• Home
  • »
  • News
  • »
  • trend
  • »
  • Portable Marriage Hall: ಇನ್ಮುಂದೆ ಮದುವೆ ಹಾಲ್‍ಗಳೇ ನಿಮ್ಮ ಮನೆಗೆ ಬರುತ್ತೆ! ಪೋರ್ಟಬಲ್ ಮ್ಯಾರೇಜ್ ಹಾಲ್ ನೋಡಿ ಇಂಪ್ರೆಸ್ ಆದ ಮಹೀಂದ್ರಾ

Portable Marriage Hall: ಇನ್ಮುಂದೆ ಮದುವೆ ಹಾಲ್‍ಗಳೇ ನಿಮ್ಮ ಮನೆಗೆ ಬರುತ್ತೆ! ಪೋರ್ಟಬಲ್ ಮ್ಯಾರೇಜ್ ಹಾಲ್ ನೋಡಿ ಇಂಪ್ರೆಸ್ ಆದ ಮಹೀಂದ್ರಾ

ಆನಂದ್ ಮಹೀಂದ್ರಾ ಮತ್ತು ಪೋರ್ಟಬಲ್ ಮ್ಯಾರೇಜ್ ಹಾಲ್

ಆನಂದ್ ಮಹೀಂದ್ರಾ ಮತ್ತು ಪೋರ್ಟಬಲ್ ಮ್ಯಾರೇಜ್ ಹಾಲ್

ಆನಂದ್ ಮಹೀಂದ್ರಾ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2 ನಿಮಿಷದ ಕ್ಲಿಪ್ ಪೋರ್ಟಬಲ್ ಮ್ಯಾರೇಜ್ ಹಾಲ್ ಪರಿಕಲ್ಪನೆಯನ್ನು ಒಳಗೊಂಡಿದೆ. ಹೌದು. ನೀವು ಅದನ್ನು ಸರಿಯಾಗಿ ಓದಿದ್ದೀರಿ. ಸುಮಾರು 200 ಜನರ ಸಾಮರ್ಥ್ಯದ ಟ್ರಕ್ ಒಳಗೆ ಮದುವೆ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದು ಸ್ಟೈಲಿಶ್ ಒಳಾಂಗಣಗಳನ್ನು ಸಹ ಹೊಂದಿದೆ. ವೀಡಿಯೋದಲ್ಲಿ ಟ್ರಕ್ ಒಳಗೆ ಪೂರ್ಣ ಪ್ರಮಾಣದ ಮದುವೆಯನ್ನು ಸಹ ಆಯೋಜಿಸಲಾಗಿರುವುದನ್ನು ನಾವು ನೋಡಬಹುದು.

ಮುಂದೆ ಓದಿ ...
  • Share this:

ಈ ಮದುವೆ ಸೀಸನ್ ಗಳಲ್ಲಿ (Wedding season) ನಮ್ಮ ನಮ್ಮ ನಗರಗಳಲ್ಲಿ ಒಂದು ಮದುವೆ ಕಲ್ಯಾಣ ಮಂಟಪಗಳು (Marriage Hall) ಸಹ ಖಾಲಿ ಇರುವುದಿಲ್ಲ. ಅಷ್ಟರ ಮಟ್ಟಿಗೆ ಆ ಸಮಯದಲ್ಲಿ ಮದುವೆ ಸಮಾರಂಭಗಳು (Wedding ceremony) ನಡೆಯುತ್ತಿರುತ್ತವೆ. ಇಂತಹ ಸಮಯದಲ್ಲಿ ಎಷ್ಟೋ ಜನರು ಅದ್ದೂರಿಯಾಗಿ ದೊಡ್ಡ ದೊಡ್ಡ ಮದುವೆ ಮಂಟಪದಲ್ಲಿ ತಮ್ಮ ಮಕ್ಕಳ ಮದುವೆ ಮಾಡಬೇಕು ಅಂತ ಅಂದು ಕೊಂಡಿರುವವರು ಕೊನೆಗೆ ಯಾವುದೇ ಮಂಟಪಗಳು ಖಾಲಿ ಇರದೇ ಇರುವುದರಿಂದ ಮನೆಯ ಮುಂದೆ ಅಥವಾ ಊರಲ್ಲಿರುವ ದೇವಸ್ಥಾನಗಳ (Temples) ಮುಂದೆ ಮದುವೆ ಛತ್ರ ಹಾಕಿಸಿ ಮದುವೆ ಮಾಡಿಸುತ್ತಾರೆ.


ಪೋರ್ಟಬಲ್ ಮ್ಯಾರೇಜ್ ಹಾಲ್
ಈಗಂತೂ ನಾವು ಬಹುತೇಕ ವಸ್ತುಗಳಲ್ಲಿ ಈ ಪೋರ್ಟಬಲ್ ಮಾದರಿಗಳನ್ನು ಮತ್ತು ಈ ಫುಡ್ ಕೋರ್ಟ್ ಗಳಲ್ಲಿ ಮೊಬೈಲ್ ಫುಡ್ ಕೋರ್ಟ್ ಅಂತ ಸಹ ನಾವು ನೋಡಿರುತ್ತೇವೆ. ಎಂದರೆ ಒಂದು ಟ್ರಕ್ ಅಥವಾ ದೊಡ್ಡ ವ್ಯಾನ್ ನಲ್ಲಿ ಫುಡ್ ಕೋರ್ಟ್ ಅನ್ನು ಮಾಡಿರುತ್ತಾರೆ ಮತ್ತು ಅದು ಟ್ರಕ್ ನಲ್ಲಿ ಇರುವುದರಿಂದ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆಗೆ ಅದನ್ನು ಮೊಬೈಲ್ ಫುಡ್ ಕೋರ್ಟ್ ಅಂತ ಕರಿತಾರೆ.


ಆದರೆ ಈ ಮ್ಯಾರೇಜ್ ಹಾಲ್ ಗಳ ವಿಷಯಕ್ಕೆ ಬಂದರೆ ಆ ರೀತಿ ಪೋರ್ಟಬಲ್ ಮತ್ತು ಮೊಬೈಲ್ ಮ್ಯಾರೇಜ್ ಹಾಲ್ ಗಳು ಇನ್ನೂ ಏಕೆ ಬಂದಿಲ್ಲ ಅಂತ ನೀವು ಎಂದಾದರೂ ಅಂದು ಕೊಂಡಿದ್ದರೆ, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೀವು ಮಿಸ್ ಮಾಡದೆ ನೋಡಲೆಬೇಕು.


ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ
ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಸಕ್ರಿಯವಾಗಿರುತ್ತಾರೆ ಮತ್ತು ಜನರ ಮನಸ್ಸಿಗೆ ಮುದ ನೀಡುವಂತಹ ಮತ್ತು ಜನರ ಜೀವನಕ್ಕೆ ಸ್ಪೂರ್ತಿ ನೀಡುವಂತಹ ಅನೇಕ ವಿಡಿಯೋಗಳನ್ನು ಮತ್ತು ಪೋಸ್ಟ್ ಗಳನ್ನು ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.


ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಕೈಗಾರಿಕೋದ್ಯಮಿ ಹಂಚಿಕೊಂಡ ಈ ವಿಡಿಯೋ ಒಮ್ಮೆ ನೋಡಿ. ಇದು ಸಂಪೂರ್ಣ ಕ್ರಿಯಾತ್ಮಕ ಪೋರ್ಟಬಲ್ ಮದುವೆ ಸಭಾಂಗಣದ ಪರಿಕಲ್ಪನೆಯನ್ನು ಒಳಗೊಂಡಿದೆ ಮತ್ತು ಅದು ಮಹೀಂದ್ರಾ ಅವರನ್ನು ತುಂಬಾನೇ ಪ್ರಭಾವಿಸಿದೆ.


ಇದನ್ನೂ ಓದಿ:  Viral Story: ಗಂಡ ಪ್ರೀತಿಸಿದ ಹುಡುಗಿ ಜೊತೆ ಮದುವೆ ಮಾಡಿಸಿದ ಪತ್ನಿ, ಒಂದೇ ಮನೆಯಲ್ಲಿ ಇರೋಕೂ ಒಪ್ಪಿಗೆ ಕೊಟ್ಟ ಹೆಂಡ್ತಿ!


ಟ್ರಕ್ ನಲ್ಲಿಯೇ ಮದುವೆ ಮಾಡಬಹುದು
ಆನಂದ್ ಮಹೀಂದ್ರಾ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2 ನಿಮಿಷದ ಕ್ಲಿಪ್ ಪೋರ್ಟಬಲ್ ಮ್ಯಾರೇಜ್ ಹಾಲ್ ಪರಿಕಲ್ಪನೆಯನ್ನು ಒಳಗೊಂಡಿದೆ. ಹೌದು. ನೀವು ಅದನ್ನು ಸರಿಯಾಗಿ ಓದಿದ್ದೀರಿ. ಸುಮಾರು 200 ಜನರ ಸಾಮರ್ಥ್ಯದ ಟ್ರಕ್ ಒಳಗೆ ಮದುವೆ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದು ಸ್ಟೈಲಿಶ್ ಒಳಾಂಗಣಗಳನ್ನು ಸಹ ಹೊಂದಿದೆ. ವಿಡಿಯೋದಲ್ಲಿ ಟ್ರಕ್ ಒಳಗೆ ಪೂರ್ಣ ಪ್ರಮಾಣದ ಮದುವೆಯನ್ನು ಸಹ ಆಯೋಜಿಸಲಾಗಿರುವುದನ್ನು ನಾವು ನೋಡಬಹುದು.


ವಿಡಿಯೋ ನೋಡಿ ಇಂಪ್ರೆಸ್ ಆದ ಮಹೀಂದ್ರಾ
"ಈ ಪೋರ್ಟಬಲ್ ಮ್ಯಾರೇಜ್ ಹಾಲ್ ನ ಪರಿಕಲ್ಪನೆ ಮತ್ತು ವಿನ್ಯಾಸದ ಹಿಂದಿನ ವ್ಯಕ್ತಿಯನ್ನು ಭೇಟಿಯಾಗಲು ನಾನು ಬಯಸುತ್ತೇನೆ. ತುಂಬಾನೇ ಸೃಜನಶೀಲವಾಗಿದೆ ಈ ಐಡಿಯಾ ಮತ್ತು ಚಿಂತನಶೀಲವಾಗಿದೆ. ಇದು ದೂರದ ಪ್ರದೇಶಗಳಿಗೆ ಸೌಲಭ್ಯವನ್ನು ಒದಗಿಸುವುದಲ್ಲದೆ, ತುಂಬಾ ಜನಸಂಖ್ಯೆ ಇರುವ ದೇಶದಲ್ಲಿ ಶಾಶ್ವತ ಸ್ಥಳವನ್ನು ತೆಗೆದುಕೊಳ್ಳದ ಕಾರಣ ಪರಿಸರ ಸ್ನೇಹಿಯಾಗಿದೆ" ಎಂದು ಮಹೀಂದ್ರಾ ಅವರು ವಿಡಿಯೋ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: Viral Post: ಸಾಫ್ಟ್‌ ವೇರ್‌ ಎಂಜಿನಿಯರ್ಸ್‌ ಕರೆ ಮಾಡಬೇಡ್ರಪ್ಪೋ! ಇಂಥಾ ಮದುವೆ ಜಾಹೀರಾತು ನೋಡಿದ್ದೀರಾ?


ಈ ವಿಡಿಯೋ ಇದುವರೆಗೂ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಸಹ ಇದನ್ನು ನೋಡಿ ಸಂತೋಷ ಪಟ್ಟಿದ್ದು, ಈ ಕಲ್ಪನೆಯ ಹಿಂದಿನ ಸೃಜನಶೀಲತೆಯನ್ನು ತುಂಬಾನೇ ಶ್ಲಾಘಿಸಿದ್ದಾರೆ. "ನಾವೀನ್ಯತೆಗೆ ಯಾವುದೇ ಮಿತಿಯಿಲ್ಲ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ವಾವ್! ಎಂತಹ ಐಡಿಯಾ ಸರ್ ಜೀ" ಅಂತ ಹೇಳಿದ್ದಾರೆ.

Published by:Ashwini Prabhu
First published: