ಬ್ರಿಟನ್‌ನಲ್ಲಿ ಪಾರ್ಟಿ ಪ್ರಿಯರಿಂದ ತುಂಬಿ ಹೋದ ಪಬ್, ಬಾರ್‌ಗಳು: ಹವಾಮಾನ ವರದಿಗೂ ಡೋಂಟ್ ಕೇರ್ ಎಂದ ಎಣ್ಣೆ ಪ್ರಿಯರು!

ಕೋವಿಡ್ 19 ನಿರ್ಬಂಧದ ತೆರವಿನ ನಂತರ ಜನರು ಒಂದೇ ದಿನದಲ್ಲಿ 6 ಮಿಲಿಯನ್ ಬಿಯರ್ ಪಿಂಟ್ (2.8 ಮಿಲಿಯನ್ ಲೀಟರ್ಸ್) ಕುಡಿದು ಮುಗಿಸಿದ್ದಾರೆ ಎಂದು ಡೈಲೀ ಮೇಲ್ ವರದಿ ಮಾಡಿದೆ.

Photo:Google

Photo:Google

  • Share this:
ಬ್ರಿಟನ್ ಜನರು ಧೈರ್ಯದ ಗಣಿಗಳಾಗಿ ಭಾರೀ ಮಳೆ, ಭೀಕರ ಬಿರುಗಾಳಿ, ಶೀತ ತಾಪಮಾನಕ್ಕೆ ಎದೆಯೊಡ್ಡಿ ವಾರಾಂತ್ಯಕ್ಕೆ ಬಿಯರ್ ಗಾರ್ಡನ್‌ಗಳನ್ನು ಭರ್ತಿ ಮಾಡಿದ್ದಾರೆ. ವಾರದ ಆರಂಭದಲ್ಲಿ ಬ್ರಿಟನ್‌ನ ಕೆಲವು ಭಾಗಗಳಲ್ಲಿ ಮಳೆ ಸುರಿದಿದ್ದು, ಪ್ರಧಾನಿಯವರು ಲಾಕ್‌ಡೌನ್‌ ಸರಾಗಗೊಳಿಸಿದ್ದು, ಇದರ ನಡುವೆ ಜನರು ಬಿಯರ್ ಬಾರ್‌ಗಳಲ್ಲಿ ಸಂಭ್ರಮಿಸಿದ್ದಾರೆ.

ಹವಾಮಾನ ವರದಿಯ ಪ್ರಕಾರ ವೇಲ್ಸ್ ತೇವವಾಗಿದ್ದು, ದೇಶದ ದಕ್ಷಿಣ ಪ್ರದೇಶಗಳಲ್ಲಿ ಮಳೆ ಬೀಳಲಿದೆ ಎಂದು ಹಳದಿ ಅಲರ್ಟ್ ಮೂಲಕ ಎಚ್ಚರಿಸಿದೆ. ಆದರೆ ಪಾರ್ಟಿ ಪ್ರಿಯರು ಇದ್ಯಾವುದಕ್ಕೂ ಕೇರ್ ಮಾಡದೇ ಅತ್ಯುತ್ಸಾಹದಿಂದ ಪಬ್‌ಗಳಲ್ಲಿ ಕೊಡೆಯ ಕೆಳಗೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಕುಳಿತು ಸಮಯ ಕಳೆಯುತ್ತಿದ್ದಾರೆ. ಈ ಅದ್ಭುತ ಕ್ಷಣಗಳಿಗಾಗಿ ಪ್ರತಿಯೊಬ್ಬರೂ ಕಾಯುತ್ತಿದ್ದರು. ಅದೀಗ ನೆರವೇರಿದ ಖುಷಿ ಎಲ್ಲರಲ್ಲೂ ಮನೆ ಮಾಡಿದೆ.

ಯುನೈಟೆಡ್ ಕಿಂಗ್‌ಡಮ್ ಸರ್ಕಾರವು ಕಳೆದ ತಿಂಗಳು ಕೋವಿಡ್ 19 ಲಾಕ್‌ಡೌನ್‌ ಸರಾಗಗೊಳಿಸಿದ ಬಳಿಕ ಬಿಯರ್ ಗಾರ್ಡನ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್ ಪ್ಯಾಟಿಯೋಗಳು ಹ್ಯಾಟ್ ಧರಿಸಿದ ಜನಗಳಿಂದ ತುಂಬಿ ಹೋಗಿತ್ತು. ಶನಿವಾರ ಕಡೆಯ ಬಾರಿ ನೋಡಿದಾಗ 50,000 ಪಬ್ ಮತ್ತು ರೆಸ್ಟೋರೆಂಟ್‌ಗಳು ಇಂಗ್ಲೆಂಡ್‌ನಲ್ಲಿ ತುಂಬಿದ್ದವು. ಅದು ಸೂಪರ್ ಶನಿವಾರದ ರಾತ್ರಿಗಳು ಎನ್ನುವಂತೆ ಕಂಡು ಬಂದಿತು.

ಕೋವಿಡ್ 19 ನಿರ್ಬಂಧದ ತೆರವಿನ ನಂತರ ಜನರು ಒಂದೇ ದಿನದಲ್ಲಿ 6 ಮಿಲಿಯನ್ ಬಿಯರ್ ಪಿಂಟ್ (2.8 ಮಿಲಿಯನ್ ಲೀಟರ್ಸ್) ಕುಡಿದು ಮುಗಿಸಿದ್ದಾರೆ ಎಂದು ಡೈಲೀ ಮೇಲ್ ವರದಿ ಮಾಡಿದೆ.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಟಿ ಪ್ರಿಯರು ಬಾರ್ ಮತ್ತು ಪಬ್‌ಗಳಲ್ಲಿ ಕಂಡು ಬಂದಿದ್ದಾರೆ. ಲಾಕ್ಡೌನ್ ಸಡಿಲಿಸಿದ ಬಳಿಕ ತಮ್ಮ ಮೊದಲ ವಾರಾಂತ್ಯದ ಹೊಸ ಸ್ವಾತಂತ್ರ್ಯವನ್ನು ಬಹಳ ಖುಷಿಯಿಂದ ಕಳೆದಿದ್ದಾರೆ. ಕಳೆದ 6 ತಿಂಗಳಲ್ಲಿ ನವೆಂಬರ್‌ನಿಂದ ಇಲ್ಲಿಯವರೆಗೆ ಜನರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಟ್ಟಿಗೆ ವೈನ್ ಸೇವಿಸಿ ಊಟ ಮಾಡಿದ್ದು ಇದೇ ಮೊದಲು. ನವೆಂಬರ್‌ನಿಂದ ಎಲ್ಲಾ ಹೊರಾಂಗಣ ಮೋಜು ಮಸ್ತಿಗಳು ಬಂದ್ ಆಗಿದ್ದವು.

ಇಂಗ್ಲೆಂಡ್‌ನಲ್ಲಿ ಬಿಯರ್ ಗಾರ್ಡನ್‌ಗಳು ಪುನಃ ತೆರೆದಿದ್ದು, ಯುಕೆಯ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಕೋವಿಡ್ 19 ಮಾರ್ಗಸೂಚಿಯಂತೆ ಎಲ್ಲಾ ಮುಂದುವರೆದಿತ್ತು.

ಜಾನ್ಸನ್ ಅವರು ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಸ್ವಾತಂತ್ರ್ಯದ ಹಾದಿಗೆ ಹೊಸ ಮಾರ್ಗಸೂಚಿಯಾಯಿತು. ಕಳೆದ ವರ್ಷದ ಇದೇ ಸಮಯ ಕೋವಿಡ್ 19 ಹೋರಾಟದ ಬಳಿಕ ಆಸ್ಪತ್ರೆಯಿಂದ ಹೊರ ಬಂದಿದ್ದರು. ಅಲ್ಲದೇ ಪಬ್ ಬಿಯರ್ ಗಾರ್ಡನ್‌ನಲ್ಲಿ ಸಂಭ್ರಮಾಚರಣೆಯ ಪಿಂಟ್‌ನೊಂದಿಗೆ ಲಾಕ್‌ಡೌನ್‌ ಸರಾಗಗೊಳಿಸುವ ಬಗ್ಗೆ ಅವರು ಭರವಸೆ ನೀಡಿದ್ದರು.

ಇನ್ನೂ ಬ್ರಿಟನ್ ತನ್ನ ಕೋವಿಡ್ 19 ರೆಡ್ ಅಲರ್ಟ್‌ಗೆ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿದೆ. ಅಲ್ಲದೇ ಭಾರತದಿಂದ ಬರುವ ತನ್ನ ದೇಶದ ಎಲ್ಲಾ ಪ್ರಯಾಣಿಕರಿಗೂ 10 ದಿನಗಳ ಹೋಟೆಲ್ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಹೆಚ್ಚಳದಿಂದಾಗಿ ಮುಂದಿನ ವಾರ ಜಾನ್ಸನ್ ಅವರ ಭಾರತ ಭೇಟಿಯನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ ಈ ನಿರ್ಧಾರಕ್ಕೆ ಬಂದಿದೆ.
First published: