• Home
  • »
  • News
  • »
  • trend
  • »
  • Viral Video: ನೀವೂ ಬರ್ತ್​ಡೇಗೆ ರಸ್ತೆಯಲ್ಲಿ ಕೇಕ್​ ಕಟ್​ ಮಾಡ್ತೀರಾ? ಈ ಹುಡುಗರ ಪಾಡು ನೋಡಿ, ಲೈಫಲ್ಲಿ ಮತ್ತೆ ಹಾಗೇ ಮಾಡಲ್ಲ!

Viral Video: ನೀವೂ ಬರ್ತ್​ಡೇಗೆ ರಸ್ತೆಯಲ್ಲಿ ಕೇಕ್​ ಕಟ್​ ಮಾಡ್ತೀರಾ? ಈ ಹುಡುಗರ ಪಾಡು ನೋಡಿ, ಲೈಫಲ್ಲಿ ಮತ್ತೆ ಹಾಗೇ ಮಾಡಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹುಡುಗರು ಕೇಕ್‌ ಕಟ್‌ ಮಾಡಿ ಅದನ್ನು ರಸ್ತೆಯಲ್ಲಿ ರಾಡಿ ಮಾಡಿ ಅವಾಂತರ ಎಬ್ಬಿಸಿದ್ದಾರೆ. ಇದನ್ನು ನೋಡಿದ ಪೊಲೀಸರು ಸುಮ್ಮನ್ನೆ ಇರಲಿಲ್ಲ

  • Trending Desk
  • Last Updated :
  • Lucknow, India
  • Share this:

ಜನ್ಮದಿನ (Birthday) ನಿಜಕ್ಕೂ ವಿಶೇಷವೇ. ಈಗಂತೂ ಯುವಕರೂ ತಮ್ಮ ಬರ್ತ್‌ಡೇಯನ್ನು ವಿಭಿನ್ನವಾಗಿ ಆಚರಿಸಬೇಕು ಅಂತಾ ಏನೇನೋ ಪ್ಲ್ಯಾನ್‌ (Birthday Plan) ಮಾಡಿಕೊಂಡಿರುತ್ತಾರೆ. ಈಗ ಮತ್ತೊಂದು ಟ್ರೆಂಡ್‌ (Trend) ಕೂಡ ಶುರುವಾಗಿದೆ, ಅದೇನಪ್ಪಾ ಅಂದರೆ ಮಧ್ಯರಾತ್ರಿ ರೋಡ್‌ (Midnight Road) ನಲ್ಲಿ ಗೆಳೆಯರ ಜೊತೆ ಕೇಕ್‌ ಕಟ್‌ (Cake Cutting) ಮಾಡಿ ಸಂಭ್ರಮಿಸೋದು. ಕೆಲವರು ಸುಮ್ಮನೇ ಕೇಕ್‌ ಕಟ್‌ ಮಾಡಿ ಹೋಗದೇ ಇನ್ನೇನೋ ಅವಾಂತರವನ್ನು ಸಹ ರೋಡ್‌ನಲ್ಲಿಯೇ ಸೃಷ್ಟಿಸಿ ಬಿಡುತ್ತಾರೆ. ಹೀಗೆ ಇದೇ ಟ್ರೆಂಡ್‌ ಫಾಲೋ ಮಾಡಿದ್ದ ಕೆಲ ಹುಡುಗರು ತಮ್ಮ ಗೆಳೆಯನ ಹುಟ್ಟಿದ ದಿನವನ್ನು ರಾತ್ರಿಯ ವೇಳೆ ರಸ್ತೆಯಲ್ಲಿ ಕೇಕ್‌ ಕಟ್‌ ಮಾಡಿ ಆಚರಿಸಿದ್ದಾರೆ.


ಇದು ಇಷ್ಟಕ್ಕೆ ಸೀಮಿತವಾಗಿದ್ದರೆ, ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಹುಡುಗರು ಕೇಕ್‌ ಕಟ್‌ ಮಾಡಿ ಅದನ್ನು ರಸ್ತೆಯಲ್ಲಿ ರಾಡಿ ಮಾಡಿ ಅವಾಂತರ ಎಬ್ಬಿಸಿದ್ದಾರೆ. ಇದನ್ನು ನೋಡಿದ ಪೊಲೀಸರು ಸುಮ್ಮನ್ನೆ ಇರಲಿಲ್ಲ. ಮಾಡಿದುಣ್ಣೋ ಮಾರಾಯ ಅಂತಾ ತಕ್ಕ ಪಾಠ ಕಲಿಸಿದ್ದಾರೆ ನೋಡಿ.


ನಡು ರಸ್ತೆಯಲ್ಲಿಯೇ ಕೇಕ್‌ ಕಟ್‌ ಮಾಡಿ ಅವಾಂತರ


ಲಕ್ನೋದ ಯುವಕನೊಬ್ಬನ ಸ್ನೇಹಿತರು ರಾತ್ರಿವೇಳೆಯಲ್ಲಿ ಜೋರಾಗಿ ತಮ್ಮ ಗೆಳೆಯನ ಜನ್ಮದಿನವನ್ನು ಆಚರಿಸಲು ಪ್ಲ್ಯಾನ್‌ ಮಾಡಿದ್ದರು. ಅದರಂತೆ ರೋಡ್‌ ಮಧ್ಯದಲ್ಲಿಯೇ ಕೇಕ್‌ ಕಟ್‌ ಮಾಡಿ ಗೆಳೆಯನಿಗೆ ಶುಭ ಕೋರಿದರು. ಇಷ್ಟಕ್ಕೆ ನಿಲ್ಲದ ಸಂಭ್ರಮಾಚರಣೆ ತಾರಕಕ್ಕೇರಿತು. ಕೇಕ್‌ ಸ್ಮ್ಯಾಷ್‌ ಕೂಡ ನಡೆಯಿತು. ಹೀಗೆ ಕೇಕ್‌ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲೆಲ್ಲಾ ಬಿದ್ದು ಅವ್ಯವಸ್ಥೆಯನ್ನು ಸೃಷ್ಟಿಸಿದರು.


ಕೇಕ್‌ ಎರಚಾಟ.. ಟ್ರಾಫಿಕ್‌ ಜಾಮ್..‌ ಪೊಲೀಸರ ಎಂಟ್ರಿ!


ವರದಿಗಳ ಪ್ರಕಾರ, ಶುಕ್ರವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಐ ಲವ್ ಲಕ್ನೋ ಎಂಬ ಬೋರ್ಡ್‌ ಜಾಗದಲ್ಲಿ ಐದು ಯುವಕರ ಗುಂಪು ರಸ್ತೆಯ ಮಧ್ಯದಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಜಮಾಯಿಸಿತು. ನಿರೀಕ್ಷೆಯಂತೆ ಹುಟ್ಟುಹಬ್ಬದ ಹುಡುಗನ ಮೇಲೆ ಗುಂಪು ಕೇಕ್ ಬಳಿದು ಅವ್ಯವಸ್ಥೆ ಸೃಷ್ಟಿಸಿದ್ದಲ್ಲದೇ ಟ್ರಾಫಿಕ್ ತಡೆ ಸಹ ಉಂಟುಮಾಡಿದರು.


ಇದನ್ನೂ ಓದಿ: ಲೇಡಿ ಟೀಚರ್-ವಿದ್ಯಾರ್ಥಿನಿ​ ನಡುವೆ ಕುಚ್​ ಕುಚ್​, ಲಿಂಗ ಬದಲಾವಣೆ ಮಾಡಿಸಿಕೊಂಡು ಮದುವೆಯಾದ ಜೋಡಿ!


ಅಷ್ಟೇ ಅಲ್ಲ ಒಬ್ಬರಿಗೊಬ್ಬರು ಕೇಕ್ ಎರಚಿಕೊಂಡು ಹುಡುಗಾಟ ತೋರಿದ್ದಾರೆ. ಹುಟ್ಟುಹಬ್ಬದ ಆಚರಣೆಯಿಂದಾಗಿ ಲಕ್ನೋ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಪೊಲೀಸರು ಇಲ್ಲಿಗೆ ಬರಬೇಕಾಯಿತು. ಖಾಕಿ ಸ್ಥಳಕ್ಕೆ ಬರುತ್ತಿದ್ದಂತೆ ಸುಮ್ಮನಾದ ಹುಡುಗರು ತಮ್ಮ ಸಂಭ್ರಮಾಚರಣೆಗೆ ಬ್ರೇಕ್‌ ಹಾಕಿದರು. ಈ ಮಧ್ಯೆ ಪೊಲೀಸರು ಹುಡುಗರಿಗೆ ಸ್ವಚ್ಛತೆ ಪಾಠ ಕೂಡ ಮಾಡಿದ್ದಾರೆ.


ಹುಡುಗರಿಗೆ ಸ್ವಚ್ಛತೆ ಪಾಠ ಮಾಡಿದ ಖಾಕಿ


ಗೌತಂಪಲ್ಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಧೀರ್ ಅವಸ್ಥಿ ಅವರು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ರಸ್ತೆಯಲ್ಲಿನ ಅವ್ಯವಸ್ಥೆಯನ್ನು ಗಮನಿಸಿ ಯುವಕರಿಗೆ ಕ್ಲಾಸ್‌ ತೆಗೆದುಕೊಂಡರು. ಪೋಲೀಸರು ಹುಟ್ಟುಹಬ್ಬದಲ್ಲಿ ನಿರತರಾಗಿದ್ದ ಹುಡುಗರಿಗೆ ರಸ್ತೆಯಲ್ಲಿ ಬಿದ್ದ ಕೇಕ್ ಅನ್ನು ಸ್ವಚ್ಛಗೊಳಿಸುವಂತೆ ಹೇಳಿದರು. ಇದೇನೂ ನಿಮ್ಮ ಮನೆ ಅಂದುಕೊಂಡಿದ್ದೀರಾ ಎಂದು ಜೋರು ಮಾಡಿ ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ.


ರಸ್ತೆಯನ್ನು ಯುವಕರು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್‌


ಪೊಲೀಸ್‌ ಅಧಿಕಾರಿಗಳ ಮಾತಿಗೆ ಹುಡುಗರು ಹೆದರಿ ತಾವೇ ಕೇಕ್‌ ಮೂಲಕ ರಾಡಿ ಮಾಡಿದ ರಸ್ತೆಯನ್ನು ಶುಚಿಗೊಳಿಸಿದರು. ಹುಡುಗರು ರಸ್ತೆಯನ್ನು ಕ್ಲೀನ್‌ ಮಾಡುತ್ತಿರುವ ವೀಡಿಯೋ ಸಾಕಷ್ಟು ವೈರಲ್‌ ಆಗಿದೆ.ವೀಡಿಯೊದಲ್ಲಿ, ಯುವಕರು ರಟ್ಟನ್ನು ಬಳಸಿ ರಸ್ತೆಯ ಮೇಲೆ ಬಿದ್ದ ಕೇಕ್‌ ಉಜ್ಜುತ್ತಿರುವುದನ್ನು ಕಾಣಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಲು ಮತ್ತು ಅವರ ಹಣವನ್ನು ಬುದ್ಧಿವಂತಿಕೆಯಿಂದ ಬಳಸುವಂತೆ ಇನ್ಸ್‌ಪೆಕ್ಟರ್ ಹುಡುಗರಿಗೆ ಸಲಹೆ ನೀಡಿದರು.


ಇದನ್ನೂ ಓದಿ: ಮೇಕೆಯಂತೆಯೇ ಜಿಗಿದಾಡಿದೆ ನೋಡಿ ಈ ಮರಿ ಘೇಂಡಾಮೃಗ! ಮುದ್ದಾಗಿದೆ ಅಂದ್ರು ನೆಟ್ಟಿಗರು


ಇನ್ನು ನೆಟ್ಟಿಗರು ಪೊಲೀಸರ ಕ್ರಮವನ್ನು ಕಾಮೆಂಟ್‌ ಮೂಲಕ ಶ್ಲಾಘಿಸಿದ್ದಾರೆ. ನಮ್ಮದು ಏನೇ ಸಂಭ್ರಮಿದ್ದರೂ ಅದು ಬೇರೆಯವರಿಗೆ ತೊಂದರೆಯಾಗದಂತೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಇರಬೇಕು. ರಸ್ತೆ ಸೇರಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ನೋಡಿಕೊಳ್ಳುವುದು ನಮ್ಮ ಹೊಣೆ. ಈ ಕರ್ತವ್ಯವನ್ನು ನಿಭಾಯಿಸದಿದ್ದರೂ, ಅದನ್ನು ಹಾಳು ಮಾಡುವ ಕೆಲಸಕ್ಕೆ ಯಾರು ಕೈಹಾಕಬಾರದು.

Published by:ವಾಸುದೇವ್ ಎಂ
First published: