Viral News: ಇವರು ಮಾಡೋ ಚಪ್ಪಲಿ ಹಾಕೊಂಡು ಓಡಾಡಿದ್ರೆ ತಿಂಗಳಿಗೆ 4 ಲಕ್ಷ ರೂ ಕೊಡ್ತಾರಂತೆ..!

4 Lakhs Salary: ಬೆಡ್‌ರೂಂ ಅಥ್ಲೆಟಿಕ್ಸ್ ಹೆಸರಿನ  ಕಂಪನಿ ಕೇವಲ ಚಪ್ಪಲಿ ಧರಿಸಿ ಅನುಭವ ಹೇಳುವವರಿಗೆ 4 ಲಕ್ಷ ಹಣ ನೀಡಲು ಮುಂದಾಗಿದೆ..ಕೇವಲ ಮನೆಯಲ್ಲಿದ್ದುಕೊಂಡೇ ಕಂಪನಿ ಚಪ್ಪಲಿ ಧರಿಸಿ ಅದರ ಬಗ್ಗೆ ಪ್ರಾಮಾಣಿಕ ರಿವ್ಯೂ ನೀಡಬೇಕು. ಇಷ್ಟು ಮಾಡಿದರೆ ಕಂಪನಿ ನಿಮಗೆ ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ವೇತನ ನೀಡುತ್ತದೆ.

ಸಂಬಳ

ಸಂಬಳ

 • Share this:
  ವರ್ಷಪೂರ್ತಿ ಕೆಲಸವಿಲ್ಲದೆ (Work)ಖಾಲಿ ಕೂರುವವರು ಒಂದೆಡೆಯಾದರೆ ಇನ್ನು ಕೆಲವರು ವರ್ಷಪೂರ್ತಿ ದುಡಿಯುವವರು ಇದ್ದಾರೆ. ಆದರೆ ಖಾಲಿ ಕೂತವರು(Unemployment) ಕೆಲಸಕ್ಕಾಗಿ ಅಲೆದಾಡುತ್ತಾ ಒಂದಾದರು ಕನಸಿನ ಕೆಲಸ ಸಿಗಬೇಕು ಎಂದು ಹುಡುಕಾಡುತ್ತಿತ್ತಾರೆ. ಅವರ ಶ್ರಮದ(Hard Work) ಫಲವಾಗಿ ಕೆಲವರಿಗೆ ಉದ್ಯೋಗ(Job) ಸಿಕ್ಕರೆ ಇನ್ನು ಕೆಲವರಿಗೆ ಅದೃಷ್ಟ ಕೈಕೊಟ್ಟು ಕೆಲಸವೇ ಸಿಗದು.ಇನ್ನು ಕೆಲವರಿಗೆಬರುವ ಸಂಬಳದಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ.. ಬರುವ ಸಂಬಳ ಬ್ಯಾಂಕ್ ಲೋನ್(Bank Loan),ಇಎಂಐ(EMI), ಮನೆ ಬಾಡಿಗೆ(Home Rent) ಹೀಗೆ ಹತ್ತು ಹಲವು ಕಾರಣಗಳಿಗೆ ಖರ್ಚಾಗುತ್ತಾ ಹೋಗುತ್ತದೆ.ಹೀಗಾಗಿ ಜನರು ಹಣ ಸಂಪಾದಿಸಲು ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ.. ಹೀಗೆ ಹಣ ಸಂಪಾದನೆ ಮಾಡಲು ಬಯಸುವವರಿಗಾಗಿ ಹಲವಾರು ಆಫರ್ ಗಳು ಇರುತ್ತವೆ.. ಅಲ್ಲದೆ ಚಿತ್ರ-ವಿಚಿತ್ರ ಆಫರ್ ಗಳನ್ನು ನೀಡಿ ಕಂಪನಿಗಳು ನಮ್ಮ ಪಾಪ್ಯುಲಾರಿಟಿ ಹೆಚ್ಚಿಸಿಕೊಳ್ಳುತ್ತವೆ.. ಅದೇ ರೀತಿ ಈಗ ಕಂಪನಿಯೊಂದು ತನ್ನ ವಿಚಿತ್ರ ಆಫರ್ ಮೂಲಕ ಗಮನ ಸೆಳೆದಿದೆ..

  ಕೇವಲ ಚಪ್ಪಲಿ ಧರಿಸಿದರೆ ಸಿಗಲಿದೆ ಲಕ್ಷ ಲಕ್ಷ ಹಣ..

  ಬೆಡ್‌ರೂಂ ಅಥ್ಲೆಟಿಕ್ಸ್ ಹೆಸರಿನ  ಕಂಪನಿ ಕೇವಲ ಚಪ್ಪಲಿ ಧರಿಸಿ ಅನುಭವ ಹೇಳುವವರಿಗೆ 4 ಲಕ್ಷ ಹಣ ನೀಡಲು ಮುಂದಾಗಿದೆ..ಕೇವಲ ಮನೆಯಲ್ಲಿದ್ದುಕೊಂಡೇ ಕಂಪನಿ ಚಪ್ಪಲಿ ಧರಿಸಿ ಅದರ ಬಗ್ಗೆ ಪ್ರಾಮಾಣಿಕ ರಿವ್ಯೂ ನೀಡಬೇಕು. ಇಷ್ಟು ಮಾಡಿದರೆ ಕಂಪನಿ ನಿಮಗೆ ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ವೇತನ ನೀಡುತ್ತದೆ.

  ಇದನ್ನೂ ಓದಿ: ಪ್ರೀತಿಯ ನಾಯಿ ಗೋಪಿ ಹುಟ್ಟುಹಬ್ಬಕ್ಕೆ ಆರತಿ ಬೆಳಗಿ ಸಂಭ್ರಮಿಸಿದ ಸುಧಾ ಮೂರ್ತಿ, ವಿಡಿಯೋ ವೈರಲ್

  ಬೆಡ್‌ರೂಂ ಅಥ್ಲೆಟಿಕ್ಸ್ ಹೆಸರಿನ ಈ ಕಂಪನಿ ಕಳೆದ ವರ್ಷವೂ ಸ್ಲಿಪರ್ ಟೆಸ್ಟರ್ ಉದ್ಯೋಗಕ್ಕೆ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಇದಾದ ಬಳಿಕ ಕಂಪನಿಗೆ ಭಾರೀ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಕಂಪನಿ ಎರಡು ವೇಕೆನ್ಸಿ ಇದೆ ಎಂದಿದೆ. ಇದರಲ್ಲಿ ಒಂದು ಹಾಗೂ ಮತ್ತೊಂದು ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ. ಚಪ್ಪಲಿ ಹೇಗಿದೆ ಎಂಬ ಅಭಿಪ್ರಾಯ ಸಂಗ್ರಹಿಸಿ ಮತ್ತಷ್ಟು ಉತ್ತಮವಾದ ಚಪ್ಪಲಿ ಹೊರತರುವ ಉದ್ದೇಶ ಕಂಪನಿಯದ್ದಾಗಿದೆ.

  ಇನ್ನು ಈ ರೀತಿಯ ವಿಚಿತ್ರ ಆಫರ್ ಗಳನ್ನು ಕಂಪನಿಗಳು ಕೊಡುತ್ತಿರುವುದು ಇದೇ ಮೊದಲೇನಲ್ಲ..  ಕಂಪನಿಯೊಂದು ನಿದ್ರೆ ಮಾಡಿದವರಿಗೆ ಲಕ್ಷ ಲಕ್ಷ ಹಣ ಕೊಡುವುದಾಗಿ ಆಫರ್ ಮಾಡಿತ್ತು.

  ಇದನ್ನೂ ಓದಿ: ಏರ್ಪೋರ್ಟ್ ನಲ್ಲಿ ತಾಯಿಯಿಂದ ಮಗನಿಗೆ ಬಿತ್ತು ಚಪ್ಪಲಿ ಏಟು..!

  ನಿದ್ರೆ ಮಾಡಿದವರಿಗೆ ಲಕ್ಷ ಲಕ್ಷ ಸಂಬಳದ ಆಫರ್

  ಐಷಾರಾಮಿ ಬೆಡ್​ ಕಂಪನಿ ‘ಕ್ರಾಫ್ಟೆಡ್​ ಬೆಡ್ಸ್‘​ ಮ್ಯಾಟ್ರೆಸ್​ ಟೆಸ್ಟರ್​ ಹಿಂದೆ ನಿದ್ರೆ ಮಾಡಿದವರಿಗೆ ಬರೋಬ್ಬರಿ 25 ಲಕ್ಷ ಸಂಬಳ ನೀಡುವುದಾಗಿ ಘೋಷಣೆ ಮಾಡಿತು.. ಈ ಆಫರ್ ಒಪ್ಪಿಕೊಂಡ ಉದ್ಯೋಗಿ ನೇಮಕಗೊಂಡ ಉದ್ಯೋಗಿ ಹಾಸಿಗೆಯಲ್ಲಿ ಮಲಗುವ ಮೂಲಕ ಅದರಲ್ಲಿ ಬಗ್ಗೆ ಸರಿಯಾದ ರಿವ್ಯೂವ್​ ನೀಡಬೇಕು. ಈ ಕೆಲಸಕ್ಕಾಗಿ ಕಂಪನಿ  ವರ್ಷಕ್ಕೆ 25 ಲಕ್ಷ ಸಂಬಳ ನೀಡುತ್ತದೆ. ಹಾಗಾಗಿ ವಾರಕ್ಕೊಮ್ಮ ಉದ್ಯೋಗಿ ಹಾಸಿಗೆ ಗುಣಮಟ್ಟವನ್ನು ಪರೀಕ್ಷಿಸಬೇಕಾಗುತ್ತೆ.
  ಕ್ರಾಫ್ಟೆಡ್​ ಬೆಡ್ಸ್  ತನ್ನ ಕಂಪನಿಯ ಹಾಸಿಗೆಗಳ ಖರೀದಿದಾರರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬಾರದೆಂಬ ಕಾರಣಕ್ಕಾಗಿ ಹಾಸಿಗೆ ಮೇಲೆ ಮಲಗಿ ರಿವ್ಯೂ ನೀಡಲು ಬರೋಬ್ಬರಿ 25 ಲಕ್ಷ ರರೂ ಸಂಬಳ ಘೋಷಣೆ ಮಾಡಿ ಗಮನ ಸೆಳೆದಿತ್ತು.

  ನಿದ್ರೆ ಮಾಡೋದಕ್ಕೆ ಲಕ್ಷ ಲಕ್ಷ ರೂ ಆಫರ್ ಮಾಡಿದ್ದ ನಾಸಾ

  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಹಿಂದೆ ಸತತ 60 ದಿನಗಳ ಕಾಲ ಮಲಗುವವರಿಗಾಗಿ ನಾಸಾ ಹುಡುಕಾಟ ನಡೆಸಿತ್ತು.ಅಲ್ಲದೇ 60 ದಿನ ನಿರಂತರವಾಗಿ ನಿದ್ದೆ ಮಾಡುವವರಿಗೆ 13 ಲಕ್ಷ ರೂ. ನೀಡುವುದಾಗಿಯೂ ಘೋಷಿಸಿತ್ತು. ಅಧ್ಯಯನವೊಂದರ ನಿಮಿತ್ತ ನಾಸಾ ಸಂಸ್ಥೆ ನಿದ್ರೆ ಮಾಡುವವರಿಗಾಗಿ ಶೋಧ ನಡೆಸುತ್ತಿದ್ದು, ಕೇವಲ 60 ದಿನ ನಿದ್ದೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿತ್ತು.
  Published by:ranjumbkgowda1 ranjumbkgowda1
  First published: