ಈ ಒಂದು ಮೀನಿನ ಬೆಲೆ ಕೇಳಿದರೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ!

news18
Updated:August 7, 2018, 12:26 PM IST
ಈ ಒಂದು ಮೀನಿನ ಬೆಲೆ ಕೇಳಿದರೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ!
news18
Updated: August 7, 2018, 12:26 PM IST
ನ್ಯೂಸ್ 18 ಕನ್ನಡ

ಮುಂಬೈ (ಆ.7) : ಒಂದು ಮೀನಿಗೆ ಗರಿಷ್ಠ ಬೆಲೆ ಎಷ್ಟಿರಬಹುದು ಎಂದು ಕೇಳಿದರೆ, ಅಬ್ಬಬ್ಬಾ ಅಂದರೆ ಸಾವಿರ, ಹತ್ತು ಸಾವಿರ ಇರಬಹುದು ಎಂದು ಅಂದಾಜಿಸಬಹುದು. ಆದರೆ, ಮುಂಬೈನ ಬಡ ಮೀನುಗಾರ ಸಹೋದರರಿಗೆ ಸಿಕ್ಕ ಆ ಒಂದು ಮೀನಿನ ಬೆಲೆ ಬರೋಬ್ಬರಿ 5.5 ಲಕ್ಷ ರೂಪಾಯಿ! ಎಂದರೆ ನೀವು ನಂಬಲೇಬೇಕು.


ಹೌದು, ಮುಂಬೈನ ಮಹೇಶ್ ಮೆಹೆರ್ ಮತ್ತು ಭರತ್ ಎಂಬ ಸಹೋದರ ಮೀನುಗಾರರಿಗೆ ಭಾನುವಾರ ಪಾಲ್ವರ್ ಕಡಲತೀರದಲ್ಲಿ ಬಲೆಗೆ ‘ಗೋಲ್’ ಜಾತಿಗೆ ಸೇರಿದ ಮೀನು ಬಿದ್ದಿದೆ. ಚಿನ್ನ ವರ್ಣದ ಚರ್ಮ ಹೊಂದಿರುವ ಈ ಮೀನನ್ನು ‘ಚಿನ್ನದ ಹೃದಯದ ಮೀನು’ ಎಂದು ಸಹ ಕರೆಯುತ್ತಾರೆ. ಇವರಿಗೆ ಸಿಕ್ಕ ಮೀನು 30 ಕೆಜಿ ತೂಕವಿದ್ದು, ಪಾಲ್ವರ್ ಕಡಲತೀರದಲ್ಲಿ ಬಲೆಗೆ ಬಿದ್ದ ಮೀನುಗಳಲ್ಲಿ ಅತ್ಯಂತ ದುಬಾರಿ ಮೀನು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಮೇ ತಿಂಗಳಿನಲ್ಲಿ ಗಬ್ರು ಎಂಬ ಮೀನುಗಾರನಿಗೆ ಸಿಕ್ಕಿದ್ದ ಇದೇ ಜಾತಿಯ ಮೀನು 5.16 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು.


ಮಹೇಶ್ ಮತ್ತು ಭರತ್ ಅವರು ಶುಕ್ರವಾರ ತಮ್ಮ ಪುಟ್ಟ ದೋಣಿ ಲಕ್ಷ್ಮಿಯಲ್ಲಿ ಮೀನು ಹಿಡಿಯಲು ಕಡಲಿಗೆ ಇಳಿದಿದ್ದರು. ಭಾನುವಾರದವರೆಗೂ ಅವರಿಗೆ ಹೇಳಿಕೊಳ್ಳುವಂತಹ ಬೇಟೆ ಸಿಕ್ಕಿರಲಿಲಲ್ಲ, ಭಾನುವಾರ ಅವರ ಅದೃಷ್ಟವೇ ಬದಲಾಗಿತ್ತು. ಏಕೆಂದರೆ ಅವರ ಬಲೆಗೆ ‘ಚಿನ್ನದ’ ಮೀನೇ ಬಿದ್ದಿತ್ತು. ಮರುದಿನ ಅದನ್ನು ಮಾರಲು ಮುಂದಾದಾಗ ವ್ಯಾಪಾರಿಗಳು ಕೊಳ್ಳಲು ಮುಗಿಬಿದ್ದಿದ್ದರು. 20 ನಿಮಿಷಗಳ ಹರಾಜು ಪ್ರಕ್ರಿಯೆ ಬಳಿಕ ಬರೋಬ್ಬರಿ 5.5 ಲಕ್ಷ ರೂಪಾಯಿಗೆ ಆ ಒಂದು ಮೀನು ಬಿಕರಿಯಾಯಿತು.ಅತ್ಯಂತ ರುಚಿಕರವಾದ ಈ ಮೀನು ಆಹಾರಕ್ಕಿಂತ ಹೆಚ್ಚಾಗಿ ವೈದ್ಯಕೀಯ ಉದ್ದೇಶಕ್ಕೆ ಬಳಕೆಯಾಗುತ್ತವೆ. ಚಿನ್ನದ ಚರ್ಮವನ್ನು ಹೊಂದಿರುವ ಈ ಮೀನಿನ ಪ್ರತಿ ಅಂಗಾಂಗಗಳ ಬೆಲೆ ಬಲು ದುಬಾರಿಯಾಗಿವೆ. ಈ ಜಾತಿಯಲ್ಲಿನ ಚಿಕ್ಕ ಚಿಕ್ಕ ಮೀನುಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 1000 ರೂಪಾಯಿಯಲ್ಲಿ ಮಾರಾಟವಾದರೆ, ಅತ್ಯುತ್ಕೃಷ್ಟ ಮೀನುಗಳು ಸಿಂಗಾಪುರ, ಮಲೇಷಿಯಾ, ಇಂಡೋನೇಷ್ಯಾ, ಹಾಂಕಾಂಗ್ ಹಾಗೂ ಜಪಾನ್ಗೆ ರಫ್ತಾಗುತ್ತವೆ.

First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ