Cottonmouth Snake: ದೈತ್ಯ ಹೆಬಾವನ್ನೇ ನುಂಗಿದ ಕಾಟನ್‌ ಮೌತ್‌; ಟ್ರ್ಯಾಕರ್‌ ಮೂಲಕ ಬಯಲಾಯ್ತು ವಿಷಯ

ಫ್ಲೋರಿಡಾದ ಮೃಗಾಲಯದಲ್ಲಿ ದೈತ್ಯ ಹೆಬ್ಬಾವನ್ನು, ಅಪಾಯಕಾರಿ ಕಾಟನ್‌ ಮೌತ್‌ ಹಾವು ನುಂಗಿದ ಅಚ್ಚರಿ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಹೆಬ್ಬಾವಿಗೆ ಟ್ರ್ಯಾಕರ್‌ ಅಳವಡಿಸಿರುವುದರಿಂದ ಈ ವಿಚಾರ ಬೆಳಕಿಗೆ ಬಂದಿದೆ.

ಹೆಬ್ಬಾವನ್ನು ನುಂಗಿದ ಕಾಟನ್‌ಮೌತ್ ಹಾವು

ಹೆಬ್ಬಾವನ್ನು ನುಂಗಿದ ಕಾಟನ್‌ಮೌತ್ ಹಾವು

  • Share this:
ಫ್ಲೋರಿಡಾದ (Florida) ಮೃಗಾಲಯದಲ್ಲಿ ದೈತ್ಯ ಹೆಬ್ಬಾವನ್ನು, ಅಪಾಯಕಾರಿ ಕಾಟನ್‌ ಮೌತ್‌ ಹಾವು (Cotton Mouth Snake) ನುಂಗಿದ ಅಚ್ಚರಿ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಹೆಬ್ಬಾವಿಗೆ ಟ್ರ್ಯಾಕರ್‌ (Tracker) ಅಳವಡಿಸಿರುವುದರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಬರ್ಮೀಸ್ ಹೆಬ್ಬಾವನ್ನು ಮೃಗಾಲಯದಲ್ಲಿ ಪತ್ತೆ ಹಚ್ಚುವ ಸಲುವಾಗಿ ಅಧಿಕಾರಿಗಳು ಅದಕ್ಕೆ ಟ್ರ್ಯಾಕರ್‌ ಅನ್ನು ಅಳವಡಿಸಿದ್ದರು. ಹೀಗೆ ಹೆಬ್ಬಾವನ್ನು (Python) ಪತ್ತೆ ಹಚ್ಚಲು ಪ್ರಾರಂಭಿಸಿದಾಗ ಅದರ ಹೊಟ್ಟೆಯೊಳಗಿನ ಟ್ರ್ಯಾಕರ್‌ ಇನ್ನೊಂದು ಹಾವಿನ ಹೊಟ್ಟೆಯಲ್ಲಿರುವುದನ್ನು ಬಹಿರಂಗ ಪಡಿಸಿತ್ತು. ನಂತರ ಮೃಗಾಲಯದ ವೈದ್ಯಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿದಾಗ ಹೆಬ್ಬಾವು ಕಾಟನ್‌ ಮೌತ್‌ ಹಾವಿನ ಹೊಟ್ಟೆಯೊಳಗೆ ಇರುವುದು ತಿಳಿದು ಬಂತು.

39 ಇಂಚಿನ ಹೆಬ್ಬಾವನ್ನು ತಿಂದ 43 ಇಂಚು ಉದ್ದದ ಕಾಟನ್‌ ಮೌತ್‌
ಪ್ರಸ್ತುತ ಮಿಯಾಮಿ ಮೃಗಾಲಯದ ಸಿಬ್ಬಂದಿಗಳು ಕಾಟನ್‌ ಮೌತ್‌ ಹಾವಿನ ಹೊಟ್ಟೆಯಲ್ಲಿರುವ ಬರ್ಮೀಸ್ ಹೆಬ್ಬಾವಿನ ಒಳಗಿರುವ ಹಾವಿನ ಹೊಟ್ಟೆಯ ಒಳಭಾಗದ ಎಕ್ಸ್ ರೇ ಅನ್ನು ತೆಗೆದು ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ. ಈ ಕಾಟನ್‌ಮೌತ್ ಹಾವು 43 ಇಂಚು ಉದ್ದವಿದ್ದು, 39 ಇಂಚಿನ ಬರ್ಮಾ ಹೆಬ್ಬಾವನ್ನು ತಿಂದಿದೆ ಎಂದು ಮೃಗಾಲಯದ ಸಿಬ್ಬಂದಿ ತಿಳಿಸಿದ್ದಾರೆ.

ಮೃಗಾಲಯ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಚಿತ್ರದಲ್ಲಿ ನೀವೂ ಸಹ ಹೆಬ್ಬಾವಿನ ಬೆನ್ನುಮೂಳೆಯ ಮೇಲೆ ಅಳವಡಿಸಲಾದ ಟ್ರ್ಯಾಕಿಂಗ್ ಟ್ರಾನ್ಸ್‌ಮಿಟರ್ ಅನ್ನು ನೋಡಬಹುದಾಗಿದೆ. ಸಾಮಾನ್ಯವಾಗಿ ಕೆಲವು ಮೃಗಾಲಯದಲ್ಲಿ ಅಪರೂಪದ ಪ್ರಾಣಿಗಳ ಒಳಗೆ ಅಥವಾ ಹೊರಗೆ ಟ್ರ್ಯಾಕರ್ ಅನ್ನು ಅಳವಡಿಸಿರುತ್ತಾರೆ. ಈ ಟ್ರ್ಯಾಕರ್ ಮೃಗಾಲಯದ ಸಿಬ್ಬಂದಿಗೆ ಅವುಗಳ ಚಲನವಲನಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Viral News: ಹೆಣ್ಣು ಮಂಗಗಳು ಯಾರೊಂದಿಗೆ ಹೆಚ್ಚು ಕಾಲ ಬದುಕುತ್ತವೆ ಗೊತ್ತಾ? ಇಲ್ಲಿದೆ ಆಸಕ್ತಿಕರ ಸಂಗತಿ

ಅಂತೆಯೇ ಬರ್ಮೀಸ್ ಹೆಬ್ಬಾವಿಗೂ ಇಲ್ಲಿ ಟ್ರ್ಯಾಕರ್‌ ಅನ್ನು ಅಳವಡಿಸಲಾಗಿತ್ತು. ಹೆಬ್ಬಾವಿನ ಟ್ರ್ಯಾಕರ್‌ ಅನ್ನು ಪರಿಶೀಲಿಸುತ್ತಿರುವಾಗ ಈ ಅಚ್ಚರಿ ತಿಳಿದು ಬಂದಿದೆ. ಟ್ರ್ಯಾಕರ್‌ ನಿಂದಾಗಿ ಬರ್ಮೀಸ್‌ ಹಾವು ಮತ್ತೊಂದು ಹಾವಿನ ಹೊಟ್ಟೆಯೊಳಗಿದೆ ಎಂದು ಅಧಿಕಾರಿಗಳು ಕಂಡುಕೊಂಡು ಪರಿಶೀಲನೆಗೆ ಇಳಿದರು. ನಂತರ ಹೆಬ್ಬಾವಿನ ಸುತ್ತಮುತ್ತಾ ಕಾಟನ್‌ ಮೌತ್‌ ಹಾವಿನ ಬೆನ್ನು ಮೂಳೆ ಕಂಡು ಬಂದಿದೆ. ಸ್ಥಳೀಯ ಹಾವು ಕಾಟನ್‌ ಮೌತ್‌ ಅದರ ಬಾಲದಿಂದ ಮೊದಲು ಹೆಬ್ಬಾವನ್ನು ತಿಂದಿದೆ ಎಂದು ಎಕ್ಸ್-ರೇ ವರದಿಗಳು ತಿಳಿಸಿವೆ.

ಫೇಸ್‌ ಬುಕ್‌ ಫೋಸ್ಟ್‌ ನಲ್ಲಿ ಮಾಹಿತಿ ಹಂಚಿಕೊಂಡ ಮೃಗಾಲಯದ ಅಧಿಕಾರಿಗಳು
"ಎವರ್‌ಗ್ಲೇಡ್ಸ್‌ನಲ್ಲಿ ಆಕ್ರಮಣಕಾರಿ ಬರ್ಮೀಸ್ ಹೆಬ್ಬಾವಿನ ಮೊಟ್ಟೆಗಳನ್ನು ಬಾಬ್‌ಕ್ಯಾಟ್ ಹಾವು ಕದ್ದು ತಿನ್ನುತ್ತಿರುವುದು ಈ ಹಿಂದೆ ಹಲವು ಬಾರಿ ನಡೆದಿತ್ತು. ಈ ಬಗ್ಗೆ ನೀವು ಸಹ ಕೇಳಿರಬಹುದು. ಆದರೆ, ಇಂತಹ ಮತ್ತೊಂದು ಘಟನೆ ನಡೆದಿದ್ದು, ಹೆಬ್ಬಾವಿನ ಪ್ರಭೇಧಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೃಗಾಲಯದಲ್ಲಿ ಟ್ರ್ಯಾಕಿಂಗ್ ಟ್ರಾನ್ಸ್‌ಮಿಟರ್ ಅನ್ನು ಅಳವಡಿಸಿದ ಹೆಬ್ಬಾವನ್ನು ಕಾಟನ್‌ ಮೌತ್‌ ಹಾವು ನುಂಗಿದೆ. ಮಿಯಾಮಿ ಮೃಗಾಲಯದ ಶಸ್ತ್ರಚಿಕಿತ್ಸಕರು ಇತ್ತೀಚೆಗೆ ಇದನ್ನು ಕಂಡುಕೊಂಡಿದ್ದಾರೆ.



ಸ್ಥಳೀಯವಾಗಿ ಕಾಟನ್‌ಮೌತ್ ಅನ್ನು ವಾಟರ್ ಮೊಕಾಸಿನ್ ಎಂದೂ ಕರೆಯುತ್ತಾರೆ. ನೀವು ಈ ಎಕ್ಸ್-ರೇ ಅಥವಾ ರೇಡಿಯೋಗ್ರಾಫ್‌ನಲ್ಲಿ ಕಾಟನ್‌ಮೌತ್‌ನ ಒಳಗಿನ ಹೆಬ್ಬಾವಿನ ಬೆನ್ನುಮೂಳೆಯ ಮತ್ತು ಟ್ರಾನ್ಸ್‌ಮಿಟರ್ ಅನ್ನು ನೋಡಬಹುದು. ಅದನ್ನು ಝೂ ಮಿಯಾಮಿಯ ಪ್ರಾಣಿ ಆಸ್ಪತ್ರೆಯಲ್ಲಿ ತೆಗೆದುಕೊಳ್ಳಲಾಗಿದೆ" ಎಂದು ಮಿಯಾಮಿ ಮೃಗಾಲಯವು ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರವಾಗಿ ತಿಳಿಸಿದೆ. ಫೋಟೋಗಳನ್ನು ನೋಡಿದ ಫೇಸ್‌ಬುಕ್ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ.

ಆಕ್ರಮಣಕಾರಿ ಬರ್ಮೀಸ್ ಹೆಬ್ಬಾವು
ಬರ್ಮೀಸ್ ಹೆಬ್ಬಾವು ಫ್ಲೋರಿಡಾದಲ್ಲಿ ಆಕ್ರಮಣಕಾರಿ ಎಂದು ಪರಿಗಣಿಸಲಾದ ದೊಡ್ಡ ವಿಷಕಾರಿಯಲ್ಲದ ಜಾತಿಯಾಗಿದೆ. ಅವು ದಕ್ಷಿಣ ಫ್ಲೋರಿಡಾದ ಗ್ರೇಟರ್ ಎವರ್ಗ್ಲೇಡ್ಸ್ ಪರಿಸರ ವ್ಯವಸ್ಥೆಯಲ್ಲಿ ಕಂಡುಬರುತ್ತವೆ ಮತ್ತು ದಶಕಗಳಿಂದ ಆರ್ದ್ರಭೂಮಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತಿವೆ.



ಇದನ್ನೂ ಓದಿ:  Viral Video: ನೀರಿನಲ್ಲಿ ಸಂಚರಿಸುತ್ತಿದ್ದ ಮೊಸಳೆಗಾಗಿ ಎತ್ತರದಿಂದ ಜಿಗಿದು ಬೇಟೆಯಾಡಿದ ಚಿರತೆ!

ದಕ್ಷಿಣ ಫ್ಲೋರಿಡಾದ ಗ್ರೇಟರ್ ಎವರ್ಗ್ಲೇಡ್ಸ್ ವ್ಯವಸ್ಥೆಯಲ್ಲಿ ಬರ್ಮೀಸ್ ಹೆಬ್ಬಾವುಗಳ ಮೇಲೆ ಯುಎಸ್ ಮೀನು ಮತ್ತು ವನ್ಯಜೀವಿ ಮತ್ತು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ನಡೆಸಿದ ಒಟ್ಟಾರೆ ಆಕ್ರಮಣಕಾರಿ ಜಾತಿಗಳ ಅಧ್ಯಯನದ ಭಾಗವಾಗಿ ಇದನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಹಾವುಗಳನ್ನು ಟ್ರಾನ್ಸ್‌ಮಿಟರ್‌ಗಳೊಂದಿಗೆ ಅಳವಡಿಸುವ ಮೂಲಕ, ಸಂಶೋಧಕರು ಅವುಗಳ ಚಲನವಲನಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಿದೆ.
Published by:Ashwini Prabhu
First published: