• Home
  • »
  • News
  • »
  • trend
  • »
  • Cockroaches: ಮನೆಯೊಳಗೆ 100 ಜಿರಳೆ ಇಟ್ಕೊಂಡ್ರೆ ಮನೆ ಮಾಲೀಕರಿಗೆ ಬಂಪರ್!

Cockroaches: ಮನೆಯೊಳಗೆ 100 ಜಿರಳೆ ಇಟ್ಕೊಂಡ್ರೆ ಮನೆ ಮಾಲೀಕರಿಗೆ ಬಂಪರ್!

ಜಿರಳೆ

ಜಿರಳೆ

ಉತ್ತರ ಕೆರೊಲಿನಾ ಮೂಲದ ದಿ ಪೆಸ್ಟ್ ಇನ್ಫಾರ್ಮರ್ ಎಂಬ ಕೀಟ ಕಂಪನಿಯು ಮನೆಯಲ್ಲಿ ಜಿರಳೆ ಬಿಟ್ಟುಕೊಳ್ಳಿ ನಿಮಗೆ ಹಣ ನೀಡುತ್ತೇವೆ ಅನ್ನೋ ಒಂದು ವಿಚಿತ್ರ ಆಫರ್ ನೀಡಿದೆ. ಮನೆಯಲ್ಲಿ ಜಿರಳೆ ಬಿಟ್ಟುಕೊಂಡರೆ ಹಣ ಕೊಡ್ತಾರಾ? ಇದೆಂಥಾ ವಿಚಿತ್ರ ಅನ್ನಿಸಬಹುದಲ್ವಾ ನಿಮಗೆ. ಆದರೆ ಇದರ ಹಿಂದಿನ ಅಸಲಿಯತ್ತು ಬೇರೇನೆ ಇದೆ ನೊಡಿ

ಮುಂದೆ ಓದಿ ...
  • Share this:

ಮನೆಯಲ್ಲಿ ಒಂದೇ ಒಂದು ಜಿರಳೆ (Cockroaches) ಇದ್ರೆ ಸಾಕು ಮನೆ ತುಂಬಾ ಜಿರಳೆ ಆಗಿಬಿಡುತ್ತವೆ. ಜಿರಳೆ ಅಂದ್ರೆ ಕೆಲವರಿಗೆ ಭಯ, ಇನ್ನು ಕೆಲವರಿಗೆ ಅಸಹ್ಯ. ಅದಕ್ಕೂ ಮಿಗಿಲಾಗಿ ಜಿರಳೆ ಇದ್ರೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಅನ್ನೋದು ನಮಗೆಲ್ಲಾ ಗೊತ್ತಿರುವ ವಿಚಾರ. ದೊಡ್ಡ ದೊಡ್ಡ ನಗರಗಳ (City) ಮನೆಯಲ್ಲಿ (House) ಜಿರಳೆ ತುಂಬಾ ಸರ್ವೆ ಸಾಮಾನ್ಯ. ಮನೆಯಲ್ಲಿ ಜಿರಳೆ ಇದ್ರೆ ಮನೆಯ ಅರ್ಧ ನೆಮ್ಮದಿಯೇ ಹೋಗಿ ಬಿಡುತ್ತದೆ ಎನ್ನಬಹುದು. ವಿಶೇಷವಾಗಿ ತಾಪಮಾನವು (Temperature) ಹೆಚ್ಚಿರುವ ಸ್ಥಳಗಳಲ್ಲಿ ಜಿರಳೆ ಬೇಗ ಬೆಳೆಯುತ್ತವೆ. ಏಕೆಂದರೆ ಅವು ಶೀತ-ರಕ್ತದ ಜೀವಿಗಳಾಗಿದ್ದು, ಜಿರಳೆಗೆ ತನ್ನ ಆಂತರಿಕ ತಾಪಮಾನವನ್ನು ನಿಯಂತ್ರಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಜೀವಿಗಳು ವಾತಾವರಣಕ್ಕೆ ಹೊಂದಿಕೊಳ್ಳುತ್ತವೆಯಾದರೂ, ತಾಪಮಾನ ತುಂಬಾ ತಂಪಾಗಿದ್ದರೆ ಇವು ಬದುಕುಳಿಯುವುದಿಲ್ಲ.


ಜಿರಳೆ ಬಗ್ಗೆ ಯಾಕಿಷ್ಟು ಪೀಠಿಕೆ ಎಂದು ಕೇಳುತ್ತಿದ್ದೀರಾ?, ವಿಷಯ ಬೇರೆನೇ ಇದೆ ಮುಂದೆ ಓದಿ. ಜಿರಳೆಯಿಂದಾಗುವ ಎಲ್ಲಾ ರೀತಿಯ ಪರಿಣಾಮಗಳ ವಿರುದ್ಧ ಎಚ್ಚರಿಕೆ ಕ್ರಮವಾಗಿ ಜಿರಳೆ ಆಗದಂತೆ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುತ್ತೇವೆ. ಮನೆಮದ್ದು ಜೊತೆಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರಿಮಿಕೀಟ ನಾಶಕಗಳನ್ನು ಸಿಂಪಡಿಸುವ ಮೂಲಕ ಅವುಗಳನ್ನು ದೂರ ಮಾಡುತ್ತೇವೆ. ಇಷ್ಟೆಲ್ಲಾ ಜಿರಳೆಗೆ ಹೆದರುವ ನಮಗೆ ಇಲ್ಲೊಂದು ಕಂಪನಿ ಹೊರಡಿಸಿರುವ ಘೋಷಣೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಆಗುತ್ತದೆ.


ಇದನ್ನೂ ಓದಿ: Potato: 5 ವರ್ಷಗಳಿಂದ ಜೊತೆಗಿದ್ದ ಆಲೂಗಡ್ಡೆಗೆ ನಾಮಕರಣ ಮಾಡಿದ ಮಹಿಳೆ!


ಹೌದು, ಉತ್ತರ ಕೆರೊಲಿನಾ ಮೂಲದ ದಿ ಪೆಸ್ಟ್ ಇನ್ಫಾರ್ಮರ್ ಎಂಬ ಕೀಟ ಕಂಪನಿಯು ಮನೆಯಲ್ಲಿ ಜಿರಳೆ ಬಿಟ್ಟುಕೊಳ್ಳಿ ನಿಮಗೆ ಹಣ ನೀಡುತ್ತೇವೆ ಅನ್ನೋ ಒಂದು ವಿಚಿತ್ರ ಆಫರ್ ನೀಡಿದೆ. ಮನೆಯಲ್ಲಿ ಜಿರಳೆ ಬಿಟ್ಟುಕೊಂಡರೆ ಹಣ ಕೊಡ್ತಾರಾ? ಇದೆಂಥಾ ವಿಚಿತ್ರ ಅನ್ನಿಸಬಹುದಲ್ವಾ ನಿಮಗೆ. ಆದರೆ ಇದರ ಹಿಂದಿನ ಅಸಲಿಯತ್ತು ಬೇರೇನೆ ಇದೆ ನೊಡಿ.


ಮನೆಯೊಳಗೆ ಜಿರಳೆ ಬಿಟ್ಟುಕೊಂಡರೆ ಒಂದೂವರೆ ಲಕ್ಷ
ದಿ ಪೆಸ್ಟ್ ಇನ್ಫಾರ್ಮರ್ ಕೀಟ ಕಂಪನಿಯ ಘೋಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೀಟ ಕಂಪನಿಯು 100 ಅಮೆರಿಕನ್ ಜಿರಳೆಗಳನ್ನು ಮನೆಗಳಿಗೆ ಬಿಟ್ಟುಕೊಂಡರೆ ಮನೆ ಮಾಲೀಕರಿಗೆ 1.5 (US $2,000 ) ಲಕ್ಷ ಪಾವತಿಸುವುದಾಗಿ ಹೇಳಿದೆ. ಸುಮಾರು 100 ಜಿರಳೆಗಳಿಗೆ ಆಶ್ರಯ ನೀಡಲು ಒಪ್ಪಿಗೆ ನೀಡುವಂತಹ 5, 6 ಮನೆ ಮಾಲೀಕರನ್ನು ಕಂಪನಿ ಹುಡುಕುತ್ತಿದ್ದು, ಅವಕಾಶ ನೀಡಿದ ಮಾಲೀಕರಿಗೆ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.


ದಿ ಪೆಸ್ಟ್ ಇನ್ಫಾರ್ಮರ್ ಕಂಪನಿಯ ಉದ್ದೇಶ ಏನು?
ಮನೆಗಳಲ್ಲಿ ಜಿರಳೆ ಸಂಗ್ರಹಿಸುವ ಕಂಪನಿಯ ಉದ್ದೇಶ, ಜಿರಳೆಗಳನ್ನು ಮನೆಯಿಂದ ಹೇಗೆ ತೆರವುಗೊಳಿಸುವುದು ಎಂಬುದನ್ನು ಕಂಡುಹಿಡಿಯುವುದಾಗಿದೆ. ಈ ಪ್ರಕ್ರಿಯೆಯು "ನಿರ್ದಿಷ್ಟ ಕೀಟ ನಿಯಂತ್ರಣ ತಂತ್ರ"ವನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಅಧ್ಯಯನವು ಸುಮಾರು 30 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಕಂಪನಿಯು ಕೀಟ ಕಾರ್ಮಿಕರನ್ನು ನಿಯೋಜಿಸುತ್ತದೆ, ಅವರು ಕೀಟಗಳನ್ನು ತೊಡೆದುಹಾಕಲು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಾರೆ ಎಂದು ತಿಳಿಸಿದೆ.


ಜಿರಳೆ ಅಧ್ಯಯನವು ಕೆಲವು ಷರತ್ತುಗಳನ್ನು ಸಹ ಹೊಂದಿದೆ. ಷರತ್ತು ಪ್ರಕಾರ ಮನೆಯ ಮಾಲೀಕರ ಒಪ್ಪಿಗೆಯು ಲಿಖಿತ ರೂಪದಲ್ಲಿ ಇರಬೇಕು, ಮನೆ ಮಾಲೀಕರು ಕನಿಷ್ಟ 21 ವರ್ಷ ವಯಸ್ಸಿನವರಾಗಿರಬೇಕು ಮತ್ತು30-ದಿನದ ಪ್ರಕ್ರಿಯೆಯಲ್ಲಿ, ಮನೆಮಾಲೀಕರು ಇತರ ಕೀಟ ನಿಯಂತ್ರಣ ತಂತ್ರಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.


ಅಮೇರಿಕನ್ ಜಿರಳೆಗಳೇ ಏಕೆ?
ಪ್ರಪಂಚದಲ್ಲಿ 4,000ಕ್ಕೂ ಹೆಚ್ಚು ವಿವಿಧ ರೀತಿಯ ಜಿರಳೆಗಳಿವೆ, ಆದರೆ ಅಮೇರಿಕನ್ ಜಿರಳೆಗಳು ಹೆಚ್ಚು ಸಾಮಾನ್ಯವಾಗಿದೆ. ಈ ಜಿರಳೆಗಳು ಅವುಗಳ ಗಟ್ಟಿಯಾದ ಶೆಲ್, ಸ್ಥಿತಿಸ್ಥಾಪಕತ್ವ ಮತ್ತು ವೇಗವಾಗಿ ಸಂತಾನೋತ್ಪತ್ತಿ ಮಾಡುವುದರಿಂದ ಇವುಗಳನ್ನು ತೊಡೆದುಹಾಕುವುದು ಸವಾಲಿನ ಕೆಲಸ. ಒಂದು ಹೆಣ್ಣು ಅಮೇರಿಕನ್ ಜಿರಳೆ ವಾರಕ್ಕೆ ಎರಡು ಮೊಟ್ಟೆಗಳನ್ನು ಉತ್ಪಾದಿಸುತ್ತದೆ. ನ್ಯೂಯಾರ್ಕ್ ಕೀಟ ನಿರ್ವಹಣಾ ಕಂಪನಿಯಾದ ಪೆಸ್ಟೆಕ್ ಪ್ರಕಾರ, ಪ್ರತಿ ಜಿರಳೆ ಸುಮಾರು 16 ಮೊಟ್ಟೆಗಳನ್ನು ಇಡುತ್ತದೆ ಮತ್ತು ಇದು 24 ರಿಂದ 38 ದಿನಗಳ ಸಮಯದಲ್ಲಿ ಮರಿಯಾಗಿ ಹೊರಬರುತ್ತವೆ. ಹೀಗಾಗಿ ಇವುಗಳ ಸಂಖ್ಯೆ ಅಧಿಕವಾಗಿದ್ದು, ಅವುಗಳನ್ನು ನಿವಾರಿಸಲು ಪ್ರಯೋಗ ಮಾಡಲಾಗುತ್ತಿದೆ.


ಇದನ್ನೂ ಓದಿ: Hero Rats: ಇನ್ಮುಂದೆ ಭೂಕಂಪದಲ್ಲಿ ಬದುಕುಳಿದವರನ್ನ ಇಲಿಗಳು ಪತ್ತೆ ಹಚ್ಚಿ ರಕ್ಷಿಸುತ್ತೆ


ಅದೇನೇ ಇದ್ದರೂ ಮನೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 100 ಜಿರಳೆ ಬಿಟ್ಟುಕೊಳ್ಳಲು ಅವಕಾಶ ನೀಡುವ ಮಾಲೀಕರದ್ದು ಡಬಲ್ ಗುಂಡಿಗೆಯೇ ಸರಿ.

Published by:Ashwini Prabhu
First published: