corpse flower : ಯುರೋಪ್‌ನಲ್ಲಿ ಅರಳಿದ ಕೆಟ್ಟ ಶವದ ದುರ್ವಾಸನೆ ಬೀರುವ ಹೂವು

ಸಸ್ಯಶಾಸ್ತ್ರಜ್ಞರು ಈ ಹೂವನ್ನು ಅಮೊರ್ಫೋಫಾಲಸ್ ಡೆಕಸ್ ಎಂದು ಕರೆಯುತ್ತಾರೆ. ಇದು ಅರಳಿದಾಗ ಶಿಶ್ನದ ಆಕಾರವನ್ನು ಹೋಲುವುದರಿಂದ ದನ್ನು ಪೆನ್ನೀಸ್ ಪ್ಲಾಂಟ್ ಎಂಬ ಹೆಸರಿನಿಂದ ಕೂಡ ಕರೆಯಲಾಗುತ್ತದೆ

ಹೂವು

ಹೂವು

  • Share this:
ಹೂಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಗುಲಾಬಿಯಿಂದ ಹಿಡಿದು ಮಲ್ಲಿಗೆಯವರೆಗೆ ಆ ಹೂವುಗಳ ಸುವಾಸನೆಗೆ ಮನಸೋಲುವವರಿದ್ದಾರೆ ಹೂವುಗಳ ಸುವಾಸನೆಯೇ ಪ್ರತಿಯೊಬ್ಬರ ಚಿತ್ತವನ್ನು ಮುದಗೊಳಿಸುತ್ತದೆ. ಆದರೆ ಸುವಾಸನೆ ಬೀರುವ ಹೂವುಗಳ ಸಾಲಿನಲ್ಲಿ ಕೆಟ್ಟ ದುರ್ವಾಸನೆ ಬೀರುವ ಹೂವು ಕೂಡ ಸ್ಥಾನ ಪಡೆದುಕೊಂಡಿದೆ ಎಂದರೆ ನೀವು ನಂಬಲೇಬೇಕು. ಹೌದು. ಈ ಹೂವು ಹೆಸರುವಾಸಿಯಾಗಿರುವುದೇ ಅದರ ದುರ್ವಾಸನೆಗೆ ಆಗಿದೆ. ಶವದ ಹೂವು (Corpse Flower) ಎಂಬ ಹೆಸರನ್ನು ಈ ಹೂವು ಪಡೆದುಕೊಂಡಿದ್ದು ಇದು ಕೊಳೆತ ಮೃತ ಶರೀರದ ವಾಸನೆಯನ್ನು ಹೊರಸೂಸುತ್ತದೆ. ಇದೆಲ್ಲಾ ಅಂಶಗಳ ಹೊರತಾಗಿಯೂ ಲಕ್ಷಾಂತರ ಜನರು ಈ ಹೂವಿನ ಅಂದಕ್ಕೆ ಮನಸೋಲುತ್ತಾರೆ ಎಂದರೆ ನೀವು ನಂಬಲೇಬೇಕು.

ಶಿಶ್ನದ ಆಕಾರದ ಸಸ್ಯ

ಈ ಹೂವಿಗೆ ಪೆನ್ನೀಸ್ ಪ್ಲಾಂಟ್ (ಶಿಶ್ನದ ಆಕಾರದ ಸಸ್ಯ) ಎಂಬ ಹೆಸರು ಕೂಡ ಇದೆ. ಇದರ ಆಕಾರದಿಂದ ಈ ಹೂವಿಗೆ ಈ ಹೆಸರು ಬಂದಿದೆ. ಅರಳಿದ ಹೂವು ಮನುಷ್ಯನ ಖಾಸಗಿ ಅಂಗವನ್ನು ಹೋಲುತ್ತದೆ. ಹಾಗಾಗಿ ಈ ಹೂವಿಗೆ ಈ ಹೆಸರು ಬಂದಿದೆ. ಬಹು ವಿರಳವಾಗಿ ಅರಳುವ ಹೂವು ಇದಾಗಿದ್ದು ಇತ್ತೀಚೆಗೆ ಇದು ಯುರೋಪ್‌ನಲ್ಲಿ ಅರಳಿದೆ. ಇತಿಹಾಸದಲ್ಲಿ ಮೂರನೇ ಬಾರಿಗೆ ಈ ಹೂವು ಅರಳಿದೆ ಎಂದು ವರದಿಯಾಗಿದೆ. ಸಸ್ಯಶಾಸ್ತ್ರಜ್ಞರು ಈ ಹೂವನ್ನು ಅಮೊರ್ಫೋಫಾಲಸ್ ಡೆಕಸ್ ಎಂದು ಕರೆಯುತ್ತಾರೆ. ಇದು ಅರಳಿದಾಗ ಶಿಶ್ನದ ಆಕಾರವನ್ನು ಹೋಲುವುದರಿಂದ ದನ್ನು ಪೆನ್ನೀಸ್ ಪ್ಲಾಂಟ್ ಎಂಬ ಹೆಸರಿನಿಂದ ಕೂಡ ಕರೆಯಲಾಗುತ್ತದೆ ಈ ಹೂವಿನ ವಾಸನೆ ಕೊಳೆತ ಶವದ ದುರ್ವಾಸನೆಗೆ ಸಮನಾಗಿರುತ್ತದೆ. ಇದು ದುರ್ವಾಸನೆ ಹೇಗಿದೆ ಎಂದರೆ ಸ್ಮಶಾನದಲ್ಲಿ ಕೊಳೆತ ಶವಗಳ ಬಳಿ ನಾವು ನಿಂತಿದ್ದೇವೆ ಎಂಬ ಅನುಭೂತಿಯನ್ನು ಈ ಹೂವು ನೀಡುತ್ತದೆಯಂತೆ.

ಇದನ್ನು ಓದಿ: 720ಕ್ಕೆ 720 ಅಂಕ ಪಡೆದ ಮೃಣಾಲ್ ಪ್ರತಿದಿನ ಅಭ್ಯಸಿಸಿದ್ದು ಕೇವಲ 4 ಗಂಟೆ..!

ದುರ್ವಾಸನೆ ಗಿಡ

ಇದರ ದುರ್ವಾಸನೆಯಿಂದಾಗಿ ನೊಣಗಳು ಮತ್ತು ಇತರ ಕೀಟಗಳು ಈ ಹೂವನ್ನು ಮುತ್ತಿಕೊಳ್ಳುತ್ತವೆ. ಇದು ಅತಿದೊಡ್ಡ ಗಾತ್ರದ ಹೂವಾಗಿದ್ದು ಶಿಶ್ನದ ಆಕಾರವು ಆರು ಅಡಿ ಎತ್ತರವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಈ ಹೂವಿಗೆ ಬೆಚ್ಚಗಿನ ಹಾಗೂ ಆರ್ದ್ರ ಪರಿಸರದ ಅಗತ್ಯವಿದೆ ಎಂಬುದು ತಿಳಿದುಬಂದಿದೆ. ಈ ಸಸ್ಯವು ನೈಸರ್ಗಿಕ ಪರಿಸರದಲ್ಲಿ ಅರಳಲು ಏಳು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಇದಕ್ಕೆ ಪ್ರಶಸ್ತವಾದ ಸ್ಥಳ ಎಂದರೆ ಇಂಡೋನೇಷ್ಯಾದ ಜಾವಾ ದ್ವೀಪ ಹಾಗೂ ಯುರೋಪ್‌ನಂತಹ ಸ್ಥಳಗಳಲ್ಲಿ ಅರಳಿದಾಗ ಇದನ್ನು ಅಪರೂಪದ ಘಟನೆ ಎಂದು ವ್ಯಾಖ್ಯಾನಿಸಲಾಗುತ್ತದೆ.

ಇದನ್ನು ಓದಿ: ಸಬ್​ಮೆರಿನ್​ ರಹಸ್ಯ ಮಾಹಿತಿ ರವಾನೆ: ಇಬ್ಬರು ನೌಕ ಕಮಾಂಡರ್​​ ಸೇರಿ 6ಜನರ ವಿರುದ್ಧ ಚಾರ್ಜ್​ಶೀಟ್​​

ಹೂವಿನ ಅಂದವನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಜನರು

ಈ ಹೂವು 1997 ರಲ್ಲಿ ಹೋರ್ಟಸ್ ಬೊಟಾನಿಕಸ್‌ನಲ್ಲಿ ಕೊನೆಯ ಬಾರಿಗೆ ಅರಳಿತು. ನೆದರ್‌ಲ್ಯಾಂಡ್ಸ್‌ನ ಲೈಡೆನ್ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರೀಯ ಉದ್ಯಾನವನವು ಶಿಶ್ನದ ಆಕಾರದ ಸಸ್ಯದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಬಿಡುಗಡೆ ಮಾಡಿದೆ. ಹೂವು ಸಂಪೂರ್ಣವಾಗಿ ಅರಳಿದೆ ಮತ್ತು ವಾಸನೆಯನ್ನು ಬೀರುತ್ತಿದೆ ಎಂದು ವಿಶ್ವವಿದ್ಯಾಲಯ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ಈ ಹೂವಿನ ಅಂದವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬುದಾಗಿ ಸಂಸ್ಥೆ ಬರೆದುಕೊಂಡಿದೆ.
First published: