏 pic.twitter.com/AzduZTqXH6ನಾಯಿಗೆ ಹಿಂಸೆ ಕೊಡುತ್ತಿದವನ ಮೇಲೆ ಹಸು ಅಟ್ಯಾಕ್​​

ನಾಯಿ ನೋವಿನಿಂದ ಜೋರಾಗಿ ಬೊಗಳಿದರೂ ವ್ಯಕ್ತಿ ತಲೆಕೆಡಿಸಿಕೊಂಡಿಲ್ಲ. ಆದರೆ ಒಂದೇ ಒಂದು ಕ್ಷಣದಲ್ಲಿ ಅಲ್ಲೇ ಪಕ್ಕದಲ್ಲಿ ಶಾಂತವಾಗಿ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಹಸುವೊಂದು, ಏಕಾಏಕಿ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ನಾಯಿಯ ಮೂಕರೋಧನೆ ಸಹಿಸಿಕೊಳ್ಳಲಾಗದ ಹಸು, ಕಾಟ ಕೊಡುತ್ತಿದ್ದವನ ಮೇಲೆ ಎರಗಿಬಿದ್ದಿದೆ. ಕೊಂಬಿನಿಂದ ತಿವಿದು ಆತನನ್ನು ಕೆಳಗೆ ಬೀಳಿಸಿದೆ. ಬಳಿಕ ಆತನನ್ನು ತನ್ನ ಕಾಲುಗಳಿಂದು ತುಳಿಯಲು ಪ್ರಯತ್ನಿಸಿದೆ. ಇದನೆಲ್ಲ ವಿಡಿಯೋ ಮಾಡುತ್ತಿದವನು ಹಸು ದಾಳಿ ಕಂಡು ಕಕ್ಕಾಬಿಕ್ಕಿಯಾದ ದೃಶ್ಯ ಎಲ್ಲೆಡೆ ಸಖತ್​ ವೈರಲ್​ ಆಗುತ್ತಿದೆ. ತಾನೂ ಮಾಡಿದ ಕರ್ಮವನ್ನು ದೇವರು ಅಲ್ಲೇ ತೋರಿಸಿದ್ದಾರೆ ಅಂತ ನೆಟ್ಟಿಗರು ಆತನನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನು ಓದಿ : ಮಧ್ಯಪ್ರದೇಶದಲ್ಲಿ ಭ್ರೂಣ ಕಸಿ ತಂತ್ರಜ್ಞಾನದ ಮೂಲಕ ಯಶಸ್ವಿ ಹೆಣ್ಣು ಕರುಗಳ ಜನನ

ನೆಟ್ಟಿಗರಿಂದ ನಾಯಿಗೆ ಕಾಟ ಕೊಟ್ಟವನಿಗೆ ಛೀಮಾರಿ!

ಇನ್ನೂ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆ ವ್ಯಕ್ತಿಗೆ ಸರಿಯಾಗಿ ಬೈದಿದ್ದಾರೆ. ನೀನು ನಾಯಿಗಿಂತ ಕಡೆ. ನಿನ್ನ ಜೊತೆ ಇದನ್ನು ವಿಡಿಯೋ ಮಾಡಿದವನ ವಿರುದ್ಧ ದೂರು ನೀಡಿ ನಿಮ್ಮನ್ನು ಜೈಲಿಗೆ ಕಳುಹಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ನೀನು ಮಾಡಿದ ಕರ್ಮ ನೀನೇ ಅನುಭವಿಸಿಬೇಕು ಅದಕ್ಕೆ ತಕ್ಕ ಉದಾಹರಣೆ ಈ ವಿಡಿಯೋ ಎಂದು ಕಮೆಂಟ್​ ಮಾಡುತ್ತಿದ್ದಾರೆ.
Published by:Vasudeva M
First published: