ಒಬ್ಬ ವ್ಯಕ್ತಿಯು ಬಾಟಲಿಯಿಂದ ನಾಗರಹಾವಿಗೆ ನೀರು ಕುಡಿಯಲು ಸಹಾಯ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟ್ಟರ್ನಲ್ಲಿ 17 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಪ್ರಬಲ ಸಂದೇಶದೊಂದಿಗೆ ಕ್ಯಾಪ್ಷನ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ. ಅಲ್ಲಿ ಒಬ್ಬ ವ್ಯಕ್ತಿಯು ನೀರಿನಿಂದ ತುಂಬಿದ ಬಾಟಲಿಯನ್ನು ನಾಗರ ಹಾವಿನ ಮುಂದೆ ಹಿಡಿದು ಸರೀಸೃಪಕ್ಕೆ ಅದರ ಬಾಯಾರಿಕೆಯನ್ನು ನೀಗಿಸಲು ಸಹಾಯ ಮಾಡಿದನು. ಅವನು ಬಾಟಲಿಯನ್ನು ಸ್ವಲ್ಪ ಓರೆಯಾಗಿಸಿ ಹಾವು ಸುಲಭವಾಗಿ ಕುಡಿಯುವಂತೆ ಅದನ್ನು ಹಾವಿನ ಬಾಯಿಗೆ ಹತ್ತಿರ ಇಟ್ಟುಕೊಂಡನು.
"ಪ್ರೀತಿ ಮತ್ತು ನೀರು. ಜೀವನದ ಎರಡು ಅತ್ಯುತ್ತಮ ಪದಾರ್ಥಗಳು" ಎಂದು ಐಎಫ್ಎಸ್ ಅಧಿಕಾರಿ ಸುಸಂತಾ ನಂದಾ ತಮ್ಮ ಪೋಸ್ಟ್ಗೆ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ಈ ವಿಡಿಯೋವನ್ನು ಇಲ್ಲಿ ನೋಡಿ:
Love & water...
Two best ingredients of life pic.twitter.com/dy3qB40m6N
— Susanta Nanda IFS (@susantananda3) February 16, 2021
ಇದನ್ನೂ ಓದಿ: ರಾಮಮಂದಿರ ನಿರ್ಮಾಣ: ದೇಣಿಗೆ ಸಂಗ್ರಹ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ; ಕುಮಾರಸ್ವಾಮಿ ಆರೋಪ
"ಹಾವು ನೀರನ್ನು ಈ ರೀತಿ ಕುಡಿಯಬಹುದೆಂದು ಮೊದಲ ಬಾರಿಗೆ ನೋಡಿದಾಗ ... ಹಾವುಗಳು ಕುಡಿಯಲು ಸಾಧ್ಯವಿಲ್ಲ ಎಂದು ಕೇಳಿದ್ದೆ... ನೀವು ಪರಿಣತರಲ್ಲದಿದ್ದರೆ ಇದನ್ನು ಅನುಸರಿಸುವುದು ಅಪಾಯಕಾರಿ" ಎಂದು ಬಳಕೆದಾರರೊಬ್ಬರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ