ಕರಾವಳಿ, ಮಲ್ನಾಡ್ ಭಾಗಗಳಿಗೆ ಈ ಸಮಯದಲ್ಲಿ ಭೇಟಿ ನೀಡಿದರೆ ಪತ್ರಿಯೊಬ್ಬರ ಮನೆಯಲ್ಲಿ ಖಾದ್ಯಗಳ ಸುವಾಸನೆ ಬರುತ್ತಿರುತ್ತದೆ. ಹುರಿದ ಹಲಸಿನ ಹಪ್ಪಳ, ಹಲಸಿನ ಕಡುಬು, ಕೆಸುವಿನ ಪಲ್ಯ, ಪಸಿಂಗರಿ, ಪತ್ರೋಡೆ, ಮಾವಿನ ಪಾಯಸ, ಮಾಂಬಳ ಹೀಗೆ ನಾನಾ ಖ್ಯಾದಗಳ ಪರಿಮಳ ಒಮ್ಮೆ ಮೂಗಿಗೆ ಬಡಿದರೆ ಸಾಕು ಅದುವೇ ಹೊಟ್ಟೆ ತುಂಬಿಸಿ ಬಿಡುತ್ತದೆ. ಅದರಲ್ಲೂ ಈ ಸಮಯದಲ್ಲಿ ಮರ ಕೆಸುವಿನ ಪತ್ರೊಡೆ ಸವಿಯಬೇಕು..ವಾವ್! ಎಂಬ ಉದ್ಧಾರ ಬರದೆ ಇರದು.
ಪತ್ರೋಡೆ ಕಾಡು ಕೆಸುವಿನ ಎಲೆಯಿಂದ ಮಾಡುವ ಖಾದ್ಯ. ಕಾಡಿನಲ್ಲಿರುವ ಮರದ ಪೊಟರೆಯಲ್ಲಿ ಈ ಕೆಸುವು ಹುಟ್ಟುತ್ತದೆ. ಅದನ್ನು ಕೊಯ್ದು, ಸುಚಿಗೊಳಿಸಿ, ಪತ್ರೋಡೆ ತಯಾರಿಸಲಾಗುತ್ತದೆ. ಮೊದಲೇ ಹೇಳಿದಂತೆ ಮರ ಕೆಸುವಿನ ಎಲೆಯನ್ನು ಕೊಲೊಕಾಸಿಯಾ ಎಂದು ಕರೆಯಲಾಗುತ್ತದೆ. ಇದರಿಂದ ತಯಾರಿಸಿದ ಪತ್ರೋಡೆ ಆರೋಗ್ಯಕ್ಕೂ ಉತ್ತಮ ಹಾಗಾಗಿ ಕೇಂದ್ರ ಆಯುಷ್ ಅಚಿವಾಲಯವು ಆಯುಷ್ ಸಿಸ್ಟಮ್ ಆಪ್ ಮೆಡಿಸಿನ್ನ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳಲ್ಲಿ ಪತ್ರೋಡೆಯು ಒಂದು ಎಂದು ಗುರಿತಿಸಿದೆ.
ಕೇಂದ್ರ ಆಯುಷ್ ಸಚಿವಾಲಯ ಕಿರು ಪುಸ್ತಕವನ್ನು ಸಿದ್ಧಪಡಿಸಿದೆ. ಅದರಲ್ಲಿ 26 ಪಾಕ ವಿಧಾನಗಳಲ್ಲಿ ಪತ್ರೋಡೆಯನ್ನು ಸೇರಿಸಿಕೊಳ್ಳಲಾಗಿದೆ. ವೆಬ್ ಸ್ವರೂಪದಲ್ಲೂ ಪರಿಚಯಿಸಿದೆ. ಈ ಕೈಪಿಡಿಯಲ್ಲಿ ಪಧಾರ್ಥಗಳು, ತಯಾರಿಕೆ ವಿಧಾನ, ಆರೋಗ್ಯ ಪ್ರಯೋಜನಗಳ ಮತ್ತುವಿರೋಧಾಬಾಸಗಳ ಬಗ್ಗೆ ವಿವರಣೆ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಪತ್ರೊಡೆ ಎಂದು ಕರೆದರೆ, ಕೇರಳದಲ್ಲಿ ‘ಚೆಂಬಿಲಾ ಅಪ್ಪಂ’ ಎಂದು ಕರೆಯುತ್ತಾರೆ. ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಈಶಾನ್ಯ ಭಾಗಗಳಲ್ಲೂ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಮಳೆಗಾಲದ ಸಮಯದಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಮನೆಗಳಲ್ಲಿ ಈ ಖಾಧ್ಯ ತಯಾರಿಸುತ್ತಾರೆ.
ಕಬ್ಬಿಣದ ಅಂಶವಿರುವ ಸಮೃದ್ಧ ಕೊಲೊಕಾಸಿಯಾ ಎಲೆಗಳು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ, ಫಿನಾಲ್ಸ್, ಟ್ಯಾನ್ನೀಸ್, ಫ್ಲೇವೊನೈಡ್ಸ್ ಮತ್ತು ಗ್ಲೈಕೋಸೈಡ್ಗಳು ಇದರಲ್ಲಿದೆ. ಸಂದಿವಾತ ಮತ್ತು ದೀರ್ಘ ಕಾಲದ ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಮರ ಕೆಸುವಿನ ಎಲೆಯಲ್ಲಿ ವಿಟಮಿನ್ ಸಿ ಮತ್ತು ಕ್ಯಾರೋಟಿನ್ ಇದೆ ಎಂದು ಸಚಿವಾಲ ತಿಳಿಸಿದೆ.
ಸಚಿವಾಲಯ ಆಯ್ಕೆ ಮಾಡಿದ ಇತರ ಸಾಂಪ್ರದಾಯಿಕ ಪಾಕವಿಧಾನಗಳ ಪಟ್ಟಿಯಲ್ಲಿ ಪೇಯ, ಲಜಾರ್ಡ್ರಕಾ, ಅಮಲಕಿ ಪಾನಕ, ಆಮ್ಲಾ ಸ್ಕ್ವಾಷ್, ಮಜ್ಜಿಗೆ, ಖಲಾಮ್, ಯುಶಾ, ರಸಾಲಾ, ರಾಗಿ ಮತ್ತು ಬಾಳೆಹಣ್ಣು, ನೈಜರ್ ಬೀಜಗಳ ಲಡ್ಡು ಸೇರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ