ಕಿಸ್ ಮಾಡುವ ಉನ್ಮಾದದಲ್ಲಿ ಸೇತುವೆಯಿಂದ ಕೆಳಬಿದ್ದ ಜೋಡಿ: ವಿಡಿಯೋ ವೈರಲ್

ಪ್ರವಾಸಿಗರ ಗೈಡ್​ ಆಗಿರುವ 34 ವರ್ಷದ ಎನ್ಟನೋಜ್​ ಮತ್ತು 36 ವರ್ಷದ ಹೆಕ್ಟರ್​​ ವಿಡಾಲ್​ ದಂಪತಿ ಬೆಥ್ಲಹೆಮ್​ ಸೇತುವೆ ಮೇಲೆ ಕಾಲ ಕಳೆಯಲು ಹೋಗಿದ್ದರು. ಈ ವೇಳೆ ಪತಿ ಎನ್ಟನೋಜ್​ ತನ್ನ ಪತ್ನಿಗೆ ಕಿಸ್​ ಕೊಡುತ್ತಾ ಆಕೆಯನ್ನು ಸೇತುವೆಯ ಕಂಬಿ ಮೇಲೆ ಕೂರಿಸಿದ್ದಾನೆ.

news18
Updated:August 14, 2019, 10:26 PM IST
ಕಿಸ್ ಮಾಡುವ ಉನ್ಮಾದದಲ್ಲಿ ಸೇತುವೆಯಿಂದ ಕೆಳಬಿದ್ದ ಜೋಡಿ: ವಿಡಿಯೋ ವೈರಲ್
ಪ್ರಾತಿನಿಧಿಕ ಚಿತ್ರ
  • News18
  • Last Updated: August 14, 2019, 10:26 PM IST
  • Share this:
ಕಿಸ್​ ಮಾಡುವ ಉನ್ಮಾದದಲ್ಲಿ ಜೋಡಿಯೊಂದು ತಾವೆಲ್ಲಿದ್ದೇವೆ ಏಂಬುದನ್ನು ಮರೆತು 50 ಅಡಿ ಎತ್ತರದ ಸೇತುವೆಯಿಂದ ಬಿದ್ದ ಭೀಕರ ಘಟನೆಯೊಂದು ಪೆರುವಿನಲ್ಲಿ ನಡೆದಿದೆ.

ಪ್ರವಾಸಿಗರ ಗೈಡ್​ ಆಗಿರುವ 34 ವರ್ಷದ ಎನ್ಟನೋಜ್​ ಮತ್ತು 36 ವರ್ಷದ ಹೆಕ್ಟರ್​​ ವಿಡಾಲ್​ ದಂಪತಿ ಬೆಥ್ಲಹೆಮ್​ ಸೇತುವೆ ಮೇಲೆ ಕಾಲ ಕಳೆಯಲು ಹೋಗಿದ್ದರು. ಈ ವೇಳೆ ಪತಿ ಎನ್ಟನೋಜ್​ ತನ್ನ ಪತ್ನಿಗೆ ಕಿಸ್​ ಕೊಡುತ್ತಾ ಆಕೆಯನ್ನು ಸೇತುವೆಯ ಕಂಬಿ ಮೇಲೆ ಕೂರಿಸಿದ್ದಾನೆ. ಈ ವೇಳೆ ಪತ್ನಿ ನಿಯಂತ್ರಣ ತಪ್ಪಿ ಬೀಳುವಾಗ ಗಂಡನನ್ನು ಹತ್ತಿರಕ್ಕೆ ಎಳೆದುಕೊಂಡಿದ್ದಾಳೆ. ಇದರಿಂದ ಇಬ್ಬರು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ.ಈ ಅಪಘಾತದಿಂದಾಗಿ ಇಬ್ಬರಿಗೂ ಗಂಭೀರ ಗಾಯವಾಗಿದೆ. ಈ ವೇಳೆ ಮಾರ್ಗ ಮಧ್ಯೆ ಪತ್ನಿ ಎನ್ಟಿನೋಜ್​ ಮೃತಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪತಿ ವಿಡಾಲ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದಂಪತಿಗಳು ಸೇತುವೆಯಿಂದ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ