Idli Ice Cream: ಇದು ಇಡ್ಲಿಯಿಂದ ಮಾಡಿದ ಐಸ್‌ ಕ್ರೀಮೋ? ಐಸ್‌ ಕ್ರೀಮ್‌ನಿಂದ ಮಾಡಿದ ಇಡ್ಲಿಯೋ?

ಐಸ್ ಕ್ರೀಮ್ ನೆನೆಸಿಕೊಂಡ ತಕ್ಷಣವೇ ಮನಸ್ಸಿಗೆ ಹಾಯ್ ಎನಿಸುತ್ತೆ. ಇಡ್ಲಿ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಬರುತ್ತೆ. ಆದ್ರೆ ಈ ಇಡ್ಲಿ ಐಸ್‌ ಕ್ರೀಮ್ ಅಂದ್ರೆ ಏನು? ಇದನ್ನು ಮಾಡೋದು ಹೇಗೆ? ನೀವೇ ನೋಡಿ ಈ ಹೊಸ ತಿಂಡಿ!

ಇಡ್ಲಿ ಐಸ್ ಕ್ರೀಮ್

ಇಡ್ಲಿ ಐಸ್ ಕ್ರೀಮ್

 • Share this:
  ಸಾಮಾನ್ಯವಾಗಿ ಇಡ್ಲಿ (Idli) ಎಂದರೆ ಸಾಕು ದಕ್ಷಿಣ ಭಾರತದ (South India) ಜನಪ್ರಿಯ ಮತ್ತು ಬಹುತೇಕರು ಇಷ್ಟ ಪಡುವಂತಹ ನೆಚ್ಚಿನ ಉಪಾಹಾರ (Tiffin) ಎಂದು ಹೇಳಬಹುದು. ಇದನ್ನು ನಾವೆಲ್ಲಾ ಬಿಸಿ ಬಿಸಿ ಸಾಂಬಾರ್ (Sambar) ಮತ್ತು ಕೊಬ್ಬರಿ ಚಟ್ನಿ ಅಥವಾ ಶೇಂಗಾ ಚಟ್ನಿಯೊಂದಿಗೆ ಹಚ್ಚಿಕೊಂಡು ಸೇವಿಸುವುದುಂಟು. ಆದರೆ ಇತ್ತೀಚೆಗೆ ಕೆಲವು ಜನರು ಈ ಫುಡ್ ಮಿಕ್ಸಿಂಗ್ (Food Mixing) ಅನ್ನೋದನ್ನು ತುಂಬಾನೇ ಸಾಮಾನ್ಯವಾಗಿಸಿಕೊಂಡಿದ್ದಾರೆ ಎಂದು ಹೇಳಬಹುದು. ಹಿಂದೆ ದೋಸೆಯೊಂದಿಗೆ (dosa) ಐಸ್‌ಕ್ರೀಮ್ (Ice Cream) ಅನ್ನು ಮಿಕ್ಸ್ ಮಾಡಿದ್ದನ್ನು ನಾವು ಇಂಟರ್‌ನೆಟ್ ನಲ್ಲಿ ನೋಡಿದ್ದೆವು. ಈಗ ಸಹ ಅಂತಹದ್ದೇ ಒಂದು ವೀಡಿಯೋ ಸಖತ್ ವೈರಲ್ ಆಗುತ್ತಿದೆ ನೋಡಿ. ಈ ಬಾರಿ ಇಡ್ಲಿ ಯೊಂದಿಗೆ ಐಸ್‌ಕ್ರೀಮ್ ಅನ್ನು ಮಿಕ್ಸ್ ಮಾಡಿದ್ದಾರೆ ನೋಡಿ.

  ಹೊಸದಾಗಿ ಬಂದಿದೆ ಇಡ್ಲಿ ಐಸ್‌ ಕ್ರೀಮ್!

  ಏನಪ್ಪಾ ವಿಚಿತ್ರ ಇದು ಅಂತೀರಾ? ಹೌದು.. ಹಿಂದೊಮ್ಮೆ ದೋಸೆ ಐಸ್‌ಕ್ರೀಮ್ ಮಾಡಿ ಆಯ್ತು, ಈಗ ಇಡ್ಲಿ ಸರದಿ ಎನ್ನುವಂತೆ ಆಗಿದೆ. ಈ ಇಡ್ಲಿ ಐಸ್‌ಕ್ರೀಮ್ ಅನ್ನು ಮಾಡಿ ಫುಡ್ ಬ್ಲಾಗರ್ ಒಬ್ಬರು ‘ದಿ ಗ್ರೇಟ್ ಇಂಡಿಯನ್ ಫುಡಿ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೋವನ್ನು ಹಂಚಿ ಕೊಂಡಿದ್ದಾರೆ. ಈ ವಿಶಿಷ್ಟವಾದ ತಿಂಡಿ ಇಡ್ಲಿ ಐಸ್‌ಕ್ರೀಮ್ ಅನ್ನು ದೆಹಲಿಯ ಲಜಪತ್ ನಗರ್ ದಲ್ಲಿರುವ ಒಂದು ಹೊಟೇಲ್ ಒಂದರಲ್ಲಿ ತಯಾರಿಸುತ್ತಾರೆ ಎಂದು ಹೇಳಲಾಗುತ್ತಿದೆ.

  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

  ಈ ವೀಡಿಯೋವನ್ನು ಫುಡ್ ಬ್ಲಾಗರ್ ಒಬ್ಬರು ಕ್ಷಮೆ ಕೇಳುತ್ತಾ ಹಂಚಿ ಕೊಂಡಿದ್ದಾರೆ, ಆದರೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಬಳಕೆದಾರರು ಇದನ್ನು ಕ್ಷಮಿಸುವಂತೆ ಮಾತ್ರ ಕಾಣಿಸುತ್ತಿಲ್ಲ. ಕೆಲವರು ಇದ್ಯಾವ ಡಿಷ್, ಇದನ್ನು ಯಾರು ತಿನ್ನುತ್ತಾರೆ ಎಂದು ಕೇಳಿದರೆ, ಇನ್ನೂ ಕೆಲವರು ಇದನ್ನು ಒಪ್ಪಲೇ ಇಲ್ಲ ಎಂದು ಹೇಳಬಹುದು. ಇನ್ನೂ ಕೆಲವರು ‘ಇಂತಹ ಒಳ್ಳೆಯ ತಿಂಡಿಗಳನ್ನು ಹೀಗೆ ಯಾವುದೋ ಒಂದು ಭಕ್ಷ್ಯದ ಜೊತೆಗೆ ಸೇರಿಸಿ ಹಾಳು ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Viral News: ಎಲಿಯನ್​ಗೆ ಕಬಾಬ್ ಕಳಿಸಿದ ಟರ್ಕಿಯ ಶೆಫ್, ಆಮೇಲೇನಾಯ್ತು?

  ತಯಾರಿ ಬಗ್ಗೆಯೂ ಇದೆ ವಿಡಿಯೋ

  ಈ ವೀಡಿಯೋದಲ್ಲಿ ಮೊದಲು ಇಡ್ಲಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಂಡು ಅದರ ಮೇಲೆ ಚಟ್ನಿ ಮತ್ತು ಸಾಂಬಾರ್ ಹಾಕಿ ಮತ್ತು ಅದನ್ನು ಚೆನ್ನಾಗಿ ಕಲಸಿಕೊಂಡು ನಂತರ ಅದನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಅದರ ಮೇಲೆ ಐಸ್‌ಕ್ರೀಮ್ ಅನ್ನು ಹಾಕಿ ಈ ಇಡ್ಲಿ ಐಸ್‌ಕ್ರೀಮ್ ಅನ್ನು ತಯಾರು ಮಾಡಿರುವ ಬಗ್ಗೆ ನೋಡಬಹುದು.

  ಓ ದೇವರೇ ಏನಿದು ಎಂದ ನೆಟ್ಟಿಗರು!

  ಇದನ್ನು ನೋಡಿದ ನೆಟ್ಟಿಗರು ‘ನಾವು ಏನು ತಪ್ಪು ಮಾಡಿದ್ದೇವೆ, ನಮಗೇಕೆ ಇಂತಹ ಮಿಕ್ಸ್ ಮಾಡಿದ ವಿಚಿತ್ರ ತಿಂಡಿಗಳನ್ನು ನೋಡುವುದಕ್ಕೆ ಸಿಗುತ್ತಿದೆ’ ಎಂದು ಹೇಳಿದರೆ, ಇನ್ನೊಬ್ಬ ಬಳಕೆದಾರರು ‘ಓ ದೇವರೇ..ಏನಿದು’ ಎಂದು ಕಾಮೆಂಟ್ ಅನ್ನು ಹಾಕಿದ್ದಾರೆ.

  ವಿಡಿಯೋ ನೋಡಿದವರು ಗರಂ

  ಮೂರನೆಯ ಬಳಕೆದಾರರು ‘ನನಗೆ ಇಡ್ಲಿ ಮತ್ತು ಐಸ್‌ಕ್ರೀಮ್ ಎರಡರ ಮೇಲೆ ಇರುವಂತಹ ಪ್ರೀತಿಯನ್ನು ಈ ವೀಡಿಯೋ ದೂರ ಮಾಡಿದೆ’ ಎಂದು ಬರೆದು ಕೊಂಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದ ನೆಟ್ಟಿಗರು ಗರಂ ಆದದ್ದು ನಿಜವಾದ ಸಂಗತಿ ಎಂದು ಹೇಳಬಹುದು.
  ಮಸಾಲ ದೋಸೆ-ಐಸ್‌ ಕ್ರೀಮ್‌ಗೂ ಆಕ್ರೋಶ

  ಹೀಗೆ ಕೆಲವು ತಿಂಗಳುಗಳ ಹಿಂದೆ ದೆಹಲಿಯ ಹೊಟೇಲ್ ಸಹ ಮಸಾಲೆ ದೋಸೆಯೊಂದಿಗೆ ಐಸ್‌ಕ್ರೀಮ್ ಅನ್ನು ಸೇರಿಸಿ ತಯಾರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹರಿ ಬಿಟ್ಟಿದ್ದರು. ಆಗಲೂ ಸಹ ನೆಟ್ಟಿಗರು ಇದನ್ನು ನೋಡಿ ಗರಂ ಆಗಿದ್ದರು. ವಿಚಿತ್ರ ಎಂದರೆ ಆವಾಗಲೂ ಇದೇ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಿಂದ ಆ ವೀಡಿಯೋವನ್ನು ಹಂಚಿ ಕೊಳ್ಳಲಾಗಿತ್ತು.

  ಇದನ್ನೂ ಓದಿ: Viral News: ಮಗಳಿಗಾಗಿ ಫುಡ್​​ ಆರ್ಡರ್​ ಮಾಡಿದ ತಂದೆ.. ಫ್ರೆಂಚ್​ ಪ್ರೈ ತೆರೆದಾಗ ಕಾದಿತ್ತು ಶಾಕ್​!

  ಆದರೆ ಜಪಾನ್ ನಲ್ಲಿರುವ ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯವಾಗಿ ಇಂತಹ ಖಾರದ ಭಕ್ಷ್ಯಗಳ ಜೊತೆಗೆ ಸಿಹಿಯಾಗಿರುವ ಭಕ್ಷ್ಯಗಳನ್ನು ಮಿಕ್ಸ್ ಮಾಡಿ ಕೊಡಲಾಗುತ್ತದೆ ಅಂತೆ. ಹೀಗೆ ಇನ್‌ಸ್ಟಾಗ್ರಾಮ್ ಬಳಕೆದಾರರಾದ ಜೇಸ್ಸಿ ಒಗುಂಡಿರನ್ ಹಂಚಿಕೊಂಡ ವೀಡಿಯೋದಲ್ಲಿ ಮಿಸೊ ರಾಮೆನ್ ಸೂಪ್ ನೊಂದಿಗೆ ಐಸ್‌ಕ್ರೀಮ್ ಅನ್ನು ಸೇರಿಸಿ ನೀಡಲಾಗುತ್ತದೆ ಎಂಬುದನ್ನು ನೋಡಬಹುದಿತ್ತು. ಈ ಸೂಪ್ ಗೆ ಒಂದು ರೀತಿಯ ಕ್ರೀಮ್ ಸ್ವಾದವನ್ನು ಇದು ನೀಡುತ್ತದೆ ಎಂದು ಅಲ್ಲಿನವರು ಹೇಳುತ್ತಾರೆ.
  Published by:Annappa Achari
  First published: