Viral Video: ಕೊರೋನಾ ಬಂದರೂ ಕುಟುಂಬಸ್ಥರ ಜೊತೆ Party; ಈಕೆ ಮಾಡಿದ್ದ ಪ್ಲಾನ್​ ಅದ್ಬುತ

Plastic Bubble: ಬೇರೊಬ್ಬರಿಗೆ ಸೋಂಕು ಹರಡಬಹುದು ಎಂಬ ಅರಿವಿರುವ ಮಹಿಳೆ ಎಲ್ಲರಿಂದ ಅಂತರ ಕಾಯ್ದುಕೊಳ್ಳುವ ಜೊತೆಗೆ ಎಲ್ಲರ ಜೊತೆಯೂ ಇದು ಬೇರೆಯವರಿಗೆ ಸೋಂಕು ಹರಡದಂತೆ ತೆಗೆದುಕೊಂಡಿರುವ ಮುಂಜಾಗೃತೆ ಎಲ್ಲರನ್ನು ಆಶ್ಚರ್ಯಚಕಿತ ಗೊಳಿಸಿದೆ.. ಹೌದು ಸೋಂಕು ಕಾಣಿಸಿಕೊಂಡಿರುವ ಮಹಿಳೆ ಪ್ಲಾಸ್ಟಿಕ್ ಬಬಲ್ ನಲ್ಲಿ ಕುಳಿತು ತನ್ನ ಕುಟುಂಬ ವರ್ಗದ ಜೊತೆ ಭರ್ಜರಿಯ ಭೋಜನ ಸವಿದಿದ್ದಾಳೆ

ಪ್ಲಾಸ್ಟಿಕ್ ಬಬಲ್

ಪ್ಲಾಸ್ಟಿಕ್ ಬಬಲ್

 • Share this:
  ಕೊರೊನಾ(Corona) ತುಂಬಾ ಮಹಾಮಾರಿ ಜಗತ್ತಿಗೆ ಕಾಲಿಟ್ಟ ಬಳಿಕ ಅನೇಕ ಬದಲಾವಣೆಗಳು(Changes) ಆಗಿವೆ.. ಜನರು ಮೊದಲಿನಂತೆಯೇ ಮುಟ್ಟಿ ಮಾತನಾಡುವುದಕ್ಕೂ ಬೆದರುವ ಕಾಲ ಬಂದಿದೆ.. ಆತ್ಮೀಯರನ್ನು ಕಂಡಾಗ ಓಡೋಡಿ ತಬ್ಬಿ ಆನಂದ ವ್ಯಕ್ತಪಡಿಸುವ ಸಮಯ ದೂರ ಆಗಿ ಬಹಳ ವರ್ಷಗಳೇ(Years) ಕಳೆದಿವೆ.. ಎಲ್ಲಿ ಒಬ್ಬರಿಂದ ಒಬ್ಬರಿಗೆ ಈ ಸಾಂಕ್ರಾಮಿಕ ರೋಗ ಹರಡುತ್ತದೆ ಎಂಬ ಭಯ(Fear) ಜನರನ್ನು ಸತತ ಮೂರು ವರ್ಷಗಳಿಂದ ಬಾಧಿಸುತ್ತಿದೆ. ಹೀಗಾಗಿಯೇ ಜನರು ಒಬ್ಬರನ್ನು ಒಬ್ಬರು ಮುಟ್ಟಿ ಮಾತನಾಡಿಸುವುದು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.. ಇದ್ದರೂ ಸಹ ಅಚಾನಕ್ಕಾಗಿ ನಮಗೆ ಅರಿವೇ ಇಲ್ಲದಂತೆ ವಕ್ಕರಿಸಿ ಕೊಳ್ಳುತ್ತಿರುವ ಮಹಾಮಾರಿ ಬಂದವರಾ ಪಾಡು ಹೇಳತೀರದು.. ಸತತ 14 ದಿನಗಳ(14 Days) ಕಾಲ ನಮ್ಮವರಿಂದ ದೂರ ಇದ್ದು ಒಂಟಿಯಾಗಿ ಜೀವನ ನಡೆಸಬೇಕು. ಅಸ್ಪೃಶ್ಯರಂತೆ ಬದುಕುತ್ತಾ, ಯಾರೂ ಇಲ್ಲವೇನೋ ಎನ್ನುವ ರೀತಿ ಜೀವನ ನಡೆಸಬೇಕು.. ಇದು ಎಂತಹ ಗಟ್ಟಿ ಮನುಷ್ಯನಿಗೂ ಹಿಂಸೆ ನೀಡುವ ಸ್ಥಿತಿ.

  ನಾಲ್ಕು ಗೋಡೆಗಳ ನಡುವೆ ನಮಗೆ ನಾವೇ ದಿಗ್ಬಂದನ ಹಾಕಿಕೊಂಡು ಜೈಲಿನಲ್ಲಿ ಇರುವಂತೆ ಕೋವಿಡ್ ಎಂಬ ಮಹಾಮಾರಿ ಮಾಡುತ್ತದೆ. ಹೀಗಾಗಿ ಎಷ್ಟೋ ಜನ ಮಹಾಮಾರಿಯ ನಿಯಮಗಳನ್ನು ಉಲ್ಲಂಘನೆ ಮಾಡಿ
  ಕದ್ದು ನಡೆಸುತ್ತಿದ್ದಾರೆ.ಇನ್ನು ಕೆಲವರು ಸೋಂಕು ಬಂದಿರುವ ವಿಷಯವನ್ನು ಮುಚ್ಚಿಟ್ಟು ಬದುಕಿದ್ದಾರೆ.ಇನ್ನು ಸೋಂಕು ಹರಡದಂತೆ ಜಾಗೃತಿ ವಹಿಸಿ ಎಂದು ಸರ್ಕಾರ ಹೇಳಿದರೂ ಸಹ ಹೆಚ್ಚಿನ ಜನರು ಮುಖಗವಸುಗಳನ್ನು ಧರಿಸದಿರುವುದು, ಸಾರ್ವಜನಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅಥವಾ ಲಾಕ್‌ಡೌನ್ ಸಮಯದಲ್ಲಿ ಅನಾವಶ್ಯಕ ತಿರುಗಾಟ ಮಾಡಿ ಮತ್ತಷ್ಟು ಸೋಂಕಿನ ಭೀತಿಯನ್ನು ಹೆಚ್ಚಿಸಿದ್ದಾರೆ. ಕುದುರೆ ಸೋಂಕು ಕಾಣಿಸಿಕೊಂಡಿರುವ ಮಹಿಳೆ ತಮ್ಮ ಕುಟುಂಬದವರ ಜೊತೆ ಕಾಲ ಕಳೆಯಲು ಮಾಡಿರುವ ಐಡಿಯಾ ಮಾತ್ರ ಎಲ್ಲರೂ ಮೆಚ್ಚುಗೆ ಸೂಚಿಸುವಂತೆ ಮಾಡುವುದರ ಜೊತೆಗೆ ನಗು ಕೂಡ ತರಿಸುತ್ತಿದೆ..

  ಇದನ್ನೂ ಓದಿ: H&M ಶೋರೂಂನಲ್ಲಿ ಬಟ್ಟೆಗಳ ಮೇಲೆ ಹೇನು, ಕ್ರಿಮಿ-ಕೀಟ! ಅಂಗಡಿ ಕ್ಲೋಸ್

  ಸೋಂಕು ತಗುಲಿದ್ದರೂ ಕ್ರಿಸ್ಮಸ್ ಹಬ್ಬದಲ್ಲಿ ಭಾಗಿಯಾದ ಮಹಿಳೆ

  ಹಬ್ಬಹರಿದಿನಗಳು ಅಂದರೆ ಎಷ್ಟು ಜನರ ಪಾಲಿಗೆ ಸಂತಸದ ಕ್ಷಣ.. ತನ್ನ ಕುಟುಂಬದ ಅವರ ಜೊತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ಹೊಸ ನೆನಪುಗಳಿಗೆ ನಾಂದಿ ಹಾಕುವ ಸಂಭ್ರಮ. ಹೀಗಾಗಿ ಇಲ್ಲೊಬ್ಬ ಮಹಿಳೆ ಕ್ರಿಸ್ಮಸ್ ದಿನದಂದು ತನ್ನ ಕುಟುಂಬದ ಜೊತೆ ಕಾಲ ಕಳೆಯಬೇಕು ಎಂಬ ಬಯಕೆ ಹೊಂದಿದ್ದಳು.ಆದರೆ ಆಕೆಯ ದುರಾದೃಷ್ಟ ಎನ್ನುವಂತೆ ಆಕೆಗೆ ಸೋಂಕು ವಕ್ಕರೆಸಿಕೊಂಡಿತ್ತು .ಇದರಿಂದ ತನ್ನ ಕುಟುಂಬದ ಜೊತೆ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿ ಔತಣಕೂಟದಲ್ಲಿ ಭಾಗಿಯಾಗುವ ಹಾಗೆ ಇರಲಿಲ್ಲ. ಆದರೆ ಆ ಮಹಿಳೆ ಮಾಡಿದ ಐಡಿಯಾದಿಂದ ತನ್ನ ಕುಟುಂಬಸ್ಥರ ಜೊತೆಯೇ ಸಂಭ್ರಮದಿಂದ ಕ್ರಿಸ್ಮಸ್ ಔತಣಕೂಟದಲ್ಲಿ ಭಾಗಿಯಾಗಿದ್ದಾಳೆ.


  ಪ್ಲಾಸ್ಟಿಕ್ ಬಬಲ್ ನಲ್ಲಿ ಕುಳಿತು ಕುಟುಂಬದವರ ಜೊತೆ ಔತಣ ಕೂಟ

  ಅಲ್ಲಿಂದ ಬೇರೊಬ್ಬರಿಗೆ ಸೋಂಕು ಹರಡಬಹುದು ಎಂಬ ಅರಿವಿರುವ ಮಹಿಳೆ ಎಲ್ಲರಿಂದ ಅಂತರ ಕಾಯ್ದುಕೊಳ್ಳುವ ಜೊತೆಗೆ ಎಲ್ಲರ ಜೊತೆಯೂ ಇದು ಬೇರೆಯವರಿಗೆ ಸೋಂಕು ಹರಡದಂತೆ ತೆಗೆದುಕೊಂಡಿರುವ ಮುಂಜಾಗೃತೆ ಎಲ್ಲರನ್ನು ಆಶ್ಚರ್ಯಚಕಿತ ಗೊಳಿಸಿದೆ.. ಹೌದು ಸೋಂಕು ಕಾಣಿಸಿಕೊಂಡಿರುವ ಮಹಿಳೆ ಪ್ಲಾಸ್ಟಿಕ್ ಬಬಲ್ ನಲ್ಲಿ ಕುಳಿತು ತನ್ನ ಕುಟುಂಬ ವರ್ಗದ ಜೊತೆ ಭರ್ಜರಿಯ ಭೋಜನ ಸವಿದಿದ್ದಾಳೆ.

  ಇದನ್ನೂ ಓದಿ: ಕಡಲೆಕಾಯಿಯ ಪುಡಿಗಾಸಿನ ಸಾಲ ತೀರಿಸಲು ಅಮೆರಿಕದಿಂದ ಬಂದ ಅಣ್ಣ-ತಂಗಿ

  ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ 11 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕೆಲವು ಬಳಕೆದಾರರು ಈ ಕಲ್ಪನೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ವೈರಸ್ ಹರಡುವುದನ್ನು ತಡೆಯಲು ಪ್ಲಾಸ್ಟಿಕ್ ಬಬಲ್ ಸಾಕಷ್ಟು ಪರಿಣಾಮಕಾರಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
  Published by:Seema R
  First published: