• Home
  • »
  • News
  • »
  • trend
  • »
  • Viral Photo: ಈ ಕಚೇರಿಯಲ್ಲಿರುವ ಕುರ್ಚಿಗಳು ನೋಡಿದ್ರೆ ನಿಮಗೆ ಭಯವಾಗೋದು ಗ್ಯಾರೆಂಟಿ!

Viral Photo: ಈ ಕಚೇರಿಯಲ್ಲಿರುವ ಕುರ್ಚಿಗಳು ನೋಡಿದ್ರೆ ನಿಮಗೆ ಭಯವಾಗೋದು ಗ್ಯಾರೆಂಟಿ!

ಶವ ಪೆಟ್ಟಿಗೆ ರೂಪದಲ್ಲಿರುವಂತಹ ಕುರ್ಚಿಗಳು

ಶವ ಪೆಟ್ಟಿಗೆ ರೂಪದಲ್ಲಿರುವಂತಹ ಕುರ್ಚಿಗಳು

Fear Office Chair goes to Trend: ತುಂಬ ಗಂಟೆಗಳ ಕಾಲ ಕೂತು ಕೆಲಸ ಮಾಡುವುದು ಅಂದ್ರೆ ಸುಮ್ಮನಾದ ಮಾತಲ್ಲ ಮತ್ತು ಇದು ಅಪಾಯ ಕಟ್ಟಿಟ್ಟ ಬುತ್ತಿ ಅಂತಾನೇ ಹೇಳ್ಬೋದು. ಹಾಗಾಗಿ ಇಲ್ಲೊಂದು ಆಫೀಸ್ ತನ್ನ ಉದ್ಯೋಗಿಗಳಿಗಾಗಿ ಏನು ಸ್ಪೆಷಲ್ ಚೇರ್ಸ್​ಗಳನ್ನು ನಿರ್ಮಿಸಿದ್ದಾರೆ.

  • Share this:

ನಾವೆಲ್ಲರೂ ‘ದೀರ್ಘಕಾಲದವರೆಗೆ ಕುಳಿತುಕೊಂಡು ಕೆಲಸ ಮಾಡುವುದು ತುಂಬಾನೇ ಅಪಾಯ’ ಮತ್ತು ‘ಕುಳಿತುಕೊಂಡು ಕೆಲಸ ಮಾಡುವುದು ಧೂಮಪಾನಮಾಡಿದಷ್ಟೇ  (Smoking)  ಅಪಾಯ’ ಅಂತೆಲ್ಲಾ ಜನರು ಹೇಳುವುದನ್ನು ಅನೇಕ ಬಾರಿ ಕೇಳಿರುತ್ತೇವೆ. ಅದರಲ್ಲೂ ಈ ಸರ್ಕಾರಿ ಕೆಲಸದ ಕಚೇರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕಂಪ್ಯೂಟರ್ (Computer) ಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಕೆಲಸ ಮಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಹೀಗೆ ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತುಕೊಂಡು ಕೆಲಸ ಮಾಡುವುದರಿಂದ ಅನೇಕ ಅಪಾಯಗಳಿವೆ ಅಂತ ಹೇಳುತ್ತಾರೆ ವೈದ್ಯರು. ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಅಂತ ಹೇಳುವಾಗ, ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಕುಳಿತುಕೊಳ್ಳಲು ಇರುವ ಕುರ್ಚಿಗಳನ್ನು ಹೇಗೆ ಡಿಸೈನ್ (Design)  ಮಾಡಿಸಿದ್ದಾರೆ ಅಂತ ನೀವು ಒಮ್ಮೆ ನೋಡಿದರೆ ಗ್ಯಾರೆಂಟಿ ಭಯ ಪಡ್ತೀರಾ .


ಶವಪೆಟ್ಟಿಗೆ ರೀತಿಯಲ್ಲಿ ಮಾಡಿಸಿರುವ ಕುರ್ಚಿಗಳು


ಚೇರ್‌ಬಾಕ್ಸ್ ಎಂಬ ಹೆಸರಿನ ಯುಕೆ ಕಂಪನಿಯು "ದಿ ಲಾಸ್ಟ್ ಶಿಫ್ಟ್ ಆಫೀಸ್ ಚೇರ್" ಎಂಬ ಪರಿಕಲ್ಪನೆಯೊಂದಿಗೆ ತಮ್ಮ ಕಂಪ್ಯೂಟರ್ ಗಳ ಮುಂದೆ ಹೆಚ್ಚು ಗಂಟೆಗಳ ಕಾಲ ಕುಳಿತು ಕೆಲಸ ಮಾಡುವ ಜನರಿಗಾಗಿ ಡಿಸೈನ್ ಮಾಡಿದ್ದಾರೆ ಅಂತ ಹೇಳಬಹುದು.


ಆದರೆ ಈ ಡಿಸೈನ್ ಮಾತ್ರ ಶವಪೆಟ್ಟಿಗೆ ಆಕಾರದಲ್ಲಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಈ ಕುರ್ಚಿಗಳನ್ನು ಶವದಪೆಟ್ಟಿಗೆಯನ್ನು ಹೋಲುವ ರೀತಿಯಲ್ಲಿ ನಿರ್ಮಿಸಲಾಗಿದೆ ಮತ್ತು ಶವಪೆಟ್ಟಿಗೆ ವಿನ್ಯಾಸಗಳಿಂದ ಪ್ರೇರಿತವಾಗಿದೆ ಅಂತ ಹೇಳಬಹುದು.


ಉದ್ಯೋಗಿಗಳು ಇದರಲ್ಲಿ ಕುಳಿತಾಗ ಅವರ ಸೊಂಟಕ್ಕೆ ಅಥವಾ ಬೆನ್ನಿಗೆ ಯಾವ ರೀತಿಯಾದ ಒಂದು ಸಪೋರ್ಟ್ ಇದು ಕೊಡುತ್ತದೆ ಅಂತ ಇದನ್ನು ನೋಡಿದವರಿಗೆ ಅನ್ನಿಸುವುದು ಗ್ಯಾರೆಂಟಿ. ಆದರೆ ಚೇರ್‌ಬಾಕ್ಸ್ ಕಂಪನಿಯವರು ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಕುಳಿತುಕೊಳ್ಳುವುದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ ಎಂದು ಹೇಳಿದರು. ಅಲ್ಲದೆ, ಸಾವಿನ ಅಪಾಯವನ್ನು ಹೆಚ್ಚು ಬೊಜ್ಜು ಮತ್ತು ಹೆಚ್ಚು ಧೂಮಪಾನ ಮಾಡುವುದಕ್ಕೆ ಹೋಲಿಸಬಹುದು ಎಂದು ಹೇಳಿದರು.


ಇದು 3ಡಿ ಮಾದರಿಯ ಶವಪೆಟ್ಟಿಗೆ ರೂಪದ ಕುರ್ಚಿ


ಈ 3ಡಿ ಮಾದರಿಯು ಶವಪೆಟ್ಟಿಗೆಯ ರೂಪದಲ್ಲಿ ಕಚೇರಿ ಕುರ್ಚಿಯನ್ನು ತಯಾರಿಸಿದೆ. ಇದು ಕೆಲಸದ ಸ್ಥಳದಲ್ಲಿ ಒಂದು ರೀತಿಯ ತಮಾಷೆಯನ್ನು ಸಹ ಹುಟ್ಟುಹಾಕುತ್ತದೆ. ಕಚೇರಿಯ ಈ ಕುರ್ಚಿಯ ಮೇಲೆ ಕುಳಿತುಕೊಂಡು ಅನಿರ್ದಿಷ್ಟವಾಗಿ ತಮ್ಮ ಡೆಸ್ಕ್ ಗಳಲ್ಲಿ ಕುಳಿತುಕೊಳ್ಳಬಹುದು.


ಇದನ್ನೂ ಓದಿ: ನಾನ್‌ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡ್ರೆ ಬೆಡ್‌ ರೂಮ್‌ನಲ್ಲಿ ಉಪವಾಸ! ಗಂಡಸರಿಗೆ ಹೆಂಗಸರ ಖಡಕ್ ವಾರ್ನಿಂಗ್


ಕ್ಯಾಸ್ಟರ್ ಗಳ ಮೇಲೆ ಮರದ ಚೌಕಟ್ಟನ್ನು ಹೊಂದಿರುವ ಈ ನವೀನ ವಿನ್ಯಾಸವು ಚೇರ್‌ಬಾಕ್ಸ್ ನ ಸ್ವಂತ ಅನುಭವದಿಂದ ಪ್ರೇರಿತವಾಗಿದೆ, ಅವರ ಡೆಸ್ಕ್ ನಲ್ಲಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿದ ಅನುಭವದಿಂದ ಪ್ರೇರಿತವಾಗಿದೆ ಅಂತ ಹೇಳಲಾಗುತ್ತಿದೆ.


ಈ ವಿನ್ಯಾಸದ ಬಗ್ಗೆ ಕಂಪನಿ ಏನ್ ಹೇಳುತ್ತೇ?


ಚೇರ್‌ಬಾಕ್ಸ್ ವೆಬ್‌ಸೈಟ್ ಇದರ ಬಗ್ಗೆ "ಈ ರೀತಿಯ ವಿಭಿನ್ನವಾದ ವಿನ್ಯಾಸವನ್ನು ನಾವು ಉದ್ಯೋಗಿಗಳು ದಿನಕ್ಕೆ ಎಂಟು ಗಂಟೆಗಳ ಕಾಲ ಕುರ್ಚಿಗಳ ಮೇಲೆ ಕುಳಿತುಕೊಳ್ಳಲೆಂದು ರಚಿಸಲಾಗಿಲ್ಲ. ಇಡೀ ವರ್ತನೆಯ ಬದಲಾವಣೆಯು ಇತ್ತೀಚೆಗೆ ಸಂಭವಿಸಿದೆ ಮತ್ತು ನಮ್ಮ ದೇಹಗಳು ಇದಕ್ಕೆ ಇನ್ನೂ ಹೊಂದಿಕೊಂಡಿಲ್ಲ. ನೀವು ವ್ಯಾಯಾಮ ಮಾಡಿದರೂ ಅದು ಸಹ ಸಾಕಾಗುವುದಿಲ್ಲ. ಅಲ್ಲದೆ, ಉದ್ಯೋಗದಾತರು ತಮ್ಮ ಕಚೇರಿಗಳಲ್ಲಿ ಸ್ಟ್ಯಾಂಡಿಂಗ್ ಡೆಸ್ಕ್ ಆಯ್ಕೆಗಳನ್ನು ಒದಗಿಸುವಂತೆ ಹೇಳುವ ಒಂದು ಕಾನೂನು ಯುಕೆಯಲ್ಲಿ ಇದೆ. ಇದರ ಬಗ್ಗೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಅರಿವು ಇದೆ, ಆದರೆ ಅದು ಇನ್ನೂ ಸಾಕಾಗುವುದಿಲ್ಲ" ಎಂದು ಬರೆದುಕೊಂಡಿದೆ.

View this post on Instagram


A post shared by Chairbox (@chairboxdesign)

"ನಮ್ಮ ಈ ಹೊಸ ಲಾಸ್ಟ್ ಶಿಫ್ಟ್ ಆಫೀಸ್ ಚೇರ್ ಅನ್ನು ಪರಿಚಯಿಸಲು ನಾವು ತುಂಬಾನೇ ಸಂತೋಷಪಡುತ್ತೇವೆ.. ಒಬ್ಬ ಉದ್ಯೋಗಿಯು ಕೆಲಸ ಮಾಡುತ್ತಾ ಸತ್ತರೆ, ಮ್ಯಾನೇಜ್ಮೆಂಟ್ ಮೇಲಿನ ಕವರ್ ಒಂದಕ್ಕೆ ಮೊಳೆ ಹೊಡೆಯಬೇಕು ಮತ್ತು ಕಾರ್ಪೊರೇಟ್ ಸ್ಮಶಾನಕ್ಕೆ ಅವುಗಳನ್ನು ಕಳುಹಿಸಬೇಕು. ಇದು ತುಂಬಾನೇ ಸರಳವಾಗಿದ್ದರೂ, ಪರಿಣಾಮಕಾರಿಯಾಗಿದೆ" ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಈ ಪೋಸ್ಟ್ ಗೆ ಶೀರ್ಷಿಕೆಯನ್ನು ಬರೆದಿದ್ದಾರೆ.


ಕುರ್ಚಿ ಡಿಸೈನ್ ಮಾಡಿದ ವ್ಯಕ್ತಿ ಹೇಳುವುದೇನು?


ಇದನ್ನು ಡಿಸೈನ್ ಮಾಡಿದ ವ್ಯಕ್ತಿ ತಮ್ಮ ವೆಬ್ಸೈಟ್ ನಲ್ಲಿ ಕೆಲಸದಲ್ಲಿ ಈ ಸಂಸ್ಕೃತಿಯನ್ನು ಉಲ್ಲೇಖಿಸಿ, "ಆಘಾತಕಾರಿ ಸಂಗತಿಯೆಂದರೆ, ಇದು ಸಮಾಜದಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ, ನಾವು ನಮ್ಮ ಜೀವನವನ್ನು ಕೆಲಸದಲ್ಲಿ ನಿರತವಾಗಿ ನಿಧಾನವಾಗಿ ಕೊಲ್ಲುತ್ತಿದ್ದೇವೆ ಮತ್ತು ಅದರಿಂದ ಏನನ್ನೂ ಪಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.


ಈ ಕೆಲಸದ ಸಂಸ್ಕೃತಿಯು ತುಂಬಾನೇ ತಪ್ಪಾಗಿದೆ, ಅದು ನನಗೆ ಸ್ವಯಂಪ್ರೇರಿತ ಗುಲಾಮಗಿರಿಯಂತೆ ಭಾಸವಾಗುತ್ತದೆ. ನಾವು ಆ ಶವಪೆಟ್ಟಿಗೆಯಂತಿರುವ ಕುರ್ಚಿಗಳಲ್ಲಿ ಕುಳಿತು ಬೇರೆಯವರಿಗಾಗಿ ಕೆಲಸ ಮಾಡುತ್ತೇವೆ, ಆದರೆ ಸಮಯ ಬಂದ ನಂತರ ಅವರು ಆ ಮುಚ್ಚಳಕ್ಕೆ ಮೊಳೆ ಹೊಡೆಯುತ್ತಾರೆ ಮತ್ತು ನಮ್ಮನ್ನು ಸ್ಮಶಾನಕ್ಕೆ ಕಳುಹಿಸುತ್ತಾರೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹಿಂದಿ, ಇಂಗ್ಲಿಷ್ ಗೊತ್ತಿಲ್ಲವೆಂದು ಪ್ರಯಾಣಿಕರ ಸೀಟ್ ಬದಲಾಯಿಸಿದ ಇಂಡಿಗೋ ಸಿಬ್ಬಂದಿ


ಈ ಕುರ್ಚಿಗೆ ತೀವ್ರವಾದ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಂಡುಬಂದಿವೆ. ಒಬ್ಬ ವ್ಯಕ್ತಿಯು ಈ ಕುರ್ಚಿಯನ್ನು ಬಳಸಲು ನಿರಾಕರಿಸುತ್ತಾ "ನೋ ಥ್ಯಾಂಕ್ಸ್" ಎಂದು ಹೇಳಿದ್ದಾರೆ.

First published: