• Home
 • »
 • News
 • »
 • trend
 • »
 • Viral: 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣ, ಅವಳಿ ಮಕ್ಕಳನ್ನು ಪಡೆದ ದಂಪತಿ; ಅಚ್ಚರಿಯಾದರೂ ಇದು ಸತ್ಯ!

Viral: 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣ, ಅವಳಿ ಮಕ್ಕಳನ್ನು ಪಡೆದ ದಂಪತಿ; ಅಚ್ಚರಿಯಾದರೂ ಇದು ಸತ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುಎಸ್‌ನ ಒರೆಗಾನ್‌ನಲ್ಲಿ ಏಪ್ರಿಲ್ 22, 1992 ರಂದು ಸುಮಾರು 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣಗಳಿಂದ ಲಿಡಿಯಾ ಮತ್ತು ತಿಮೋತಿ ರಿಡ್ಜ್‌ವೇ ಎಂಬ ಅವಳಿ ಮಕ್ಕಳು ಅಕ್ಟೋಬರ್ 31 ರಂದು ಫಿಲಿಪ್ ರಿಡ್ಜ್‌ವೇ ದಂಪತಿಗಳಿಗೆ ಜನಿಸಿವೆ ಎಂದು ಇಂಡಿಪೆಂಡೆಂಟ್‌ನ ಮತ್ತೊಂದು ವರದಿ ತಿಳಿಸಿದೆ.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ಶಿಕಾಗೋ (Chicago) ವರದಿ ಮಾಡಿರುವಂತೆ ದೀರ್ಘಸಮಯದಿಂದ ಶೈತ್ಯೀಕರಿಸಿದ ಭ್ರೂಣಗಳಿಂದ ಜನಿಸಿದ ಅವಳಿಗಳನ್ನು (Twins) ರಾಚೆಲ್ ಮತ್ತು ಫಿಲಿಪ್ ರಿಡ್ಜ್‌ವೇ ದಂಪತಿ ಸ್ವಾಗತಿಸಿದ್ದಾರೆ. ಯುಎಸ್‌ನ ಒರೆಗಾನ್‌ನಲ್ಲಿ ಏಪ್ರಿಲ್ 22, 1992 ರಂದು ಸುಮಾರು 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣಗಳಿಂದ ( Frozen Embryos) ಲಿಡಿಯಾ ಮತ್ತು ತಿಮೋತಿ ರಿಡ್ಜ್‌ವೇ ಎಂಬ ಅವಳಿ ಮಕ್ಕಳು ಅಕ್ಟೋಬರ್ 31 ರಂದು ಫಿಲಿಪ್ ರಿಡ್ಜ್‌ವೇ ದಂಪತಿಗಳಿಗೆ ಜನಿಸಿವೆ ಎಂದು ಇಂಡಿಪೆಂಡೆಂಟ್‌ನ ಮತ್ತೊಂದು ವರದಿ ತಿಳಿಸಿದೆ.


  ದೀರ್ಘಕಾಲದಿಂದ ಹೆಪ್ಪುಗಟ್ಟಿಸಿದ ಭ್ರೂಣಗಳಿಂದ ಅವಳಿಗಳ ಜನನ


  ಫಿಲಿಪ್ ದಂಪತಿ ಅವಳಿ ಮಕ್ಕಳನ್ನು ಸ್ವಾಗತಿಸಿದ ಖುಷಿಯಲ್ಲಿದ್ದು ಸಂತೋಷದಲ್ಲಿ ತೇಲುತ್ತಿದ್ದೇವೆ ಎಂದಾಗಿ ಹೇಳಿಕೊಂಡಿದ್ದಾರೆ. ಅವಳಿಗಳು ಎಳೆಯರಾಗಿದ್ದರೂ ಕೂಡ ಹಿರಿಯ ಸಂತತಿ ಎಂದು ತಿಳಿಸಿದ್ದಾರೆ. ಅವಳಿ ಮಕ್ಕಳ ಕುರಿತು ಮುದ ನೀಡುವ ವಿಷಯವೊಂದಿದ್ದು, ಲಿಡಿಯಾ ಹಾಗೂ ತಿಮೋತಿಗೆ ದೇವರು ಜೀವ ನೀಡುವ ಸಮಯದಲ್ಲಿ ನನಗೆ ಐದರ ಹರೆಯವಿತ್ತು ಹಾಗೂ ಅಲ್ಲಿಂದ ಇಲ್ಲಿಯವರೆಗೆ ಆ ಜೀವಗಳನ್ನು ದೇವರು ಸಂರಕ್ಷಿಸುತ್ತಿದ್ದರು ಎಂದು ಫಿಲಿಫ್ ತಿಳಿಸಿದ್ದಾರೆ.


  ಇದನ್ನೂ ಓದಿ: Car Thief: ಬರೋಬ್ಬರಿ 5,000 ಕಾರುಗಳನ್ನು ಕದ್ದ ಆರೋಪಿ ಈಗ ಪೊಲೀಸರ ಅತಿಥಿ; ಹೀಗಿತ್ತು ಈತನ ಐಷಾರಾಮಿ ಜೀವನ


  ಅನಾಮಧೇಯ ದಂಪತಿ 2007 ರಲ್ಲಿ ಟೆನ್ನೆಸ್ಸಿಯ ನಾಕ್ಸ್‌ವಿಲ್ಲೆಯಲ್ಲಿರುವ ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ (NEDC) ಭ್ರೂಣಗಳನ್ನು ದಾನ ಮಾಡಿದ್ದರು ಎಂದು ಇಂಡಿಪೆಂಡೆಂಟ್ ವರದಿ ತಿಳಿಸಿದೆ. ಅಚ್ಚರಿಯ ಸಂಗತಿ ಏನೆಂದರೆ ರಾಚೆಲ್ ಮತ್ತು ಫಿಲಿಪ್ ರಿಡ್ಜ್‌ವೇ ಕೇವಲ ಮೂರು ಮತ್ತು ಐದು ವರ್ಷ ವಯಸ್ಸಿನವರಾಗಿದ್ದಾಗ ಅವರ ಅವಳಿ ಮಕ್ಕಳು ಐವಿಎಫ್ ಬಳಸಿ ಗರ್ಭಧಾರಣೆಯಾಗಿತ್ತು.


  ಇಂಡಿಪೆಂಡೆಂಟ್ ವರದಿ ತಿಳಿಸಿರುವಂತೆ ಅವಳಿಗಳ ಜನ್ಮಕ್ಕೆ ಕಾರಣವಾಗಿರುವ ದೀರ್ಘ ಸಮಯದಿಂದ ಹೆಪ್ಪುಗಟ್ಟಿಸಿದ ಭ್ರೂಣದ ವರ್ಗಾವಣೆಯು ಹೊಸ ದಾಖಲೆಯನ್ನು ಮಾಡಿದೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ನಾಕ್ಸ್‌ವಿಲ್ಲೆ ಮೂಲದ ಕೇಂದ್ರವು ಇಂತಹುದೇ ದಾಖಲೆಯನ್ನು ಮಾಡಿದ್ದು 27 ವರ್ಷದ ಭ್ರೂಣದಿಂದ ಶಿಶು ಜನಿಸಿತ್ತು. 28 ವರ್ಷದ ಇನ್ನೊಂದು ಭ್ರೂಣವು ಇನ್ನೊಂದು ಮಗುವಿನ ಜನನಕ್ಕೆ ಕಾರಣವಾಗಿದೆ.


  ಭ್ರೂಣಗಳನ್ನು ದೀರ್ಘಸಮಯದವರೆಗೆ ಫ್ರೀಜ್ ಮಾಡುವುದು


  ಭ್ರೂಣಗಳನ್ನು ಮೊದಲು ಶೇಖರಿಸಿದ ದಿನದಿಂದ 55 ವರ್ಷಗಳವರೆಗೆ ಫ್ರೀಜ್ ಮಾಡಬಹುದು ಎಂದು ಹ್ಯೂಮನ್ ಫರ್ಟಿಲೈಸೇಶನ್ ಅಂಡ್ ಎಂಬ್ರಿಯಾಲಜಿ ಅಥಾರಿಟಿ ತಿಳಿಸಿದೆ. ಅದೂ ಅಲ್ಲದೆ ಭ್ರೂಣಗಳನ್ನು ಹೆಪ್ಪುಗಟ್ಟಿದ ಸಮಯದ ಅವಧಿಯಿಂದ ಪ್ರಭಾವ ಬೀರುತ್ತವೆ ಎಂದು ಯಾವುದೇ ಪುರಾವೆಗಳು ಸೂಚಿಸುವುದಿಲ್ಲ ಎಂದು ಅಥಾರಿಟಿ ಹೇಳಿದೆ.


  ಭ್ರೂಣ ದಾನವನ್ನು ಅಂದ್ರೇನು?


  ಐವಿಎಫ್ ಚಿಕಿತ್ಸೆಗೆ ಜನರು ಒಳಗಾದಾಗ ಅವರು ಬಳಸುವುದಕ್ಕಿಂತ ಹೆಚ್ಚಿನ ಭ್ರೂಣಗಳನ್ನು ಉತ್ಪಾದಿಸಬಹುದು. ಹಾಗೂ ಈ ಹೆಚ್ಚುವರಿ ಭ್ರೂಣಗಳನ್ನು ಭವಿಷ್ಯದ ಬಳಕೆಗಾಗಿ ಸಂಗ್ರಹಿಸಿಡಬಹುದು ಇಲ್ಲದಿದ್ದರೆ ಸಂತಾನೋತ್ಪತ್ತಿ ಔಷಧದ ವಿಜ್ಞಾನವನ್ನು ಮುನ್ನಡೆಸಲು ಸಂಶೋಧನೆ ಅಥವಾ ತರಬೇತಿಗೆ ದಾನ ಮಾಡಬಹುದು ಅಥವಾ ಮಕ್ಕಳನ್ನು ಹೊಂದಲು ಬಯಸುವ ಜನರಿಗೆ ದಾನ ಮಾಡಬಹುದು.


  ಇತರ ಯಾವುದೇ ಮಾನವ ಅಂಗಾಂಶ ದಾನದಂತೆ, ಭ್ರೂಣಗಳು ಕೆಲವು ಸಾಂಕ್ರಾಮಿಕ ರೋಗಗಳಿಗೆ, ತಪಾಸಣೆಗಳಿಗೆ ಒಳಗಾಗುವುದು ಒಳಗೊಂಡಂತೆ ದಾನ ಮಾಡಲು ಆಯಾ ದೇಶಗಳ ಆಹಾರ ಮತ್ತು ಔಷಧ ಆಡಳಿತದ ಅರ್ಹತಾ ಮಾರ್ಗಸೂಚಿಗಳನ್ನು ಪೂರೈಸಬೇಕು.


  ಇದನ್ನೂ ಓದಿ: Queen Elizabeth II: ಪಾಸ್​ಪೋರ್ಟ್​ ಇರಲಿಲ್ಲ, ವೀಸಾ ಇಲ್ಲದೇ ವಿಶ್ವಾದ್ಯಂತ ಟ್ರಾವೆಲ್ ಮಾಡ್ತಿದ್ದ ರಾಣಿ ಎಜಿಜಬೆತ್!


  ರಾಷ್ಟ್ರೀಯ ಭ್ರೂಣ ದಾನ ಕೇಂದ್ರ ಹೇಳುವಂತೆ ಭ್ರೂಣ ದಾನ ಎಂಬುದು ಕಾನೂನುಬದ್ಧವಾದ ದತ್ತು ಪ್ರಕ್ರಿಯೆಗೆ ಸಂಬಂಧಿಸಿಲ್ಲ. ಇದನ್ನು ಕನಿಷ್ಠ ಜನನದ ನಂತರ ಸಂಭವಿಸುವ ದತ್ತು ಪ್ರಕ್ರಿಯೆ ಎಂಬ ಅರ್ಥದಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.


  ಸಂಭವಿಸುವ ಅಪಾಯಗಳೇನು?


  ಹೆಪ್ಪುಗಟ್ಟಿದ ಭ್ರೂಣಗಳನ್ನು ಕರಗಿಸುವ ಸಮಯದಲ್ಲಿ ಕೂಡ ಅವುಗಳು ಬದುಕುಳಿಯುವ ಸಾಧ್ಯತೆ 80% ದಷ್ಟಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇನ್ನು ಭ್ರೂಣ ವರ್ಗಾವಣೆಯ ಬಗ್ಗೆ ಕೂಡ ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು CDC ತಿಳಿಸುವಂತೆ ಒಂದು ಸಮಯದಲ್ಲಿ ಒಂದೇ ಭ್ರೂಣವನ್ನು ವರ್ಗಾಯಿಸಬೇಕು ಎಂದಾಗಿದೆ. ಭ್ರೂಣಗಳ ಹೆಚ್ಚಿನ ವರ್ಗಾವಣೆಯು ತಾಯಿ ಮಗುವಿಗೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಸ್ಥೆಗಳು ಎಚ್ಚರಿಸಿವೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು