Coffee Nadu Chandu: ಅಂದು ಸೋಶಿಯಲ್ ವರ್ಕರ್, ಇಂದು ಪೇಯ್ಡ್ ಪ್ರಮೋಟರ್ ಅಂತೆ; ಫೇಮಸ್ ಆದ್ಮೇಲೆ ಚಂದು ವರಸೆ ಚೇಂಜ್

ಕಾಫಿ ನಾಡು ಚೆಂದು ಫೇಮಸ್ ಆಗ್ತಿದ್ದಂತೆ ವರಸೆ ಚೇಂಜ್ ಮಾಡಿದ್ದಾರೆ. ಸೋಶಿಯಲ್ ವರ್ಕರ್ ಚೆಂದು, ಇಂದು ಪೇಯ್ಡ್ ಪ್ರಮೋಟರ್ ಚೆಂದು ಆಗಿದ್ದಾರೆ ಎಂದು ಟ್ರೋಲ್ ಪೇಜ್ ನವರು ಟ್ರೋಲ್ ಮಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್‍ಗೆ ಕಾಫಿ ನಾಡು ಚೆಂದು ಹೋಗ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ.

ಟ್ರೋಲ್ ಫೋಟೋ

ಟ್ರೋಲ್ ಫೋಟೋ

 • Share this:
  ವಿಶು ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣ, ಹ್ಯಾಪಿ ಬರ್ತ್‍ಡೇ ಅಣ್ಣ, ಹ್ಯಾಪಿ ಬರ್ತ್‍ಡೇ ಅಕ್ಕ, ಅವರ ಹೆಸರಿನ ಮುಂದೆ ಅಣ್ಣ, ಅಕ್ಕ ಸೇರಿಸಿ ವಿಶೇಷವಾಗಿ ವಿಶ್ ಮಾಡುವ ಮೂಲಕ ಫುಲ್ ಫೇಮಸ್ ಆಗಿದ್ದಾರೆ ಕಾಫಿ (Coffee) ನಾಡು ಚೆಂದು (Chandu). ಈಗ ರಾಜ್ಯದಲ್ಲಿ ಇವರದೇ ಸುದ್ದಿ. ಕಾಫಿ ನಾಡು ಚೆಂದು ತುಂಬಾ ಚೆನ್ನಾಗಿ ವಿಶ್ ಮಾಡ್ತಾನೆ ಅಂತ. ತಮ್ಮ ನೆಚ್ಚಿವರಿಗೆ ಚೆಂದು ಮೂಲಕ ಸಪ್ರೈಸ್ ಆಗಿ ವಿಶ್ ಮಾಡಿಸೋದು ಟ್ರೆಂಡ್ (Trend) ಆಗಿದೆ. ಈಗ ಚೆಂದುಗೆ ತುಂಬಾ ಜನ ಫಾಲೋವರ್ಸ್ ಗಳು ಇದ್ದಾರೆ. ನಟ, ನಟಿಯರಿಗಿಂತ ಹೆಚ್ಚು ಅಂದ್ರೆ ತಪ್ಪಿಲ್ಲ. ವಿಭಿನ್ನ ಶೈಲಿಯ ಮೂಲಕ ಹಾಡಿನ ರೀತಿ ವಿಶ್ ಮಾಡೋ ಮೂಲಕ ಹೆಸರುವಾಸಿಯಾಗಿದ್ದಾರೆ. ಈ ಮೊದಲು ಇವರು ಟ್ವಿಟ್ಟರ್‍ನಲ್ಲಿ ಸೋಶಿಯಲ್ ವರ್ಕರ್ ಅಂತ ಹಾಕಿಕೊಂಡಿದ್ದರಂತೆ. ಈಗ ಪೇಯ್ಡ್ ಪ್ರಮೋಟರ್ ಅಂತ ಹಾಕಿಕೊಂಡಿದ್ದಾರೆ.

  ಅಂದು ಸೋಶಿಯಲ್ ವರ್ಕರ್ ಚೆಂದು

  ಕಾಫಿ ನಾಡು ಚೆಂದು ಅವರು ಈ ಮೊದಲು, ಅಂದ್ರೆ ಬರ್ತ್‍ಡೇ ಸಾಂಗ್ ವಿಶ್ ಮಾಡಿ ಪೇಮಸ್ ಆಗುವ ಮೊದಲು, ತಮ್ಮ ಟ್ವಿಟರ್ ಖಾತೆಯಲ್ಲಿ ಸೋಶಿಯಲ್ ವರ್ಕರ್ ಎಂದು ಹಾಕಿಕೊಂಡಿದ್ದರು.

  ಇಂದು ಪೇಯ್ಡ್ ಪ್ರಮೋಟರ್ ಚೆಂದು

  ಈಗ ಫೇಮಸ್ ಆದ ಮೇಲೆ, ಜನ ಹೆಚ್ಚು ಇವರನ್ನು ಪಾಲೋ ಮಾಡ್ತಾ ಇದ್ದಾರೆ. ಅದಕ್ಕೆ ಕಾಫಿ ನಾಡು ಚೆಂದು ಪೇಯ್ಡ್ ಪ್ರಮೋಟರ್ ಎಂದು ಹಾಕಿ ಕೊಂಡಿದ್ದಾರೆ.

  ಎರಡು ಪೋಟೋ ಟ್ರೋಲ್

  ಇನ್ನು ಕಾಫಿ ನಾಡು ಚೆಂದು ಫೇಮಸ್ ಆಗ್ತಿದ್ದಂತೆ ವರಸೆ ಚೇಂಜ್ ಮಾಡಿದ್ದಾರೆ. ಸೋಶಿಯಲ್ ವರ್ಕರ್ ಚೆಂದು, ಇಂದು ಪೇಯ್ಡ್ ಪ್ರಮೋಟರ್ ಚೆಂದು ಆಗಿದ್ದಾರೆ ಎಂದು ಟ್ರೋಲ್ ಪೇಜ್ ನವರು ಟ್ರೋಲ್ ಮಾಡಿದ್ದಾರೆ.

  ಇದನ್ನೂ ಓದಿ: Coffee Nadu Chandu: ಆ್ಯಂಕರ್ ಅನುಶ್ರೀಗೆ ಸ್ಪೆಷಲ್ ರಿಕ್ವೆಸ್ಟ್ ಮಾಡಿದ ಕಾಫಿ ನಾಡು ಚಂದು! ಚಂದು ಅಣ್ಣ ಏನೋ ನಿನ್ ಕಥೆ?

  ಬಿಗ್ ಬಾಸ್‍ಗೆ ಹೋಗ್ತಾರಾ ಚೆಂದು

  ಇವೆಲ್ಲದರ ನಡುವೆ ನಾಳೆಯಿಂದ ಬಿಗ್ ಬಾಸ್ ಒಟಿಟಿ ಪ್ರಾರಂಭವಾಗಲಿದೆ. ವೂಟ್ ಆಪ್‍ನಲ್ಲಿ ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ ಅವರೇ ಇದನ್ನು ನಡೆಸಿಕೊಡಲಿದ್ದಾರೆ. ಈ ಬಾರಿ ಇಲ್ಲಿಯೂ 16 ಸ್ಪರ್ಧಿಗಳು ಇರಲಿದ್ದಾರೆ. ಈ ಬಾರಿಯ ಬಿಗ್ ಬಾಸ್‍ಗೆ ಕಾಫಿ ನಾಡು ಚೆಂದು ಹೋಗ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ.

  ಶಿವಣ್ಣನನ್ನು ಭೇಟಿ ಮಾಡಿಸುವಂತೆ ಅನುಶ್ರೀಗೆ ಮನವಿ

  ಈಗಾಗಲೇ ಸಾಮಾಜಿಕ ಜಾಲತಾಣದ ಸೂಪರ್ ಸ್ಟಾರ್ ಆಗಿರುವ ಕಾಫಿ ನಾಡು ಚಂದು ಅವರ ಹಾಡಿಗೆ ಲಕ್ಷಗಟ್ಟಲೇ ಪಾಲೋವರ್ಸ್‍ಗಳು ಸೃಷ್ಟಿಯಾಗಿದ್ದಾರೆ. ಅಲ್ಲದೇ ಅವರ ಹುಟ್ಟುಬ್ಬದ ಹಾಡಿಗೆ ವಿಶೇಷ ಅಭಿಮಾನಿ ಬಳಗವೇ ಹುಟ್ಟುಕೊಂಡಿದೆ ಎಂದರೂ ತಪ್ಪಾಗಲಾರದು.

  ಇದರ ನಡುವೆ ಕಾಫಿ ನಾಡು ಚಂದು ವಿಡಿಯೋ ಆರಂಭದಲ್ಲಿ ತಾನು ಶಿವಣ್ಣ, ಪುನೀತ್ ಅಣ್ಣನವರ ಅಭಿಮಾನಿ ಎಂದು ಹೇಳುತ್ತಾರೆ. ಹೀಗಾಗಿ ಇದೀಗ ಅವರು ಅನುಶ್ರೀ ಅವರ ಬಳಿ ಕರುನಾಡ ಚರ್ಕವರ್ತಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ವಿಶೇಷ ಹಾಡಿನ ಮೂಲಕ ಮನವಿ ಮಾಡಿದ್ದಾರೆ. ಈ ಮನವಿಗೆ ಇದೀಗ ಅನುಶ್ರೀ ಅವರು ಸ್ಪಂದಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

  ಇದನ್ನೂ ಓದಿ: Bigg Boss ಮನೆಗೆ ಎಂಟ್ರಿ ಕೊಡುವ ಇವಿಷ್ಟು ಸ್ಪರ್ಧಿಗಳ ಹೆಸರುಗಳು ಕನ್ಫರ್ಮ್? ಯಾರೆಲ್ಲಾ ಇದ್ದಾರೆ ನೋಡಿ

  ಡ್ಯಾನ್ಸ್ ಸಹ ಮಾಡ್ತಾರಾ ಚೆಂದು

  ಇಷ್ಟು ದಿನಗಳವರೆಗೆ ಬರ್ತಡೇ ಸಾಂಗ್ ಮಾಡುತ್ತಿದ್ದ ಕಾಫಿ ನಾಡು ಚಂದು ಅವರು ಇದೀಗ ಡ್ಯಾನ್ಸ್ ಸಹ ಮಾಡಿದ್ದಾರೆ. ಹೌದು, ಡಾಲಿ ಧನಂಜಯ್ ಅಭಿನಯದ ಮಾನ್ಸೂನ್ ರಾಗ ಚಿತ್ರದ ಹಾಡಿಗೆ ರೀಲ್ಸ್ ಮಾಡಿರುವ ಚಂದು ಅವರು ಮೊದಲ ಬಾರಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ.

  ಈ ವಿಡಿಯೋ ಈಗಾಗಲೇ ಸಖತ್ ವೈರಲ್ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ಚಂದು ಅಣ್ಣ ಹಾಡಿನ ಜೊತೆ ಡ್ಯಾನ್ಸ್ ಸಹ ಮಾಡಲಾರಂಭಿಸಿದ್ದಾರೆ.
  Published by:Savitha Savitha
  First published: