ಹೆಣ್ತನ (Girl) ಎನ್ನುವುದು ವಿಶೇಷವಾಗಿದ್ದು. ಯಾಕಂದ್ರೆ ತನ್ನ ಸಣ್ಣ ವಯಸ್ಸಿನಿಂದ ವೃದ್ದಾಪ್ಯದ ತನಕವೂ ಆಕೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಆಕೆ ಮಾನಸಿಕವಾಗಿ (Mentally) ಕುಗ್ಗಲೇ ಬಾರದು. ಹೀಗೆ ಮಾನಸಿಕವಾಗಿ ಕುಗ್ಗಿದಾಗ ತನ್ನನ್ನ ತಾನು ಜೀವನದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಪ್ರತಿಯೊಂದನ್ನೂ ನಿಭಾಯಿಸಿಕೊಂಡು ಹೋಗುವಂತಹ ತಾಕತ್ತು ಹೆಣ್ಣಿನಲ್ಲಿ ಇದೆ. ಇನ್ನೂ ಹೆಚ್ಚಾಗಿ ಆಕೆ ಹೆರಿಗೆಯ ಸಮಯದಲ್ಲಿ ಅಂತೂ ಮೆಚ್ಚಲೇ ಬೇಕು. ಹೆಣ್ಣಿನ ಪುನರ್ಜನ್ಮ ಅಂತ ಹೇಳಬಹುದು. ಇವೆಲ್ಲಾ ಒಂದು ಹೆಣ್ಣಿನಲ್ಲಿ ಆಗುವ ಬದಲಾವಣೆ. ಆದರೆ ಇದೀಗ ಮಂಗಳಮುಖಿಯ ದೇಹದಲ್ಲಿ ಹೆಣ್ಣಿನ ಹಾಗೆಯೇ ಬದಲಾವಣೆ ಆಗಿದೆ. ಏನು ಅಂತ ಕೇಳ್ತೀರಾ? ಈ ಸ್ಟೋರಿ (Story) ಫುಲ್ ಓದಿ.
ಮಂಗಳಮುಖಿಯರು ಎಂದರೆ ಒಂದು ಕಾಲದಲ್ಲಿ ಸಮಾಜದಲ್ಲಿ ಬೆಲೆಯೇ ಇರ್ತಾ ಇರಲಿಲ್ಲ. ಕಾಲ ಬದಲಾದಂತೆ, ಕಾನೂನು ಬದಲಾದಂತೆ ಹಾಗೆಯೇ ಮಾಧ್ಯಮ ಬದಲಾದಂತೆ ಸಮಾಜ ಇವರನ್ನು ಒಪ್ಪಿಕೊಳ್ಳಲು ಮುಂದಾದರು.
ಆದರೂ ಈಗಲೂ ಕೂಡ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವುದು, ವೇಶ್ಯವಾಟಿಕೆಗಳಂತಹ ಕೃತ್ಯಗಳು ನಡೆಯುತ್ತಲೇ ಇದೆ ಎನ್ನುವುದು ವಿಷಾಧನೀಯ ಸಂಗತಿ. ಆದರೆ ಭಾರತದ ಸಂವಿಧಾನದ ಪ್ರಕಾರ ಆರ್ಟಿಕಲ್ 377 ಪ್ರಕಾರ 2018ರಿಂದ LGBT ಸಕ್ರಮವಾಗಿದೆ. ಒಂದೇ ಲಿಂಗದವರು ಮದುವೆ ಆಗಬಹುದು. ಇದರ ಬೆನ್ನಲ್ಲೇ ಅದೆಷ್ಟೋ ಜೋಡಿಗಳು ಒಂದಾದವು.
ಇದರ ಬೆನ್ನಲ್ಲೇ ದೇಶದಲ್ಲಿ ಪ್ರಪ್ರಥಮ ಬಾರಿಗೆ ಒಂದು ವಿಚಿತ್ರ ಘಟನೆ ನಡೆದಿದೆ. ತೃತೀಯ ಲಿಂಗದವರು ಗರ್ಭಾಧಾರಣೆ ಆಗಿರುವ ಘಟನೆ ನಡೆದಿದೆ.
View this post on Instagram
ಜಹಾದ್ ಫಾಸಿಲ್ ಮತ್ತು ಜಿಯಾ ಪೊವೆಲ್ ಇಬ್ಬರು ಕೇರಳದ ತೃತೀಯಲಿಂಗಿ ದಂಪತಿ. ಜಹಾದ್ ಹುಟ್ಟಿದಾಗ ಹೆಣ್ಣಾಗಿದ್ದರು ತದನಂತರ ಗಂಡಾಗಿ ಬದಲಾದರು. ಇವರು ಇದೀಗ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಜಿಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಳ್ಳುವುದರ ಮೂಲಕ ತಾಯಿಯಾಗುವ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಮುಂಬೈ ಹುಡುಗಿ- ಇದು ಹೇಗೆ ಸಾಧ್ಯ?
ತಾಯಿ ತಂದೆಯಾಗುವ ಕನಸು ನಮ್ಮದಾಗಿತ್ತು, ನಮ್ಮ ಸ್ವಂತದ ಹಂಬಲವೂ ಈಡೇರುತ್ತಿದೆ ಎಂದು ಬರೆದುಕೊಂಡಿದ್ದಾರೆ. ನಾನು ಒಂದು ಹೆಣ್ಣು ಅಲ್ಲ, ಆದರೂ ಹೆಣ್ತನ, ತಾಯ್ತನವನ್ನು ಅರಿತಿದ್ದೇನೆ. ನನ್ನೊಳಗೆ ಸದಾ ಇದ್ದ ಕನಸೆಂದರೆ ಅದು ಅಮ್ಮ. ಸಮಯವು ನನ್ನ ಆಸೆಗಳನ್ನು ಅರಿತಿತ್ತು. ಹೊಟ್ಟೆಯೊಳಗೆ ಗಂಡಾಗಲೀ, ಹೆಣ್ಣಾಗಲೀ ನಾನು 9 ತಿಂಗಳಗಳ ಕಾಲ ಕಾಯಲೇ ಬೇಕು, ಇದು ನನಗೆ ಖುಷಿ ಕೊಡ್ತಾ ಇದೆ ಎಂದು ಜಿಯಾ ಸಂತಸವನ್ನು ಹಂಚಿಕೊಂಡಿದ್ದಾರೆ.
ನನ್ನ ಮಾನಸಿಕ ಖಿನ್ನತೆ ಕಡಿಮೆಯಾಗಿದೆ. ನನ್ನ ಇಚ್ಛೆಗೆ ತಕ್ಕಂತೆ ದೇಹದಲ್ಲಿ ಬದಲಾವಣೆ ಮಾಡಿಸಿಕೊಳ್ಳಲು ಜಹಾದ್ ಪ್ರಾರಂಬಿಸಿದರು. ಹಾರ್ಮೋನು ಚಿಕಿತ್ಸೆ ಮತ್ತು ಸ್ತನ ತೆಗೆಯುವ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಎಲ್ಲಾ ಕೆಟ್ಟ ಗಳಿಗೆಯು ನಮ್ಮಿಂದ ಇದೀಗ ದೂರವಾಗಿದೆ. ಮಗುವಿನ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಿಯಾ ಬರೆದುಕೊಂಡಿದ್ದಾರೆ.
ಜಿಯಾ ಪೊವೆಲ್ ಒಬ್ಬ ಖ್ಯಾತ ಡ್ಯಾನ್ಸರ್. ಕೇರಳದಲ್ಲಿ ಪ್ರಖ್ಯಾತಿ. ಈ ಸಂತೋಷದ ಸುದ್ಧಿ ಇದೀಗ ಕೇರಳದಲ್ಲಿ ಮತ್ತೊಮ್ಮೆ ಸಖತ್ ಸುದ್ಧಿಯಾಗ್ತಾ ಇದೆ. ಒಟ್ಟಿನಲ್ಲಿ ನಮ್ಮ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ತೃತೀಯಲಿಂಗಿ ದಂಪತಿ ತಂದೆ ತಾಯಿಯಾಗ್ತಾ ಇರೋದು ಆಶ್ಚರ್ಯದ ಸಂಗತಿಯೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ