ಪ್ರಾಣಿ ಪ್ರಿಯರು, (Animal lovers) ಪ್ರಾಣಿಗಳ ಬಗ್ಗೆ ತೋರಿಸುವ ಪ್ರೀತಿ ಮತ್ತು ಕಾಳಜಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ, ನಾಯಿಗಳನ್ನು ಇಷ್ಟ ಪಡುವವರು, ಅವುಗಳ ಮೇಲೆ ತೋರಿಸುವ, ಅಕ್ಕರೆ, ಪ್ರೀತಿ ವಿಶ್ವಾಸಗಳನ್ನು ವರ್ಣಿಸಲು ಪದಗಳೇ ಸಾಲದು. ಬಹಳಷ್ಟು ಮಂದಿ ಪ್ರಾಣಿ ಪ್ರಿಯರು, ಸಂಕಷ್ಟದಲ್ಲಿರುವ ಅಥವಾ ಅನಾಥ ಪ್ರಾಣಿಗಳನ್ನು, ಅದರಲ್ಲೂ ಮುಖ್ಯವಾಗಿ ನಾಯಿಗಳನ್ನು (Dog) ರಕ್ಷಿಸಲು (Rescued) ಸ್ವತಃ ಅಥವಾ ಸಂಘಟನೆಗಳ (Organizations) ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿರುತ್ತಾರೆ.
ಕೆನಡಾ ದಂಪತಿಯ ಪ್ರಾಣಿ ಪ್ರೀತಿ
ಇನ್ನು, ರಕ್ಷಿಸಲ್ಪಟ್ಟ ನಾಯಿಗಳಿಗೆ ಕೆಲವು ಪ್ರಾಣಿ ಪ್ರೇಮಿಗಳು ತೋರುವ ಅಪ್ರತಿಮ ಪ್ರೀತಿ ಮತ್ತು ಮಾಡುವ ಆರೈಕೆ ನೋಡಲಂತೂ ಅತ್ಯಂತ ಹೃದಯಸ್ಪರ್ಶಿ ಆಗಿರುತ್ತದೆ. ಅಷ್ಟೇ ಅಲ್ಲ, ಅಂತಹ ನಾಯಿಗಳನ್ನು ದತ್ತು ಪಡೆದ ಕುಟುಂಬಗಳು, ಹಂಚಿಕೊಳ್ಳುವ ವಿಡಿಯೋಗಳು ಮನಸ್ಸಿಗೆ ತಟ್ಟುವಂತಿರುತ್ತವೆ. ಅಂತದ್ದೇ ಒಂದು ವಿಡಿಯೋ ಇದೀಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲ್ಪಟ್ಟಿದ್ದು, ಸಾವಿರಾರು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
ಕೆನಡಾದ ದಂಪತಿ, ಭಾರತೀಯ ನಾಯಿಯನ್ನು ದತ್ತು ಪಡೆದಿರುವುದರ ಕುರಿತ ಆ ವಿಡಿಯೋವನ್ನು ನೋಡಿದವರು, ಆ ದಂಪತಿಯ ಕೆಲಸದ ಕುರಿತು ಮೆಚ್ಚುಗೆ ಸೂಚಿಸದಿರಲು ಸಾಧ್ಯವಿಲ್ಲ. ಮಾರ್ಚ್ 4 ರಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಆ ವಿಡಿಯೋವನ್ನು ಈಗಾಗಲೇ 2.69 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: Viral Video: ಯಾವತ್ತಾದರೂ ಗೂಬೆ ಸ್ನಾನ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ದತ್ತು ನಾಯಿ ನೋಡಲು ಕಾಯ್ತಿದ್ರು
ವಿಡಿಯೋದಲ್ಲಿ, ಭಾರತದಿಂದ ಬಂದು ತಲುಪಿರುವ ತಾವು ದತ್ತು ಪಡೆದ ನಾಯಿಯ ಭೇಟಿಯಾಗಲು ಕಾಯುತ್ತಿರುವ ದಂಪತಿಯನ್ನು ನಾವು ಕಾಣಬಹುದು. ಅವರು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗುತ್ತಿರುತ್ತಾರೆ. ತಮ್ಮ ದತ್ತು ನಾಯಿಯನ್ನು ಕಾಣಲು ಅವರು ನಿಜಕ್ಕೂ ತುಂಬಾ ಉತ್ಸುಕರಾಗಿರುವುದು ನಮಗೆ ವಿಡಿಯೋವನ್ನು ಕಂಡಾಗ ಅರ್ಥವಾಗುತ್ತದೆ.
ಅಂತಿಮವಾಗಿ ನಾಯಿ ಮತ್ತು ದಂಪತಿಯ ಭೇಟಿ ಆಗುತ್ತದೆ. ಆರಂಭದಲ್ಲಿ ನಾಯಿ ತನ್ನ ಪಂಜರದಿಂದ ಹೊರ ಬರಲು ಹಿಂಜರಿಯುತ್ತಿದೆ ಎಂಬಂತೆ ಕಾಣುತ್ತದೆ, ಆದರೆ ಬಳಿಕ ನಿಧಾನಕ್ಕೆ ಹೊರ ಬಂದು, ಅದು ತನ್ನ ಹೊಸ ಮಾಲೀಕರ ಕೈಗಳನ್ನು ನೆಕ್ಕುತ್ತದೆ. ನಾಯಿ ಮತ್ತು ದಂಪತಿಯ ಸಮಾಗಮದ ದೃಶ್ಯ ನೋಡಲು ನಿಜಕ್ಕೂ ಮುದ್ದಾಗಿದೆ. “ ನಾವು ಭಾರತದಿಂದ ಒಂದು ಬೀದಿ ನಾಯಿಯನ್ನಯ ದತ್ತು ಪಡೆದಿದ್ದೇವೆ” ಎಂಬ ಬರಹವನ್ನು ಕೂಡ ಆ ವಿಡಿಯೋದಲ್ಲಿ ನಾವು ಕಾಣಬಹುದು.
ಮನೆಗೆ ಸ್ವಾಗತ ಇಂಡಿ
“ಮೊದಲಿಗೆ ಸ್ವಲ್ಪ ನಾಚಿಕೆಪಟ್ಟುಕೊಂಡಿತು, ಆದರೆ ಬಾಂಧವ್ಯ ಬೆಳೆಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಮನೆಗೆ ಸ್ವಾಗತ ಇಂಡಿ” ಎಂದು ಆ ವಿಡಿಯೋಗೆ ಅಡಿಬರಹವನ್ನು ನೀಡಲಾಗಿದೆ. ಅಡಿಬರಹದ ಜೊತೆಗೆ ರೆಸ್ಕ್ಯೂ ಮತ್ತು ಇಂಡಿಯನ್ಪರಿಯಾ ಎಂಬ ಹ್ಯಾಶ್ಟ್ಯಾಗ್ಗಳು ಕೂಡ ಇವೆ.
ನಾಯಿಯನ್ನು ದತ್ತು ತೆಗೆದುಕೊಂಡದ್ದರ ಕುರಿತ ಈ ಪೋಸ್ಟನ್ನು ನೋಡಿದ ಇನ್ಸ್ಟಾಗ್ರಾಂ ಬಳಕೆದಾರರು , ನಾಯಿಯನ್ನು ದತ್ತು ತೆಗೆದುಕೊಂಡ ಸಂಗತಿಯ ಬಗ್ಗೆ ಮೆಚ್ಚುಗೆ ಸೂಚಿಸಿ ಮತ್ತು ಅವರಿಗೆ ಶುಭ ಹಾರೈಸಿ, ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: Viral Video: ಸರ್ಕಾರಿ ಗೌರವದೊಂದಿಗೆ ಸಮುದ್ರ ಸೇರಿದ ಕಡಲಾಮೆಗಳು..! ಅಲೆಗಳ ಕಡೆ ಓಡುವ ಆಮೆಗಳ ಚಂದದ ವಿಡಿಯೋ
ದಂಪತಿ ಕಾರ್ಯಕ್ಕೆ ಮೆಚ್ಚುಗೆ
ಅವುಗಳಲ್ಲಿ ಆಯ್ದ ಕೆಲವು ಪ್ರತಿಕ್ರಿಯೆಗಳು ಇಂತಿವೆ. “ಅವಳು ಉತ್ತಮ ಜೀವನವನ್ನು ಹೊಂದಲಿದ್ದಾಳೆ! ಭಾರತದಿಂದ ಇದೋ ಹೇರಳ ಪ್ರೀತಿ” ಎಂದು ಒಬ್ಬ ಇನ್ಸ್ಟಾಗ್ರಾಂ ಬಳಕೆದಾರರು ಪ್ರತಿಕ್ರಿಯಿಸಿದ್ದರೆ, “ಎಂತಹ ಸುಂದರವಾದ ಕಥೆ, ಉದ್ದೇಶ” ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. “ಅತ್ಯಂತ ಕರುಣಾಮಯ ಮತ್ತು ಪರಿಶುದ್ಧ ಸಂಗತಿ” ಒಬ್ಬ ಇನ್ಸ್ಟಾಗ್ರಾಂ ಬಳಕೆದಾರರು ಶ್ಲಾಘಿಸಿದ್ದರೆ, ಇನ್ನೊಬ್ಬರು “ ನೀವು ಅವಳನ್ನು ದತ್ತು ತೆಗೆದುಕೊಂಡದ್ದು ತುಂಬಾ, ತುಂಬಾ ಒಳ್ಳೆಯ ಕೆಲಸ. ನಿಮ್ಮ ಮೂವರ ಬಗ್ಗೆ ಸಂತೋಷವಾಗುತ್ತಿದೆ” ಎಂದು ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿದ ಮಹಿಳೆಯ ಹೆಸರು ಹ್ಯಾವಿ. ಆಕೆ ವೃತ್ತಿಯಲ್ಲಿ ಒಬ್ಬ ಫೋಟೋಗ್ರಾಫರ್. ಆಕೆ ಕೆನಡಾದ ನಿವಾಸಿ. ಹ್ಯಾವಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ 7,000 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ