ಕಳ್ಳತನ ಆದ್ರೂ ತಲೆಕಡೆಸಿಕೊಳ್ಳದೆ 'Pokémon Go' ಆಟದಲ್ಲಿ ಮುಳುಗಿದ ಪೊಲೀಸರು

ಆಗ್ಮೆಂಟೆಡ್ ರಿಯಾಲಿಟಿ (AR) ಆಟವಾಗಿದ್ದು, ಬಿಡುಗಡೆಯಾದ ಪ್ರಾರಂಭದಿಂದಲೂ ವೈರಲ್ ಆಗಿದ್ದ ಪೋಕಿಮನ್‌ ಗೋ ಗೇಮ್, ಜನಪ್ರಿಯತೆ ಗಳಿಸಿದಷ್ಟೇ ವಿವಾದಕ್ಕೂ ಒಳಗಾಗಿತ್ತು

ಪೋಕಿಮನ್‌ ಗೋ,

ಪೋಕಿಮನ್‌ ಗೋ,

  • Share this:
ಪೋಕಿಮನ್‌ ಗೋ (Pokémon Go) ಆಟ ಆಡುತ್ತ ಕರ್ತವ್ಯವನ್ನು ನಿರ್ಲಕ್ಷಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳು ವಜಾಗೊಂಡಿರುವ ಪ್ರಕರಣ ಅಮೆರಿಕದ (America) ಲಾಸ್ ಏಂಜಲೀಸ್‌ನಲ್ಲಿ ಬೆಳಕಿಗೆ ಬಂದಿದೆ. ಲಾಸ್ ಏಂಜಲೀಸ್‌ನಲ್ಲಿ ಲೊಜಾನೊ ಮತ್ತು ಮಿಚೆಲ್ ಎಂಬ ಇಬ್ಬರು ಪೊಲೀಸ್ ಅಧಿಕಾರಿಗಳು ಪೋಕಿಮನ್‌ ಗೋ ಆಟದಲ್ಲಿ ತಲ್ಲೀನರಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಬಾಲ್ಡ್ವಿನ್ ಹಿಲ್ಸ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ (Robbery) ನಡೆದಿರುವುದಾಗಿ ಕರೆ ಬಂದಿತ್ತು. ಆದರೆ ಇಬ್ಬರು ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ವಿಚಾರಿಸುವ ಬದಲು ಪೋಕಿಮನ್‌ ಗೋ ಆಟ ಆಡುತ್ತ ಕಾಲ ಕಳೆದಿದ್ದರು. ಈ ಪ್ರಕರಣ 2017ರಲ್ಲಿ ನಡೆದಿದ್ದು ವಿಚಾರಣೆ ನಡೆಸಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕ್ಯಾಲಿಫೋರ್ನಿಯಾ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ದರೋಡೆಯ ಬಗ್ಗೆ ಕರೆಯನ್ನು ನಿರ್ಲಕ್ಷಿಸಿದ ಇಬ್ಬರು ಲಾಸ್ ಏಂಜಲೀಸ್ ಪೊಲೀಸ್ ಅಧಿಕಾರಿಗಳ ವಜಾವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಘಟನೆ ಬಗ್ಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆ ದಿನ LAPD ಸಾರ್ಜೆಂಟ್ ಜೋಸ್ ಗೊಮೆಜ್‌ ಪ್ರಶ್ನೆ ಮಾಡಿದಾಗ ನಮಗೆ ಆ ಕರೆ ಬಗ್ಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದರು. ನಂತರ ಅಧಿಕಾರಿಗಳು ಮಾಡಿದ ತಪ್ಪು ಬಯಲಿಗೆ ಬಂದಿದ್ದೆ ಒಂದು ಇಂಟರೆಸ್ಟಿಂಗ್ ಕಥೆ.

ಪೊಲೀಸ್ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದು ಹೇಗೆ ?
ಪೊಲೀಸ್ ಅಧಿಕಾರಿಗಳು ನೀಡಿದ ಪ್ರತಿಕ್ರಿಯೆ ಅನುಮಾನಾಸ್ಪದವಾಗಿತ್ತು. ಹೀಗಾಗಿ ಹೆಚ್ಚಿನ ವಿಚಾರಣೆಯನ್ನು ಜೋಸ್ ಗೊಮೆಜ್ ಕೈಗೆತ್ತಿಕೊಂಡಿದ್ದರು. ಮೇಲಿನ ವಿಚಾರಣೆಯಲ್ಲಿ ಪೊಲೀಸರ ಬಗ್ಗೆ ಸಾಕ್ಷಿ ಹೇಳಿದ್ದೇ ಪೊಲೀಸ್ ಜೀಪ್. ಹೌದು ಪೊಲೀಸ್ ಜೀಪ್‌ನಲ್ಲಿ ಇನ್-ಕಾರ್ ರೆಕಾರ್ಡಿಂಗ್ ಸಿಸ್ಟಮ್ ಇತ್ತು. ಇದಕ್ಕೆ ಡ್ಯಾಶ್‌ಕ್ಯಾಮ್ ಎಂದು ಸಹ ಕರೆಯಲಾಗುತ್ತದೆ. ಇಬ್ಬರು ಅಧಿಕಾರಿಗಳು ದರೋಡೆ ಸಂಬಂಧ ಕರೆಯನ್ನು ಸ್ವೀಕರಿಸಿ ಮಾತನಾಡಿರುವ ಆಡಿಯೋ ರೆಕಾರ್ಡ್ ಆಗಿತ್ತು. ಈ ಆಡಿಯೋ ರೆಕಾರ್ಡ್ ಪೊಲೀಸರ ವಿರುದ್ಧ ಸಾಕ್ಷಿ ಒದಗಿಸಿ ಅಧಿಕಾರಿಗಳು ಮಾಡಿದ ತಪ್ಪನ್ನು ಬಯಲಿಗೆ ತಂದಿತ್ತು.

ಇದನ್ನು ಓದಿ: ಇಂಟರ್ನೆಟ್ ಸೆನ್ಸೇಷನ್ ಆದ ಪುಟ್ಟ ವರದಿಗಾರ್ತಿ; ಈಕೆ ಮಾತಿಗೆ ಮನಸೋಲದವರಿಲ್ಲ

ಆಟದ ಬಗ್ಗೆಯೇ ಚರ್ಚೆ ನಡೆಸಿದ್ದ ಅಧಿಕಾರಿಗಳು

ಲೊಜಾನೊ ಮತ್ತು ಮಿಚೆಲ್ ನಡುವಿನ ಸಂಭಾಷಣೆಯು ಇನ್-ಕಾರ್ ರೆಕಾರ್ಡಿಂಗ್‌ನಲ್ಲಿ ರೆಕಾರ್ಡ್ ಆಗಿತ್ತು. ಕರೆಯನ್ನು ಸ್ವೀಕರಿಸಿ ಸ್ಥಳಕ್ಕೆ ಹೋಗದಿರಲು ಇಬ್ಬರು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದರು. ಅಲ್ಲದೆ ಮುಂದಿನ 20 ನಿಮಿಷವೂ ಇಬ್ಬರು ಪೋಕಿಮನ್‌ ಗೋ ಗೇಮ್ ಬಗ್ಗೆಯೇ ಮಾತನಾಡಿರುವುದು ಕೂಡ ರೆಕಾರ್ಡ್ ಆಗಿತ್ತು ಎಂದು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇದನ್ನು ಓದಿ: IPhoneನಲ್ಲಿ ಸುಂದರ Photo ತೆಗೆಯಲು 3 ಸುಲಭ ಟ್ರಿಕ್ಸ್ ..!

ನ್ಯಾಯಾಲಯ ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕರೆ ನಿರ್ಲಕ್ಷಿಸಿದ್ದಕ್ಕೆ ಮಿಚೆಲ್ ಮತ್ತು ಲೊಜಾನೊ ಇಬ್ಬರನ್ನು ವಜಾಗೊಳಿಸಲಾಗಿದೆ. ಈ ಘಟನೆ 2017ರಲ್ಲಿ ನಡೆದಿದ್ದು ಡ್ಯೂಟಿ ಸಮಯದಲ್ಲಿ ಕರ್ತವ್ಯ ಮರೆತ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಿ ನ್ಯಾಯಾಲಯ ಅವರಿಗೆ ತಕ್ಕ ಶಾಸ್ತಿ ಮಾಡಿದೆ.

ಏನಿದು ಪೋಕಿಮನ್‌ ಗೋ ಗೇಮ್ ?
ಆಗ್ಮೆಂಟೆಡ್ ರಿಯಾಲಿಟಿ (AR) ಆಟವಾಗಿದ್ದು, ಬಿಡುಗಡೆಯಾದ ಪ್ರಾರಂಭದಿಂದಲೂ ವೈರಲ್ ಆಗಿದ್ದ ಪೋಕಿಮನ್‌ ಗೋ ಗೇಮ್, ಜನಪ್ರಿಯತೆ ಗಳಿಸಿದಷ್ಟೇ ವಿವಾದಕ್ಕೂ ಒಳಗಾಗಿತ್ತು. ಹಲವು ಬಾರಿ ಪೋಕಿಮನ್‌ ಗೋ ಗೇಮ್‌ನಿಂದ ಜೀವಕ್ಕೆ ಅಪಾಯ ಎದುರಾಗುವಂತಹ ಘಟನೆಗಳ ಉದಾಹರಣೆ ಕೂಡ ಇದೆ.

ಪೋಕಿಮನ್‌ ಗೋ ಗೇಮ್ 2016ರಲ್ಲಿ ಬಿಡುಗಡೆಯಾಗಿದ್ದು ವಿಶ್ವಾದ್ಯಂತ ಜನಪ್ರಿಯವಾಗಿದೆ. ಪೋಕಿಮನ್‌ ಗೋ ಗೇಮ್ ಅನ್ನು ಈವರೆಗೆ 500 ಮಿಲಿಯನ್‌ಗೂ ಹೆಚ್ಚು ಬಾರಿ ಡೌನ್ ಲೋಡ್ ಮಾಡಲಾಗಿದೆ. ಇದು ಒಂದು ವ್ಯಸನಕಾರಿ ಆಟದ ಮೊಬೈಲ್ ಅಪ್ಲಿಕೇಶನ್ ಆಗಿದೆ.
Published by:Seema R
First published: