ರೈಲಿನ ಹಿಂದೆ ಓಡಿ ಹಸಿದ ಮಗುವಿಗೆ ಹಾಲು ನೀಡಿದ ಕಾನ್ಸ್ಟೇಬಲ್!; ವಿಡಿಯೋ ವೈರಲ್
ಈ ಘಟನೆ ನಡೆದಿದ್ದು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ. ಬೆಂಗಳೂರಿನಿಂದ ಗೋರಕ್ಪುರಕ್ಕೆ ಶ್ರಮಿಕ್ ರೈಲು ಮೇ 31ರಂದು ಭೋಪಾಲ್ ನಿಲ್ದಾಣ ತಲುಪಿತ್ತು. ಈ ವೇಳೆ ಈ ಘಟನೆ ನಡೆದಿದೆ.
news18-kannada Updated:June 5, 2020, 9:56 AM IST

ರೈಲಿನ ಹಿಂದೆ ಓಡಿದ ಕಾನ್ಸ್ಟೇಬಲ್
- News18 Kannada
- Last Updated: June 5, 2020, 9:56 AM IST
ನವದೆಹಲಿ (ಜೂ. 5): ರೈಲು ಆಗತಾನೆ ಚಲಿಸಲು ಆರಂಭಿಸಿತ್ತು. ಈ ವೇಳೆ ಕಾನ್ಸ್ಟೇಬಲ್ ಓರ್ವ ಫ್ಲಾಟ್ಫಾರ್ಮ್ನಲ್ಲಿ ಒಂದೇ ಸಮನೆ ಓಡುತ್ತಿದ್ದರು. ಅಲ್ಲಿದ್ದವರೆಲ್ಲರೂ ಈ ಕಾನ್ಸ್ಟೇಬಲ್ ಯಾವುದೋ ಕಳ್ಳನನ್ನು ಬೆನ್ನತ್ತಿ ಹೋಗುತ್ತಿರಬಹುದು ಎಂದುಕೊಂಡಿದ್ದರು. ಆದರೆ, ಅವರ ಕೈಯಲ್ಲಿದ್ದ ಹಾಲು ಪ್ಯಾಕ್ ಎಲ್ಲರ ಗೊಂದಲಕ್ಕೆ ಕಾರಣವಾಗಿತ್ತು. ನಂತರ ತಿಳಿದು ಬಂದ ವಿಚಾರ ಏನೆಂದರೆ, ರೈಲಿನಲ್ಲಿದ್ದ ಮಗುವಿಗೆ ಹಾಲು ಪ್ಯಾಕ್ ನೀಡಲು ಕಾನ್ಸ್ಟೇಬಲ್ ಈ ರೀತಿ ಓಡಿದ್ದರು. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಈ ಘಟನೆ ನಡೆದಿದ್ದು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ. ಬೆಂಗಳೂರಿನಿಂದ ಗೋರಕ್ಪುರಕ್ಕೆ ಶ್ರಮಿಕ್ ರೈಲು ಹೊರಟಿತ್ತು. ಮೇ 31ರಂದು ಈ ರೈಲು ಭೋಪಾಲ್ ನಿಲ್ದಾಣ ತಲುಪಿತ್ತು. ಶರೀಫ್ ಹಶ್ಮಿ ಪತಿ ಹಸೀನ್ ಹಶ್ಮಿ ಎಂಬುವವರು ಮಗುವಿನ ಜೊತೆ ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಗು ಕುಡಿಯಲು ಹಾಲಿಲ್ಲದೆ ಒಂದೇ ಸಮನೆ ಅಳುತ್ತಿತ್ತು. ಈ ವೇಳೆ ಶರೀಫ್ ಕಾನ್ಸ್ಟೇಬಲ್ ಇಂದರ್ ಸಿಂಗ್ ಯಾದವ್ ಬಳಿ ಒಂದು ಲೀಟರ್ ಹಾಲಿನ ಪ್ಯಾಕ್ ತಂದುಕೊಡುವಂತೆ ಕೇಳಿಕೊಂಡಿದ್ದರು. ಮರುಮಾತನಾಡದೆ ಒಪ್ಪಿಕೊಂಡ ಇಂದರ್ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿರುವ ಶಾಪ್ಗೆ ತೆರಳಿ ಹಾಲು ಪ್ಯಾಕ್ ಖರೀದಿಸಿ ಬಂದಿದ್ದರು.
ಇದನ್ನೂ ಓದಿ: ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ ಆಗಿದೆ ಎಂಬುದು ನಿಜವಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ
ಆ ವೇಳೆಗಾಗಲೇ ರೈಲು ಚಲಿಸಲು ಆರಂಭಿಸಿತ್ತು. ಹೀಗಾಗಿ, ಇಂದರ್ ಓಡಿ ಆ ಮಹಿಳೆಗೆ ಹಾಲಿನ ಪ್ಯಾಕ್ ತಲುಪಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಂದರ್ ಕೆಲಸಕ್ಕೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದಿದ್ದು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ. ಬೆಂಗಳೂರಿನಿಂದ ಗೋರಕ್ಪುರಕ್ಕೆ ಶ್ರಮಿಕ್ ರೈಲು ಹೊರಟಿತ್ತು. ಮೇ 31ರಂದು ಈ ರೈಲು ಭೋಪಾಲ್ ನಿಲ್ದಾಣ ತಲುಪಿತ್ತು. ಶರೀಫ್ ಹಶ್ಮಿ ಪತಿ ಹಸೀನ್ ಹಶ್ಮಿ ಎಂಬುವವರು ಮಗುವಿನ ಜೊತೆ ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ: ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ ಆಗಿದೆ ಎಂಬುದು ನಿಜವಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ
ಆ ವೇಳೆಗಾಗಲೇ ರೈಲು ಚಲಿಸಲು ಆರಂಭಿಸಿತ್ತು. ಹೀಗಾಗಿ, ಇಂದರ್ ಓಡಿ ಆ ಮಹಿಳೆಗೆ ಹಾಲಿನ ಪ್ಯಾಕ್ ತಲುಪಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಂದರ್ ಕೆಲಸಕ್ಕೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Commendable Deed by Rail Parivar: RPF Constable Inder Singh Yadav demonstrated an exemplary sense of duty when he ran behind a train to deliver milk for a 4-year-old child.Expressing pride, I have announced a cash award to honour the Good Samaritan. pic.twitter.com/qtR3qitnfG
— Piyush Goyal (@PiyushGoyal) June 4, 2020