ನೆಚ್ಚಿನ ನಾಯಿಗಾಗಿ ಎರಡಂತಸ್ತಿನ ಐಶಾರಾಮಿ ಮನೆ ಕಟ್ಟಿಸಿದ ದಂಪತಿ, ಅದೃಷ್ಟ ಅಂದ್ರೆ ಇದು ನೋಡಿ!

Viral Video: ಈ ನಾಯಿ ತನ್ನದೇ ಆದ ಫ್ರಿಡ್ಜ್ ಅನ್ನು ಸಹ ಹೊಂದಿದೆ, ಅಲ್ಲಿ ಅದರ ಆಹಾರ, ಉಪಹಾರ ಮತ್ತು ಇತರ ವಸ್ತುಗಳನ್ನು ಇಡಲಾಗಿದೆ.

ನಾಯಿ ಮತ್ತು ಅದರ ಮನೆ

ನಾಯಿ ಮತ್ತು ಅದರ ಮನೆ

  • Share this:
ಎವ್ವೆರಿ ಡಾಗ್ ಹ್ಯಾಸ್ ಇಟ್ಸ್ ಡೇ (Every Dog Has It's Day) ಎಂಬ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಈ ನಾಯಿಗೆ ಮಾತ್ರ ಇದು ಅಂಥದ್ದೇ ಸಾರ್ಥಕತೆಯ (Realization) ದಿನ. ಹೌದು, ಇದನ್ನು ನೋಡಿ ನೀವು ನಾಯಿಪಾಡು ಎಂದು ಆಡಿಕೊಳ್ಳುವಂತಿಲ್ಲ. ಸಾಮಾನ್ಯವಾಗಿ ನಮ್ಮ ಜನರಿಗೆ ಇರುವ ಆಸೆ ಅಂದ್ರೆ ಸಾಯೋದ್ರೊಳಗೆ ಒಂದು ಸ್ವಂತ ಮನೆ ಕಟ್ಟಿಸಬೇಕು ಅನ್ನೋದು. ಆದರೆ ಅವರು ನೌಕರಿ ಮುಗಿಸಿ ರಿಟೈರ್(Retired) ಆಗುವ ಹೊತ್ತಿಗೆ ಬಹುತೇಕರದ್ದು ನಾಯಿಪಾಡು ಎಂಬ ಪರಿಸ್ಥಿತಿ ಆಗಿರುತ್ತದೆ. ಆದರೆ, ಇಲ್ಲೊಬ್ಬ ದಂಪತಿ( Rich couple) ತಮಗಷ್ಟೇ ಅಲ್ಲ, ತಮ್ಮ ಸಾಕು (Pet dog) ನಾಯಿಗೂ ಒಂದು ಲಕ್ಸುರಿ ಮನೆ (Luxury house)ಕಟ್ಟಿಸಿದ್ದಾರೆ.

ನಾಯಿಗಾಗಿ ನಿರ್ಮಿಸಿದ ಮನೆ
ಪೋಷಕರು ತಮ್ಮ ಮಕ್ಕಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮ ಮಕ್ಕಳನ್ನು ಹಾಳುಮಾಡುವ ಬಗ್ಗೆ ನಾವು ಹಲವಾರು ಘಟನೆಗಳ ಬಗ್ಗೆ ಕೇಳಿದ್ದೇವೆ ಮತ್ತು ಓದಿದ್ದೇವೆ. ಆದರೆ, ಕೆಲವು ಸಾಕುಪ್ರಾಣಿ ಮಾಲೀಕರು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: ಗರ್ಭಿಣಿ ನಾಯಿಗೆ ಸೀಮಂತ, ಬಳೆ ಶಾಸ್ತ್ರ ಮಾಡಿದ ಪೊಲೀಸ್: ಹೀಗೊಬ್ಬ ಶ್ವಾನಪ್ರೇಮಿ

ಕೆಲ ಸಮಯದ ಹಿಂದೆ, ಮಲೇಷಿಯಾದ ಉದ್ಯಮಿಯೊಬ್ಬರು ತನ್ನ 4 ನೇ ಹುಟ್ಟುಹಬ್ಬದಂದು ತನ್ನ ಬೆಕ್ಕಿಗಾಗಿ ನೆಕ್ಲೇಸ್ ಖರೀದಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ದಂಪತಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ನಾಯಿಗಾಗಿ ನಿರ್ಮಿಸಿದ ಮನೆಯನ್ನು ತೋರಿಸುವ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಟಿವಿ ಸೆಟ್, ಫ್ರಿಜ್ ಕೂಡ ಇದೆ
ಈ ದಂಪತಿಗಳು ತಮ್ಮ ಗೋಲ್ಡನ್ ರಿಟ್ರೈವರ್‌ ಬ್ರೀಡ್ ನ ನಾಯಿಗಾಗಿ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಿದ್ದಾರೆ. ಅಲ್ಲದೆ, ಈ ಮನೆಯೊಳಗೆ, ಸಾಕುಪ್ರಾಣಿಗಳಿಗೆಂದೇ ಇರುವ ವೈಯಕ್ತಿಕ ಸ್ಥಳ ಮತ್ತು ಟಿವಿ ಸೆಟ್, ಫ್ರಿಜ್ ಕೂಡ ಇದೆ.

ಮನೆ ಉಡುಗೊರೆ
ವೀಡಿಯೊದಲ್ಲಿ, ಸಾಕುಪ್ರಾಣಿ ಮಾಲೀಕರು ಈ ವಿಶಿಷ್ಟವಾದ ನಾಯಿ ಮನೆಯ ವಿವರವನ್ನು ನೀಡಿದ್ದಾರೆ. ಮತ್ತು ಅದನ್ನು ಚಿಫೆರೆಗರ್ಲ್ ಹೆಸರಿನ ಟಿಕ್ ಟಾಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಮುದ್ದಿನ ನಾಯಿಗಾಗಿ ತಮ್ಮ ಪತಿ ತಾವು ವಾಸಿಸುತ್ತಿರುವಂತಹದ್ದೇ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಈ ನಾಯಿ ಮನೆಯಲ್ಲಿ ತನ್ನ ತನಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಇನ್ನೇನು ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಾ ಇರುವುದರಿಂದ ಈ ನಾಯಿಗೆ ಪರ್ಸನಲ್ ಟಿವಿ, ಬೆಡ್ ಮತ್ತು ಕ್ರಿಸ್ಮಸ್ ಟ್ರೀ ಸೌಲಭ್ಯಗಳನ್ನೂ ನೀಡಲಾಗಿದೆ.

ಅದ್ಭುತವಾಗಿ ವಿನ್ಯಾಸ
ಅಷ್ಟೇ ಅಲ್ಲ, ಈ ನಾಯಿ ತನ್ನದೇ ಆದ ಫ್ರಿಡ್ಜ್ ಅನ್ನು ಸಹ ಹೊಂದಿದೆ, ಅಲ್ಲಿ ಅದರ ಆಹಾರ, ಉಪಹಾರ ಮತ್ತು ಇತರ ವಸ್ತುಗಳನ್ನು ಇಡಲಾಗಿದೆ. ಈ ಮನೆಯನ್ನು ಎಷ್ಟು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ ಎಂದರೆ ಅದರಲ್ಲಿ ಸಾಕಷ್ಟು ಸೂರ್ಯನ ಬೆಳಕು ಮತ್ತು ಗಾಳಿ ಇರುವಂತೆ ನೋಡಿಕೊಳ್ಳಲಾಗಿದೆ. ನಾಯಿ ಮೇಲಿನ ಕೊಠಡಿಯಿಂದ ಕೆಳಗೆ ಬರಲು ಮನೆಯಲ್ಲಿ ಸ್ಲೈಡ್ ಕೂಡ ಅಳವಡಿಸಲಾಗಿದೆ. ನಾಯಿ ಮನೆಯ ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಾಯಿಯ ಈ ಜೀವನಶೈಲಿ ನೋಡಿ ಕೆಲವರು ಅಸೂಯೆಪಡುತ್ತಿದ್ದಾರೆ.

ಇದನ್ನೂ ಓದಿ: Bengaluru Fire Accident: ಅಗ್ನಿ ಅವಘಡದಿಂದ ಅಪಾರ್ಟ್​​ಮೆಂಟ್​​ ನಿವಾಸಿಗಳನ್ನು ರಕ್ಷಿಸಿದ ‘ಅಪ್ಪು’.. ಇದಪ್ಪಾ ನಿಯತ್ತು

ರೂಮ್‌ಮೇಟ್ ಬೇಕೇ ಎಂದ ನೆಟ್ಟಿಗರು
ಅದರಲ್ಲಿ ಒಬ್ಬ ವೀಕ್ಷಕರು, ಈ ನಾಯಿ ತನಗಿಂತ ಉತ್ತಮ ಜೀವನವನ್ನು ನಡೆಸುತ್ತಿದೆ, ಅಲ್ಲದೆ, ಈ ನಾಯಿ ಬಾಡಿಗೆಯನ್ನು ಸಹ ನೀಡಬೇಕಾಗಿಲ್ಲ ಎಂದು ಬರೆದಿದ್ದಾರೆ. ಇದರ ಜೊತೆಗೆ, ಈ ನಾಯಿಗೆ ರೂಮ್‌ಮೇಟ್ ಬೇಕೇ ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ. ಈ ದಂಪತಿಗಳನ್ನು ಉದ್ದೇಶಿಸಿ ಮಾತನಾಡಿರುವ ಇನ್ನೊಬ್ಬರು ಈ ದಂಪತಿಗಳು ತಾವು ಶ್ರೀಮಂತರು ಎಂದು ಹೇಳಿಕೊಳ್ಳದೆ ತಮ್ಮ ಶ್ರೀಮಂತಿಕೆ ತೋರಿಸಿದ್ದಾರೆ ಎಂದಿದ್ದಾರೆ.
Published by:vanithasanjevani vanithasanjevani
First published: