Cockroaches: ಕೋರ್ಟ್​ ಒಳಗಡೆ ರಾಶಿ ರಾಶಿ ಜಿರಳೆ ಪ್ರತ್ಯಕ್ಷ, ವಿಚಾರಣೆಯೇ ಸ್ಟಾಪ್

ಎಂದಾದರೂ ಹೀಗೆ ಕೋಪಾವೇಶದಲ್ಲಿರುವ ಪಾರ್ಟಿಯೊಂದು ತಮ್ಮ ತಾಳ್ಮೆ ಕಳೆದುಕೊಂಡು ಕೋರ್ಟ್ ರೂಮಿನಲ್ಲಿ ಜಿರಳೆ ಅಥವಾ ಇನ್ನಿತರ ಕೀಟಗಳನ್ನು ನೂರಾರು ಸಂಖ್ಯೆಯಲ್ಲಿ ಬಿಟ್ಟಿರುವುದನ್ನು ಕೇಳಿದ್ದೀರಾ? ಇಲ್ಲ ಎಂದಾದಲ್ಲಿ ಈಗ ಕೇಳಿ ನಾವು ಹೇಳುತ್ತಿದ್ದೇವೆ.

ಜಿರಳೆಗಳು

ಜಿರಳೆಗಳು

  • Share this:
ಅಮೆರಿಕದಲ್ಲಿ (America) ನಡೆದಿದೆ ಎನ್ನಲಾದ ಸದ್ಯ ಈಗ ಬೆಳಕಿಗೆ ಬಂದಿರುವ ಈ ಘಟನೆ ಒಮ್ಮೆ ನಿಮ್ಮನ್ನು ಅಚ್ಚರಿಗೊಳಿಸಬಹುದು. ನಾವು ಚಲನಚಿತ್ರಗಳಲ್ಲೋ (Movies) ಅಥವಾ ಕೆಲವೊಮ್ಮೆ ವಾಸ್ತವದಲ್ಲೋ ನ್ಯಾಯಾಲಯಗಳಲ್ಲಿ (Court) ವಾದ-ಪ್ರತಿವಾದಗಳು (Arguments) ತೀವ್ರಗೊಂಡು ಕೋಪಾವೇಶದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿರುವ ಬಗ್ಗೆ ಕೇಳಿರಬಹುದು. ಆದರೆ, ಎಂದಾದರೂ ಹೀಗೆ ಕೋಪಾವೇಶದಲ್ಲಿರುವ ಪಾರ್ಟಿಯೊಂದು (Party) ತಮ್ಮ ತಾಳ್ಮೆ (Patience) ಕಳೆದುಕೊಂಡು ಕೋರ್ಟ್ ರೂಮಿನಲ್ಲಿ (Room) ಜಿರಳೆ (Cockroaches) ಅಥವಾ ಇನ್ನಿತರ ಕೀಟಗಳನ್ನು (Insect) ನೂರಾರು ಸಂಖ್ಯೆಯಲ್ಲಿ ಬಿಟ್ಟಿರುವುದನ್ನು ಕೇಳಿದ್ದೀರಾ? ಇಲ್ಲ ಎಂದಾದಲ್ಲಿ ಈಗ ಕೇಳಿ ನಾವು ಹೇಳುತ್ತಿದ್ದೇವೆ.

ಕಂಟೆನರ್ ಗಳಲ್ಲಿ ತರಲಾಗಿದ್ದ ನೂರಾರು ಜಿರಳೆಗಳು
ಕಳೆದ ಮಂಗಳವಾರದಂದು ನ್ಯೂಯಾರ್ಕ್ ನಲ್ಲಿರುವ ನ್ಯಾಯಾಲಯವೊಂದನ್ನು ಯಾವ ವಿಚಾರಣೆಗಳನ್ನು ನಡೆಸದಂತೆ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಆ ಕಾರಣವೇನೆಂದರೆ ಆ ನ್ಯಾಯಾಲಯ ಕೊಠಡಿಯನ್ನು ರಾಸಾಯನಿಕ ಅನಿಲ ಸಿಂಪಡಿಸುವ ಮೂಲಕ ಪರಿಶುದ್ಧಗೊಳಿಸಲಾಗುತ್ತಿತ್ತು. ಹೀಗೆ ಸಾಮಾನ್ಯ ಕೆಲಸದ ದಿನದಲ್ಲಿ ಪರಿಶುದ್ಧಗೊಳಿಸುವಂತಹ ಪ್ರಮೇಯವಾದರೂ ಏನಿತ್ತು ಎಂದು ನಿಮಗನಿಸಬಹುದು.

ಇದನ್ನೂ ಓದಿ:  Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!

ಸ್ವಲ್ಪ ತಾಳಿ ಅದಕ್ಕೂ ಒಂದು ಕಾರಣವಿತ್ತು ಹಾಗೂ ಆ ಕಾರಣವೆಂದರೆ ಆ ನಿರ್ದಿಷ್ಟ ನ್ಯಾಯಾಲಯ ಕೊಠಡಿಯಲ್ಲಿ ಪ್ರಕರಣದ ವಿಚಾರಣೆಯೊಂದು ನಡೆಯುತ್ತಿರುವಾಗ ಪ್ಲಾಸ್ಟಿಕ್ ಕಂಟೆನರ್ ಗಳಲ್ಲಿ ತರಲಾಗಿದ್ದ ನೂರಾರು ಸಂಖ್ಯೆಯಲ್ಲಿ ಜಿರಳೆಗಳನ್ನು ಬಿಡಲಾಗಿತ್ತು.

ಏನಿದು ಘಟನೆ
ಹೌದು, ನೀವು ಓದುತ್ತಿರುವುದು ಸರಿಯಾಗಿದೆ. ನ್ಯೂಯಾರ್ಕ್ ರಾಜ್ಯದಲ್ಲಿರುವ ನ್ಯಾಯಾಲಯ ವ್ಯವಸ್ಥೆ ಹೇಳಿರುವಂತೆ, ಅಲ್ಬಾನಿ ಸಿಟಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯೊಂದು ನಡೆಯುತ್ತಿದ್ದ ಸಂದರ್ಭದಲ್ಲಿ, ರಾಜಧಾನಿ ನಗರದಲ್ಲಿ ಬಂಧಿಸಲಾದ ನಾಲ್ಕು ಜನರ ವಿಷಯಕ್ಕೆ ಸಂಬಂಧಿಸಿದಂತೆ ಜಗಳವೊಂದು ಭುಗಿಲೆದ್ದಿತು.

ಇದನ್ನು ಪ್ರತಿವಾದಿಯು ವಿಡಿಯೋ ಚಿತ್ರೀಕರಣ ಮಾಡಲು ಪ್ರಾರಂಭಿಸಿದಾಗ ಅವನನ್ನು ಆ ರೀತಿ ಮಾಡದಂತೆ ಸೂಚಿಸಲಾಯಿತು. ಇದರಿಂದ ವಾಗ್ವಾದ ಉಂಟಾಗಿ ತದನಂತರ ನ್ಯಾಯಾಲಯದ ಕೊಠಡಿಯೊಳಗೆ ಪ್ಲಾಸ್ಟಿಕ್ ಕಂಟೇನರ್ ಗಳಲ್ಲಿ ಜಿರಳೆಗಳನ್ನು ತಂದು ಬಿಡಲಾಯಿತು.ಈ ರೀತಿ ಎಲ್ಲೆಂದರಲ್ಲಿ ಜಿರಳೆಗಳು ಕೋರ್ಟ್ ರೂಮಿನಲ್ಲಿ ಪ್ರತ್ಯಕ್ಷವಾಗಿ ನಡೆಯುತ್ತಿದ್ದ ವಿಚಾರಣೆಗೆ ಅಡ್ಡಿಪಡಿಸಿದವು. ಕೂಡಲೇ ಕೋರ್ಟ್ ಅನ್ನು ಮುಚ್ಚಿ ಕೊಠಡಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದು ತಿಳಿದುಬಂದಿದೆ.

ಸದ್ಯ ಈ ರೀತಿ ಜಿರಳೆಗಳನ್ನು ಬಿಟ್ಟಿದ್ದು ಯಾರು ಎಂಬುದರ ಮೇಲೆ ತನಿಖೆ ನಡೆಸಲಾಗುತ್ತಿದ್ದು ಈ ಘಟನೆಯ ನಂತರ ಕೋರ್ಟನ್ನು ಪರಿಶುದ್ಧಗೊಳಿಸುವ ನಿಟ್ಟಿನಲ್ಲಿ ಆ ದಿನ ಸಂಪೂರ್ಣವಾಗಿ ಮುಚ್ಚಲಾಯಿತು ಎಂದು ತಿಳಿದುಬಂದಿದೆ.

ಮಹಿಳೆಯ ಬಂಧನ
ನ್ಯಾಯಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಘಟನೆಯ ಹಿನ್ನೆಲೆಯಲ್ಲಿ 34 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಿದರು ಮತ್ತು ಅವರ ಮೇಲೆ ಅನುಚಿತ ವರ್ತನೆ, ವಾಗ್ವಾದಕ್ಕೆ ಸಂಬಂಧಿಸಿದ ಚಾರ್ಜುಗಳು, ಆಡಳಿತ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸುವಿಕೆ, ಭೌತಿಕ ಸಾಕ್ಷಿಗಳ ತಿರುಚುವಿಕೆ ಮುಂತಾದ ದೂರುಗಳನ್ನು ದಾಖಲಿಸಿದರು. ಆದರೆ, ಅವರನ್ನು ನಂತರ ಬಿಡುಗಡೆಗೊಳಿಸಲಾಯಿತು. ಆದರೆ ಅವರ ಪರವಾಗಿ ಯಾವ ವಕೀಲರು ನ್ಯಾಯಾಲಯದ ಮುಂದೆ ಮಾತನಾಡಿದರು ಎಂಬುದು ತಕ್ಷಣಕ್ಕೆ ತಿಳಿಯಲಿಲ್ಲ.

ಆದಾಗ್ಯೂ, ಕೋರ್ಟ್ ಕಚೇರಿಯಿಂದ ಈ ಘಟನೆ ಬಗ್ಗೆ ಹೇಳಿಕೆಯೊಂದು ಹೊರಬಿದ್ದಿದ್ದು ಅದರಲ್ಲಿ, "ಈಗ ನಡೆದಿರುವುದನ್ನು ವಾದ ಎಂದಾಗಲಿ ಚಳುವಳಿ ಎಂದಾಗಲಿ ಹೇಳಲು ಆಗುವುದಿಲ್ಲ, ಬದಲಾಗಿ ಇದು ಕೋರ್ಟ್ ಪ್ರಕ್ರಿಯೆಗೆ ಅಡ್ಡಿಪಡಿಸಿ ಹಾನಿ ಉಂಟು ಮಾಡುವ ಅಪರಾಧಿಕ ನಡೆಯನ್ನು ಹೊಂದಿದೆ" ಎಂದು ಉಲ್ಲೇಖಿಸಿದೆ.

ಇದನ್ನೂ ಓದಿ: Viral Video: ಪಾಠ ಹೇಳೋ ಶಿಕ್ಷಕರೇ ಹೀಗೆ ಮಾಡಿದ್ರೆ ಹೇಗೆ? ವಿಡಿಯೋ ನೋಡಿ ರೊಚ್ಚಿಗೆದ್ದ ನೆಟ್ಟಿಗರು

ಒಟ್ಟಿನಲ್ಲಿ ಹೇಳಬೇಕೆಂದರೆ ಇದೊಂದು ರೀತಿಯ ವಿಚಿತ್ರ ಘಟನೆ ಅನಿಸಿದ್ದರೂ ಯಾವುದೇ ರೀತಿಯಿಂದ ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಈ ನಡುವೆ ತನಿಖೆ ಸಂಪೂರ್ಣವಾಗಿ ನಡೆದು ಜಿರಳೆಗಳನ್ನು ಬಿಟ್ಟ ಆ ಭೂಪ ಬೇಗನೆ ಪೊಲೀಸರ ಕೈಗೆ ಸಿಗಲಿ ಹಾಗೂ ಮುಂದೆ ಈ ರೀತಿ ಘಟನೆಗಳು ಜಗತ್ತಿನ ಯಾವುದೇ ನ್ಯಾಯಾಲಯಗಳಲ್ಲಿ ಘಟಿಸದಿರಲಿ ಎಂದಷ್ಟೇ ಆಶಿಸೋಣ.
Published by:Ashwini Prabhu
First published: