• Home
  • »
  • News
  • »
  • trend
  • »
  • Gold Chain: ಚಿನ್ನದ ಸರವನ್ನೇ ಹೊತ್ತೊಯ್ದ ಇರುವೆಗಳು; ಅಬ್ಬಬ್ಬಾ! ಇರುವೆಗಳಿಗೂ ಇಷ್ಟೊಂದು ಚಿನ್ನದ ಮೋಹವೇ

Gold Chain: ಚಿನ್ನದ ಸರವನ್ನೇ ಹೊತ್ತೊಯ್ದ ಇರುವೆಗಳು; ಅಬ್ಬಬ್ಬಾ! ಇರುವೆಗಳಿಗೂ ಇಷ್ಟೊಂದು ಚಿನ್ನದ ಮೋಹವೇ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮನುಷ್ಯನ ಈ ಥಳಕು ಬಳುಕಿನ ಪ್ರಪಂಚದಲ್ಲಿನ ವಸ್ತುಗಳ ಮೇಲೆ ಮೋಹ ಹುಟ್ಟಿದೆಯೇ ಎಂದು ಅನಿಸುತ್ತದೆ. ಅರೇ, ಆ ಪುಟಾಣಿ ಕೀಟಗಳ ಬಗ್ಗೆ ಹೀಗೆಲ್ಲಾ ಯೋಚಿಸುತವಂತೆ ಮಾಡುವ ಆ ವಿಡಿಯೋ ಅಂತದ್ದೇನಿದೆ ಎನ್ನುತ್ತೀರಾ? ಇರುವೆಗಳು ಚಿನ್ನದ ಸರವನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯವಿದೆ!

  • Share this:

ಇರುವೆಗಳು ಎಲ್ಲಾ ಕಡೆ ಕಂಡು ಬರುವ ಸಾಮಾನ್ಯ ಕೀಟಗಳಾಗಿರಬಹುದು (Insects), ಆದರೆ ಅವುಗಳ ಒಗ್ಗಟ್ಟು, ಆಹಾರ ಸಂಗ್ರಹಣೆಗಾಗಿ ಅವುಗಳು ಪಡುವ ಶ್ರಮ, ಅವುಗಳ ಸಹಬಾಳ್ವೆ ಮನುಷ್ಯರಿಗೂ ಸಹ ಮಾದರಿಯಾಗುವಂತದ್ದು. ಅತ್ಯಂತ ಚಿಕ್ಕ ದೇಹಾಕೃತಿಯನ್ನು ಹೊಂದಿರುವ ಇರುವೆಗಳು, ತಮ್ಮ ದೇಹದ ಗಾತ್ರಕ್ಕಿಂತಲೂ ಹತ್ತು ಪಟ್ಟು ಭಾರದ ವಸ್ತುಗಳನ್ನು ಎತ್ತಿಕೊಂಡು ಸಾಗುವ ದೃಶ್ಯವನ್ನು ನಾವು ಹಲವಾರು ಬಾರಿ ಕಂಡಿರುತ್ತೇವೆ. ಸಾಮಾನ್ಯವಾಗಿ ಅವು ಎತ್ತಿಕೊಂಡು ಹೋಗುವುದು ತಮ್ಮ ಆಹಾರಗಳನ್ನು (Food) ಮಾತ್ರ. ಆದರೆ ಬದಲಾವಣೆ ಜಗದ ನಿಯಮ ಎನ್ನುತ್ತಾರಲ್ಲ, ಹಾಗೆ ಇರುವೆಗಳ (Ants) ಆದ್ಯತೆಗಳು ಕೂಡ ಬದಲಾಗಿರಬಹುದೇ? ಯಾಕೆ ಈ ಪ್ರಶ್ನೆ ಎಂದು ಆಲೋಚಿಸುತ್ತಿದ್ದೀರಾ? ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವಿಡಿಯೋ ಒಂದನ್ನು ನೋಡಿದರೆ, ನಿಮ್ಮ ಮನಸ್ಸಲ್ಲೂ ಇಂತಹ ಒಂದು ಪ್ರಶ್ನೆ ಖಂಡಿತಾ ಮೂಡುತ್ತದೆ.


ಅದನ್ನು ನೋಡಿದರೆ, ಕೇವಲ ತಾವಾಯಿತು, ತಮ್ಮ ಪ್ರಪಂಚವಾಯಿತು ಮತ್ತು ಆಹಾರ ಸಂಗ್ರಹಣೆಯ ಕೆಲಸವಾಯಿತು ಎಂಬಂತೆ ಇದ್ದ ಇರುವೆಗಳಿಗೆ, ಮನುಷ್ಯನ ಈ ಥಳಕು ಬಳುಕಿನ ಪ್ರಪಂಚದಲ್ಲಿನ ವಸ್ತುಗಳ ಮೇಲೆ ಮೋಹ ಹುಟ್ಟಿದೆಯೇ ಎಂದು ಅನಿಸುತ್ತದೆ. ಅರೇ, ಆ ಪುಟಾಣಿ ಕೀಟಗಳ ಬಗ್ಗೆ ಹೀಗೆಲ್ಲಾ ಯೋಚಿಸುತವಂತೆ ಮಾಡುವ ಆ ವಿಡಿಯೋ ಅಂತದ್ದೇನಿದೆ ಎನ್ನುತ್ತೀರಾ? ಇರುವೆಗಳು ಚಿನ್ನದ ಸರವನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯವಿದೆ!


ಚಿನ್ನದ ಸರವನ್ನು ಹೊತ್ತುಕೊಂಡು ಹೋಗುತ್ತಿರುವ ಇರುವೆಗಳು
ಟ್ವಿಟ್ಟರ್ನಲ್ಲಿ, ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‍ಎಸ್) ಸುಸಂತಾ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಂಡೆಯ ಮೇಲ್ಮೈಯ ಪ್ರದೇಶದಲ್ಲಿ ನೂರಾರು ಕಪ್ಪು ಇರುವೆಗಳ ಗುಂಪು ಚಿನ್ನದ ಸರದಂತೆ ಕಾಣುವ ಆಭರಣವೊಂದನ್ನು ಎತ್ತಿಕೊಂಡು ಸಾಗುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ:  Elephant video: ಮರಿ ಆನೆಯೊಂದು ಈ ವ್ಯಕ್ತಿಯನ್ನು ಹೇಗೆ ಮುದ್ದಾಡಿದೆ ನೋಡಿ!


ಸುಸಂತಾ ನಂದ ಅವರು ಈ ವಿಡಿಯೋಗೆ “ಚಿನ್ನದ ಅತ್ಯಂತ ಪುಟಾಣಿ ಕಳ್ಳ ಸಾಗಾಣೆದಾರರು. ಪ್ರಶ್ನೆ ಏನಪ್ಪಾ ಅಂದರೆ, ಐಪಿಸಿಯ ಯಾವ ಸೆಕ್ಷನ್‍ನ ಅಡಿಯಲ್ಲಿ ಇವರ ಮೇಲೆ ದೂರು ದಾಖಲಿಸಬಹುದು?” ಎಂಬ ಅಡಿಬರಹವನ್ನು ಕೂಡ ನೀಡಿದ್ದಾರೆ. ಇದೇನು ಹೊಸ ವಿಡಿಯೋವಲ್ಲ, ಕಳೆದ ವರ್ಷ ಕೂಡ ಇದು ವೈರಲ್ ಆಗಿತ್ತು.


ಇರುವೆಗಳ ಈ ಕೆಲಸವನ್ನು ನೋಡಿ ಅಚ್ಚರಿಪಟ್ಟ ಜನ
ಸುಸಂತಾ ಅವರ ಈ ಪೋಸ್ಟ್ ಸಾಕಷ್ಟು ಮಂದಿ ನೆಟ್ಟಿಗರ ಗಮನವನ್ನು ಸೆಳೆದಿದೆ. ಈಗಾಗಲೇ ಇದನ್ನು 1,43,000 ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಬಹಳಷ್ಟು ಮಂದಿ ಇರುವೆಗಳ ಈ ಕೆಲಸವನ್ನು ನೋಡಿ ಅಚ್ಚರಿಪಟ್ಟು ತಮ್ಮ ಪ್ರತಿಕ್ರಿಯೆಗಳನ್ನು ಕೂಡ ಬರೆದಿದ್ದಾರೆ. ಅದರಲ್ಲೂ ಒಬ್ಬ ನೆಟ್ಟಿಗರಂತೂ, ನಂದ ಅವರು ಆ ವಿಡಿಯೋಗೆ ನೀಡಿರುವ ಅಡಿಬರಹಕ್ಕೆ ಮಜವಾದ ಪ್ರತಿಕ್ರಿಯೆ ನೀಡಿದ್ದಾರೆ.


“ಮೊದಲು ಅವರ ಲಿಂಗವನ್ನು ಕಂಡು ಹಿಡಿಯಬೇಕು. ಹೆಣ್ಣಾಗಿದ್ದರೆ, ಅದನ್ನು ಕಾಪಾಡಿಕೊಳ್ಳುವುದು ಮತ್ತು ಸ್ಥಾನಮಾನದ ಜೊತೆ ಬದುಕುವುದು ಅವರ ಹಕ್ಕು. ಗಂಡಸರಿಗೆ ದೂರು ದಾಖಲಿಸುವ ಅಗತ್ಯ ಇಲ್ಲ, ರಾಕುದ ಕೆಲವು ಪೊಲೀಸರನ್ನು ಸಂಪರ್ಕಿಸುತ್ತಾರೆ ಮತ್ತು ಅವರು ಸ್ಥಳದಲ್ಲೇ ಇತ್ಯರ್ಥ ಮಾಡುತ್ತಾರೆ” ಎಂದು ಅವರು ಬರೆದಿದ್ದಾರೆ.


ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು
“ಅವುಗಳಿಗೆ ಸ್ವಲ್ಪ ಸಕ್ಕರೆಯನ್ನು ಕೊಟ್ಟು ಆ ಚಿನ್ನದ ಸರವನ್ನು ವಾಪಾಸು ಪಡೆದುಕೊಳ್ಳಬಹುದು” ಎಂದು ಒಬ್ಬ ನೆಟ್ಟಿಗ ಬರೆದಿದ್ದರೆ, ಇನ್ನೊಬ್ಬರು, “ಏಕತೆ, ಬಲಿಷ್ಟ ಬಂಧ ಮತ್ತು ಆಹಾರಕ್ಕಾಗಿ ಪರಿಶ್ರಮ ಪಡುವ ಸೆಕ್ಷನ್‍ನ ಅಡಿಯಲ್ಲಿ. ಇದನ್ನೆಲ್ಲಾ ಕಲಿಸುವ ಇರುವೆಗಳಿಗೆ ಧನ್ಯವಾದಗಳು. ಪ್ರಶಂಸೆಯೇ ಅವುಗಳ ಮೇಲೆ ತೆಗೆದುಕೊಳ್ಳಬೇಕಾದ ಕ್ರಮ” ಎಂದು ಪ್ರತಿಕ್ರೀಯಿಸಿದ್ದಾರೆ.


ಇದನ್ನೂ ಓದಿ: Dog Video: ಈ ನಾಯಿಗೆ ಮನೆಯಲ್ಲಿ ಸ್ನಾನ ಮಾಡುವುದಂದ್ರೆ ತುಂಬಾ ಬೋರ್! ಅದಕ್ಕೇನು ಮಾಡುತ್ತೆ ಗೊತ್ತಾ?


“ಅವರು ಇದನ್ನು ಇರುವೆಗಳ ರಾಣಿಗಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ” ಎಂದು ಒಬ್ಬ ನೆಟ್ಟಿಗ ಬರೆದಿದ್ದರೆ, “ಯಾವುದೂ ಅಸಾಧ್ಯವಲ್ಲ, ಸಾಮೂಹಿಕ ಪ್ರಯತ್ನದಿಂದ ಏನನ್ನು ಬೇಕಾದರೂ ಮಾಡಬಹುದು. ತಂಡದ ಉತ್ಸಾಹ ಮತ್ತು ತಂಡದ ಜೊತೆಗಿನ ಕೆಲಸ ನಮಗೆ ಏನನ್ನು ಬೇಕಾದರೂ ಸಾಧಿಸಲು ಸಹಾಯ ಮಾಡುತ್ತದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.

Published by:Ashwini Prabhu
First published: