Office Hours: ಕೆಲಸದ ಅವಧಿ ನಂತರ ಉದ್ಯೋಗಿಗಳಿಗೆ ಮೆಸೇಜ್ ಕಳಿಸೋದು ಸರಿ ಅಲ್ಲ; ಹೀಗೊಂದು ಹೊಸ ಕಾನೂನು

ಈ ಕಾನೂನಿನ ಪ್ರಕಾರ ಮೇಲಾಧಿಕಾರಿಗಳು ಅಥವಾ ಬಾಸ್  ಅಥವಾ ಮಾಲೀಕ ತನ್ನ ಸಿಬ್ಬಂದಿಗೆ ಕಚೇರಿಯ ಅವಧಿ ನಂತರ ಯಾವುದೇ ನಿರ್ದೇಶನ (Work Assigned Or Orders) ನೀಡುವಂತಿಲ್ಲ. ಒಂದು ವೇಳೆ ಸಂದೇಶ ಅಥವಾ ಕರೆ (Phone Call/ Message) ಮಾಡಿರುವ ಬಗ್ಗೆ ದೂರು ನೀಡಿದ್ರೆ ಮೇಲಾಧಿಕಾರಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ವರ್ಕ್ ಫ್ರಂ ಹೋಮ್

ವರ್ಕ್ ಫ್ರಂ ಹೋಮ್

  • Share this:
ಕಚೇರಿಯ ಅವಧಿ (Office Hours) ಮುಗಿದ ನಂತರವೂ ಉದ್ಯೋಗಿಗಳಿಗೆ (Employees) ಫೋನ್ ಅಥವಾ ಮೆಸೇಜ್ ಮಾಡೋದು ಕಾನೂನು ಪ್ರಕಾರ ಅಪರಾಧ ಎಂಬ ಹೊಸ ನಿಯಮವನ್ನು ದೇಶವೊಂದು ಜಾರಿಗೆ ತಂದಿದೆ. ಈ ಸಂಬಂಧ ಪೋರ್ಚುಗಲ್ (Portugal) ಕಾನೂನು (New Law) ಸಿದ್ಧಪಡಿಸಿದೆ. ಈ ಕಾನೂನಿನ ಪ್ರಕಾರ ಮೇಲಾಧಿಕಾರಿಗಳು ಅಥವಾ ಬಾಸ್  ಅಥವಾ ಮಾಲೀಕ ತನ್ನ ಸಿಬ್ಬಂದಿಗೆ ಕಚೇರಿಯ ಅವಧಿ ನಂತರ ಯಾವುದೇ ನಿರ್ದೇಶನ (Work Assigned Or Orders) ನೀಡುವಂತಿಲ್ಲ. ಒಂದು ವೇಳೆ ಸಂದೇಶ ಅಥವಾ ಕರೆ (Phone Call/ Message) ಮಾಡಿರುವ ಬಗ್ಗೆ ದೂರು ನೀಡಿದ್ರೆ ಮೇಲಾಧಿಕಾರಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಡೇಲಿ ಮೇಲ್ ವರದಿ ಪ್ರಕಾರ, ಪೋರ್ಚುಗಲ್ ಸಂಸತ್ ನಲ್ಲಿ ಈ ಬಗ್ಗೆ ಕಾನೂನು ಅಂಗೀಕಾರಗೊಳಿಸಲಾಗಿದೆ. ಕಚೇರಿ ಸಮಯದ ನಂತರ, ವಾರಂತ್ಯದಲ್ಲಿ (Weekend) ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇ-ಮೇಲ್ (E-Mail) ಮಾಡೋದು ಅಥವಾ ಕೆಲಸದ ವಿಚಾರವಾಗಿ ಯಾವುದೇ ಮಾಧ್ಯಮದ ಮೂಲಕ ಸಂಪರ್ಕಿಸಿದ್ರೆ ದಂಡ ರೂಪದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಕೆಲಸದ ಒತ್ತಡ ಹೆಚ್ಚಾಗುತ್ತಿದೆ

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಇಂದಿಗೂ ಹಲವರು ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಹಾಗಾಗಿ ಕಾರ್ಮಿಕರ ಹಿತ ಕಾಪಾಡುವ ಸದುದ್ದೇಶದಿಂದ ಈ ಹೊಸ ಕಾರ್ಮಿಕ ಕಾನೂನುಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪೋರ್ಚಗಲ್ ಸರ್ಕಾರ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:  Jio prepaid Plan: 11 ರೂ.ಗೆ 1GB ಡೇಟಾ!; ಜಿಯೋ ಕಡಿಮೆ ಬೆಲೆಯ ಪ್ಲಾನ್​ ಬಗ್ಗೆ ಇಲ್ಲಿದೆ ಮಾಹಿತಿ

ಯಾರಿಗೆ ಈ ಕಾನೂನು ಅನ್ವಯ ಆಗಲ್ಲ

ಈ ಹೊಸ ಕಾನೂನು ಪ್ರಕಾರ ವರ್ಕ್ ಫ್ರಮ್ ಹೋಮ್ ಕೆಲಸ ನೀಡುವ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿದ್ಯುತ್ ಮತ್ತು ಇಂಟರ್ ನೆಟ್ ಖರ್ಚು ಪಾವತಿಸಬೇಕು. ಒಂದು ಉದ್ಯೋಗಿಯ ಮಕ್ಕಳು ಚಿಕ್ಕವರಾಗಿದ್ರೆ ಉದ್ಯೋಗಿಗೆ ಮಗು ಎಂಟು ವರ್ಷಗಳು ಆಗೋವರೆಗೂ ವರ್ಕ್ ಫ್ರಂ ಹೋಮ್ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಪೋರ್ಚಗಲ್ ಸರ್ಕಾರ ಹೊಸ ಈ ನಿಯಮ 10ಕ್ಕಿಂತ ಕಡಿಮೆ ನೌಕರರನ್ನು ಹೊಂದಿರುವ ಸಣ್ಣ ಉದ್ದಿಮೆ/ ಕಂಪನಿಗಳಿಗೆ ಅನ್ವಯ ಆಗಲ್ಲ.

ಕಾರ್ಮಿಕ ಸಚಿವರು ಹೇಳಿದ್ದೇನು?

ಕೊರೊನಾ ಮಾಹಾಮಾರಿ (COVID 19) ಯಿಂದಾಗಿ ವರ್ಕ್ ಫ್ರಂ ಹೋಮ್ ಪರ್ಯಾಯ ವ್ಯವಸ್ಥೆಯಾಗಿ ಬದಲಾಗಿದೆ. ಕೆಲಸಗಳನ್ನು ಸುಲಭಗೊಳಿಸುವ ಮತ್ತು ಕಾರ್ಮಿಕರ ಹಿತ ಕಾಪಾಡಲು ಈ ಸುಗ್ರೀವಾಜ್ಞೆ ತರಲಾಗಿದೆ, ನಮ್ಮ ಹೊಸ ಕಾನೂನನ್ನು ಕಾರ್ಮಿಕ ವರ್ಗ ಸಹ ಸ್ವಾಗತಿಸಿದೆ ಎಂದು ಪೋರ್ಚುಗಲ್ ಕಾರ್ಮಿಕ ಸಚಿವ ಆನ ಮೆಂಡೆಸ್ ಗೊಡ್ನಿಹೋ ( Ana Mendes Godinho) ಹೇಳಿದ್ದಾರೆ.

ಇದನ್ನೂ ಓದಿ;  Work From Home - ವರ್ಕ್ ಫ್ರಂ ಹೋಮ್ ಮಾಡುವವರಿಗೆ ಶೇ 5 ತೆರಿಗೆ ವಿಧಿಸುವ ಚಿಂತನೆ

ಈ ತರಹದ ಕಾನೂನುಗಳು ಈಗಾಗಲೇ ಯುರೋಪಿಯನ್ ದೇಶಗಳಲ್ಲಿ ಚಾಲ್ತಿಯಲ್ಲಿವೆ. ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಸ್ಲೊವಾಕಿಯಾ ರಾಷ್ಟ್ರಗಳು ಕಾರ್ಮಿಕ ಹಿತ ಕಾಪಾಡುವ ಕಾನೂನುಗಳನ್ನು ಒಪ್ಪಿಕೊಂಡಿವೆ. ಕಾರ್ಮಿಕರನ್ನು ಆರೋಗ್ಯವಾಗಿರಿಸಲು ಪೋರ್ಚುಗಲ್ ಸರ್ಕಾರ ಈ  ಕಾನೂನು ತಂದಿದೆ ಎಂದು ಕಾರ್ಮಿಕ ಸಚಿವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿದೆಯಾ Work From Home?

ಅಂಕಿಅಂಶಗಳ ಪ್ರಕಾರ ನೋಡುವುದಾದರೆ, ಶೇಕಡಾ 40ರಷ್ಟು ಜನರು ಪದೇ ಪದೇ ವಿಡಿಯೋ ಕರೆಗಳಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ, ಮನೆಯಿಂದ ಕೆಲಸ ಮಾಡುವುದು ಅವರ ಕೆಲಸದ ಹೊರೆ ಮತ್ತು ಪ್ರಕ್ರಿಯೆಯಲ್ಲಿಯೂ ಹೆಚ್ಚಾಗಿದ್ದು, ಇದರಿಂದಾಗಿ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಉದಾಹರಣೆಗೆ ನೀವು ನಿಮ್ಮ ಮಕ್ಕಳೊಂದಿಗೆ ಆಟವಾಡುತ್ತಿರುವಿರಿ ಮತ್ತು ಇದ್ದಕ್ಕಿದ್ದಂತೆ ನಿಮ್ಮ ಬಾಸ್‌ನಿಂದ ಇಮೇಲ್ ಸ್ವೀಕರಿಸುತ್ತೀರಿ. “ಈ ಕೆಲಸ ಬೇಗನೆ ಮುಗಿಸಿ” ಎಂದು ಬರೆದಿರುತ್ತಾರೆ. ಹೀಗೆ ‘ಮನೆಯಿಂದ ಕೆಲಸ’ ಮಾಡುವುದರಿಂದ ಒಂದು ರೀತಿಯಲ್ಲಿ ಒತ್ತಡ ಜಾಸ್ತಿ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಮನೆಯಿಂದ ಕೆಲಸ ಮಾಡುವ ಪದ್ದತಿ ನಿಮ್ಮ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರಬಹುದು
Published by:Mahmadrafik K
First published: