'ಕಿಕಿ' ಸವಾಲು ಸ್ವೀಕರಿಸಿದ ನಿವೇದಿತಾ ಗೌಡ ವಿರುದ್ಧ ದೂರು: ವಿಡಿಯೋ ಡಿಲೀಟ್​ ಮಾಡಿದ ಬಿಗ್​ಬಾಸ್​ ಬ್ಯೂಟಿ

news18
Updated:August 1, 2018, 1:27 PM IST
'ಕಿಕಿ' ಸವಾಲು ಸ್ವೀಕರಿಸಿದ ನಿವೇದಿತಾ ಗೌಡ ವಿರುದ್ಧ ದೂರು: ವಿಡಿಯೋ ಡಿಲೀಟ್​ ಮಾಡಿದ ಬಿಗ್​ಬಾಸ್​ ಬ್ಯೂಟಿ
news18
Updated: August 1, 2018, 1:27 PM IST
ನ್ಯೂಸ್​ 18 ಕನ್ನಡ 

ಕಿರಣ್​ ಕೆ.ಎನ್​, ನ್ಯೂಸ್​ 18 ಕನ್ನಡ 

'ಕಿಕಿ'ಚಾಲೆಂಜ್​ ಸ್ವೀಕರಿಸುವುದಕ್ಕೆ ಪೊಲೀಸರು ನಿಷೇಧ ಹೇರಿದ್ದರೂ ಬಿಗ್​ಬಾಸ್​ ಬ್ಯೂಟಿ ನಿವೇದಿತಾ ಗೌಡ ಮೊನ್ನೆಯಷ್ಟೆ 'ಕಿಕಿ' ಸವಾಲನ್ನು ಸ್ವೀಕರಿಸಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು.

ಚಲಿಸುವ ವಾಹನದಿಂದ ಇಳಿದು ಡಾನ್ಸ್​ ಮಾಡುವ ಅಪಾಯಕಾರಿ ಸವಾಲಿನಿಂದ ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಮೈಸೂರು ಪೊಲೀಸರು ಈ ಸವಾಲನ್ನು ಸಾರ್ವಜನಿಕರು ಸ್ವೀಕರಿಸದಂತೆ ಎಚ್ಚರಿಕೆ ನೀಡಿದ್ದರು. ಆದರೂ ನಿವೇದಿತಾ ಗೌಡ 'ಕಿಕಿ' ಸವಾಲಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

ಸೆಲೆಬ್ರಿಟಿಗಳನ್ನು ಜನರು ಹಿಂಬಾಲಿಸುತ್ತಾರೆ. ಹೀಗಾಗಿ ನಿವೇದಿತಾ ಜನರಿಗೆ ಒಳ್ಳೆಯ ರೀತಿಯಲ್ಲಿ ಮಾದರಿಯಾಗಿರಬೇಕು. ಅದನ್ನು ಬಿಟ್ಟು ಜೀವಕ್ಕೆ ಸಂಚಕಾರ ತರುವ ಸವಾಲನ್ನು ಸ್ವೀಕರಿಸಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರಿಂದಾಗಿ ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ  ಕರ್ನಾಟಕ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನಾಗೇಶ್​  ಹಲಸೂರು ಗೇಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಆದರೆ ನಿವೇದಿತಾ ವಿಡಿಯೋ ಪೋಸ್ಟ್​ ಮಾಡುತ್ತಿದ್ದಂತೆಯೇ ಬರುತ್ತಿದ್ದ ಕಮೆಂಟ್​ಗಳಿಂದಾಗಿ, ಅವರು ಇಂದು ವಿಡಿಯೋವನ್ನು ಡಿಲೀಟ್​ ಮಾಡಿದ್ದಾರೆ.

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ