ಹುಟ್ಟುಹಬ್ಬಕ್ಕೆ 50 ದಿನ ಬಾಕಿ ಇರುವಾಗಲೇ ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಗ್ತಿದ್ದಾರೆ Shah Rukh Khan..!

ಶಾರುಖ್ ಹುಟ್ಟುಹಬ್ಬವು ನವೆಂಬರ್ 2ರಂದು ಇದ್ದು, ಇವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ 'ಎಸ್ಆರ್‌ಕೆ ಹುಟ್ಟುಹಬ್ಬಕ್ಕೆ ಇನ್ನೂ 50 ದಿನಗಳು' ಎಂಬ ಹೊಸ ಟ್ರೆಂಡ್ ಪ್ರಾರಂಭಿಸಿದ್ದಾರೆ.

ನಟ ಶಾರೂಖ್​​ ಖಾನ್​

ನಟ ಶಾರೂಖ್​​ ಖಾನ್​

  • Share this:
ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್  (Bollywood Amitabh Bachchan) ನಂತರದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುವುದು ಕೆಲವೇ ಕೆಲವು ಬೆರಳೆಣಿಕೆಯಷ್ಟು ನಟರು. ಅದರಲ್ಲಿ ನಟ ಶಾರುಖ್ ಖಾನ್ (Shah Rukh Khan) ಸಹ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಇಡೀ ವಿಶ್ವಾದ್ಯಂತ ಶಾರುಖ್  ಖಾನ್​ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕಳೆದ ಮೂರು ದಶಕಗಳಿಂದ ಹಿಂದಿ ಚಲನಚಿತ್ರೋದ್ಯಮದ ಪ್ರಮುಖ ತಾರೆಗಳಲ್ಲಿ ಇವರು ಒಬ್ಬರು. ಅವರ ಹುಟ್ಟುಹಬ್ಬಕ್ಕೆ ಇನ್ನೂ 50 ದಿನಗಳು (50 Days For SRK Day) ಬಾಕಿ ಇರುವಂತೆಯೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ 50 ದಿನಗಳ ಕ್ಷಣಗಣನೆ  ಇದೆ ಎಂದು ಹ್ಯಾಶ್​ಟ್ಯಾಗ್​  ಹಾಕಿ ಅದನ್ನು ಟ್ರೆಂಡ್​ ಮಾಡಲು ಆರಂಭಿಸಿದ್ದಾರೆ.

ಬಾಲಿವುಡ್​ನಲ್ಲಿ ಕಿಂಗ್ ಖಾನ್​ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್​ ಹುಟ್ಟುಹಬ್ಬವು ನವೆಂಬರ್ 2ರಂದು ಇದ್ದು, ಇವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ 'ಎಸ್ಆರ್‌ಕೆ ಹುಟ್ಟುಹಬ್ಬಕ್ಕೆ ಇನ್ನೂ 50 ದಿನಗಳು' ಎಂಬ ಹೊಸ ಟ್ರೆಂಡ್ ಪ್ರಾರಂಭಿಸಿದ್ದಾರೆ. ಈ ಹಿಂದೆ ಶಾರುಖ್ ಅವರ ಹೊಸ ಸಿನಿಮಾಗಳು ಪ್ರಕಟವಾಗಲಿಲ್ಲ ಅಂತ ಸಾಕಷ್ಟು ಮಂದಿ ಈ ನಟನನ್ನು ಟ್ರೋಲ್​ ಮಾಡಿದ್ದಾಗಲೂ, ಈ ಅಭಿಮಾನಿಗಳೇ ಅವರ ಬೆಂಬಲಕ್ಕೆ ನಿಂತಿದ್ದು.

ಹುಟ್ಟುಹಬ್ಬದ ದಿನದಂದು ಸೂಪರ್ ಸ್ಟಾರ್‌ನ ಅಸಂಖ್ಯಾತ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗೆ ಶುಭ ಹಾರೈಸಲು ಮತ್ತು ಅವರನ್ನು ನೋಡಲೆಂದೇ ಮುಂಬೈನಲ್ಲಿರುವ ಮನೆಯ ಸುತ್ತಮುತ್ತ ಜಮಾಯಿಸಿರುತ್ತಾರೆ. ಶಾರುಖ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ತನ್ನ ಅಭಿಮಾನಿಗಳಿಗೆ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಸ್ವೀಕರಿಸುತ್ತಾ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಜಿಮ್​ ಮೆಟ್ಟಿಲೇರಿದ Kichcha Sudeep

ಅವರ ಜನ್ಮದಿನದಂದು ಶಾರುಖ್ ಮನೆಯ ಹೊರಗೆ ಬಂದು ನಿಂತು ಶುಭ ಹಾರೈಕೆ ತಿಳಿಸಲು ಬರಲಿದ್ದೇವೆ ಎಂದು ಟ್ವಿಟ್ಟರ್‌ನಲ್ಲಿ ಹಲವಾರು ಅಭಿಮಾನಿಗಳು ತಿಳಿಸಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋವೊಂದಿಗೆ ಅವರ ಜನಪ್ರಿಯ ಡೈಲಾಗ್‌ಗಳನ್ನೂ ಟ್ವಿಟ್ಟರ್‌ನಲ್ಲಿ ಬರೆಯುತ್ತಿದ್ದಾರೆ.

ಸದ್ಯಕ್ಕೆ ಶಾರುಖ್ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿದ್ದು, ಇದನ್ನು ಅಟ್ಲೀ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ನಯನ ತಾರಾ, ಸಾನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಟ್ಲೀ ಈ ಹಿಂದೆ ದಳಪತಿ ವಿಜಯ್‌ ಅಭಿನಯದ ಹಲವಾರು ತಮಿಳು ಹಿಟ್ ಚಿತ್ರಗಳಾದ 'ಬಿಗಿಲ್', 'ಮೆರ್ಸಲ್', 'ಥೆರಿ' ಅನ್ನು ನಿರ್ದೇಶಿಸಿದ್ದಾರೆ. ಶಾರುಖ್ ಈ ಹಿಂದೆ ತಮ್ಮ ಬಹುನಿರೀಕ್ಷಿತ ಆದರೆ ಅಘೋಷಿತ 'ಪಠಾಣ್' ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೊಣೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ಇನ್ನೊಬ್ಬ ಬಾಲಿವುಡ್ ನಟ ಜಾನ್ ಅಬ್ರಹಾಂ ಎದುರಾಳಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಟ್ವಿಟರ್​ನಲ್ಲಿ ಸಕ್ರಿಯವಾಗಿದ್ದಾಗ Kangana Ranaut ವಿರುದ್ಧ ದಿನಕ್ಕೆ 200 ಎಫ್​ಐಆರ್​​ ದಾಖಲಾಗುತ್ತಿದ್ದವಂತೆ..!

ಶಾರುಖ್ ಖಾನ್ ಕೊನೆಯ ಬಾರಿಗೆ 2018ರಲ್ಲಿ ಬಿಡುಗಡೆಯಾದ 'ಝೀರೋ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ನಿರ್ದೇಶಕ ಆನಂದ್ ಎಲ್. ರೈ ಅವರೊಂದಿಗೆ ಜೊತೆಗೂಡಿ ಶಾರುಖ್ ಮಾಡಿದ ಮೊದಲ ಚಿತ್ರವಾಗಿತ್ತು. ಆದರೆ ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ನೆಲಕಚ್ಚಿತ್ತು. ಇದಾದ ನಂತರ ಶಾರುಖ್ ಖಾನ್​ ಮತ್ತಾವ ಚಿತ್ರವನ್ನೂ ಪ್ರಕಟಿಸಿರಲಿಲ್ಲ.
Published by:Anitha E
First published: