#AccordingToRahulGandhi ಕೋಕಕೋಲ ಮಾಲಿಕ ಮೊದಲು ನಿಂಬೆರಸ ಮಾರುತ್ತಿದ್ದ


Updated:June 12, 2018, 6:57 PM IST
#AccordingToRahulGandhi ಕೋಕಕೋಲ ಮಾಲಿಕ ಮೊದಲು ನಿಂಬೆರಸ ಮಾರುತ್ತಿದ್ದ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

Updated: June 12, 2018, 6:57 PM IST
ನವದೆಹಲಿ: ಹಿಂದುಳಿದ ವರ್ಗಗಳ ರ‍್ಯಾಲಿಯೊಂದರಲ್ಲಿ ರಾಹುಲ್​ ಗಾಂಧಿ ಬಹುರಾಷ್ಟ್ರೀಯ ಕಂಪನಿಗಳ ಕುರಿತು ಹೇಳಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ #AccordingToRahulGandhi ಈ ಟ್ಯಾಗ್​ನ ಮೂಲಕ ಭಾರೀ ಟ್ರೆಂಡ್​ ಎಬ್ಬಿಸಿದೆ.

ಪ್ರಧಾನಿ ಮೋದಿ ಸರ್ಕಾರದ ಹಿಂದುಳಿದ ವರ್ಗದವರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸುವಾಗ ರಾಹುಲ್ ಕೋಕ ಕೋಲ ಮತ್ತು ಮೆಕ್​ ಡೊನಾಲ್ಡ್​ ಕಂಪನಿಯ ಮಾಲೀಕರ ಉದಾಹರಣೆಯನ್ನು ನೀಡಿದ್ದಾರೆ. ಈ ಹೇಳಿಕೆ ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿ ಹೊಸ ಟ್ರೆಂಡ್​ ಹುಟ್ಟು ಹಾಕಿದೆ.

ದಿಲ್ಲಿಯ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್​, ಒಂದಾನೊಂದು ಕಾಲದಲ್ಲಿ ಅಮೆರಿಕದಲ್ಲಿ ಶಿಕಂಜಿ (ನಿಂಬೆ ರಸ) ಮಾರುತ್ತಿದ್ದವ ಹಣ ಸಂಪಾಧಿಸಿ ಇದೀಗ ಕೋಕಾಕೋಲಾ ಕಂಪನಿ ಮಾಲಿಕನಾಗಿದ್ದಾನೆ. ರಸ್ತೆ ಬದಿ ಡಾಬಾ ನಡೆಸುತ್ತಿದ್ದವ ಇದೀಗ ಮೆಕ್ ಡೊನಾಲ್ಡ್ ಕಂಪನಿಯನ್ನೇ ಸ್ಥಾಪಿಸಿದ್ದಾನೆ ಎಂದು ರಾಹುಲ್​ ಹೇಳಿದ್ದಾರೆ.

ಈ ಹೇಳಿಕ ಆನ್​ಲೈನ್​ನಲ್ಲಿ ಪ್ರಸಾರವಾದ ಬೆನ್ನಲ್ಲೇ #AccordingToRahulGandhi ಟ್ರೆಂಡ್​ ಆಗಿದ್ದು, ಟ್ವಿಟರಾತಿ ತಮ್ಮದೇ ರೀತಿಯಲ್ಲಿ ರಾಹುಲ್​ ಮಾತಿಗೆ ಮೆಮೆಗಳನ್ನು ಹಾಕಿದ್ದಾರೆ. ಮತ್ತೆ ಕೆಲವರು ಆಪಲ್ ಕಂಪನಿ ಮಾಲಿಕ ಆಪಲ್ ಮಾರುತ್ತಿದ್ದರು, ಬಿಲ್ ಗೇಟ್ಸ್ ಬಿಲ್ಲಿಂಗ್ ಮೆಷಿನ್ ಮಾರುತ್ತಿದ್ದರು, ಸ್ಟಾರ್​ಬಕ್ಸ್​ ಓನರ್​ ಮೊದಲು ಟೀ ಮಾರುತ್ತಿದ್ದ. ಹೀಗೆ ಟ್ವೀಟ್​ಗಳು ಬರತೊಡಗಿವೆ.











First published:June 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ