ಹಳ್ಳಿಯಲ್ಲಿ ಕೋಳಿ ಕೂಗಿದರೆ ಬೆಳಗಾಯಿತು ಎಂದು ಹೇಳುವ ಕಾಲವೊಂದಿತ್ತು. ಆ ಕಾಲಕ್ಕೆ ಕೋಳಿ ಅಲರಾಂ ಇದ್ದಂತೆ. ಬೆಳ್ಳಂ ಬೆಳಗ್ಗೆ ಕೂಗಿದರೆ ಬೆಳಗ್ಗೆ ಆಯಿತು ಸೂರ್ಯ ಉದಯಿಸಿದ ಎಂಬ ಅರ್ಥ. ಆದರೆ ಇಲ್ಲೊಂದು ಕೋಳಿ ಕೂಗಿದ್ದಕ್ಕೆ ಮನೆಯ ಮಾಲಿಕ ದಂಡ ಕಟ್ಟಬೇಕಾದ ಪರಿಸ್ಥಿತಿಬಂದಿದೆ.
ಇಟಲಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಲೊಂಬಾರ್ಡಿಯ ಪಟ್ಟಣವಾದ ಕ್ಯಾಸ್ಟಿರಾಗಾ ವಿದಾರ್ಡೋದ ಏಂಜಲೋ ಬೊಲೆಟ್ಟಿ ಎಂಬ 83 ವರ್ಷ ವೃದ್ಧನ ಬಳಿ ಇದ್ದ ಹುಂಜ ಕೂಗಿದ್ದಕೆ 14 ಸಾವಿರ ರೂಪಾಯಿ ದಂಡಕಟ್ಟಿದ್ದಾರೆ.
ಏಂಜಲೋ ಬೊಲೆಟ್ಟಿ ಮನೆಯಲ್ಲಿ ಹುಂಜ ಸಾಕಿದ್ದರು. ಈ ಹುಂಜ ಮುಂಜಾನೆ 4:30ಕ್ಕೆ ಕೂಗುತ್ತಿತ್ತು. ಆದರೆ ಹುಂಜ ಕೂಗುವುದರಿಂದ ನೆರೆಮನೆಯವರಿಗೆ ತೊಂದರೆಯಾಗುತ್ತಿತ್ತು. ಬೆಳಿಗ್ಗಿನ ಜಾವ ನಿದ್ರೆಯನ್ನು ಹಾಳು ಮಾಡುತ್ತಿದೆ ಎಂದು ಏಂಜಲೋ ಅವರಿಗೆ ಪಕ್ಕದ ಮನೆಯವರು ಹೇಳಿದ್ದರು. ಆದರೆ ಎಂಜಲೋ ಏನು ಮಾಡಲಾಗದೆ ಸುಮ್ಮನಾಗಿದ್ದರು.
ಹೀಗೆ ಹುಂಜ ಕೂಗಿನಿಂದ ಕಿರಿಯಿರಿಯಾಗುತ್ತದೆ ಎಂದು ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಕಾರಣಕ್ಕಾಗಿ ಪೊಲೀಸರು ಎಂಜಲೋ ಅವರಿಗೆ 14 ಸಾವಿರ ದಂಡ ವಿಧಿಸಿದ್ದಾರೆ.
ಇಟಲಿಯಲ್ಲಿ ಸಾಕು ಪ್ರಾಣಿಗಳನ್ನು ನೆರೆಮನೆಯಿಂದ 10 ಮೀಟರ್ ದೂರದಲ್ಲಿ ಇಡಬೇಕು ಎಂಬುದು ಕಾನೂನಿದೆ. ಆದರೆ ಈ ವಿಚಾರ ಏಂಜಲೋಗೆ ಗೊತ್ತಿರಲಿಲ್ಲ. ಇನ್ನು ಪೊಲೀಸರು ವಿಧಿಸಿದ ದಂಡದ ವಿಚಾರವಾಗಿ ಏಂಜಲೋ ಬೇಸರ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ