ಮುಖ ಮುಚ್ಕೊಳಿ, ಲಸಿಕೆ ಚುಚ್ಕೊಳಿ.. ಕೊರೊನಾ ಜಾಗೃತಿಯ ಱಪ್ ಸಾಂಗ್​ಗೆ ಕೇಳುಗರು ಫಿದಾ

ಹಾಡಿನ ಚಿತ್ರ

ಹಾಡಿನ ಚಿತ್ರ

ನಟ ಸಾಯಿಕುಮಾರ್, ರ‍್ಯಾಪರ್ ಅಲೋಕ್, ಅಶ್ವಿಥಿ ಶೆಟ್ಟಿ, ಅದ್ವಿತಿ ಶೆಟ್ಟಿ, ಡಾ.ವಿವೇಕ್ ಆನಂದ್ ಪಡೇಗಲ್ ಸೇರಿದಂತೆ ಹಲವರು ಮುಖ ಮುಚ್ಕೊಳಿ, ಲಸಿಕೆ ಚುಚ್ಕೊಳಿ ಎಂಬ ಹಾಡಿನ ಮೂಲಕ ಸಂದೇಶ ನೀಡಲಾಗಿದೆ.

  • Share this:

ಬೆಂಗಳೂರು: ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಮುಖ ಮುಚ್ಕೊಳಿ ಲಸಿಕೆ ಚುಚ್ಕೊಳಿ ಎಂಬ ರ‍್ಯಾಪ್ ಸಾಂಗ್ ಎಲ್ಲೆಡೆ ವೈರಲ್ ಆಗುತ್ತಿದೆ. ಪಲ್ಮೋನೋಲಜಿಸ್ಟ್ ಅಸೋಸಿಯೇಷನಲ್ಲಿ ಮೂಡಿ ಬಂದಿರುವ ಈ ಹಾಡು, ಮುಖ ಮುಚ್ಕೊಂಡು ಬಾ, ಮುಖ ಮುಚ್ಕೊಂಡ್ ಹೋಗಲೇ ಅವನಜ್ಜಿ ಆ ಕೊರೋನ ಹೋಗಿಲ್ಲ, ನಮಗೆ ಬುದ್ದಿನೂ ಬಂದಿಲ್ಲ ಎಂಬ ಸಾಲಿನಿಂದ ಪ್ರಾರಂಭವಾಗುತ್ತದೆ. ಈ ರ‍್ಯಾಪ್ ಸಾಂಗ್ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಸಾಲುಗಳನ್ನು ಹೊಂದಿದೆ.


ಒಟ್ಟು 1.40 ನಿಮಿಷವಿರುವ ಈ ಹಾಡಿನಲ್ಲಿ ನಟ ಸಾಯಿಕುಮಾರ್, ರ‍್ಯಾಪರ್ ಅಲೋಕ್, ಅಶ್ವಿಥಿ ಶೆಟ್ಟಿ, ಅದ್ವಿತಿ ಶೆಟ್ಟಿ, ಡಾ.ವಿವೇಕ್ ಆನಂದ್ ಪಡೇಗಲ್ ಸೇರಿದಂತೆ ಹಲವರು ಮುಖ ಮುಚ್ಕೊಳಿ, ಲಸಿಕೆ ಚುಚ್ಕೊಳಿ ಎಂಬ ಹಾಡಿನ ಮೂಲಕ ಸಂದೇಶ ನೀಡಲಾಗಿದೆ. ರಾಜೇಶ್ ರಾಮಸ್ವಾಮಿ ವರ ಸಾಹಿತ್ಯ ಹಾಗೂ ದೀಪಕ್ ಅಲೆಕ್ಸಾಂಡರ್ ಅವರ ಸಂಗೀತ ಈ ಹಾಡಿಗಿದೆ.


ಫೋರ್ಟಿಸ್ ಆಸ್ಪತ್ರೆಯ ಪಲ್ಮನರಿ ಮೆಡಿಸನ್ ವಿಭಾಗದ ಡಾ. ವಿವೇಶ್ ಆನಂದ್ ಮಾತನಾಡಿ, ಈ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಅನ್‌ಲಾಕ್ ಮಾಡಿದ ಕೂಡಲೇ ಜನ ಗುಂಪು ಗುಂಪಾಗಿ ಓಡಾಡುವ ಪ್ರವೃತ್ತಿ ತಪ್ಪಿಸಬೇಕೆಂದು ಈ ರೀತಿಯ ಸಂದೇಶವನ್ನು ಹಾಡಿನ ಮೂಲಕ ನಗರದ ಜನರಿಗೆ ಮುಟ್ಟಿಸುವ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ.


ಕೊರೊನಾ ಮೊದಲ ಅಲೆ ತಗ್ಗಿದ ಬಳಿಕ ಜನ ಮೈಮರೆತು ಓಡಾಡಿದ್ದರು. ಈಗ 2ನೇ ಅಲೆ ಇಳಿಮುಖವಾಗಿ ರಾಜ್ಯ ಅನ್​ಲಾಕ್​​ ಆಗಿದೆ. ಕೋವಿಡ್​ ನಿಯಮಗಳನ್ನು ಮರೆತು ನಡೆದುಕೊಂಡರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಟ್ರೆಂಡಿಯಾಗಿ ಱಪ್​ ಸಾಂಗ್​ ಮೂಲಕ ಜಾಗೃತಿ ಮೂಡಿಸಲಾಗಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

First published: