• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Facebook Challenge: ಫೇಸ್​ಬುಕ್​ನಲ್ಲಿ ದಿನಕ್ಕೊಂದು ಚಾಲೆಂಜ್ ಸದ್ದು​; ಸದ್ಯ ಕಪಲ್​ ಚಾಲೆಂಜ್​​ ಟ್ರೆಂಡ್

Facebook Challenge: ಫೇಸ್​ಬುಕ್​ನಲ್ಲಿ ದಿನಕ್ಕೊಂದು ಚಾಲೆಂಜ್ ಸದ್ದು​; ಸದ್ಯ ಕಪಲ್​ ಚಾಲೆಂಜ್​​ ಟ್ರೆಂಡ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದೆರಡು ದಿನಗಳಿಂದ ಫೇಸ್​ಬುಕ್​ನಲ್ಲಿ ಸದ್ದು ಮಾಡುತ್ತಿರುವ ಈ ಚಾಲೆಂಜ್​ನಲ್ಲಿ ಜೆಡಿಎಸ್​ ಮಾಜಿ ಎಂಎಲ್​ಸಿ ಶರವಣ ಕೂಡ ಭಾಗಿಯಾಗಿದ್ದಾರೆ. ತಮ್ಮ ಹೆಂಡತಿ ಜೊತೆಗಿನ ಫೋಟೊ ಶೇರ್​ ಮಾಡಿ ಇದರಲ್ಲಿ ಭಾಗಿಯಾಗಿದ್ದಾರೆ

  • Share this:

ಸಾಮಾಜಿಕ ಜಾಲತಾಣ ಫೇಸ್​ಬುಕ್​ ಜನರಿಗೆ ಅತ್ಯಾಪ್ತವಾಗಿರುವ ಮಾಧ್ಯಮ. ಸಿನಿಮಾ ನಟ-ನಟಿ, ರಾಜಕಾರಣಿಗಳು ಈ ಮೂಲಕ ಅಭಿಮಾನಿಗಳು, ಜನರೊಂದಿಗೆ ಸಂವಹನ ಸಾಧಿಸಲು ಸಾಧ್ಯವಾಗಿದೆ. ಈ ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್​ ಸದ್ದು ಮಾಡುತ್ತಿರುತ್ತವೆ. ಕೆಲವೊಂದು ಉತ್ತಮ ಉದ್ದೇಶಗಳೊಂದಿಗೆ ಜನರಿಗೆ ಸಹಾಯ ಮಾಡಲೆತ್ತಿಸುವ ಪ್ರಯತ್ನಗಳು ನಡೆದಿವೆ. ಇನ್ನು ಕೆಲವೊಮ್ಮೆ ಟೈಮ್​ ಪಾಸ್​, ತಮಾಷೆಗಾಗಿ ನಡೆಯುವ ಅಭಿಯಾನಗಳು ಮುನ್ನಲೆಗೆ ಬರುತ್ತವೆ. ಸದ್ಯ ಅಂತಹದ್ದೇ ಹೊಂದು ಟ್ರೆಂಡ್​ ಈಗ ಫೇಸ್​ಬುಕ್​ನಲ್ಲಿ ನಡೆಯುತ್ತಿದೆ. ಅದೇ ಕಪಲ್​ ಚಾಲೆಂಜ್​ #CoupleChallenge . ಜೋಡಿಗಳಿಬ್ಬರು ಅವರ ಫೋಟೋ ಹಾಕಿ ಈ ಹ್ಯಾಷ್​ಟ್ಯಾಗ್​ನೊಂದಿಗೆ ತಮ್ಮ ಚಿತ್ರ ಶೇರ್​ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ #Singlechallenge #Fatherdadchallengeಗಳು ಕೂಡ ಮುಖಪುಟದಲ್ಲಿ ಸದ್ದು ಮಾಡುತ್ತಿವೆ.


ಕಳೆದೆರಡು ದಿನಗಳಿಂದ ಫೇಸ್​ಬುಕ್​ನಲ್ಲಿ ಸದ್ದು ಮಾಡುತ್ತಿರುವ ಈ ಚಾಲೆಂಜ್​ನಲ್ಲಿ ಜೆಡಿಎಸ್​ ಮಾಜಿ ಎಂಎಲ್​ಸಿ ಶರವಣ ಕೂಡ ಭಾಗಿಯಾಗಿದ್ದಾರೆ. ತಮ್ಮ ಹೆಂಡತಿ ಜೊತೆಗಿನ ಫೋಟೊ ಶೇರ್​ ಮಾಡಿ ಇದರಲ್ಲಿ ಭಾಗಿಯಾಗಿದ್ದಾರೆ.


https://www.facebook.com/tasharavana/posts/1251433538542145


ಬಿಜೆಪಿ ಸಂಸದ ಪ್ರತಾಪ್​ ಸಿಂಹ ಅಭಿಮಾನಿಗಳು ಕೂಡ, ಕೊಡಗು ಸಂಸದನ ಫೋಟೋವನ್ನು ಹಾಕುವ ಮೂಲಕ ಈ ಚಾಲೆಂಜ್​ ಸ್ವೀಕರಿಸಿದ್ದಾರೆ.



top videos


    ಐಸ್​ ಬಕೆಟ್​, ಗಿಡನೆಡುವ, ಪುಸ್ತಕ ಓದುವಂತವ, ಸಾಮಾಜಿಕ ಜಾಗೃತಿಯಂತಹ ಅನೇಕ ಜಾಲತಾಣಗಳಿಗೆ ವೇದಿಕೆಯಾಗುತ್ತಿದೆ. ಈಗ ಸದ್ಯ ಮತ್ತೊಂದು ಚಾಲೆಂಜ್​ ಫೇಸ್​ಬುಕ್​ನಲ್ಲಿ ಹುಟ್ಟಿಕೊಂಡಿದ್ದು, ಇವೆಲ್ಲಾ ಬಳಕೆದಾರರ ಖುಷಿ ಹೆಚ್ಚಿಸುತ್ತಿದೆ ಎಂದರೆ ತಪ್ಪಲ್ಲ. ಆದರೆ, ಸಾಮಾಜಿಕ ಜಾಲತಾಣ ಎಂಬುದು ಒಳ್ಳೆಯದು. ಮತ್ತು ಕೆಟ್ಟದ್ದು ಎರಡು ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದು ಈ ಬಗ್ಗೆ ಮುನ್ನೆಚ್ಚರಿಕೆವಹಿಸುವುದು ಅಗತ್ಯ.

    First published: