ಭಾರತೀಯ ಮದುವೆಗಳಿಗೆ (Indian wedding) ಅದ್ಧೂರಿತನಕ್ಕೆ ಯಾವ ಕೊರತೆ ಇರುವುದಿಲ್ಲ. ಇದಲ್ಲದೆ ಮದುವೆ ಎನ್ನುವುದು ಹೆಣ್ಣು ಹಾಗೂ ಗಂಡಿನ ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ತಮ್ಮ ಮದುವೆ ಬಗ್ಗೆ ನೂರಾರು ಕಸಗಳುಗಳನ್ನು ಕಟ್ಟಿರುತ್ತಾರೆ. ಮದುವೆ ತಯಾರಿಯೂ ಜೋರಾಗಿಯೇ ನಡೆಯುತ್ತಿರುತ್ತದೆ. ಮದುವೆಗೆ ಅತಿಥಿಗಳ ಲಿಸ್ಟ್ , ಊಟ, ಡ್ರೆಸ್ ಲಿಸ್ಟ್, ಡೆಕೊರೇಷನ್ (Decoration) ಹೀಗೆ ನಾನಾ ರೀತಿಯ ತಯಾರಿ ನಡೆಯುತ್ತಿರುತ್ತದೆ. ಇದಲ್ಲದೆ ಮದುವೆ (Marriage) ಸಮಯದಲ್ಲಿ ದಿಬ್ಬಣಕ್ಕೆ ಹೋಗುವಾಗ ಕೆಲವರು ಬಸ್, ಕುದುರೆ, ಲಾರಿ, ಬೈಕ್ ಹೀಗೆ ವಿವಿಧ ರೀತಿಯಲ್ಲಿ ಬರುವುದು ಇತ್ತೀಚಿನ ದಿನಗಳಲ್ಲಿ ಅದೊಂದು ಟ್ರೆಂಡಿಯಾಗಿದೆ. ಇದರ ಜೊತೆಗೆ ಅಥಿತಿಗಳ ಸತ್ಕಾರವು ಜೋರಾಗಿಯೇ ಇರುತ್ತದೆ. ಅಥಿತಿಗಳಿಗೆ ಊಟದ ವ್ಯವಸ್ಥೆ, ವಾಹನ ವ್ಯವಸ್ಥೆ ಮುಂತಾದವುಗಳನ್ನು ಮಾಡುವುದು ವರ ಮತ್ತು ವಧುವಿನ ಕಡೆಯವರ ಕರ್ತವ್ಯವಾಗಿರುತ್ತದೆ ಆದರೆ ಇಲ್ಲೊಂದು ಜೋಡಿ ಮುದುವೆಗೆಂದು ಒಂದು ವಿಮಾನವನ್ನೇ (Flight) ಬುಕ್ ಮಾಡಿದ್ದಾರೆ.
ಹೌದು ಇದು ಅಚ್ಚರಿಯಾದ್ರು ಸತ್ಯ. ವರ ಮತ್ತು ವಧು ಇಬ್ಬರು ಸೇರಿ ತಮ್ಮ ಮದುವೆಗೆ ಸಂಬಂಧಿಕರು , ಸ್ನೇಹಿತರು ಹಾಜರಾಗಲು ವಿಮಾನವನ್ನೇ ಬುಕ್ ಮಾಡಿದ್ದಾರೆ. ಇವರು ಮಹಾರಾಷ್ಟ್ರದ ಪುಣೆಯವರಾಗಿದ್ದು, ಮದುವೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆಯುತ್ತಿದೆ ಎಂದು ವಧುವಿನ ಸಹೋದರಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ತಾವೆಲ್ಲರೂ ಸಹೋದರಿಯ ಮದುವೆಗೆ ಹೋಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾಳೆ.
ಸಂಬಂಧಿಗಳಿಗೆ , ಸ್ನೇಹಿತರಿಗೆ ವಿಮಾನ ಬುಕ್ ಮಾಡಿದ ವಧು - ವರ
ತನ್ನ ಸಹೋದರಿಯ ಮದುವೆಗೆ ಕುಟುಂಬ , ಸಂಬಂಧಿಕರನ್ನು ಕರೆದೊಯ್ಯಲು ಇಡೀ ವಿಮಾನವನ್ನೇ ಬುಕ್ ಮಾಡಲಾಗಿದೆ ಎಂದು ವಧುವಿನ ತಂಗಿ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಂಬಂಧಿಕರು, ಕುಟುಂಬ ಸದಸ್ಯರು ವಿಮಾನದಲ್ಲಿ ಮೋಜು ಮಸ್ತಿ ಮಾಡುತ್ತಿರುವುದನ್ನು ಹಾಗೂ ಕೇಕೆ ಹಾಕುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ರಾಜಸ್ಥಾನದ ಜೈಸಲ್ಮೇರ್ನಲ್ಲಿ ಮದುವೆ ನಡೆಯುತ್ತಿದೆ ಎಂದು ಶ್ರೇಯಾ ಶಾ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Twin Sisters Marriage: ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು! ಎಂಥಾ ಆಫರ್ ಗುರು ಎಂದ ನೆಟ್ಟಿಗರು!
ಈ ವಿಡಿಯೋದಲ್ಲಿ ಇರುವಂತೆ ಇಕ್ಕಾ ಸಿಂಗ್ ಹಾಗೂ ಸುಖ್ಬೀರ್ ರಾಂಧವ ಅವರು ಹಾಡಿರುವ 'ಓಹ್ ಹೋ ಹೋ' ಎಂಬ ಹಾಡನ್ನು ಬಳಸಿಕೊಳ್ಳಲಾಗಿದೆ. ಲೆಟ್ಸ್ ರೋಲ್, ನಾವು ಮದುವೆಗೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದನ್ನು ಗೆಸ್ ಮಾಡಿ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ವಿಡಿಯೋ 10 ಮಿಲಿಯನ್ಸ್ ಗು ಹೆಚ್ಚು ವೀಕ್ಷಣೆ, ಏಳು ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.
View this post on Instagram
ಕುಟುಂಬದ ಸಂಬಂಧಿಕರು, ಸ್ನೇಹಿತರು ಅಷ್ಟೊಂದು ಜನರನ್ನು ಒಂದೇ ವಿಮಾನದಲ್ಲಿ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನನ್ನ ಜೀವನದಲ್ಲಿ ನನಗೆ ಬೇಕಾಗಿರುವುದು ಈ ರೀತಿಯ ಹಣ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಈ ವಿಡಿಯೋ ನೋಡಿದರೆ ನಾನು ಬಡವ ಎಂಬ ಭಾವನೆ ಬರುತ್ತದೆ ಎಂದಿದ್ದಾರೆ. ವಿಮಾನದಲ್ಲಿ ಕಿರಿಕಿರಿ ಉಂಟುಮಾಡುವ ಮಕ್ಕಳು ಇಲ್ಲದಿದ್ದರೆ ಹೇಗೆ? ಮಕ್ಕಳು ಇದ್ದರೆ ಮದುವೆಗೆ ಕಳೆ ಬರುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral News: ತಾಳಿ ಕಟ್ಟಿದ ಜೋಶ್ನಲ್ಲಿ ಕಿಸ್ ಕೊಟ್ಟ ವರ, ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
ಒಟ್ಟಾರೆಯಾಗಿ ಹೇಳುವುದಾದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮದುವೆಗಾಗಿ ಸಂಬಂಧಿಕರಿಗೆ, ಸ್ನೇಹಿತರಿಗೆ ವಿಮಾನ ಬುಕ್ ಮಾಡುವುದೆಂದರೆ ಅದು ಅಚ್ಚರಿ ಪಡುವ ವಿಷಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ