ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಕಳ್ಳತನ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂತಹದೊಂದು ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು ತಮಿಳುನಾಡಿನ ಪುದುಕೋಟೈನ ಪೊಲೀಸರು. ಸಾರ್ವಜನಿಕರ ಆಸ್ತಿಯನ್ನು ಕಳ್ಳತನ ಮಾಡಿ ಇದೀಗ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಪುದುಕೋಟೈನ ಒಂದಷ್ಟು ಸ್ವಯಂ ಸೇವಕ ಯುವಕರ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಸಣ್ಣದೊಂದು ಟ್ಯಾಂಕ್ ಹಾಗೂ ಲೋಟಗಳನ್ನು ಇರಿಸಲಾಗಿತ್ತು. ಆದರೆ ಪ್ರತಿದಿನ ಬೆಳಿಗ್ಗೆ ನೋಡುತ್ತಿದ್ದರೆ ನೀರು ಕುಡಿಯಲು ಇಲ್ಲಿರಿಸಲಾಗಿದ್ದ ಗ್ಲಾಸ್ಗಳು ಮಾಯವಾಗಿರುತ್ತಿತ್ತು. ಕೇವಲ ಲೋಟವನ್ನು ಕದಿಯಲು ಯಾರು ಬರುತ್ತಿದ್ದಾರೆಂಬ ಕುತೂಹಲ ಒಂದೆಡೆಯಾದರೆ, ಸಾರ್ವಜನಿಕ ಆಸ್ತಿಯನ್ನು ಕದಿಯುತ್ತಿರುವ ಕಳ್ಳರನ್ನು ಪತ್ತೆ ಹಚ್ಚಲು ಅಲ್ಲಿನ ಯುವಕರು ಉಪಾಯವೊಂದನ್ನು ಮಾಡಿದರು.
ಅದರಂತೆ ನೀರಿನ ಟ್ಯಾಂಕ್ ಬಳಿ ಸಿಸಿ ಟಿವಿ ಕ್ಯಾಮೆರಾ ಇರಿಸಿದ ಯುವಕರು, ಕಳ್ಳರಿಗಾಗಿ ಕಾದು ಕುಳಿತರು. ಮರುದಿನ ಬೆಳಿಗ್ಗೆ ಸಿಸಿ ಕ್ಯಾಮೆರಾ ವಿಡಿಯೋಗಳನ್ನು ಪರಿಶೀಲಿಸಿದಾಗ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಪ್ರತಿನಿತ್ಯ ಗ್ಲಾಸ್ಗಳನ್ನು ಹೊತ್ತೊಯ್ಯುತ್ತಿದ್ದದು ಪೊಲೀಸರಾಗಿತ್ತು. ರಾತ್ರಿಯ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಗಳು ದಿನಂಪ್ರತಿ ಲೋಟಗಳನ್ನು ಕದ್ದುಕೊಂಡು ಹೋಗುತ್ತಿದ್ದರು. ಈ ಸಿಸಿ ಟಿವಿ ದೃಶ್ಯಗಳು ಇದೀಗ ವೈರಲ್ ಆಗಿದ್ದು, ರಕ್ಷಣೆ ನೀಡಬೇಕಾದವರೇ ಭಕ್ಷಕರಾದರೇ ಹೇಗೆ ಎಂಬ ಪ್ರಶ್ನೆಯೊಂದು ಮತ್ತೊಮ್ಮೆ ಮೂಡಿದೆ.
ಇದನ್ನೂ ಓದಿ: ನಟಿಯನ್ನೇ ಮದುವೆಯಾಗಲು ಮುಂದಾದ ನಟಿ? ಅಭಿಮಾನಿಗಳಿಗೆ ಶಾಕ್ ನೀಡಿದ ಸೌತ್ ಸುಂದರಿಯರುಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ