ಕೆಲವೊಮ್ಮೆ ಸಣ್ಣ ಪುಟ್ಟ ಸಹಾಯಗಳು, ಕೆಲಸಗಳು ಮಾನವೀಯತೆ ಇನ್ನು ಜೀವಂತವಾಗಿ ಇದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಹೌದು ಕೋವಿಡ್‍ನಿಂದ ಪ್ರತಿಯೊಬ್ಬರು ಹೇಳತೀರದ ನೋವಿನಿಂದ ಇದ್ದರೂ ಮಾನವೀಯತೆಯ ಸಂದರ್ಭಗಳು ನಮ್ಮನ್ನು ಮತ್ತಷ್ಟು ಜೀವಂತವಾಗಿ ಇಡುತ್ತದೆ. ಹೌದು ಇದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಫೋಟೋ. ಹ್ಯಾಂಡ್‍ಪಂಪ್ ಬಳಿ ಕುಳಿತ ಪೊಲೀಸ್ ಪೇದೆಯೊಬ್ಬರು ಬಾಯಾರಿ ಬಂದ ನಾಯಿಗೆ ಹ್ಯಾಂಡ್‍ಪಂಪ್ ಹೊಡೆದು ನೀರು ತರಿಸಿ ನಾಯಿ ಕುಡಿಯುವಂತೆ ಮಾಡಿದ ಫೋಟೋ ನೆಟ್ಟಿಗರ ಮನ ಗೆದ್ದಿದೆ. ಕೋವಿಡ್ ವೇಳೆ ಜನತಾ ಕರ್ಫ್ಯೂ ಹೇರಿದ ಹಿನ್ನೆಲೆ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ವಾರಾಣಾಸಿಯ ಪೊಲೀಸ್ ಪೇದೆಯ ಮಾನವೀಯತೆಯನ್ನು ಜನರು ಮೆಚ್ಚಿದ್ದಾರೆ.
ಐಪಿಎಸ್ ಅಧಿಕಾರಿ ಸುಕೀರ್ರಿ ಮಾಧವ್ ಮಿಶ್ರಾ ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೇ ವೇಳೆ ಪಾತಾಳ್ ಲೋಕ್ ವೆಬ್ ಸೀರಿಸ್‍ನ ಒಂದು ಪ್ರಸಿದ್ಧ ಸಂಭಾಷಣೆಯನ್ನು ಬರೆದು ಅವರ ಕಾರ್ಯದ ಬಗ್ಗೆ ಹೇಳಿದ್ದಾರೆ. ಮನುಷ್ಯ ನಾಯಿಯನ್ನು ಪ್ರೀತಿಸಿದರೂ ಆ ವ್ಯಕ್ತಿ ಒಳ್ಳೆಯವರು, ಅಕಸ್ಮಾತ್ ನಾಯಿ ಮನುಷ್ಯನನ್ನು ಪ್ರೀತಿಸಿದರೂ ಆ ವ್ಯಕ್ತಿ ಒಳ್ಳೆಯವರು. ಇನ್ಕ್ರೆಡಿಬಲ್ ಬನಾರಸ್ ಎಂದು ಬರೆದುಕೊಂಡಿದ್ದಾರೆ.
ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ ಕೇವಲ ಒಂದು ಗಂಟೆಯಲ್ಲೇ 15 ಸಾವಿರ ಮಂದಿ ಶೇರ್ ಮಾಡಿದ್ದಾರೆ. ಪೇದೆಗೆ ನಾಯಿಯ ಮೇಲಿರುವ ಸೆರೆಹಿಡಿದಿರುವ ಫೋಟೋವನ್ನು ಕಂಡು ಖುಷಿ ಪಟ್ಟಿದ್ದು, ಶೇರ್ ಮಾಡಿ ಕಮೆಂಟ್ ಮಾಡಿದ್ದಾರೆ. ಸೌಮ್ಯಾ ಸಿಂಗ್ ಎನ್ನುವವರು ಉತ್ತಮ ಕೆಲಸ.. ಬನಾರಸ್ ಅದ್ಭುತ ಎಂದಿದ್ದಾರೆ. ರಾಹುಲ್ ಕುಮಾರ್ ಎಂಬುವರು ನಿಮಗೊಂದು ಸಲಾಂ ಎಂದು ಕಮೆಂಟ್ ಮಾಡಿದ್ದಾರೆ.
ಸರ್ ಬನಾರಸ್‍ನ ಪ್ರತಿ ರಾಗ ರಾಗದಲ್ಲೂ ಇದೇ ರೀತಿಯ ಪ್ರೇಮ ತುಂಬಿದೆ. ನಾನು ಪದವಿಗಾಗಿ ನಾಲ್ಕು ವರ್ಷ ಇದ್ದೆ. ನಾನು ನಾಲ್ಕು ವರ್ಷವೂ ಇದೇ ರೀತಿ ಪ್ರೀತಿ, ಕರುಣೆ ನೋಡಿದ್ದೇನೆ. ನನ್ನ ಮನೆ ಬನಾರಸ್‌ನಲ್ಲಿದೆ. ಹರ ಹರ ಮಹಾದೇವ ಎಂದು ಬನಾರಸ್ ಮಂದಿಯ ಪ್ರೀತಿ, ಕರುಣೆ, ಸಹಾಯಗುಣವನ್ನು ಜಾಯದ್ ಜುಂಗ್ ಎಂಬುವವರು ಕೊಂಡಾಡಿದ್ದಾರೆ. ಇನ್ನು ನಿಜವಾಗಿಯೂ ಒಳ್ಳೆಯ ಕೆಲಸ. ನಿಮಗೆ ಅಭಿನಂದನೆ. ಪ್ರತಿಯೊಬ್ಬರು ಇದೇ ರೀತಿ ಇದ್ದರೆ ಜನರು ಹಸಿವು, ನೀರು ಇಲ್ಲದೇ ಬಳಲುವುದರಿಂದ ತಪ್ಪಿಸಬಹುದು ಎಂದಿದ್ದಾರೆ.
ಈ ಫೋಟೋ ಮೊದಲು ಪೊಲೀಸ್ ಮೀಡಿಯಾ ನ್ಯೂಸ್ ಎಂಬಲ್ಲಿ ಶೇರ್ ಆಗಿತ್ತು. ಚಿತ್ರದೊಂದಿಗೆ ಹಂಚಿಕೊಂಡಿರುವ ಟ್ವೀಟ್‍ನಲ್ಲಿ, ಕೋವಿಡ್ ಎಂಬ ಮಹಾಮಾರಿಯ ಈ ಕಠಿಣ ಸಮಯದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಪೊಲೀಸರಿಗೆ ಸಹಾಯ ಮಾಡುವಂತೆ ಪೊಲೀಸ್ ಮೀಡಿಯಾ ನ್ಯೂಸ್ ಜನರನ್ನು ವಿನಂತಿಸಿದೆ. ಪೊಲೀಸ್ ಪಡೆಯನ್ನು ಹೆಚ್ಚಾಗಿ ಕಠಿಣ ಹೃದಯಿಗಳು ಎಂದೇ ಬಿಂಬಿಸಲಾಗುತ್ತದೆ. ಆದರೆ ನಾವು ಪೊಲೀಸರು ಸಹ ನಮ್ಮಂತೆಯೇ ಹೃದಯವುಳ್ಳ ಮನುಷ್ಯರು ಎಂಬುದನ್ನು ಮರೆಯುತ್ತೇವೆ.
If a man loves dogs, he is a good man.
If dogs love a man, he is a good man.!
Incredible Banaras..! pic.twitter.com/Wu4e6KVxdd
— Sukirti Madhav Mishra (@SukirtiMadhav) May 7, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ