• Home
  • »
  • News
  • »
  • trend
  • »
  • Coal India : ಉದ್ಯೋಗಿಯ ಮಗಳ ಜೀವ ಉಳಿಸಲು ಇಂಜೆಕ್ಷನ್​ಗೆ 16 ಕೋಟಿ ರೂ. ನೀಡಿದ ಕಂಪನಿ

Coal India : ಉದ್ಯೋಗಿಯ ಮಗಳ ಜೀವ ಉಳಿಸಲು ಇಂಜೆಕ್ಷನ್​ಗೆ 16 ಕೋಟಿ ರೂ. ನೀಡಿದ ಕಂಪನಿ

ಅನಾರೋಗ್ಯ ಪೀಡಿತ ಮಗು

ಅನಾರೋಗ್ಯ ಪೀಡಿತ ಮಗು

Coal India Sanctions Rs 16 Crore: ಕೋಲ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, 1991ರ ಬ್ಯಾಚ್ ಐಎಎಸ್ ಅಧಿಕಾರಿ ಪ್ರಮೋದ್ ಅಗರವಾಲ್, ಹಣವನ್ನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದೂ ಅಧಿಕಾರಿಗಳು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಮಾರಣಾಂತಿಕ ಕಾಯಿಲೆಯಾದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಯಿಂದ ಬಳಲುತ್ತಿರುವ ಸಂಸ್ಥೆಯ ಉದ್ಯೋಗಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಜೋಲ್ಗೆನ್ಸ್ಮಾ(Zolgensma) ಇಂಜೆಕ್ಷನ್‌ಗೆ 16 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವುದಾಗಿ ಕೋಲ್ ಇಂಡಿಯಾ(Coal India ) ನವೆಂಬರ್ 20ರಂದು ಹೇಳಿದೆ. 2 ವರ್ಷದ ಸೃಷ್ಟಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದಾಳೆ. ಈ ಹಿನ್ನೆಲೆ ಆಕೆಯ ಚಿಕಿತ್ಸೆಗೆ ಅಗತ್ಯವಾದ ಜೊಲ್ಗೆನ್ಸ್ಮಾ ಇಂಜೆಕ್ಷನ್‌ಗೆ 16 ಕೋಟಿ ರೂಪಾಯಿಗಳನ್ನು ಕಂಪನಿ ಮಂಜೂರು ಮಾಡಿದೆ ಎಂದು ಕಲ್ಲಿದ್ದಲು ಮೇಜರ್ ಸಾರ್ವಜನಿಕ ವಲಯದ ಗಣಿಗಾರರ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ(Twitter) ಪೋಸ್ಟ್‌ ಮಾಡಿದೆ.


ಕೋಲ್‌ ಇಂಡಿಯಾ ಲಿಮಿಟೆಡ್‌ (CIL), ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ತನ್ನ ನಿಜವಾದ ಸಂಪತ್ತು ಎಂದು ನಂಬುತ್ತದೆ ಎಂದೂ ಸಂಸ್ಥೆ ಹೇಳಿದೆ.


2 ವರ್ಷದ ಸೃಷ್ಟಿ, ಡಿಪ್ಕಾ (ಛತ್ತೀಸ್‌ಗಢ), SECLನಲ್ಲಿ ಓವರ್‌ಮ್ಯಾನ್ ಆಗಿರುವ ಸತೀಶ್ ಕುಮಾರ್ ರವಿ ಮಗಳು ಎಂದು ತಿಳಿದುಬಂದಿದೆ.


“ಸತೀಶ್ ಅವರಂತಹ ನೌಕರನಿಗೆ ಅಂತಹ ದುಬಾರಿ ಇಂಜೆಕ್ಷನ್ ಖರೀದಿಸಲು ಸಾಧ್ಯವಾಗಲಿಲ್ಲ. ಹಾಗೂ, ಆ ಇಂಜೆಕ್ಷನ್‌ ಅನ್ನು ಆಮದು ಮಾಡಿಕೊಳ್ಳಬೇಕು. ಹಾಗಾಗಿ ಕೋಲ್ ಇಂಡಿಯಾ ಆಡಳಿತ ಮಂಡಳಿಯೇ ಅದರ ವೆಚ್ಚ ಭರಿಸಲು ನಿರ್ಧರಿಸಿದೆ. ಇತರ PSUಗಳು ಮತ್ತು ಸಂಸ್ಥೆಗಳಿಗೆ CIL ಒಂದು ಉದಾಹರಣೆಯಾಗಿದೆ” ಎಂದು ಹಿರಿಯ SECL ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.


ಇದನ್ನೂ ಓದಿ: ನಿಮ್ಮ ನವಜಾತ ಶಿಶುವಿಗೆ ಆಧಾರ್ ಕಾರ್ಡ್ ಹೇಗೆ ಮಾಡಿಸಬೇಕು ಎಂಬುದು ಇಲ್ಲಿದೆ


ಕೋಲ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, 1991ರ ಬ್ಯಾಚ್ ಐಎಎಸ್ ಅಧಿಕಾರಿ ಪ್ರಮೋದ್ ಅಗರವಾಲ್, ಹಣವನ್ನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದೂ ಅಧಿಕಾರಿಗಳು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.


SMA ಒಂದು ಅಪರೂಪದ ಆನುವಂಶಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ನಷ್ಟದಿಂದಾಗಿ ವ್ಯಕ್ತಿಯು ಸ್ನಾಯುವಿನ ಚಲನೆ ನಿಯಂತ್ರಿಸಲು ಸಾಧ್ಯವಿಲ್ಲ.


ಸೃಷ್ಟಿ ನವೆಂಬರ್ 22, 2019ರಂದು ಜನಿಸಿದಳು ಮತ್ತು ಹುಟ್ಟಿದ 6 ತಿಂಗಳೊಳಗೆ ಅನಾರೋಗ್ಯಕ್ಕೆ ಒಳಗಾದಳು. ಆದರೆ ಆಕೆಯ ಪೋಷಕರು ಸಾಂಕ್ರಾಮಿಕ ರೋಗದಿಂದಾಗಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಸ್ಥಳೀಯ ಚಿಕಿತ್ಸೆ ಅವಲಂಬಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ತಿಳಿಸಿದೆ.


ಬಳಿಕ ಸೃಷ್ಟಿಯ ಪೋಷಕರು ಅವಳನ್ನು ಡಿಸೆಂಬರ್ 2020ರಲ್ಲಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (CMC) ವೆಲ್ಲೂರಿಗೆ ಕರೆದೊಯ್ದರು. ಅಲ್ಲಿ ಆಕೆಗೆ SMA ಇರುವುದು ಪತ್ತೆಯಾಯಿತು.


ನಂತರ ಆಕೆಯನ್ನು ಬಿಲಾಸ್‌ಪುರದ SECL-ಎಂಪಾನೆಲ್ಡ್‌ ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ಬಳಿಕ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ದಾಖಲಿಸಲಾಯಿತು. ಸದ್ಯ, ಸೃಷ್ಟಿ ತನ್ನ ಮನೆಯಲ್ಲೇ ವೆಂಟಿಲೇಟರ್‌ನಲ್ಲಿದ್ದಾಳೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ನರ್ತಕಿಯೊಬ್ಬಳು ಬ್ರಿಟಿಷರನ್ನು ಎದುರು ಹಾಕಿಕೊಂಡ ರೋಚಕ ಕತೆ ಇದು!


SECL ಅಥವಾ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ 'ಮಿನಿರತ್ನ' (‘Miniratna’) ಸಂಸ್ಥೆಗಳಲ್ಲಿ ಒಂದಾಗಿದ್ದು,ಮತ್ತು ಕೋಲ್ ಇಂಡಿಯಾದ 8 ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.

Published by:Sandhya M
First published: