Relationship: 37 ವರ್ಷಗಳ ಅಂತರವಿದ್ದರೂ ವಿವಾಹ ನಿಶ್ಚಯ ಮಾಡಿಕೊಂಡ ಪ್ರಣಯ ಪಕ್ಷಿಗಳು

Love: 24 ವರ್ಷ ವಯಸ್ಸಿನ ಅಮೆರಿಕದ ಕುರಾನ್ ಮ್ಯಾಕೇನ್ ಮತ್ತು 61 ವರ್ಷ ವಯಸ್ಸಿನ ಚೇರಿಲ್ ಮ್ಯಾಕ್ಗ್ರೆಗರ್ ಅವರ ಮಧ್ಯೆ ಪ್ರೀತಿ ಪ್ರೇಮಾಂಕುರವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಈ ಪ್ರೀತಿಯೇ ಹೀಗೆ, ಯಾವಾಗ, ಯಾರ ಮಧ್ಯೆ, ಹೇಗೆ, ಎಲ್ಲಿ ಯಾವುದು ಲೆಕ್ಕಕ್ಕೆ ಸಿಗದೇಯೆ ಹುಟ್ಟುತ್ತದೆ. ಪ್ರೀತಿ ಮಾಡುವ ಎರಡು ಹೃದಯಗಳು ಇದ್ದರೆ ಸಾಕಲ್ಲವೇ? ಇದಕ್ಕೆ ಇನ್ನೂ ಬೇರೆಯ ಕಾರಣಗಳು ಬೇಕಾಗಿಲ್ಲ ಅನ್ನಿಸುತ್ತದೆ.ಎರಡಕ್ಷರದ ಈ ಪದಕ್ಕೆ ಇರುವಂತಹ ಶಕ್ತಿ ಪ್ರಪಂಚದಲ್ಲಿ ಯಾವುದೇ ಪದಕ್ಕಿಲ್ಲ ಎಂದರೆ ತಪ್ಪಾಗಲಾರದು. ಹೀಗೆ ಇಲ್ಲೊಂದು ಅಪರೂಪದ ಜೋಡಿ ಇದೆ, 24 ವರ್ಷ ವಯಸ್ಸಿನ ಅಮೆರಿಕದ ಕುರಾನ್ ಮ್ಯಾಕೇನ್ ಮತ್ತು 61 ವರ್ಷ ವಯಸ್ಸಿನ ಚೇರಿಲ್ ಮ್ಯಾಕ್ಗ್ರೆಗರ್ ಅವರ ಮಧ್ಯೆ ಪ್ರೀತಿ ಪ್ರೇಮಾಂಕುರವಾಗಿದೆ.


ಇಬ್ಬರ ನಡುವೆ ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 37 ವರ್ಷಗಳ ವಯಸ್ಸಿನ ಅಂತರವಿದೆ, ಆದರೆ ವಯಸ್ಸು ಎಷ್ಟೇ ಆಗಿದ್ದರೂ ತಮ್ಮ ಜೀವನದಲ್ಲಿನ ಪ್ರೀತಿ ಪ್ರೇಮ ಪ್ರಣಯವು ಅದು ಹಾಗೆಯೇ ಉಳಿಸಿಕೊಂಡಿದ್ದೇವೆ ಎಂದು ಅವರಿಬ್ಬರು ಹೇಳುತ್ತಾರೆ.61 ವರ್ಷ ವಯಸ್ಸಿನ ಚೇರಿಲ್ ಅವರಿಗೆ 17 ಜನ ಮೊಮ್ಮಕ್ಕಳಿದ್ದು, ಅವರ ಒಬ್ಬ ಮಗ ಇವರ ಪ್ರಿಯಕರ ಮ್ಯಾಕೇನ್ ಕ್ಕಿಂತಲೂ ವಯಸ್ಸಿನಲ್ಲಿ ಹಿರಿಯವನಾಗಿದ್ದಾನೆ. ಇವರಿಬ್ಬರ ಪ್ರೀತಿ ಒಂದೇ ಕ್ಷಣದಲ್ಲಿ ಹುಟ್ಟಿದ್ದಲ್ಲ, ನಾನು ಮ್ಯಾಕೇನ್ 15 ವರ್ಷ ವಯಸ್ಸಿನವರಾಗಿದ್ದಾಗ ಮೊದಲ ಬಾರಿ ಭೇಟಿ ಮಾಡಿದ್ದೆ, ಎಂದು ಚೇರಿಲ್ ಹೇಳುತ್ತಾರೆ.


ಇವರಿಬ್ಬರ ಪ್ರೀತಿಯು ಮ್ಯಾಕೇನ್ ದೊಡ್ಡವರಾಗುತ್ತಿದ್ದಂತೆ ಅವರಿಬ್ಬರ ನಡುವೆ ಪ್ರೀತಿ ಬೆಳೆದಿರುವುದು ತುಂಬಾ ವಿಶೇಷವಾದ ಸಂಗತಿಯಾಗಿದೆ. ಇವರಿಬ್ಬರು ಮೊದಲಿಗೆ ಟಿಕ್‌ಟಾಕ್ ವೀಡಿಯೋ ಗಳನ್ನು ಒಟ್ಟಿಗೆ ಚಿತ್ರೀಕರಿಸುತ್ತಿದ್ದರು ಎಂದು ಹೇಳಲಾಗಿದೆ. ಹೀಗೆ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ.ಒಮ್ಮೆ ಚೇರಿಲ್ ಮಾಡಿದ ನೃತ್ಯದ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಕೆಟ್ಟದಾಗಿ ನೆಟ್ಟಿಗರು ಪ್ರತಿಕ್ರಿಯಿಸಿದ್ದರು, ಆಗ ಮ್ಯಾಕೇನ್ ಆಕೆಯ ರಕ್ಷಣೆಗೆ ಬಂದಿದ್ದರು.ನಿಧಾನವಾಗಿ ಇವರಿಬ್ಬರು ಒಬ್ಬರನೊಬ್ಬರು ತುಂಬಾ ಇಷ್ಟ ಪಡುತ್ತಿರುವುದಾಗಿ ಅರ್ಥ ಮಾಡಿಕೊಂಡು ಇಬ್ಬರೂ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಈ ಸಂಬಂಧದಿಂದ ಇಬ್ಬರು ಪ್ರೇಮಿಗಳು ತುಂಬಾ ಸಂತೋಷವಾಗಿದ್ದಾರೆ.


ಇದನ್ನೂ ಓದಿ: ಆಕಾಶದಿಂದ ಬಿದ್ದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಮೀನು..! ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದ ವಿಡಿಯೋ

ಸಾಮಾಜಿಕ ಮಾಧ್ಯಮಗಳಲ್ಲಿ ಇವರಿಬ್ಬರ ಈ ಪ್ರೀತಿಗೆ ವಿರೋಧಿಸಿ ಬರೆದಿದ್ದಾರೆ, ಇನ್ನೂ ಕೆಲವರಂತೂ ಚೇರಿಲ್ ಅವರನ್ನು ಮ್ಯಾಕೇನ್ ಅವರ "ಅಜ್ಜಿ" ಎಂದು ಬರೆದಿದ್ದಾರೆ."ಕೆಲವೊಮ್ಮೆ, ಈ ರೀತಿಯ ಹೇಳಿಕೆಗಳು ನನಗೆ ತುಂಬಾ ನೋವುಂಟು ಮಾಡುತ್ತದೆ”, ಎಂದು ಚೇರಿಲ್ ಹೇಳಿ ಕೊಂಡಿದ್ದಾರೆ. “ನಾನು ಈಗ ಇವರ ಜೊತೆಯಲ್ಲಿದ್ದೇನೆ, ನಾನು ಅವರಿಗೆ ನೋವಿನ ಸಮಯದಲ್ಲಿ ತುಂಬಾನೇ ಬೆಂಬಲಿಸುತ್ತೇನೆ ಮತ್ತು ನನ್ನ ರಾಣಿಗಾಗಿ ನಾನು ಯುದ್ಧವನ್ನು ಸಹ ಮಾಡುತ್ತೇನೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ” ಎಂದು ಮ್ಯಾಕೇನ್ ಹೇಳುತ್ತಾರೆ.


ಜುಲೈ 31 ರಂದು ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ನೆಟ್ಟಿಗರ ದ್ವೇಷದ ಹೊರತಾಗಿಯೂ ಟಿಕ್‌ಟಾಕ್‌ನಲ್ಲಿ ಮ್ಯೂಸಿಕ್ ವೀಡಿಯೊಗಳನ್ನು ಹಂಚಿ ಕೊಳ್ಳುವುದನ್ನು ಮುಂದುವರಿಸಿದ್ದಾರೆ.ಅವರು "ಓನ್ಲಿ ಫ್ಯಾನ್ಸ್" ಎಂಬಹೆಸರಿನ ಖಾತೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿದ್ದಾರೆ, ಅಲ್ಲಿ ಅವರು ತಮ್ಮ ವಿವಿಧ ಫೋಟೋ ಶೂಟ್‌ಗಳನ್ನು ಸಹ ಹಂಚಿ ಕೊಳ್ಳುತ್ತಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: