HOME » NEWS » Trend » COIN STAYED IN NOSE OF A RUSSIAN MAN FOR PAST 50 YEARS SNVS

ಐವತ್ತು ವರ್ಷದಿಂದ ಈತನ ಮೂಗೊಳಗಿತ್ತು ನಾಣ್ಯ; ಅಮ್ಮನಿಗೆ ಹೆದರಿ ಮುಚ್ಚಿಟ್ಟವನಿಗೆ ಆಗಿತ್ತು ಫಜೀತಿ

ಆರನೇ ವಯಸ್ಸಿನಲ್ಲಿ ಆಡುವಾಗ ಕಾಯಿನ್ವೊಂದನ್ನು ಮೂಗಿಗೇರಿಸಿಕೊಂಡಿದ್ದ ರಷ್ಯನ್ ವ್ಯಕ್ತಿ ತನ್ನ ಅಮ್ಮನಿಗೆ ಹೇಳಲು ಸುಮ್ಮನಿದ್ದ. ಐವತ್ತು ವರ್ಷದ ನಂತರ ಉಸಿರಾಡಲು ಕಷ್ಟವಾದಾಗ ವೈದ್ಯರು ಈ ನಾಣ್ಯವನ್ನು ಆಪರೇಷನ್ ಮಾಡಿ ತೆಗೆದಿದ್ದಾರೆ.

news18
Updated:January 5, 2021, 1:48 PM IST
ಐವತ್ತು ವರ್ಷದಿಂದ ಈತನ ಮೂಗೊಳಗಿತ್ತು ನಾಣ್ಯ; ಅಮ್ಮನಿಗೆ ಹೆದರಿ ಮುಚ್ಚಿಟ್ಟವನಿಗೆ ಆಗಿತ್ತು ಫಜೀತಿ
ರಷ್ಯನ್ ವ್ಯಕ್ತಿಯ ಮೂಗಿನೊಳಗಿದ್ದ ನಾಣ್ಯ
  • News18
  • Last Updated: January 5, 2021, 1:48 PM IST
  • Share this:
ಮಾಸ್ಕೋ, ರಷ್ಯಾ: ಐವತ್ತು ವರ್ಷಗಳಿಂದ ವ್ಯಕ್ತಿಯೊಬ್ಬನ ಮೂಗಿನೊಳಗೆ ಸೇರಿಕೊಂಡಿದ್ದ ಹಳೆಯ ನಾಣ್ಯವೊಂದನ್ನ ವೈದ್ಯರು ಯಶಸ್ವಿಯಾಗಿ ಹೊರತೆಗೆದ ಘಟನೆ ರಷ್ಯಾದ ಮಾಸ್ಕೋ ನಗರದಿಂದ ವರದಿಯಾಗಿದೆ. 59 ವರ್ಷದ ಈ ವ್ಯಕ್ತಿಯ ಮೂಗಿನೊಳಗಿದ್ದ ನಾಣ್ಯದ ಸುತ್ತ ಕಲ್ಲಿನಂಥ ವಸ್ತುಗಳು ಆವರಿಸಿದ್ದವು. ಉಸಿರಾಡಲು ಕಷ್ಟಪಡುತ್ತಿದ್ದ ಈತನ ಮೂಗಿನ ಸ್ಕ್ಯಾನ್ ಮಾಡಿಸಿದಾಗ ಯಾವುದೋ ವಸ್ತು ಇರುವುದು ಬೆಳಕಿಗೆ ಬಂದಿತ್ತು. ನಂತರ ವೈದ್ಯರು ಎಂಡೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಮೂಲಕ ಈ ಕಲ್ಲುಗಳನ್ನ ಹೊರತೆಗೆದರು. ಈ ಕಲ್ಲಿನ ಜೊತೆ ಹಳೆಯ ನಾಣ್ಯವೂ ಹೊರಬಂದಿದೆ.

59 ವರ್ಷದ ಈ ವ್ಯಕ್ತಿ 6 ವರ್ಷದ ಬಾಲಕನಾಗಿದ್ದಾಗ ನಾಣ್ಯವನ್ನ ಮೂಗಿನೊಳಗೆ ಹಾಕಿಕೊಂಡಿದ್ದ. ಅದು ಒಳಗೆ ಹೋಗಿ ಅದನ್ನು ಹೊರತೆಗೆಯಲು ಆತನಿಗೆ ಆಗಲೇ ಇಲ್ಲ. ಬಹಳ ಕಟ್ಟುನಿಟ್ಟಿನ ಮತ್ತು ಶಿಸ್ತಿನ ತಾಯಿಗೆ ಈ ವಿಚಾರ ತಿಳಿಸಲು ಭಯಪಟ್ಟಿದ್ದ. ಹೇಗೋ ಉಸಿರಾಡಲು ಸಾಧ್ಯವಾಗುತ್ತಿದೆಯಲ್ಲಾ ಎಂದು ಈತ ಯಾರಿಗೂ ಅದನ್ನ ಹೇಳಲೇ ಇಲ್ಲ. ವರ್ಷಗಳುರುತ್ತಿರುವಂತೆಯೇ ಈತ ಆ ವಿಚಾರವನ್ನೇ ಮರೆತುಬಿಟ್ಟಿದ್ದ. ಐವತ್ತು ವರ್ಷದ ನಂತರ ತನ್ನ ಮೂಗಿನ ಬಲಹೊರಳೆಯಿಂದ ಉಸಿರಾಡಲು ಸಾಧ್ಯವಾಗದೇ ಹೋದಾಗ ವೈದ್ಯರ ಬಳಿ ಹೋದಾಗ ನಾಣ್ಯ ಸೇರಿದ ಕಥೆ ಹೊರಬಂದಿದೆ. ಸದ್ಯ ಈತ ಅಪಾಯದಿಂದ ಪಾರಾಗಿದ್ಧಾನೆ.

ಈ ನಾಣ್ಯ ಹಳೆದ ಸೋವಿಯತ್ ರಷ್ಯಾದಲ್ಲಿ ಅಸ್ತಿತ್ವದಲ್ಲಿ ಒಂದು ಕೋಪೆಕ್ ನಾಣ್ಯವಾಗಿದೆ. 1991ರವರೆಗೂ ಈ ನಾಣ್ಯ ಅಸ್ತಿತ್ವದಲ್ಲಿತ್ತೆನ್ನಲಾಗಿದೆ.

ಇದನ್ನೂ ಓದಿ: NRI Voting - ಎನ್ಆರ್​ಐಗಳಿಗೂ ಮತದಾನದ ಅವಕಾಶ: ವಿದೇಶಾಂಗ ಇಲಾಖೆ ಒಪ್ಪಿಗೆ

ಈ ರೀತಿ ಮೂಗಿನೊಳಗೆ ವಸ್ತುಗಳನ್ನ ಏರಿಸಿಕೊಂಡು ಫಜೀತಿ ಪಟ್ಟಿರುವ ಅನೇಕ ಮಂದಿಯ ನಿದರ್ಶನಗಳಿವೆ. ಇಂಗ್ಲೆಂಡ್​ನ ಸರ್ರೆ ನಗರದಲ್ಲಿ 2015ರಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿತ್ತು. 51 ವರ್ಷದ ಸ್ಟೀವ್ ಈಸ್ಟನ್ ಎಂಬ ವ್ಯಕ್ತಿ ಜೋರಾಗಿ ಸೀನಿದಾಗ ಮೂಗಿನಿಂದ ಬಂದೂಕು ಆಟಿಕೆಯ ನಳಿಕೆಯೊಂದು ನೆಲಕ್ಕೆ ಚಿಮ್ಮಿತ್ತು. ಅದು ಆ ವ್ಯಕ್ತಿ 7 ವರ್ಷದನಿದ್ದಾಗ ಮೂಗಿನೊಳಗೆ ಹಾಕಿಕೊಂಡಿದ್ದ ವಸ್ತು. ಆಗ ವೈದ್ಯರ ಬಳಿ ಹೋದರೂ ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಉಸಿರಾಡಲು ಆಗುತ್ತಿತ್ತಾದ್ದರಿಂದ ಸುಮ್ಮನಾಗಿಬಿಟ್ಟಿದ್ದ. ಆಗಾಗ್ಗೆ ತಲೆನೋವು ಬರುತ್ತಿತ್ತಾದರೂ ಅದು ಬೇರೆ ಕಾರಣಕ್ಕೆ ಎಂದಂದುಕೊಂಡು ಮೂಗಿನ ವಿಚಾರವನ್ನೇ ಮರೆತಿದ್ದ. ಒಮ್ಮೆ ದಿಢೀರನೇ ಜೋರಾಗಿ ಸೀನಿದಾಗ ಅನಿರೀಕ್ಷಿತವಾಗಿ ಆ ಆಟದ ಸಾಮಾನು ಮೂಗಿನಿಂದ ಚಿಮ್ಮಿದ್ದು ಕಂಡು ವಿಸ್ಮಿತಗೊಂಡ. ನಂತರ 44 ವರ್ಷದ ಮೂಗು ಭಾರ ಇಳಿದು ನಿರಾಳಗೊಂಡಿದ್ದಾರೆ.
Published by: Vijayasarthy SN
First published: January 5, 2021, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories