Viral Video: ಗ್ರ್ಯಾಂಡ್ ಎಂಟ್ರಿ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ನವ ದಂಪತಿ..! ಏನಾಗಿದೆ ನೀವೇ ನೋಡಿ

Viral Video: ಮದುವೆ ವೇದಿಕೆಯ ಸುತ್ತಲೂ ಸಾಕಷ್ಟು ಪಟಾಕಿಗಳು ಮತ್ತು ಹಿನ್ನೆಲೆ ನೃತ್ಯಗಾರರೊಂದಿಗೆ ಭವ್ಯ ಉಯ್ಯಾಲೆಯಲ್ಲಿ ನಿಂತುಕೊಂಡು ಮದುವೆ ನಡೆಯುವ ವೇದಿಕೆಗೆ ಬರುತ್ತಿರುವಾಗಲೇ ಆ ಸ್ವಿಂಗ್ ಕೆಳಗೆ ಬಿದ್ದಿರುವುದನ್ನು ಈ 3 ಸೆಕೆಂಡಿನ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.

ಗ್ರ್ಯಾಂಡ್  ಎಂಟ್ರಿ

ಗ್ರ್ಯಾಂಡ್ ಎಂಟ್ರಿ

  • Share this:
ಈಗಂತೂ ಮದುವೆ ಸಮಾರಂಭಗಳಲ್ಲಿ (Wedding ceremonies) ನವ ವಧು ವರ ವಿಭಿನ್ನವಾಗಿ ತಮ್ಮ ವಿವಾಹದ ದಿನವನ್ನು ಬಹುಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲು (Remember) ಏನಾದರೊಂದು ಹೊಸ ಶೈಲಿಯನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ಆ ವಿಭಿನ್ನವಾಗಿ ಮಾಡಿದಂತಹ ಪ್ರಯತ್ನಗಳು ಎಡವಟ್ಟುಗಳಾಗಿ ಬದಲಾಗುತ್ತದೆ. ನಾವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುವ ವೈರಲ್ ವಿಡಿಯೋ (Viral video clip) ತುಣುಕುಗಳಲ್ಲಿ ಸಾಕಷ್ಟು ಮದುವೆಗಳಲ್ಲಿ ವಧು ಮತ್ತು ವರ ತುಂಬಾನೇ ದುಬಾರಿಯಾದ ಉಡುಪನ್ನು ಧರಿಸಿ, ಬೈಕ್ ಮೇಲೆ ವಧು ಬರುವುದನ್ನು, ಕುದುರೆ ಏರಿ ಬರುತ್ತಿರುವ ವರನ ಕುದುರೆಯು ಪಟಾಕಿ ಶಬ್ದಕ್ಕೆ ಹೆದರಿಕೊಂಡು ವರನನ್ನು ಹೊತ್ತ ಕುದುರೆ ಎದ್ದು ಬಿದ್ದು ಓಡಿದ್ದು, ಅದನ್ನು ಹಿಡಿಯಲು ಅದರ ಹಿಂದೆ ಓಡಿದ ಜನರು, ಹೀಗೆ ಅನೇಕ ಎಡವಟ್ಟುಗಳು (Awkward) ಮತ್ತು ವಿಭಿನ್ನವಾಗಿರುವ ವಿಡಿಯೋ ತುಣುಕುಗಳನ್ನು ನೋಡಿದ್ದೇವೆ.

ಗ್ರ್ಯಾಂಡ್ ಆಗಿ ಎಂಟ್ರಿ

ಹೀಗೆ ನವ ದಂಪತಿ ತಮ್ಮ ಸಮಾರಂಭವನ್ನು ಭವ್ಯವಾಗಿಸಲು ನವೀನ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈವೆಂಟ್ ಪ್ಲಾನರ್‌ಗಳು ವರರು ಮತ್ತು ವಧುಗಳು ಮದುವೆ ಮಂಟಪಕ್ಕೆ ಯಾವ ರೀತಿಯಲ್ಲಿ ಪ್ರವೇಶ ಮಾಡಬೇಕು ಎಂಬ ಆಲೋಚನೆಗಳನ್ನು ಮಾಡುತ್ತಿರುತ್ತಾರೆ.

 ಇದನ್ನೂ ಓದಿ: Marriage: ಮದುವೆಗೂ ಮೊದಲು ಸಂಗಾತಿಯೊಂದಿಗೆ ಕೆಲ ವಿಷಯಗಳನ್ನು ಚರ್ಚಿಸಲೇಬೇಕು...!

ಅದರಲ್ಲೂ ಈಗಂತೂ ಕೆಲವು ದಿನಗಳ ಹಿಂದೆಯೇ ನವ ದಂಪತಿ ತಮ್ಮ ಮದುವೆ ಸಮಾರಂಭದಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ನೀಡುತ್ತಿರುವಾಗಲೇ ಅವರಿಬ್ಬರು ಕುಳಿತಿರುವ ಜೆಸಿಬಿಯ ಮುಂಬದಿಯನ್ನು ಆಸನ ಮಾಡಿಕೊಂಡು ಕುಳಿತಿದ್ದು, ಬಂದ ಅತಿಥಿಗಳತ್ತ ಕೈ ಬೀಸುತ್ತಿರುವಾಗ ಅವರಿಬ್ಬರು ಕೆಳಗಿರುವ ಟೇಬಲ್ ಮೇಲೆ ಬಿದ್ದಿದ್ದಾರೆ.

ವಿಡಿಯೋ ನೋಡಿ:



ನವ ದಂಪತಿಗಳಿಗೆ ಗಾಯ

ಮದುವೆಗಳಲ್ಲಿ ಈ ವಧು ವರನನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬರಲು ಬಳಸುವ ಭವ್ಯ ಆಸನದ ಕುದುರೆ ರಥಗಳು, ತಿರುಗುವ ವೇದಿಕೆಗಳು ಮತ್ತು ಉಯ್ಯಾಲೆಗಳಲ್ಲಿ ಕುಳಿತು ವಧು ವರರಿಬ್ಬರು ಗ್ರ್ಯಾಂಡ್ ಎಂಟ್ರಿ ನೀಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇಲ್ಲಿ ನೋಡಿ ಇದೇ ರೀತಿಯಾದ ಗ್ರ್ಯಾಂಡ್ ಎಂಟ್ರಿ ನೀಡಲು ಹೋಗಿ ಎಡವಟ್ಟಾಗಿದೆ. ವರದಿಯ ಪ್ರಕಾರ, ಛತ್ತೀಸಗಢದ ರಾಯ್‌ಪುರದ ದಂಪತಿಗಳು ಕುಳಿತಿರುವ ಸ್ವಿಂಗ್ ಕೆಳಗೆ ಬಿದ್ದಿದ್ದು, ನವ ದಂಪತಿಗಳಿಗೆ ಗಾಯಗಳಾಗಿವೆ.

3 ಸೆಕೆಂಡಿನ ವಿಡಿಯೋ

ಮದುವೆ ವೇದಿಕೆಯ ಸುತ್ತಲೂ ಸಾಕಷ್ಟು ಪಟಾಕಿಗಳು ಮತ್ತು ಹಿನ್ನೆಲೆ ನೃತ್ಯಗಾರರೊಂದಿಗೆ ಭವ್ಯ ಉಯ್ಯಾಲೆಯಲ್ಲಿ ನಿಂತುಕೊಂಡು ಮದುವೆ ನಡೆಯುವ ವೇದಿಕೆಗೆ ಬರುತ್ತಿರುವಾಗಲೇ ಆ ಸ್ವಿಂಗ್ ಕೆಳಗೆ ಬಿದ್ದಿರುವುದನ್ನು ಈ 3 ಸೆಕೆಂಡಿನ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ. ಇದನ್ನು ನೋಡಿದ ಅತಿಥಿಗಳು ಜೋರಾಗಿ ಕಿರುಚುವುದು ಮತ್ತು ವೇದಿಕೆಯ ಕಡೆಗೆ ಓಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

12 ಅಡಿ ಎತ್ತರದಿಂದ ಬಿದ್ದ ದಂಪತಿ

ಈ ದಂಪತಿಗಳು 12 ಅಡಿ ಎತ್ತರದಿಂದ ಬಿದ್ದು ಸಣ್ಣ ಗಾಯಗಳನ್ನು ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತವನ್ನು ಹೊರೆತು ಪಡಿಸಿದರೆ ಬಾಕಿ ಉಳಿದಿರುವಂತಹ ಮದುವೆಯ ಆಚರಣೆಗಳು ಈ ಘಟನೆಯಾದ 30ನಿಮಿಷಗಳ ನಂತರ ಮುಂದುವರೆದವು. ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ವಿಲಕ್ಷಣ ಅಪಘಾತದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Viral News: ಈಕೆಗೆ ಮದುವೆಯಾಗೋ ಚಟವಂತೆ, ಹನ್ನೊಂದು ಸಲ ಬೇರೆ ಬೇರೆಯವರನ್ನು ಮದ್ವೆಯಾಗಿದ್ದಾಳೆ ಕಿಲಾಡಿ ಲೇಡಿ!

ಹೀಗೆ ಅನೇಕ ಮದುವೆ ಸಮಾರಂಭಗಳಲ್ಲಿ ಗ್ರ್ಯಾಂಡ್ ಎಂಟ್ರಿಯು ಹೀಗೆ ಎಡವಟ್ಟುಗಳಾಗಿ ಬದಲಾಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಇದೆಲ್ಲವನ್ನು ಮಾಡುವ ಮೊದಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಮಾಡುವುದು ಅವಶ್ಯಕವಾಗಿದೆ. ಏನು ಮಾಡಲು ಹೋಗಿ ನವದಂಪತಿಗಳ ಜೀವನದ ಜೊತೆ ಚೆಲ್ಲಾಟವಾಡುದಂತಾಗುತ್ತಿದೆ ಈ ಆಚರಣೆಗಳು.
Published by:vanithasanjevani vanithasanjevani
First published: